Viral Video: ಟಿವಿ ನೋಡುತ್ತಾ ಡ್ರಮ್ಮಿಂಗ್ ಅಭ್ಯಾಸ ಮಾಡಿದ 3ರ ಬಾಲಕ, ಆತನ ಮುಖಭಾವಕ್ಕೆ ನೆಟ್ಟಿಗರು ಫಿದಾ

ಟಿವಿಯಲ್ಲಿ ಡ್ರಮ್ಮರ್ ವಾದಕರೊಬ್ಬರನ್ನು ಅನುಕರಣೆ ಮಾಡಿದ 3 ವರ್ಷದ ಬಾಲಕನ ವಿಡಿಯೋ ವೈರಲ್ ಆಗುತ್ತಿದ್ದು, ಆತನ ಮುಖಭಾವ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

Viral Video: ಟಿವಿ ನೋಡುತ್ತಾ ಡ್ರಮ್ಮಿಂಗ್ ಅಭ್ಯಾಸ ಮಾಡಿದ 3ರ ಬಾಲಕ, ಆತನ ಮುಖಭಾವಕ್ಕೆ ನೆಟ್ಟಿಗರು ಫಿದಾ
ವೈರಲ್ ಆದ ಬಾಲಕ ಜೋಸಿಯಾ
Follow us
TV9 Web
| Updated By: Rakesh Nayak Manchi

Updated on:Jun 12, 2022 | 10:33 AM

ಸಣ್ಣ ಮಕ್ಕಳು ಹಿರಿಯರನ್ನು ನೋಡಿ ಬೇಗನೇ ಅನುಕರಿಸುತ್ತಾರೆ. ಇದು ಸಾಮಾನ್ಯವಾಗಿದ್ದರೂ ಕೆಲವು ಮಕ್ಕಳು ಕಷ್ಟದ ಸಂಗತಿಗಳನ್ನು ಅನುಕರಿಸಿ ಅಚ್ಚರಿ ಮೂಡಿಸುತ್ತಾರೆ. ಇದೀಗ ಟಿವಿಯಲ್ಲಿ ಡ್ರಮ್ಮರ್ ವಾದಕರೊಬ್ಬರನ್ನು ಅನುಕರಣೆ ಮಾಡಿದ 3 ವರ್ಷದ ಬಾಲಕನ ವಿಡಿಯೋ ವೈರಲ್ (Video Viral) ಆಗುತ್ತಿದೆ. ಬಾಲಕನ ಸಣ್ಣ ವಯಸ್ಸಿನ ಟಾಲೆಂಟ್​ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಫಿದಾ ಆಗಿದ್ದಾರೆ. ವಿಡಿಯೋವನ್ನು ಜೆನ್ನಿ ಥಾಮಸ್ ಮೆಕಿಂತೋಷ್ ಅವರು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ”ಜೋಸಿಯಾ ಪ್ರತಿದಿನ ಗಂಟೆಗಳ ಕಾಲ ತನ್ನ ನೆಚ್ಚಿನ ಡ್ರಮ್ಮರ್ ಡೇನಿಯಲ್ ಬರ್ನಾರ್ಡ್ ಜೊತೆ ಅಭ್ಯಾಸ ಮಾಡುತ್ತಾನೆ! ಅವನ ಮುಖಭಾವವು ಅತ್ಯುತ್ತಮವಾಗಿದೆ!” ಎಂದು ಶೀರ್ಷಿಕೆಯನ್ನೂ ನೀಡಿದ್ದಾರೆ. ಈ ವಿಡಿಯೋ 13 ಸಾವಿರ ವೀಕ್ಷಣೆಗಳು ಮತ್ತು 940 ಲೈಕ್‌ಗಳನ್ನು ಪಡೆದುಕೊಂಡಿದೆ.

ಸಂಗೀತವಾಗಲಿ ಅಥವಾ ಕ್ರೀಡೆಯಾಗಲಿ ಚಿಕ್ಕ ವಯಸ್ಸಿನಲ್ಲೇ ಕಲಿಯುವುದು ಸುಲಭಕರವಲ್ಲ. ಅದಾಗ್ಯೂ ಚಿಕ್ಕ ವಯಸ್ಸಿನಲ್ಲೇ ತಮ್ಮ ಉತ್ಸಾಹವನ್ನು ಕಂಡುಕೊಳ್ಳುವ ಕೆಲವು ಮಕ್ಕಳಿದ್ದಾರೆ. ಅಂತಹ ದಟ್ಟಗಾಲಿಡುವವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಈ ಪೈಕಿ ಜೋಸಿಯಾ ಕೂಡ ಒಬ್ಬ. ಇದನ್ನೂ ಓದಿ: Viral Video: ಗಾಯಗೊಂಡ ತಂದೆಯನ್ನು ಆರೈಕೆ ಮಾಡಿದ ಅಂಬೆಗಾಲಿಡುವ ಮಗು! ನೆಟ್ಟಿಗರು ಫಿದಾ

ವಿಡಿಯೋ ಗಮನಿಸಿದಂತೆ, ಡೇನಿಯಲ್ ಬರ್ನಾರ್ಡ್ ಅವರು ಡ್ರಮ್ಮರ್ ಬಾರಿಸುವುದು ಟಿವಿಯಲ್ಲಿ ಪ್ರಸಾರವಾಗುತ್ತಿರುತ್ತದೆ. ಇದನ್ನು ಸಂಪೂರ್ಣವಾಗಿ ಅನುಕರಿಸಿದ ಜೋಸಿಯಾ, ಎರಡು ಸ್ಟಿಕ್​ಗಳನ್ನು ಹಿಡಿದುಕೊಂಡು ಗಾಜಿನ ಮೇಜಿಗೆ, ತಟ್ಟೆಗಳಿಗೆ ಹೊಡೆಯುವುದನ್ನು ಕಾಣಬಹುದು. ಅಷ್ಟೇ ಅಲ್ಲ ಬಾರಿಸುವಾಗ ಸಾಮಾನ್ಯವಾಗಿ ಡ್ರಮ್ಮರ್ ಯಾವ ರೀತಿ ಮುಖಭಾವ ಮಾಡುತ್ತಾರೋ ಅದೇ ರೀತಿ ಮಾಡುತ್ತಾರೆ. ಇದು ನೆಟ್ಟಿಗರ ಮನಸ್ಸು ಗೆದ್ದಿದೆ. ಇದನ್ನೂ ಓದಿ: Viral Video: ದೈತ್ಯಾಕಾರದ ಹೆಬ್ಬಾವನ್ನು ಭುಜದ ಮೇಲೆ ಹೊತ್ತು ತಿರುಗಾಡಿದ ವ್ಯಕ್ತಿ!

ಈ ಹಿಂದೆ ಸಣ್ಣ ಬಾಲಕಿಯೊಬ್ಬಳು ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದ ಶಿಕ್ಷಕಿಯನ್ನು ಅನುರಿಸುತ್ತಾ ಡಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ನೃತ್ಯ ಶಿಕ್ಷಕಿಯೊಬ್ಬರು ವಯಸ್ಕರಿಗೆ ನೃತ್ಯ ಕಲಿಸುತ್ತಿರುವಾಗ ಶಿಕ್ಷಕಿಯನ್ನು ಅನುಸರಿಸಿದ ಮುದ್ದಾದ ಬಾಲಕಿಯೊಬ್ಬಳು, ಅವರಂತೆಯೇ ಸಖತ್ ಆಗಿ ಸ್ಟೆಪ್ ಹಾಕಿದ್ದಾಳೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ವಿಡಿಯೋ ವೀಕ್ಷಿಸಿ:

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:32 am, Sun, 12 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ