AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Funny Video: ವಿಮಲ್ ಪಾನ್ ಮಸಾಲ ಬೆರೆಸಿ ಮ್ಯಾಗಿ ಸವಿದ ಯುವಕ, ವಿಲಕ್ಷಣ ವಿಡಿಯೋ ವೈರಲ್

ವ್ಯಕ್ತಿಯೊಬ್ಬ ವಿಮಲ್ ಪಾನ್ ಮಸಾಲವನ್ನು ಮ್ಯಾಗಿಗೆ ಬೆರೆಸಿ ಸವಿಯುವ ಹಾಸ್ಯದ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಿ ನೀವು ಕೂಡ ಇಂಥ ಪ್ರಯೋಗವನ್ನು ಮಾಡಿದರೆ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಬರಬಹುದು. ಮನರಂಜನೆಯನ್ನು ಮನರಂಜನೆಯಂತೇ ನೋಡಿ ಬಿಟ್ಟುಬಿಡಿ.

Funny Video: ವಿಮಲ್ ಪಾನ್ ಮಸಾಲ ಬೆರೆಸಿ ಮ್ಯಾಗಿ ಸವಿದ ಯುವಕ, ವಿಲಕ್ಷಣ ವಿಡಿಯೋ ವೈರಲ್
ಮ್ಯಾಗಿ ಮತ್ತು ವಿಮಲ್ ಪಾನ್ ಮಸಾಲImage Credit source: Instagram
TV9 Web
| Updated By: Rakesh Nayak Manchi|

Updated on:Jun 12, 2022 | 2:47 PM

Share

ಹೊಸತನವನ್ನು ಆವಿಷ್ಕರಿಸುವ ಧಾವಂತದಲ್ಲಿರುವ ಈ ಜಗತ್ತಿನಲ್ಲಿ ಒಂದಷ್ಟು ಜನರು ವಿಲಕ್ಷಣ ಆವಿಷ್ಕಾರಕ್ಕೆ ಕೈಹಾಕುತ್ತಾರೆ. ಇಂಥ ಆವಿಷ್ಕಾರಗಳು ಜನರ ಬಾಳಿಗೆ ಕಂಟಕವಾಗಿ ಪರಿಣಮಿಸಬಹುದು. ವ್ಯಕ್ತಿಯೊಬ್ಬ ಹೊಸ ವಿಲಕ್ಷಣ ಆವಿಷ್ಕಾರ ಮಾಡಿ ಮ್ಯಾಗಿ ಸವಿದ ವಿಡಿಯೋ ವೈರಲ್ (Video Viral) ಆಗುತ್ತಿದೆ. ವಿಡಿಯೋ ನೋಡಿ ನೀವು ಕೂಡ ಇಂಥ ಪ್ರಯೋಗವನ್ನು ಮಾಡಿದರೆ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಬರಬಹುದು. ವೈರಲ್ ಆಗುತ್ತಿರುವ ವಿಡಿಯೋ ಹಾಸ್ಯಕ್ಕಾಗಿ ಮಾಡಲಾಗಿದ್ದು, ಇದನ್ನು ಅರ್ಥಮಾಡಿಕೊಂಡ ಒಂದಷ್ಟು ನೆಟ್ಟಿಗರು ವಿಡಿಯೋ ನೋಡಿ ನಕ್ಕರು. ಯಾವುದೇ ಕಾರಣಕ್ಕೂ ನೀವು ಇಂಥ ಪ್ರಯೋಗಕ್ಕೆ ಮುಂದಾಗಬೇಡಿ. ಮನರಂಜನೆಯನ್ನು ಮನರಂಜನೆಯಂತೇ ನೋಡಿ ಬಿಟ್ಟುಬಿಡಿ.

ಇದನ್ನೂ ಓದಿ: Viral Video: “ಹ್ಯಾಪಿ ಬರ್ತ್ ​ಡೇ ಅಖಿಲಾ”, ಆನೆಯ ಹುಟ್ಟುಹಬ್ಬ ಆಚರಿಸಿದ ವಿಡಿಯೋ ವೈರಲ್

ವಿಡಿಯೋವನ್ನು ಕಂಟೆಂಟ್ ಕ್ರಿಯೇಟರ್ ರೋಹಿತ್ ಚೌಹಾಣ್ ಅವರು ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದು, “ಡೇನ್ ದಾನೆ ಮೇ ಕೇಸರ್ ಕಾ ದಾಮ್” ಎಂಬ ಶೀರ್ಷಿಕೆಯನ್ನೂ ನೀಡಿದ್ದಾರೆ. ವಿಡಿಯೋದಲ್ಲಿ ಕಾಣುವಂತೆ, ವ್ಯಕ್ತಿಯೊಬ್ಬ ವಿಮಲ್ ಪಾನ್ ಮಸಾಲದ ಪ್ಯಾಕೆಟ್ ಅನ್ನು ತೆರೆದು ಸಿದ್ಧಪಡಿಸಿದ ಮ್ಯಾಗಿಗೆ ಪಾನ್ ಬೆರೆಸುತ್ತಾನೆ. ನಂತರ ಬೈಕ್‌ನಲ್ಲಿ ಕುಳಿತು ತಿನ್ನುವುದನ್ನು ಕಾಣಬಹುದು.

View this post on Instagram

A post shared by Rohit chouhan (@r_bam_tv7)

ಈ ರೀಲ್ 3.1 ಮಿಲಿಯನ್ ವೀಕ್ಷಣೆಗಳನ್ನು ಮತ್ತು 71 ಸಾವಿರ ಲೈಕ್‌ಗಳನ್ನು ಪಡೆದುಕೊಂಡಿದೆ. ಹಾಸ್ಯದ ವಿಡಿಯೋ ಕ್ಲಿಪ್​ಗೆ ಕೆಲವರು ನಗಾಡಿದರೆ, ಇನ್ನೂ ಕೆಲವರು ವಿಮಲ್ ಅನ್ನು ಸೇವಿಸುವುದು ಅಪಾಯಕಾರಿ ಮತ್ತು ಇದು ಹಾಸ್ಯ ಉದ್ದೇಶಗಳಿಗಾಗಿ ಕೂಡ ಮಾಡಬಾರದು ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: Viral Video: ಟಿವಿ ನೋಡುತ್ತಾ ಡ್ರಮ್ಮಿಂಗ್ ಅಭ್ಯಾಸ ಮಾಡಿದ 3ರ ಬಾಲಕ, ಆತನ ಮುಖಭಾವಕ್ಕೆ ನೆಟ್ಟಿಗರು ಫಿದಾ

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Sun, 12 June 22

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ