AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: “ಹ್ಯಾಪಿ ಬರ್ತ್ ​ಡೇ ಅಖಿಲಾ”, ಆನೆಯ ಹುಟ್ಟುಹಬ್ಬ ಆಚರಿಸಿದ ವಿಡಿಯೋ ವೈರಲ್

ತಿರುಚಿರಾಪಳ್ಳಿಯ ತಿರುವಾನೈಕಾವಲ್ ದೇವಸ್ಥಾನದಲ್ಲಿ ಅಖಿಲಾ ಎಂಬ ಹೆಸರಿನ ಆನೆಯ ಜನ್ಮದಿನಾಚರಣೆಯನ್ನು ಆಚರಿಸಲಾಗಿದೆ. ಇದರ ವಿಡಿಯೋವನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.

Viral Video: ಹ್ಯಾಪಿ ಬರ್ತ್ ​ಡೇ ಅಖಿಲಾ, ಆನೆಯ ಹುಟ್ಟುಹಬ್ಬ ಆಚರಿಸಿದ ವಿಡಿಯೋ ವೈರಲ್
ಜನ್ಮ ದಿನ ಆಚರಿಸಿಕೊಂಡ ಆನೆ ಅಖಿಲಾ
TV9 Web
| Edited By: Rakesh Nayak Manchi|

Updated on: Jun 12, 2022 | 11:26 AM

Share

ಗೋವುಗಳಿಗೆ ಪೂಜೆ ಮಾಡಲಾಗುತ್ತದೆ. ಕೆಲವು ಕಡೆಗಳಲ್ಲಿ ಮಗುವಿನಂತೆ ನವಜಾತ ಕರುಗಳನ್ನು ತೊಟ್ಟಿಲಿಗೆ ಹಾಕಿ ಸಂಭ್ರಮಿಸಲಾಗುತ್ತದೆ. ಇದರ ಹೊರತಾಗಿ ನಾಯಿ, ಆನೆ ಇತ್ಯಾದಿ ಸಾಕುಪ್ರಾಣಿಗಳ ಜನ್ಮದಿನಾಚರಣೆಯನ್ನೂ ಆಚರಿಸಲಾಗುತ್ತದೆ. ಈ ಹಿಂದೆ ಧರ್ಮಸ್ಥಳದಲ್ಲಿ ಜನಿಸಿದ ಆನೆಗೆ ಸಂಭ್ರಮ ಸಡಗರದಿಂದ ನಾಮಕರಣದ ಕಾರ್ಯಕ್ರಮ ಆಯೋಜಿಸಿ ಶಿವಾನಿ ಎಂದು ಹೆಸರು ಇಡಲಾಗಿತ್ತು. ಈ ಸಂದರ್ಭದಲ್ಲಿ ಆನೆ ಮರಿ ಯಾವ ರೀತಿ ಸಂಭ್ರಮಿಸಿತು ಎಂಬುದರ ವಿಡಿಯೋ ಸಖತ್ ವೈರಲ್ ಆಗಿತ್ತು. ಇದೀಗ ತಮಿಳುನಾಡಿನಲ್ಲಿ ಆನೆಯೊಂದರ ಹುಟ್ಟುಹಬ್ಬ(Birthday)ವನ್ನು ಆಚರಿಸಲಾಗಿದ್ದು, ಇದರ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ.

ಇದನ್ನೂ ಓದಿ: Viral Video: ಅಂದು ದ್ರಾವಿಡ್ ಬಾರಿಸಿದ ಸಿಕ್ಸ್ ಹೋಗಿ ಬಿದ್ದಿದ್ದು ಎಲ್ಲಿ ಗೊತ್ತಾ?

ಈ ವಿಡಿಯೋವನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಮಾಜಕ್ಕೆ ಒಂದೊಳ್ಳೆಯ ಸಂದೇಶ ರವಾನೆ ಮಾಡುವ ಸ್ಪೂರ್ತಿದಾಯಿಕ ವಿಡಿಯೋಗಳನ್ನು ಅವರು ಹಂಚಿಕೊಳ್ಳತ್ತಲೇ ಇರುತ್ತಾರೆ. 9 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಇವರು, ತಮಿಳುನಾಡಿನ ಜನರು ಇತ್ತೀಚೆಗೆ ಆನೆಯ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ವೀಡಿಯೊವನ್ನು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಗಾಯಗೊಂಡ ತಂದೆಯನ್ನು ಆರೈಕೆ ಮಾಡಿದ ಅಂಬೆಗಾಲಿಡುವ ಮಗು! ನೆಟ್ಟಿಗರು ಫಿದಾ

ತಿರುಚಿರಾಪಳ್ಳಿಯ ತಿರುವಾನೈಕಾವಲ್ ದೇವಸ್ಥಾನದಲ್ಲಿ ಅಖಿಲಾ ಎಂಬ ಹೆಸರಿನ ಆನೆಯ ಜನ್ಮದಿನಾಚರಣೆಯನ್ನು ಆಚರಿಸಲಾಗಿದೆ. ಮನುಷ್ಯರು ತಮ್ಮ ಜನ್ಮದಿನಾಚರಣೆಯಂದು ಯಾವ ರೀತಿ ಹೊಸ ಬಟ್ಟೆ ಧರಿಸುತ್ತಾರೋ ಅದೇ ರೀತಿ ಜನರು ಆನೆಗೆ ಹೊಸ ಬಟ್ಟೆ, ಮಾಲೆಗಳನ್ನು ಹಾಕಿ ಶೃಂಗರಿಸಿದ್ದಾರೆ. ತಲೆಯ ಮೇಲೆ ತಿಲಕವನ್ನು ಕೂಡ ಹಾಕಲಾಗಿದೆ. ಅದರಂತೆ ಆನೆಗೆ ಹಣ್ಣುಹಂಪಲುಗಳನ್ನು ನೀಡಿ ಜನ್ಮದಿನಾಚರಣೆಯನ್ನು ಆಚರಿಸಲಾಗಿದೆ. ಜೊತೆಗೆ ಆನೆಗೆ ಚಪ್ಪಾಳೆ ತಟ್ಟುತ್ತಾ ”ಹ್ಯಾಪಿ ಬರ್ತ್​ ಡೇ ಟು ಯು” ಎಂದು ಹೇಳಿದ್ದಾರೆ. ಜನರು ಈ ರೀತಿ ಹಾಡುತ್ತಿದ್ದಾಗ ಆನೆಯು ಖುಷಿಯಿಂದ ಸೊಂಡಿಲಿನಿಂದ ನಮಸ್ಕರಿಸುತ್ತಾ ಹಣ್ಣುಗಳನ್ನು ಸವಿದಿದೆ.

ಆನಂದ್ ಮಹೀಂದ್ರಾ ಅವರು ಉತ್ತಮ ಶೀರ್ಷಿಕೆಯೊಂದಿಗೆ ಹಂಚಿಕೊಂಡ ಆನೆಯ ವಿಡಿಯೋ 657k ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 36ಸಾವಿರಕ್ಕೂ ಅಧಿಕ ಮೆಚ್ಚುಗೆಗಳನ್ನು ಪಡೆದುಕೊಂಡಿದೆ. ಇದನ್ನೂ ಓದಿ: Viral Video: ಟಿವಿ ನೋಡುತ್ತಾ ಡ್ರಮ್ಮಿಂಗ್ ಅಭ್ಯಾಸ ಮಾಡಿದ 3ರ ಬಾಲಕ, ಆತನ ಮುಖಭಾವಕ್ಕೆ ನೆಟ್ಟಿಗರು ಫಿದಾ

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಜೈಲಿನಲ್ಲಿ ಪವಿತ್ರಾ ಗೌಡಗೆ ವಿಪರೀತ ಜ್ವರ; ವಿಚಾರಣೆಗೆ ಗೈರು
ಜೈಲಿನಲ್ಲಿ ಪವಿತ್ರಾ ಗೌಡಗೆ ವಿಪರೀತ ಜ್ವರ; ವಿಚಾರಣೆಗೆ ಗೈರು