ಮಗನ ಅನ್ಯಜಾತಿ ವಿವಾಹಕ್ಕೆ ತಂದೆ ಬಲಿ; ಮಾರಕಾಸ್ತ್ರದಿಂದ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ 10 ದಿನಗಳ ಹೋರಾಟದ ಬಳಿಕ ಸಾವು
ಗ್ರಾಮದ ದ್ಯಾವಪ್ಪನ ಪುತ್ರಿ ಸಂಗೀತಾಳನ್ನು ದಶರಥ ಪೂಜಾರಿ ಪುತ್ರ ಸೂರ್ಯಕಾಂತ್ ಪ್ರೀತಿಸಿದ್ದ. ಅನ್ಯಜಾತಿಯಾಗಿದ್ದರೂ ವಿರೋಧದ ನಡುವೆಯೇ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು.
ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದಲ್ಲಿ ಮಗನ ಪ್ರೇಮವಿವಾಹಕ್ಕೆ ತಂದೆ ಬಲಿಯಾದ ಘಟನೆ ನಡೆದಿದೆ. ಕಳೆದ ಹತ್ತು ದಿನದಿಂದ ಸಾವು ಬದುಕಿನ ಹೋರಾಟ ನಡೆಸುತ್ತಿದ್ದ ಹಲ್ಲೆಗೊಳಗಾಗಿದ್ದ ದಶರಥ ಪೂಜಾರಿ(60) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಗ್ರಾಮದ ದ್ಯಾವಪ್ಪನ ಪುತ್ರಿ ಸಂಗೀತಾಳನ್ನು ದಶರಥ ಪೂಜಾರಿ ಪುತ್ರ ಸೂರ್ಯಕಾಂತ್ ಪ್ರೀತಿಸಿದ್ದ. ಅನ್ಯಜಾತಿಯಾಗಿದ್ದರೂ ವಿರೋಧದ ನಡುವೆಯೇ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಜೂ.1ರಂದು ಚಾಮನೂರಿಗೆ ಸಂಗೀತಾ, ಸೂರ್ಯಕಾಂತ್ ಬಂದಿದ್ದರು. ಈ ಹಿನ್ನೆಲೆ ಜೂನ್ 2ರಂದು ದಶರಥ ಮತ್ತು ಅವರ ಕುಟುಂಬಸ್ಥರ ಮೇಲೆ ದ್ಯಾವಪ್ಪ ಮತ್ತು ಅವರ ಪುತ್ರರು ಹಲ್ಲೆ ನಡೆಸಿದ್ದಾರೆ. ದಶರಥ ಮೇಲೆ ಮಾರಕಾಸ್ತ್ರದಿಂದ ದ್ಯಾವಪ್ಪ, ಪುತ್ರರು ಹಲ್ಲೆಗೈದಿದ್ದರು. ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ದಶರಥ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಾದ ದ್ಯಾವಪ್ಪ, ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪದವೀಧರ ಮತದಾರರಿಗೆ 2,000 ರೂ ಹಣ ಹಂಚುತ್ತಿರುವ ಮಂಡ್ಯ ದಕ್ಷಿಣ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿನಯ್
ಮನೆಗೆ ಫೋನ್ ಮಾಡಲು ಬಿಡಲಿಲ್ಲ ಅಂತ ವಿದ್ಯಾರ್ಥಿ ಆತ್ಮಹತ್ಯೆ ಮಂಗಳೂರಿನ ತಲಪಾಡಿ ಕೆ.ಸಿ.ರೋಡ್ ಬಳಿ ಇರುವ ಶಾರದ ವಿದ್ಯಾನಿಕೇತನ ಶಾಲೆಯ ಹಾಸ್ಟೆಲ್ನಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಮನೆಗೆ ಫೋನ್ ಮಾಡಲು ಬಿಡಲಿಲ್ಲ ಅಂತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಹೊಸಕೋಟೆ ಮೂಲದ 9ನೇ ತರಗತಿ ವಿದ್ಯಾರ್ಥಿ ಪೂರ್ವಜ್(14) ನೇಣಿಗೆ ಶರಣಾಗಿ ಪ್ರಾಣ ಬಿಟ್ಟಿದ್ದಾನೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಅಕ್ರಮ ಸಂಬಂಧ; ಪತ್ನಿ, ಪ್ರಿಯತಮ ಸೇರಿ ಕೊಲೆ ವಿಜಯಪುರದಲ್ಲಿ ಕಳೆದ ಜೂನ್ 8 ರಂದು ಏಕತಾ ನಗರದ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪ್ರಕಾಶ ಹಳ್ಳಿ (37) ವಿಚಾರಕ್ಕೆ ಸಂಬಂಧಿಸಿ ಪ್ರಕರಣ ಬೇಧಿಸಿದ ಪೊಲೀಸರು ಸತ್ಯ ಬಯಲು ಮಾಡಿದ್ದಾರೆ. ಪ್ರಕಾಶ ಪತ್ನಿ ರಾಜೇಶ್ವರಿ ಹಾಗೂ ಇತರರು ಸೇರಿ ಕೊಲೆ ಮಾಡಿದ್ದರು ಎಂದು ಪ್ರಕಾಶ ಪೋಷಕರು ಆರೋಪಿಸಿದ್ದರು. ರಾಜೇಶ್ವರಿ ರವಿ ತಳವಾರ ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ. ಅದಕ್ಕಾಗಿ ಪತಿ ಪ್ರಕಾಶನನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದರು. ಸದ್ಯ ಪ್ರಕರಣ ಬೇಧಿಸಿದ ಪೊಲೀಸರ ತಂಡ ತನಿಖೆಯಲ್ಲಿ ಪ್ರಕಾಶ ಕೊಲೆಯಾಗಿದ್ದು ನಿಜ ಹಾಗೂ ಪೋಷಕರು ಮಾಡಿದ ಆರೋಪ ಸುಳ್ಳಲ್ಲ ಎಂಬುದನ್ನು ತಿಳಿಸಿದ್ದಾರೆ.
ಪ್ರಕಾಶ ಪತ್ನಿ ರಾಜೇರಶ್ವರಿ ಹಳ್ಳಿ, ಆಕೆಯ ಪ್ರಿಯಕರ ರವಿ ತಳವಾರ ಹಾಗೂ ರವಿ ಸ್ನೇಹಿತ ಗುರುಪಾದ ದಳವಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ ಕೊಲೆ ಮಾಡಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ನಂತರ ಸೀರೆಯಿಂದ ಕತ್ತು ಬಿಗಿದು ಆರೋಪಿಗಳು ಕೊಲೆ ಮಾಡಿದ್ದಾರೆ. ಬಳಿಕ ಏನೂ ಗೊತ್ತಿಲ್ಲದಂತೆ ಪತ್ನಿ ರಾಜೇಶ್ವರಿ ನಟಿಸಿದ್ದಾಳೆ. ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನ್ಯಾಯಾಲಯಕ್ಕೆ ಪೊಲೀಸರು ಆರೋಪಿಗಳನ್ನು ಹಾಜರು ಪಡಿಸಿದ್ದಾರೆ. ಇದನ್ನೂ ಓದಿ: ಬೀದರ: ಪೀರ್ ಪಾಷಾ ಮಸೀದಿಯೇ ಮೂಲ ಅನುಭವ ಮಂಟಪ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ
ಕೊಡಗಿನಲ್ಲಿ ಬೃಹತ್ ಗಾತ್ರದ ಹೆಬ್ಬಾವು ಸೆರೆ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದ ಬಳಿ ಕಂಡು ಬಂದ ಬೃಹತ್ ಗಾತ್ರದ ಹೆಬ್ಬಾವನ್ನ ಉರಗ ರಕ್ಷಕ ಪ್ರವೀಣ್ ಸೆರೆ ಹಿಡಿದಿದ್ದಾರೆ. ಅಂದಾಜು ಆರು ವರ್ಷ ಪ್ರಾಯದ 15 ಅಡಿ ಉದ್ದದ ಹೆಬ್ಬಾವು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹೆಬ್ಬಾವನ್ನು ಆನೆಕಾಡು ಅರಣ್ಯಕ್ಕೆ ಬಿಟ್ಟ ಬಂದಿದ್ದಾರೆ.