ಪದವೀಧರ ಮತದಾರರಿಗೆ 2,000 ರೂ ಹಣ ಹಂಚುತ್ತಿರುವ ಮಂಡ್ಯ ದಕ್ಷಿಣ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿನಯ್

ಪದವೀಧರ ಮತದಾರರಿಗೆ 2,000 ರೂ ಹಣ ಹಂಚುತ್ತಿರುವ ಮಂಡ್ಯ ದಕ್ಷಿಣ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿನಯ್

TV9 Web
| Updated By: ವಿವೇಕ ಬಿರಾದಾರ

Updated on:Jun 12, 2022 | 3:44 PM

ನಾಳೆ ಜೂನ್ 13ರಂದು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಜಿಲ್ಲೆಯ ಮಳವಳ್ಳಿಯಲ್ಲಿ ಪದವೀಧರ ಮತದಾರರಿಗೆ 2,000 ರೂ ಹಣವನ್ನು ಕವರ್​ನಲ್ಲಿ ಇರಿಸಿ ಮತದಾರರಿಗೆ ಹಂಚಿದ ದೃಶ್ಯ ವೈರಲ್ ಆಗಿದೆ.

ಮಂಡ್ಯ: ನಾಳೆ ಜೂನ್ 13ರಂದು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ (MLC Election) ನಡೆಯಲಿದ್ದು, ಜಿಲ್ಲೆಯ ಮಳವಳ್ಳಿಯಲ್ಲಿ (Malavalli) ಪದವೀಧರ ಮತದಾರರಿಗೆ 2,000 ರೂ ಹಣವನ್ನು ಕವರ್​ನಲ್ಲಿ ಇರಿಸಿ ಮತದಾರರಿಗೆ ಹಂಚಿದ ದೃಶ್ಯ ವೈರಲ್ ಆಗಿದೆ. ದಕ್ಷಿಣ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್.ಎಸ್.ವಿನಯ್​ ಕವರ್​ನಲ್ಲಿ 2 ಸಾವಿರ ಹಣ, ಉಪ್ಪು, ದೇವರ ಫೋಟೋ ಇಟ್ಟು ಹಂಚಿತ್ತಿದ್ದಾರೆ. ಎಂದು ಹಣ ಪಡೆದ ಮತದಾರರೊಬ್ಬರು ವಿಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.

Published on: Jun 12, 2022 03:44 PM