ಅವನ್ಯಾವನೋ ಪಠ್ಯದಲ್ಲಿ ಸಂವಿಧಾನ ಶಿಲ್ಪಿ ಎಂಬ ಪದವನ್ನೇ ತೆಗೆದಿದ್ದಾನೆ; ಹಾಗಾದ್ರೆ ಸಂವಿಧಾನ ಶಿಲ್ಪಿ ಅವನಾ? -ರೋಹಿತ್ ಚಕ್ರತೀರ್ಥ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬಾಬಾ ಸಾಹೇಬ್ ಅಂಬೇಡ್ಕರ್ ರವರು ಅಸ್ಪಶರ್ತೆ ಹೋಗಲು ಹೋರಾಡಿದ್ರು. ಅವರು ಬರೀ ದಲಿತರಿಗೋಸ್ಕರ ಹೋರಾಟ ಮಾಡಲಿಲ್ಲ. ಹಿಂದುಳಿದ ಎಲ್ಲಾ ಜನರಿಗೂ ನ್ಯಾಯ ಸಿಗಲಿ ಅಂತ ಸಂವಿಧಾನದಲ್ಲಿ ನ್ಯಾಯ ಕೊಟ್ಟಿದ್ದಾರೆ.

ಅವನ್ಯಾವನೋ ಪಠ್ಯದಲ್ಲಿ ಸಂವಿಧಾನ ಶಿಲ್ಪಿ ಎಂಬ ಪದವನ್ನೇ ತೆಗೆದಿದ್ದಾನೆ; ಹಾಗಾದ್ರೆ ಸಂವಿಧಾನ ಶಿಲ್ಪಿ ಅವನಾ? -ರೋಹಿತ್ ಚಕ್ರತೀರ್ಥ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಸಿದ್ದರಾಮಯ್ಯ
Follow us
TV9 Web
| Updated By: ಆಯೇಷಾ ಬಾನು

Updated on:Jun 12, 2022 | 5:10 PM

ಆನೇಕಲ್: ಅವನ್ಯಾವನೋ ಗಿರಾಕಿ ಪಠ್ಯದಲ್ಲಿ ಸಂವಿಧಾನ ಶಿಲ್ಪಿ ಎಂಬ ಪದವನ್ನೇ ತೆಗೆದಿದ್ದಾನೆ. ಎಂಥಾ ನೀಚ ಇರಬೇಕು ನೋಡಿ ಅವನು. ಹಾಗಾದ್ರೆ ಸಂವಿಧಾನ ಶಿಲ್ಪಿ ಅವನಾ? ಅವನ ಮನೆ ಹಾಳಾಗಿ ಹೋಗಾ ಎಂದು ಸಿದ್ದರಾಮಯ್ಯ(Siddaramaiah) ರೋಹಿತ್ ಚಕ್ರತೀರ್ಥ(Rohit Chakratirtha) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟದಲ್ಲಿ ನಡೆಯುತ್ತಿರುವ ಕರ್ನಾಟಕ ಭೋವಿ ಸಂಘರ್ಷ ಸಮಿತಿಯ ಬೃಹತ್ ಸಮಾವೇಶದಲ್ಲಿ ಅಂಬೇಡ್ಕರ್( B. R. Ambedkar) ಕುರಿತು ಮಾತನಾಡಿದ ಸಿದ್ದರಾಮಯ್ಯ ಇದೇ ವೇಳೆ ರೋಹಿತ್ ಚಕ್ರತೀರ್ಥ ವಿರುದ್ಧ ಕಿಡಿ ಕಾರಿದ್ದಾರೆ.

ಅಂಬೇಡ್ಕರ್ ಅಸ್ಪಶರ್ತೆ ಹೋಗಲು ಹೋರಾಡಿದ್ರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಅಸ್ಪಶರ್ತೆ ಹೋಗಲು ಹೋರಾಡಿದ್ರು. ಅವರು ಬರೀ ದಲಿತರಿಗೋಸ್ಕರ ಹೋರಾಟ ಮಾಡಲಿಲ್ಲ. ಹಿಂದುಳಿದ ಎಲ್ಲಾ ಜನರಿಗೂ ನ್ಯಾಯ ಸಿಗಲಿ ಅಂತ ಸಂವಿಧಾನದಲ್ಲಿ ನ್ಯಾಯ ಕೊಟ್ಟಿದ್ದಾರೆ. ಅಂಬೇಡ್ಕರ್ ರವರು ಸಂವಿಧಾನದ ರಚನಾ ಸಮಿತಿ ಅಧ್ಯಕ್ಷರಾಗಿದ್ರು. ಆಗಿನ ರಾಷ್ಟ್ರಪತಿ ರಾಜೆಂದ್ರ ಪ್ರಸಾದ್ ಕರುಡು ಸಮಿತಿ ಅಧ್ಯಕ್ಷರಾಗಿದ್ರು. ಅದರ ಜತೆ ಏಳು ಜನ ವಿದ್ವಾಂಸರೂ ಇದ್ರು. ಇಡೀ ವಿಶ್ವದಲ್ಲಿ ಎಲ್ಲೂ ಇರದಂಥ ಸಮಾಜಗಳು ಇರುವಂತಹ ದೇಶ ನಮ್ಮದು. ಹಲವು ಮತ ಪಂಗಡ ಇರೋ ದೇಶ ಹೀಗಾಗಿ ಹಲವು ದೇಶಗಳ ಸಂವಿಧಾನ ವಿದೆ. ಒಂದು ವೇಳೆ ಅಂಬೇಡ್ಕರ್ ಕರುಡು ಸಮಿತಿ ಅಧ್ಯಕ್ಷರು ಆಗದೇ ಹೋಗಿದ್ದರೇ ಸಂವಿಧಾನ ರಚನೆ ಆಗ್ತಾ ಇರಲಿಲ್ಲ ಎಂದರು. ಇದನ್ನೂ ಓದಿ: ಮಗುವಿನ ಜತೆ ಮೊದಲ ಬಾರಿ ಫೋಟೋ ಹಂಚಿಕೊಂಡ ನಟಿ ಅಮೂಲ್ಯ; ಆದ್ರೂ ಫ್ಯಾನ್ಸ್ ಬೇಸರ

Who is the architect of ಸಂವಿಧಾನ ಅಂತ ಕೇಳಿದ್ರೆ ರೋಹಿತ್ ಚಕ್ರ ತೀರ್ಥ ಅಂತ ಹೇಳ್ತೀರಾ? ಕುವೆಂಪು ಏನ್ ಹೇಳಿದ್ರೂ, ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಹೊಳೆಯುವ ನೋಟ, ಹಿಂದು ಕ್ರೈಸ್ತ ಮುಸಲ್ಮಾನ ಎಂದು. ಆದ್ರೆ ಮಕ್ಕಳಿಗೆ ವಿಷ ಉಣಿಸ್ತೀರಾ? ಚರಿತ್ರೆ ಗೊತ್ತಿರದೇ ಚರಿತ್ರೆ ಸೃಷ್ಟಿಸೋಕೆ ಆಗಲ್ಲ. ಚರಿತ್ರೆಯಲ್ಲಿ ಆದ ತಪ್ಪುಗಳನ್ನು ಮತ್ತೆ ಆಗದಂತೆ ನೋಡುಕೊಳ್ಳಬೇಕು. ಆರ್ಯರು ಮಧ್ಯ ಪ್ರಾಚ್ಯ ದಿಂದ ಬಂದವರು, ನೀವೆಲ್ಲಾ ಒದೀದಿರಲ್ಲ, ಹೇಳ್ರಪ್ಪಾ ನೀವೆಲ್ಲಾ, ಎಲ್ಲಾ ನನ್ ಮೇಲೆ ತಿರುಗು ಬೀಳ್ತವರೆ, ಸಿದ್ರಾಮಯ್ಯ ಹಿಂದೂ ವಿರೋಧಿ, ಆರ್ಎಸ್ಎಸ್ ವಿರೋಧಿ ಅಂತಾರೆ ಎಂದು ಭೋವಿ ಸಮಾಜ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣದ ವೇಳೆ ಹೇಳಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಭೋವಿ ಜನಾಂಗದ ಜನ ಬಹಳ ನಿಯತ್ತಿನ ಜನ ಬ್ರಾಹ್ಮಣೇತರರಿಗೆ ಮೊದಲ ಬಾರಿಗೆ ರಿಸರ್ವಶೇನ್ ಕೊಟ್ಟಿದ್ದು ನಾಲ್ವಡಿ ಕೃಷ್ಣರಾಜ ಒಡೆಯರು. ಆಗಿನ ದಿವಾನರು ವಿರೋಧ ವ್ಯಕ್ತ ಪಡಿಸಿದ್ರು, 25% ಬ್ರಾಹ್ಮಣರಿಗೆ, 75% ನಾನ್ ಬ್ರಾಹ್ಮಣರಿಗೆ ಅಂತ ಮಿಲ್ಲರ್ ಕಮಿಷನ್ ಮಾಡುದ್ರು. ಭೋವಿ ಜನಾಂಗದ ಜನ ಬಹಳ ನಿಯತ್ತಿನ ಜನ. ಮಾತು ಕೊಟ್ರೆ ಮಾತಿನ ಮೇಲೆ ನಿಲ್ತಾರೆ. 13 ಎಲೆಕ್ಷನ್ ನೋಡಿದ್ದೀನಿ, ಎಲ್ಲಾ ಎಲೆಕ್ಷನ್ನಲ್ಲೂ ಸಹಾಯ ಮಾಡಿದವರು ಭೊವಿ ಜನಾಂಗದವರು. ಬಹಳ‌ ನಂಬಿಕಸ್ತರು, ಭೋವಿ ಜನಾಂಗ ಅಂದ್ರೆ ನಂಬಿಕಸ್ತ ಕಾಯಕ ಜನಾಂಗದವರು. ನಾನು ಮಾಡೋದನ್ನು ಮಾತ್ರ ಹೇಳ್ತೆನೆ. ಏನ್ ಮಾಡ್ತೀವಿ ಅದನ್ನೇ ಹೇಳಬೇಕು. ಭೋವಿ ಜನಾಂಗಕ್ಕೆ‌ ಮಂಜೂರು ಮಾಡಿದ್ದ ಎರಡು ಎಕರೆ ಜಮೀನು ಈ ಸರ್ಕಾರ ಕೊಟ್ಟೇ ಇಲ್ಲ. ಅದರ‌ ಮೇಲೆ ಜಮೀನುದಾರರು ಕೇಸ್ ಹಾಕಿದ್ದಾರೆ. ಸರಕಾರ ಒಳ್ಳೆಯ ಗುಡ್ ಅಡ್ವಕೇಟ್ ಇಟ್ಟು ವೆಕೇಟ್ ಮಾಡಿಸಬಹುದಾಗಿತ್ತು. ಇಪ್ಪತ್ತು ಕೋಟಿ ಬೆಲೆ ಬಾಳುವ ಜಾಗ ಅದು. ಕುಮಾರಸ್ವಾಮಿಯೂ ಮಾಡಿಕೊಡಲಿಲ್ಲ, ಯಡಿಯುರಪ್ಪ ಮಾಡಿಕೊಡಲಿಲ್ಲ, ಬಸವರಾಜನೂ ಮಾಡಿಕೊಡಲಿಲ್ಲ. ಇದು ಆಗ ಬೇಕಾಗಿತ್ತು, ಅದಕ್ಕೆ ನಿನ್ನ ಮಂತ್ರಿ ಮಾಡಿದ್ದು, ಅದಕ್ಕೆ ನೀನು ಬಟ್ಟೆಯೆಲ್ಲಾ ಹರ್ಕ್ಕಂಡಿದ್ದೆ ಅಂತ ಬಿಜೆಪಿ‌ ಮಾಜಿ ಸಚಿವ ಗೂಳಿ ಹಟ್ಟಿಶೇಖರ್ನನ್ನು ತಿವಿದ ಸಿದ್ರಾಮಯ್ಯ. ಬೆಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಇನ್ನು ಕಾಂಗ್ರೆಸ್ ಬಿಜೆಪಿಯ ಬಿ ಟೀಂ ಎಂಬ HDK ಆರೋಪ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಅಭ್ಯರ್ಥಿಯನ್ನು ಮೊದಲು ಹಾಕಿದ್ದು ನಾವು. ಅವರು ಗೆಲ್ಲಲ್ಲಾ ಅಂತ ಗೊತ್ತಿದ್ರೂ ಏಕೆ ಅಭ್ಯರ್ಥಿ ಹಾಕಿದ್ರು? ನಮಗೆ ಬೆಂಬಲ ನೀಡಿದ್ದರೆ ನಾವು ಚುನಾವಣೆಯಲ್ಲಿ ಗೆಲ್ತಿರಲಿಲ್ವಾ? ಯಾರು ಬಿಜೆಪಿಯ ಬಿ ಟೀಂ, ನಾವಾ ಅವರಾ ಎಂದು ಮಾಜಿ ಸಿಎಂ ಹೆಚ್ಡಿಕೆಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

Published On - 5:10 pm, Sun, 12 June 22

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ