ಮಗುವಿನ ಜತೆ ಮೊದಲ ಬಾರಿ ಫೋಟೋ ಹಂಚಿಕೊಂಡ ನಟಿ ಅಮೂಲ್ಯ; ಆದ್ರೂ ಫ್ಯಾನ್ಸ್ ಬೇಸರ

ಮಗು ಜನಿಸಿದ ನಂತರ ಅವರ ಮುಖವನ್ನು ತೋರಿಸೋಕೆ ಕೆಲವರು ಹಿಂಜರಿಯುತ್ತಾರೆ. ಇದಕ್ಕೆ ನಾನಾ ರೀತಿಯ ಕಾರಣಗಳಿವೆ. ಅಮೂಲ್ಯ ಕೂಡ ಇದೇ ಸಾಲಿಗೆ ಸೇರುತ್ತಾರೆ. ಅವರು ಮಕ್ಕಳ ಮುಖ ತೋರಿಸಿಲ್ಲ.

ಮಗುವಿನ ಜತೆ ಮೊದಲ ಬಾರಿ ಫೋಟೋ ಹಂಚಿಕೊಂಡ ನಟಿ ಅಮೂಲ್ಯ; ಆದ್ರೂ ಫ್ಯಾನ್ಸ್ ಬೇಸರ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 12, 2022 | 5:02 PM

ಸ್ಯಾಂಡಲ್​ವುಡ್ ನಟಿ ಅಮೂಲ್ಯ (Actress Amulya) ಅವರು ಮಾರ್ಚ್​​ ತಿಂಗಳಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಮಗು ಜನಿಸಿ ಎರಡು ತಿಂಗಳ ಮೇಲಾಗಿದೆ. ಇಲ್ಲಿಯವರೆಗೆ ಅವರು ಮಕ್ಕಳ ಯಾವುದೇ ಫೋಟೋ ಹಂಚಿಕೊಂಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಅವರು ಅವಳಿ ಮಕ್ಕಳ ಜತೆಗಿನ ಫೋಟೋ (Amulya Baby Photo) ಹಂಚಿಕೊಂಡಿದ್ದಾರೆ. ಇದನ್ನು ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಆದರೆ, ಈ ಫೋಟೋ ನೋಡಿ ಕೆಲ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ.

ಮಗು ಜನಿಸಿದ ನಂತರ ಅವರ ಮುಖವನ್ನು ತೋರಿಸೋಕೆ ಕೆಲವರು ಹಿಂಜರಿಯುತ್ತಾರೆ. ಇದಕ್ಕೆ ನಾನಾ ರೀತಿಯ ಕಾರಣಗಳಿವೆ. ಅಮೂಲ್ಯ ಕೂಡ ಇದೇ ಸಾಲಿಗೆ ಸೇರುತ್ತಾರೆ. ಅವರು ಮಕ್ಕಳ ಮುಖ ತೋರಿಸಿಲ್ಲ. ಬದಲಿಗೆ ಕಾಲುಗಳು ಕಾಣುವಂತೆ ಫೋಟೋ ಹಾಕಿದ್ದಾರೆ. ಇದು ಫ್ಯಾನ್ಸ್​ ಬೇಸರಕ್ಕೆ ಮುಖ್ಯ ಕಾರಣ. ಅವಳಿ ಮಕ್ಕಳ ಮುಖ ತೋರಿಸಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ
Image
ಕಾಲಿಲ್ಲದ ವ್ಯಕ್ತಿಯಿಂದ ಮಕ್ಕಳಿಗಾಗಿ ಬಲೂನ್​ ಖರೀದಿಸಿದ ಅಮೂಲ್ಯ ಪತಿ; ಇದರ ಹಿಂದಿದೆ ಒಂದು ಕಹಾನಿ
Image
Amulya: ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ; ಸಂತಸ ಹಂಚಿಕೊಂಡ ನಟಿಯ ಪತಿ ಜಗದೀಶ್
Image
ಅಮೂಲ್ಯ ಪ್ರೆಗ್ನೆನ್ಸಿ ಫೋಟೋಶೂಟ್​ ವೈರಲ್​: ನೆಚ್ಚಿನ ನಟಿಗೆ ಅಭಿಮಾನಿಗಳ ಶುಭ ಹಾರೈಕೆ
Image
Amulya: ಅದ್ದೂರಿಯಾಗಿ ನಡೆದ ಅಮೂಲ್ಯ ಸೀಮಂತ ಶಾಸ್ತ್ರ; ಇಲ್ಲಿವೆ ಫೋಟೋಗಳು

‘ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ. ಈ ಪಯಣದಲ್ಲಿ ಜತೆ ನಿಂತು ಹಾರೈಸಿದ ಎಲ್ಲರಿಗೆ ಧನ್ಯವಾದಗಳು’ ಎಂದು ಈ ಮೊದಲು ಅಮುಲ್ಯಾ ಪತಿ ಜಗದೀಶ್ ಆರ್ ಚಂದ್ರ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು. ಅವರಿಗೆ ಶುಭಾಶಯಹರಿದು ಬಂದಿತ್ತು.

ಚಿತ್ರರಂಗದಲ್ಲಿ ​ಬೇಡಿಕೆ ಇರುವ ನಟಿಯಾಗಿ ಗುರುತಿಸಿಕೊಂಡಿದ್ದ ಅಮೂಲ್ಯ, 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್​ ಜತೆ ಅಮೂಲ್ಯ ಮದುವೆ ನೆರವೇರಿತು.  2017ರ ಬಳಿಕ ಅಮೂಲ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಅವರು ಪೂರ್ಣ ಪ್ರಮಾಣದಲ್ಲಿ ಹೀರೋಯಿನ್​ ಆಗಿ ನಟಿಸಿದ ಕೊನೇ ಸಿನಿಮಾ ‘ಮಾಸ್ತಿಗುಡಿ’. 2017ರಲ್ಲಿ ತೆರೆಕಂಡ ‘ಮುಗುಳು ನಗೆ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಅಮೂಲ್ಯ ಅವರ ಪ್ರೆಗ್ನೆನ್ಸಿ ಫೋಟೋ ಈ ಮೊದಲು ವೈರಲ್ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:57 pm, Sun, 12 June 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ