ಕಾಲಿಲ್ಲದ ವ್ಯಕ್ತಿಯಿಂದ ಮಕ್ಕಳಿಗಾಗಿ ಬಲೂನ್​ ಖರೀದಿಸಿದ ಅಮೂಲ್ಯ ಪತಿ; ಇದರ ಹಿಂದಿದೆ ಒಂದು ಕಹಾನಿ

ಕಾಲಿಲ್ಲದ ವ್ಯಕ್ತಿಯಿಂದ ಮಕ್ಕಳಿಗಾಗಿ ಬಲೂನ್​ ಖರೀದಿಸಿದ ಅಮೂಲ್ಯ ಪತಿ; ಇದರ ಹಿಂದಿದೆ ಒಂದು ಕಹಾನಿ
ಜಗದೀಶ್​-ಅಮುಲ್ಯ

ರಸ್ತೆ ಬದಿಯಲ್ಲಿ ಬಲೂನ್ ಮಾರುವ ವ್ಯಕ್ತಿಯೊಬ್ಬರು ಜಗದೀಶ್​ ಅವರನ್ನು ಪ್ರೀತಿಯಿಂದ ಮಾತನಾಡಿಸಿದ್ದರು. ಅಷ್ಟೇ ಅಲ್ಲ, ಅಮೂಲ್ಯ ಅವರ ಆರೋಗ್ಯವನ್ನು ವಿಚಾರಿಸಿದ್ದರು. ಈ ಬಗ್ಗೆ ಜಗದೀಶ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

TV9kannada Web Team

| Edited By: Rajesh Duggumane

Mar 07, 2022 | 7:56 PM

ನಟಿ ಅಮೂಲ್ಯ (Amulya) ಅವರು ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಈ ವಿಚಾರವನ್ನು ಅವರ ಪತಿ ಜಗದೀಶ್​ (Jagadish Chandra) ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಅಮೂಲ್ಯ ಅವರಿಗೆ ಡೆಲಿವರಿ ಆಗಿತ್ತು. ಆಸ್ಪತ್ರೆಯಲ್ಲೇ ಇದ್ದು ಅಮೂಲ್ಯ ಅವರ ಆರೈಕೆ ಮಾಡಿದ್ದಾರೆ ಜಗದೀಶ್. ಒಂದು ದಿನ ಆಸ್ಪತ್ರೆಯಿಂದ ಹೊರ ಬಂದಾಗ ಅವರಿಗೆ ಅಚ್ಚರಿ ಒಂದು ಕಾದಿತ್ತು. ರಸ್ತೆ ಬದಿಯಲ್ಲಿ ಬಲೂನ್ ಮಾರುವ ವ್ಯಕ್ತಿಯೊಬ್ಬರು ಜಗದೀಶ್​ ಅವರನ್ನು ಪ್ರೀತಿಯಿಂದ ಮಾತನಾಡಿಸಿದ್ದರು. ಅಷ್ಟೇ ಅಲ್ಲ, ಅಮೂಲ್ಯ ಅವರ ಆರೋಗ್ಯವನ್ನು ವಿಚಾರಿಸಿದ್ದರು. ಈ ಬಗ್ಗೆ ಜಗದೀಶ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘ಸುಸಜ್ಜಿತ ಶಾಪ್‌ಗೂ ಫುಟ್‌ಪಾತ್‌ನಲ್ಲಿ ಮಾರುವ ಪುಟ್ಟ ಅಂಗಡಿಗೂ ಎಷ್ಟೊಂದು ವ್ಯತ್ಯಾಸವಿದೆ ಎಂದು ಮನಸ್ಸಿಗೆ ಅನ್ನಿಸಿತು. ಕೆಲವೊಮ್ಮೆ ದುಬಾರಿ ಬೆಲೆ ತೆತ್ತು ಕೊಂಡುಕೊಳ್ಳುವ ಶಾಪ್‌ನಲ್ಲಿ ಹೃದಯ ಶ್ರೀಮಂತಿಕೆಯೇ ಬಹಳ ಕಡಿಮೆ ಎಂದೆನಿಸಬಹುದು. ಆದರೆ ಕಡಿಮೆ ಬೆಲೆ ಕೊಟ್ಟು ಸಣ್ಣ ಅಂಗಡಿ ಅಥವಾ ಫುಟ್‌ಪಾತ್‌ನಲ್ಲಿ ಏನನ್ನಾದರೂ ತೆಗೆದುಕೊಂಡರೆ ಅವರಲ್ಲಿ ಹೆಚ್ಚಿನ ಪ್ರೀತಿ ವಿಶ್ವಾಸ ಗಮನಕ್ಕೆ ಬರುತ್ತದೆ’ ಎಂದು ಬರಹ ಆರಂಭಿಸಿದ್ದಾರೆ ಜಗದೀಶ್.

‘ಶಿವರಾತ್ರಿಯ ದಿನದಂದು ಜಯನಗರದ ಆಸ್ಪತ್ರೆಯ ಬಲಭಾಗದ ಫುಟ್‌ಪಾತ್‌ನಲ್ಲಿ ಬಲೂನ್‌ ಮತ್ತು ಆಟಿಕೆಗಳನ್ನು ಮಾರುತ್ತಿದ್ದ ಕಾಲುಗಳಿಲ್ಲದ ವ್ಯಕ್ತಿ ರವಿ ಎನ್ನುವವರು ‘ಅಮೂಲ್ಯ ಮೇಡಂಗೆ ಅವಳಿ ಮಕ್ಕಳಾಗಿದ್ದು ಕೇಳಿ ತುಂಬಾ ಸಂತೋಷವಾಯ್ತು ಸರ್. ಎಲ್ಲರೂ ಚೆನ್ನಾಗಿದಾರಲ್ವಾ ? ನೀವು ಯಾವಾಗ ಹೊರಗೆ ಬರುತ್ತೀರಿ ಎಂದು ಕಾಯುತ್ತಿದ್ದೆʼ ಎಂದು ಆತ್ಮೀಯವಾಗಿ ಮಾತನಾಡಿಸಿದ್ದನ್ನು ಕೇಳಿ ನನಗೆ ನಿಜಕ್ಕೂ ಆಶ್ಚರ್ಯ ಮತ್ತು ಸಂತೋಷ ಎರಡೂ ಆಯಿತು’ ಎಂದು ಬರೆದುಕೊಂಡಿದ್ದಾರೆ ಜಗದೀಶ್.

‘ಶ್ರೀಮಂತರಲ್ಲದಿದ್ದರೂ ಅವರ ಹೃದಯ ಶ್ರೀಮಂತಿಕೆ ಎಷ್ಟು ದೊಡ್ಡದಲ್ವಾ? ಕಾಲುಗಳಿಲ್ಲದಿದ್ದರೂ ಸ್ವಾಭಿಮಾನದಿಂದ ನಿತ್ಯ ತನ್ನ ಕೆಲಸ ಮಾಡಿಕೊಂಡು ಶ್ರಮವಹಿಸಿ ತನ್ನ ಜೀವನ ನಡೆಸುತ್ತಿರುವ ಆ ವ್ಯಕ್ತಿಯಿಂದ ಡಿಸ್ಚಾರ್ಜ್‌ ಆಗುವ ದಿನ ಮಕ್ಕಳಿಗಾಗಿ ಆಟಿಕೆಗಳ ರೂಪದಲ್ಲಿ ಎರಡು ಬಲೂನ್​ಅನ್ನು ಕೊಂಡೆವು’ ಎನ್ನುತ್ತಾರೆ ಅವರು.

‘ಎಲ್ಲವೂ ಕಮರ್ಷಿಯಲ್ ಮತ್ತು ದುಬಾರಿ ಆಗಿರುವ ಈಗಿನ ಕಾಲದಲ್ಲಿ ಈ ರೀತಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಹೃದಯವಂತರ ಬಳಿ ನಾವು ವಸ್ತುಗಳನ್ನು ಕೊಂಡುಕೊಳ್ಳುವುದರಲ್ಲಿ ತಪ್ಪೇನಿದೆ ಅಲ್ಲವೇ? ಈ ರೀತಿ ಮಾಡುವುದರಿಂದ ಅವರಿಗೂ ಸಹಾಯವಾಗುತ್ತದೆ. ಅವರು ಇನ್ನಷ್ಟು ಆತ್ಮನಿರ್ಭರವಾಗಿ ಜೀವನ ನಡೆಸಲು ಅನುಕೂಲವಾಗುತ್ತದೆ. ನಿಮಗೇನಾದರೂ ಈ ರೀತಿ ಬೀದಿ ಬೀದಿಗಳಲ್ಲಿ ವ್ಯಾಪಾರ ಮಾಡುವವರು ಕಂಡರೆ ನೀವೂ ಅವರ ಬಳಿ ವಸ್ತುಗಳನ್ನು ಖರೀದಿಸಿ ಅವರನ್ನು ಪ್ರೋತ್ಸಾಹಿಸಿ’ ಎಂದು ಕೋರಿದ್ದಾರೆ ಜಗದೀಶ್.

ಇದನ್ನೂ ಓದಿ: ಅವಳಿ ಮಕ್ಕಳ ತಾಯಾದ ಅಮೂಲ್ಯ: ಫೋಟೋ ಹಂಚಿಕೊಂಡ ಪತಿ, ಸೆಲೆಬ್ರಿಟಿಗಳಿಂದ ಶುಭಾಶಯ

Amulya: ಅಮೂಲ್ಯ- ಜಗದೀಶ್; ತಾರಾ ದಂಪತಿಯ ಮುದ್ದಾದ ಫೋಟೋಗಳು ಇಲ್ಲಿವೆ

Follow us on

Related Stories

Most Read Stories

Click on your DTH Provider to Add TV9 Kannada