ಬೆಂಗಳೂರಲ್ಲಿ ಉಗ್ರನ ಬಂಧನ ಪ್ರಕರಣ; ಪೊಲೀಸರಿಗೆ ಕೊನೆಗೂ ಸಿಕ್ತು ಉಗ್ರ ತಾಲಿಬ್ ಮಾಹಿತಿ
ಜಮ್ಮು-ಕಾಶ್ಮೀರದ ಕಿಸ್ತಾವರ್ ಠಾಣೆಯಲ್ಲಿ ಯುಎಪಿಎ ಕಾಯ್ದೆ ಮತ್ತು ಸ್ಫೋಟಕ ಕಾಯ್ದೆಯಡಿ ಕೇಸ್ ದಾಖಲಾಗಿವೆ. ಹೀಗಾಗಿ ಉಗ್ರನ ಇಂಚಿಂಚು ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.
ಬೆಂಗಳೂರು: ನಗರದಲ್ಲಿ ಬಂಧನಕ್ಕೆ ಒಳಗಾಗಿದ್ದ ಉಗ್ರ ತಾಲಿಬ್ ಹುಸೇನ್ಗೆ ಸಂಬಂಧಿಸಿದ ಮಾಹಿತಿ ಬೆಂಗಳೂರು ಪೊಲೀಸರಿಗೆ (Bengaluru Police) ಕೊನೆಗೂ ಸಿಕ್ಕಿದೆ. ಕಾಶ್ಮೀರ ಪೊಲೀಸರನ್ನು ಸಂಪರ್ಕಿಸಿದ್ದ ಗುಪ್ತಚರ ಇಲಾಖೆ ಪೊಲೀಸರು, ಎರಡೇ ದಿನದಲ್ಲಿ ತಾಲಿಬ್ ಹುಸೇನ್ ಕುರಿತ ರಿಪೋರ್ಟ್ ತಯಾರಿ ಮಾಡಿದ್ದಾರೆ. ತಾಲಿಬ್ ಬಗ್ಗೆ ಸಿದ್ಧವಾಗಿರುವ ವರದಿಯನ್ನು ಸದ್ಯ ಪೊಲಿಸರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿಗೆ ಸಲ್ಲಿಸಿದ್ದಾರೆ. ಹುಸೇನ್ ಬಗ್ಗೆ ನೀಡಿದ ಮಾಹಿತಿಯಲ್ಲಿ ಆತನ ವಿರುದ್ಧ ಎರಡು ಕೇಸ್ಗಳು ದಾಖಲಾಗಿರುವ ಬಗ್ಗೆ ಮಾಹಿತಿಯಿದ್ದು, 2007-08ರಲ್ಲಿ ನಡೆದ ಕೆಲವು ಅಪರಾಧ ಕೃತ್ಯಗಳ ಬಗ್ಗೆ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.
ಜಮ್ಮು-ಕಾಶ್ಮೀರದ ಕಿಸ್ತಾವರ್ ಠಾಣೆಯಲ್ಲಿ ಯುಎಪಿಎ ಕಾಯ್ದೆ ಮತ್ತು ಸ್ಫೋಟಕ ಕಾಯ್ದೆಯಡಿ ಕೇಸ್ ದಾಖಲಾಗಿವೆ. ಹೀಗಾಗಿ ಉಗ್ರನ ಇಂಚಿಂಚು ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರಲ್ಲಿ ಉಗ್ರ ತಾಲಿಬ್ ಹುಸೇನ್ ಬಂಧನವಾಗಿರುವ ಹಿನ್ನೆಲೆ ನಗರದ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ನಿಗಾವಹಿಸಲು ಎಟಿಸಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ; ಅಕ್ರಮವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ ಇಸ್ಮಾಯಿಲ್ ಬಂಧನ
ರಾಜ್ಯಾದ್ಯಂತ ಬೀಡು ಬಿಟ್ಡಿದ್ದಾರೆ ಬಾಂಗ್ಲಾದ ಅಕ್ರಮ ವಲಸಿಗರು: ರಾಜ್ಯದಲ್ಲಿ 3 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ರಾಜ್ಯಾದ್ಯಂತ ಬೀಡು ಬಿಟ್ಡಿರುವ ಬಗ್ಗೆ ಮಾಹಿತಿ ಇದೆ. ಬೆಂಗಳೂರು ಹಾಗೂ ಹೊರವಲಯದಲ್ಲೇ 2 ಲಕ್ಷ ವಲಸಿಗರು ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಐಎಸ್ಡಿ ಐಬಿಗೆ ಮಾಹಿತಿ ಕೊಟ್ಟಿದೆ. ಬೇರೆ ಬೇರೆ ರಾಜ್ಯಗಳ ಅಡ್ರೆಸ್ನಲ್ಲಿ ಫೇಕ್ ಆಧಾರ್ ಕಾರ್ಡ್ ಇಟ್ಟುಕೊಂಡಿದ್ದಾರೆ ಅಂತಲೂ ಹೇಳಲಾಗುತ್ತಿದೆ.
ಹಿಂದೂ ಪರಿಷತ್ ಬಜರಂಗದಳ ದೂರು: ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ದೂರು ನೀಡಿದೆ. ತಾಲೀಬ್ ಹುಸೇನ್ ನೆಲೆಸಿದ್ದ ಮಸೀದಿಯನ್ನು ಸೀಜ್ ಮಾಡಬೇಕು, ಸಿಮ್ ಕಾರ್ಡ್ ನೀಡಿದವರಿಗೆ ಹಾಗೂ ಆತನಿಗೆ ಆಶ್ರಯ ಕಲ್ಪಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ವಿಎಚ್ಪಿ ಮುಖಂಡರಾದ ತೇಜಸ್ ಗೌಡ, ಗೋವರ್ಧನ್ ಹಾಗೂ ಶಿವಕುಮಾರ್ ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಏನೇನು ಭಯೋತ್ಪಾದಕ ಚಟುವಟಿಕೆಗಳು ನಡೆದಿದೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಬೇಕು. ಹಿಂದೂಗಳ ಹಬ್ಬದಲ್ಲಿ ಅನುಮತಿ ಪಡೆಯಲು ಸಾಕಷ್ಟು ಒದ್ದಾಡಬೇಕು. ಆದರೆ ಮುಸ್ಲಿಮರ ಹಬ್ಬಗಳಲ್ಲಿ ಯಾವುದೇ ಅನುಮತಿ ಪಡೆಯದೆ ಆಚರಣೆ ಮಾಡಲಾಗುತ್ತಿದೆ. ರಂಜಾನ್ ಹಬ್ಬದಂದು ನಿಯಮ ಉಲ್ಲಂಘನೆ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:29 am, Sun, 12 June 22