AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ 3 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ; ಉಗ್ರ ತಾಲಿಬ್ ಹುಸೇನ್ ಬಂಧನದ ಬೆನ್ನಲ್ಲೇ ಐಎಸ್​ಡಿ ಅಲರ್ಟ್

ನಕಲಿ ಆಧಾರ್ ಕಾರ್ಡ್ ಮಾಡುತ್ತಿದ್ದ ಗ್ಯಾಂಗ್​ನ ಬೆಂಗಳೂರಿನ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾಹಿದ್ ಕುರಿತು ಐಜಿಪಿ ಚಂದ್ರಶೇಖರ್ ಐಬಿಗೆ ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ 3 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ; ಉಗ್ರ ತಾಲಿಬ್ ಹುಸೇನ್ ಬಂಧನದ ಬೆನ್ನಲ್ಲೇ ಐಎಸ್​ಡಿ ಅಲರ್ಟ್
ಬೆಂಗಳೂರು
TV9 Web
| Updated By: sandhya thejappa|

Updated on:Jun 12, 2022 | 11:54 AM

Share

ಬೆಂಗಳೂರು: ರಾಜ್ಯದಲ್ಲಿ ಸುಮಾರು 3 ಲಕ್ಷ ಬಾಂಗ್ಲಾ ವಲಸಿಗರು (Bangla Immigrants) ಅಕ್ರಮವಾಗಿ ಇರುವುದು ಪತ್ತೆಯಾಗಿದ್ದು, ಬೆಂಗಳೂರು ನಗರ, ಹೊರವಲಯದಲ್ಲೇ ಸುಮಾರು 2 ಲಕ್ಷ ವಲಸಿಗರು ಇದ್ದಾರೆ ಎಂದು ಹೇಳಲಾಗುತ್ತಿದೆ. ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳ ಮಾಹಿತಿಯನ್ನು ಐಎಸ್​ಡಿ (ISD) ಸಂಗ್ರಹಿಸಿ ಐಬಿಗೆ ಕೊಟ್ಟಿದೆ. ವಲಸಿಗರು ಬೇರೆ ಬೇರೆ ರಾಜ್ಯಗಳ ವಿಳಾಸದಲ್ಲಿ ಫೇಕ್ ಆಧಾರ್ ಕಾರ್ಡ್ ಪಡೆದು ನೆಲಲೆಸಿದ್ದಾರೆ. ಪ್ರತಿವರ್ಷ ಶೇಕಡಾ 10ರಷ್ಟು ಬಾಂಗ್ಲಾ ವಲಸಿಗರು ಹೆಚ್ಚುತ್ತಿದ್ದು,ಅತಿ ಹೆಚ್ಚು ಬಾಂಗ್ಲಾದವರು ನಗರದ ಹೊರ ವಲಯದಲ್ಲಿ ಚಿಂದಿ ಆಯೋ ಕೆಲಸದಲ್ಲಿ ಇದ್ದಾರೆ. ಸದ್ಯ ಉಗ್ರ ತಾಲಿಬ್ ಹುಸೇನ್ ಬಂಧನದ ಬೆನ್ನಲ್ಲೇ ಐಎಸ್​ಡಿ ಅಲರ್ಟ್ ಆಗಿದೆ.

ಇನ್ನು ನಕಲಿ ಆಧಾರ್ ಕಾರ್ಡ್ ಮಾಡುತ್ತಿದ್ದ ಗ್ಯಾಂಗ್​ನ ಬೆಂಗಳೂರಿನ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾಹಿದ್ ಕುರಿತು ಐಜಿಪಿ ಚಂದ್ರಶೇಖರ್ ಐಬಿಗೆ ಮಾಹಿತಿ ನೀಡಿದ್ದು, ಬಾಂಗ್ಲಾ ಪ್ರಜೆಗಳಿಗೆ ಇವರೇ ಆಧಾರ್ ಕಾರ್ಡ್ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಎರಡು ದಿನದಲ್ಲಿ ಐಬಿ ಅಧಿಕಾರಿಗಳು ಶಾಹಿದ್ನ ವಿಚಾರಣೆ ಮಾಡುತ್ತಾರೆ.

ಇದನ್ನೂ ಓದಿ: ಫೇಸ್ಬುಕ್​ನಲ್ಲಿ ನೇರವಾಗಿ ಮಾಜಿ ಸಿಎಂ ಕುಮಾರಸ್ವಾಮಿಗೆ ಓಪನ್ ಚಾಲೆಂಜ್ ಹಾಕಿದ ಶ್ರೀನಿವಾಸ್ ಬೆಂಬಲಿಗರು

ಇದನ್ನೂ ಓದಿ
Image
Asia Cup Hockey ಏಷ್ಯಾ ಕಪ್ ಹಾಕಿ: ಜಪಾನ್ ತಂಡವನ್ನು ಮಣಿಸಿ ಕಂಚು ಗೆದ್ದ ಭಾರತ
Image
ಅಯೋಧ್ಯೆ ರಾಮ ಮಂದಿರ ಸುತ್ತಮುತ್ತ ಮದ್ಯ ಮಾರಾಟ ನಿಷೇಧಿಸಿದ ಉತ್ತರ ಪ್ರದೇಶ ಸರ್ಕಾರ
Image
ರಾಜ್ಯ ಬಿಜೆಪಿ ಘಟಕದಲ್ಲಿ ನಾಚಿಕೆ, ಮಾನ-ಮರ್ಯಾದೆ ಇಲ್ಲದ ಒಕ್ಕಲಿಗ ನಾಯಕರಿದ್ದಾರೆ: ಲಕ್ಷ್ಮಣ್, ಕೆಪಿಸಿಸಿ ವಕ್ತಾರ
Image
Running: ಹೆಚ್ಚು ಓಡುವುದರಿಂದ ನಿಮ್ಮನ್ನು ಈ ಸಮಸ್ಯೆಗಳು ಕಾಡಬಹುದು

ಕೊನೆಗೂ ಸಿಕ್ಕಿತು ಉಗ್ರನ ಮಾಹಿತಿ: ನಗರದಲ್ಲಿ ಬಂಧನಕ್ಕೆ ಒಳಗಾಗಿದ್ದ ಉಗ್ರ ತಾಲಿಬ್ ಹುಸೇನ್​ಗೆ ಸಂಬಂಧಿಸಿದ​ ಮಾಹಿತಿ ಬೆಂಗಳೂರು ಪೊಲೀಸರಿಗೆ ಕೊನೆಗೂ ಸಿಕ್ಕಿದೆ. ಕಾಶ್ಮೀರ ಪೊಲೀಸರನ್ನು ಸಂಪರ್ಕಿಸಿದ್ದ ಗುಪ್ತಚರ ಇಲಾಖೆ ಪೊಲೀಸರು, ಎರಡೇ ದಿನದಲ್ಲಿ ತಾಲಿಬ್ ಹುಸೇನ್​​ ಕುರಿತ ರಿಪೋರ್ಟ್ ತಯಾರಿ ಮಾಡಿದ್ದಾರೆ. ತಾಲಿಬ್ ಬಗ್ಗೆ ಸಿದ್ಧವಾಗಿರುವ ವರದಿಯನ್ನು ಸದ್ಯ ಪೊಲಿಸರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿಗೆ ಸಲ್ಲಿಸಿದ್ದಾರೆ. ಹುಸೇನ್ ಬಗ್ಗೆ ನೀಡಿದ ಮಾಹಿತಿಯಲ್ಲಿ ಆತನ ವಿರುದ್ಧ ಎರಡು ಕೇಸ್​ಗಳು ದಾಖಲಾಗಿರುವ ಬಗ್ಗೆ ಮಾಹಿತಿಯಿದ್ದು, 2007-08ರಲ್ಲಿ ನಡೆದ ಕೆಲವು ಅಪರಾಧ ಕೃತ್ಯಗಳ ಬಗ್ಗೆ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:49 am, Sun, 12 June 22