AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೇಸ್ಬುಕ್​ನಲ್ಲಿ ನೇರವಾಗಿ ಮಾಜಿ ಸಿಎಂ ಕುಮಾರಸ್ವಾಮಿಗೆ ಓಪನ್ ಚಾಲೆಂಜ್ ಹಾಕಿದ ಶ್ರೀನಿವಾಸ್ ಬೆಂಬಲಿಗರು

ಗುಬ್ಬಿ ಶಾಸಕ ಶ್ರೀನಿವಾಸ್ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ ಫೇಸ್ಬುಕ್​ನಲ್ಲಿ ನೇರವಾಗಿ ಮಾಜಿ ಸಿಎಂ ಕುಮಾರಸ್ವಾಮಿಗೆ ಶ್ರೀನಿವಾಸ್ ಬೆಂಬಲಿಗರು ಓಪನ್ ಚಾಲೆಂಜ್ ಹಾಕಿದ್ದಾರೆ.

ಫೇಸ್ಬುಕ್​ನಲ್ಲಿ ನೇರವಾಗಿ ಮಾಜಿ ಸಿಎಂ ಕುಮಾರಸ್ವಾಮಿಗೆ ಓಪನ್ ಚಾಲೆಂಜ್ ಹಾಕಿದ ಶ್ರೀನಿವಾಸ್ ಬೆಂಬಲಿಗರು
ಎಸ್​. ಆರ್ ಶ್ರೀನಿವಾಸ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jun 12, 2022 | 11:53 AM

ತುಮಕೂರು: ಗುಬ್ಬಿ ಶಾಸಕ ಶ್ರೀನಿವಾಸ್ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ ಸೋಷಿಯಲ್​ಮೀಡಿಯಾದಲ್ಲಿ‌‌ ಹೆಚ್​.ಡಿ ಕುಮಾರಸ್ವಾಮಿಗೆ ಗುಬ್ಬಿ ಶ್ರೀನಿವಾಸ್ ಬೆಂಬಲಿಗರು ನೇರವಾಗಿ ಸವಾಲ್ ಹಾಕಿದ್ದಾರೆ. ಎಲ್ಲೋ ಕುತ್ಕಂಡು ಮಾತಾಡೋದಲ್ಲ, ತಾಕತ್ ಇದ್ರೆ ನಮ್ಮ ಕ್ಷೇತ್ರಕ್ಕೆ ಬಂದು ಗೆದ್ದು ತೊರ್ಸಿ ಎಂದು ನೇರವಾಗಿ ಕುಮಾರಸ್ವಾಮಿಗೆ ಎಸ್​. ಆರ್ ಶ್ರೀನಿವಾಸ್ ಗುಬ್ಬಿ ಎಂಎಲ್ಎ ಎಂಬ ಫೇಸ್ಬುಕ್ ಪೇಜ್​ನಲ್ಲಿ ಬಹಿರಂಗ ಸವಾಲ್ ಹಾಕಿದ್ದಾರೆ. ನಾವು ಗುಬ್ಬಿ ವಾಸಣ್ಞನ‌ ಹುಡುಗರು, ಕಾರ್ಯಕರ್ತರು. ನೀವು ಎಷ್ಟೇ ಹೇಳಿದ್ರು ಶಕ್ತಿಯುತವಾಗಿ ವಾಸಣ್ಣ ಬೆಳಿತಾರೆ. ಬೆಳಸ್ತಿವಿ. ನೀವಾಗಿ ನೀವೇ ನಮ್ಮ‌ ವಾಸಣ್ಣನನ್ನ ಸ್ಟೇಟ್ ಲೀಡರ್ ಮಾಡಿದಿರಿ. ಅವರಿಗೆ ನಿಮ್ಮ ಆಶಿರ್ವಾದ ಇರುತ್ತೆ. ಇನ್ನು ಅವರನ್ನ‌ ನಾವು ಕೈಹಿಡಿದು ಉನ್ನತ ಸ್ಥಾನಗಳಿಗೆ ಕರ್ಕೊಂಡು ಹೊಗುತ್ತೇವೆ. ಯಾರು ಏನೇ ಹೇಳಿದ್ರು ನಾವು ಯಾವತ್ತು ವಾಸಣ್ಣನನ್ನ ಬಿಟ್ಟು ಕೊಡಲ್ಲ. ಇಂತಹ ರಾಜಕಾರಣಕ್ಕೆ ನಾವು ಬಗ್ಗೋರಲ್ಲ. ಗುಬ್ಬಿ ಜನ, ಯಾವತ್ತು ವಾಸಣ್ಣನನ್ನ ಕೈಬಿಟ್ಟಿಲ್ಲ. ಬಿಡೋದು ಇಲ್ಲ. ನಿಮ್ಮಂತ ಎಷ್ಟೇ ಕುಮಾರಸ್ವಾಮಿಗಳು ಬಂದ್ರು ಅಷ್ಟೇ,  ವಾಸಣ್ಣಗೆ ಅವರಿಗ್ಯಾರು ಸರಿಸಾಟಿ ಇಲ್ಲ ಎಂದು ಹೇಳಿದ್ದಾರೆ.

ಇದ್ನನೂ ಓದಿ: Viral Video: ಟಿವಿ ನೋಡುತ್ತಾ ಡ್ರಮ್ಮಿಂಗ್ ಅಭ್ಯಾಸ ಮಾಡಿದ 3ರ ಬಾಲಕ, ಆತನ ಮುಖಭಾವಕ್ಕೆ ನೆಟ್ಟಿಗರು ಫಿದಾ

ನಿಮಗೆ ತಾಕತ್ ಅನ್ನೋದು ಇದ್ರೆ ಡೈರೆಕ್ಟ್ ಆಗಿ ಗುಬ್ಬಿಗೆ ಬಂದು ಎಲೆಕ್ಷನ್​ಗೆ ನಿಂತುಕೊಂಡು ಗೆಲ್ಲಿ. ಆವಾಗ ನಿಮ್ಮ ಜೆಡಿಎಸ್ ಶಕ್ತಿ ಏನು ಅನ್ನೋದನ್ನ ತೊರ್ಸಿ. ಅದನ್ನ ಬಿಟ್ಟು ಕೈಲಾಗದವರು ಅದೇನೋ ಬಿಟ್ಕೊಂಡ್ರಲ್ಲ ಹಂಗೆ ಎಲ್ಲೋ ಕುತ್ಕಂಡು ಮಾತಾಡೋದಲ್ಲ. ಬನ್ನಿ ಕ್ಷೇತ್ರಕ್ಕೆ ವಾಸಣ್ಣನ ಬಗ್ಗೆ ಕೇಳಿ. ಮಾಜಿ ಸಿಎಂ‌ ನೀವು ಆ ಘನತೆಗಾದ್ರು ನೀವು ರಾಜಕೀಯ ‌ಮಾಡಿ. ಈ ತರ ರಾಜಕೀಯ ‌ಮಾಡಿದ್ರೆ ಸರಿ ಇರಲ್ಲ.‌ ನಾವು‌ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ. ಇದು ನಿಮಗೆ ಎಚ್ಚರಿಕೆ‌ ನೀಡುತ್ತಿದ್ದೇವೆ ಎಂದು ಹೇಳಿದರು.

ಕುಮಾರಸ್ವಾಮಿ ಅವರೇ ನಿಮ್ಮ‌ ಹತ್ರ ಇರೋ ಕಾರ್ಯಕರ್ತರು ದುಡ್ಡು ಕೊಟ್ರೆ ಬರ್ಬಹುದು. ಅದೇ ವಾಸಣ್ಣನ ಹತ್ರ ಇರೋ ಕಾರ್ಯಕರ್ತರು, ವಾಸಣ್ಣ ಒಂದೇ ಒಂದು ಕರೆ ಕೊಟ್ರೆ ಇಡೀ ತುಮಕೂರೇ ಅವರ ಹಿಂದೆ ಇರುತ್ತೆ. ನೀವು ಯಾವದೇ ಕಾರಣಕ್ಕೂ ತಪ್ಪು ತಿಳ್ಕೋಬೇಡಿ ಅವರನ್ನ‌ ಮುಗಿಸ್ಬೇಕು ಅಂತ. ರಾಜಕೀಯದಿಂದ ತುಳಿಬೇಕು ಅಂದ್ರೆ ನಿಮಗಿಂತ ಒಂದು ಸ್ಥಾನದಲ್ಲಿ ಎತ್ತರದಲ್ಲಿ ಇರ್ತಾರೆ. ಇಂತಹ ತಪ್ಪು ಕಲ್ಪನೆಗೆ ಹೋಗ್ಬೇಡಿ ಕನಸಲ್ಲು ಅನ್ಕೋಬೇಡಿ. ಅವರಿಗೆ ಸಾವಿರಾರು ಜನ‌‌ ಅಭಿಮಾನಿಗಳು ಇದ್ದಾರೆ. 20 ವರ್ಷದಿಂದ ನಿಮ್ಮ ಪಕ್ಷದ ಚಿಹ್ನೆ ಬಳಸಿ ನಿಮ್ಮ‌ಹೆಸರು ಬಳಸಿಕೊಂಡು ವಾಸಣ್ಣ ಗೆದ್ದಿಲ್ಲ. ನಾವು ಜಾತಿಯನ್ನ‌ ಮರೆತು ಜಾತ್ಯಾತೀತವಾಗಿ ವಾಸಣ್ಣನಿಗೆ ಸಪೋರ್ಟ್ ಮಾಡ್ತಿರೋದು. ನಾವು ಯಾವತ್ತು ಕುಮಾರಸ್ವಾಮಿ, ದೇವೆಗೌಡರನ್ನ ನೋಡಿ ಪಕ್ಷಕ್ಕೆ ಬಂದಿಲ್ಲ. ವಾಸಣ್ಣ ಎಂಬ ಶಕ್ತಿಗೋಸ್ಕರ ನಾವು ಅಷ್ಟೇ ಜೆಡಿಎಸ್​ನಲ್ಲಿ ಇದಿದ್ದು. ವಾಸಣ್ಣ ಕಾಂಗ್ರೆಸ್, ಬಿಜೆಪಿ ಹಾಗೂ ಯಾವ್ದೆ ಪಕ್ಷಕ್ಕೆ ಹೋಗ್ಲಿ ಅವರು ಎಲ್ಲಿ ಇರ್ತಾರೆ ಅವರಿಗೆ ಬೆನ್ನೇಲುಬಾಗಿ ‌ವಿಜಯಶಾಲಿಯನ್ನಾಗಿ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 11:31 am, Sun, 12 June 22

ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!