ಅವನೇನು ಕತ್ತೆ ಕಾಯುತ್ತಿದ್ನಾ, ನಾನೇನು ಇವನಿಗೆ ಹೆದರಿಕೊಳ್ಳಬೇಕಾ; ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಶಾಸಕ ಶ್ರೀನಿವಾಸ್ ವಾಗ್ದಾಳಿ
ಮೂರ್ನಾಲ್ಕು ನಿಮಿಷ ಪೇಪರ್ ಹಿಡಿದುಕೊಂಡಿದ್ದೇನೆ. ಅದಾದ ಮೇಲೆ ಹೋಗಿ ನಾನು ವೋಟ್ ಹಾಕಿದ್ದೇನೆ. ಅವನೇನು ಕತ್ತೆ ಕಾಯುತ್ತಿದ್ನಾ, ಹೆಬ್ಬೆಟ್ಟು ತೆಗಿ ಅನ್ನಬೇಕಿತ್ತು ಅಂತ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ತುಮಕೂರು: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಮತ್ತು ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ (Gubbi Srinivas) ಮದ್ಯೆ ಅಸಮಾಧಾನ ಮುಂದುವರೆದಿದ್ದು, ಕುಮಾರಸ್ವಾಮಿ ವಿರುದ್ಧ ಶಾಸಕ ಶ್ರೀನಿವಾಸ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಅವನು ಉತ್ತಮನಾ, ಅವನು ಯಾವುದರಲ್ಲಿ ಉತ್ತಮ? ಬೆಳಗ್ಗೆ ಒಂದು ಹೇಳ್ತಾನೆ, ಸಂಜೆ ಒಂದು ಹೇಳ್ತಾನೆ ಎಂದು ಕಿಡಿಕಾರಿರುವ ಶ್ರೀನಿವಾಸ್, ನಾನು ಸರಿಯಾಗಿ ಬ್ಯಾಲೆಟ್ ಪೇಪರ್ ತೋರಿಸಿದ್ದೇನೆ. ಮೂರ್ನಾಲ್ಕು ನಿಮಿಷ ಪೇಪರ್ ಹಿಡಿದುಕೊಂಡಿದ್ದೇನೆ. ಅದಾದ ಮೇಲೆ ಹೋಗಿ ನಾನು ವೋಟ್ ಹಾಕಿದ್ದೇನೆ. ಅವನೇನು ಕತ್ತೆ ಕಾಯುತ್ತಿದ್ನಾ, ಹೆಬ್ಬೆಟ್ಟು ತೆಗಿ ಅನ್ನಬೇಕಿತ್ತು ಅಂತ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ನನಗಿರುವ ಮಾಹಿತಿ ಪ್ರಕಾರ ಕುಮಾರಸ್ವಾಮಿ ಮನೆಯವರೇ ನಾಟಕ ಮಾಡ್ತಿದ್ದಾರೆ. ನನ್ನ ಮುಗಿಸಬೇಕೆಂದು ಅವರೇ ಕ್ರಾಸ್ ವೋಟಿಂಗ್ ಮಾಡಿಸಿದ್ದಾರೆ. ತಮಗೆ ಬೇಕಾದವರಿಂದ ಕ್ರಾಸ್ ವೋಟಿಂಗ್ ಮಾಡಿಸಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿರುವ ಶ್ರೀನಿವಾಸ್, ನಾನು ಪ್ರಾರಂಭದಿಂದಲೂ ಬಿಜೆಪಿ ವಿರೋಧಿಸುತ್ತ ಬಂದಿದ್ದೇನೆ. ಹಾಕಿದ್ರೆ ನಾನು ಕಾಂಗ್ರೆಸ್ಗೆ ಹಾಕಿರುತ್ತೇನೆ. ನಾನೇನು ಇವನಿಗೆ ಹೆದರಿಕೊಳ್ಳಬೇಕಾ? ನನ್ನ ವಿರುದ್ಧ ಅಭ್ಯರ್ಥಿ ಹಾಕಿದ ಮೇಲೆ ಹೆದರುವುದೇನಿದೆ? ಇನ್ನೊಂದು ಜನ್ಮ ಎತ್ತಿದ್ರೂ ಇವನ ಪಕ್ಷಕ್ಕೆ ಬಹುಮತ ಬರಲ್ಲ. ಒಕ್ಕಲಿಗರನ್ನ ತುಳಿಯೋದೇ ಇವನ ಒನ್ ಪಾಯಿಂಟ್ ಅಜೆಂಡಾ. ಒಳ್ಳೇ ಕಾರು, ಒಳ್ಳೇ ಬಟ್ಟೆ ಹಾಕಿಕೊಂಡು ಹೋದ್ರೆ ಕೆಂಗಣ್ಣಿಗೆ ಗುರಿ ಹೋಗುತ್ತೇವೆ. ಇವನ ಮುಂದೆ ಫಕೀರರು, ಪೇಪರ್ ಆಯೋರ ತರ ಇರಬೇಕು ಎಂದು ಹೇಳಿಕೆಗಳನ್ನ ನೀಡಿದ್ದಾರೆ.
ಇದನ್ನೂ ಓದಿ: Trending: ಯಾವ ಕೈ ಮೇಲೆ ಹಲ್ಲಿ ಬಿದ್ದರೆ ಲಕ್? ಹಲ್ಲಿಗಳ ಮಿಲನ ನೋಡಿದರೆ ಏನನ್ನು ಸೂಚಿಸುತ್ತದೆ ಗೊತ್ತಾ?
ಶ್ರೀನಿವಾಸ್ ಮನೆ ಎದುರು ಪ್ರತಿಭಟನೆ: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಹಿನ್ನೆಲೆ ತುಮಕೂರಿನ ವಿದ್ಯಾನಗರದಲ್ಲಿರುವ ಶಾಸಕ ಶ್ರೀನಿವಾಸ್ ಮನೆ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಮತ್ತು ಶಾಸಕರ ಬೆಂಬಲಿಗರು ಪರಸ್ಪರ ಮುಖಾಮುಖಿಯಾಗಿದ್ದಾರೆ. ಪರಿಸ್ಥಿತಿ ನಿಯಂತ್ರಿಸುವುದಕ್ಕೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಕುಮಾರಸ್ವಾಮಿ ಒಬ್ಬ ದೊಡ್ಡ ನಾಟಕಕಾರ- ಶ್ರೀನಿವಾಸ್: ನನ್ನ ಮೇಲೆ ಮಾಡಿರೋ ಷಡ್ಯಂತ್ರ ಇದು. ಇದೇ ಕುಮಾರಸ್ವಾಮಿ ಕ್ರಾಸ್ ವೋಟ್ ಮಾಡ್ಸಿ ಅದನ್ನ ನನ್ನ ಮೇಲೆ ಹಾಕ್ತಿದ್ದಾನೆ. ಅವರಿಗೆ ಗೊತ್ತು ನಮ್ಮ ಅಭ್ಯರ್ಥಿ ಗೆಲ್ಲಲ್ಲ ಅಂತ. ಯಾವ್ದೋ ಬೇರೆ ಕ್ರಾಸ್ ವೋಟ್ ಮಾಡ್ಸಿ ಈ ರೀತಿಯಾಗಿ ಮಾಡಿದ್ದಾನೆ. ಅವನ ಯೋಗ್ಯತೆಗೆ ಯಾರು ವೋಟ್ ಹಾಕಲ್ಲ ಅಂತನೂ ಗೊತ್ತಿದೆ. ನನ್ನ ತೇಜೊವಧೆ ಮಾಡೋಕೆ ಈ ರೀತಿಯಾಗಿ ಮಾಡಿದ್ದಾನೆ. ನಾನು ಇವನಿಗೆ ಎದುರಿಕೊಂಡು, ಬೇರೆ ಅವರಿಗೆ ಎದುರಿಕೊಂಡು ಯಾರಿಗೂ ನಾನು ಕಚ್ಚೆ ಕಟ್ಟಲ್ಲ. ಯಾರಿಗೂ ಕೇರ್ ಮಾಡಲ್ಲ. ನಾನು ನನ್ನ ಸ್ವಾಭಿಮಾನ ಹಾಗೂ ನನ್ನ ಮನಸಾಕ್ಷಿ ವಿರುದ್ಧ ಯಾವತ್ತು ಹೊಗಲ್ಲ. ಇವರು ಇದೆಲ್ಲಾ ನಾಟಕ ಮಾಡ್ತಿದ್ದಾರೆ. ಕುಮಾರಸ್ವಾಮಿ ಒಬ್ಬ ದೊಡ್ಡ ನಾಟಕಕಾರ. ಒಂಥರ ಊಸರವಳ್ಳಿ ಇದ್ದ ಹಾಗೆ. ಅವನೊಬ್ಬನೆ ಸತ್ಯ ಹರಿಶ್ಚಂದ್ರ, ಅವನೊಬ್ಬನೆ ಸರ್ವಜ್ಞ ಅಂತ ತಿಳ್ಕೊಂಡಿದ್ದಾನೆ ಎಂದು ಶ್ರೀನಿವಾಸ್ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:08 pm, Sat, 11 June 22