Aryan Khan: NCB ಅಧಿಕಾರಿಗೆ ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದ್ದ ಆರ್ಯನ್​ ಖಾನ್​; ಹಲವು ತಿಂಗಳ ಬಳಿಕ ಬಾಯ್ಬಿಟ್ಟ ಆಫೀಸರ್​​

NCB | Drug Case: ಆರ್ಯನ್​ ಖಾನ್​ ಅವರು ಎನ್​ಸಿಬಿ ಕಸ್ಟಡಿಯಲ್ಲಿ ಇದ್ದಾಗ ಏನೆಲ್ಲ ಮಾತನಾಡಿದ್ದರು ಎಂಬ ವಿಚಾರ ಬಹಿರಂಗ ಆಗಿದೆ. ಆ ಕುರಿತು ಹಿರಿಯ ಅಧಿಕಾರಿಯೊಬ್ಬರು​ ಬಾಯಿ ಬಿಟ್ಟಿದ್ದಾರೆ.

Aryan Khan: NCB ಅಧಿಕಾರಿಗೆ ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದ್ದ ಆರ್ಯನ್​ ಖಾನ್​; ಹಲವು ತಿಂಗಳ ಬಳಿಕ ಬಾಯ್ಬಿಟ್ಟ ಆಫೀಸರ್​​
ಆರ್ಯನ್ ಖಾನ್
TV9kannada Web Team

| Edited By: Madan Kumar

Jun 11, 2022 | 1:04 PM

ಬಾಲಿವುಡ್​ನ ಖ್ಯಾತ ನಟ ಶಾರುಖ್​ ಖಾನ್ (Shah Rukh Khan) ಅವರ ಪುತ್ರ ಆರ್ಯನ್​ ಖಾನ್​ ಕಳೆದ ವರ್ಷ ಡ್ರಗ್ಸ್​ ಕೇಸ್​ನಲ್ಲಿ (Drug Case) ಅರೆಸ್ಟ್​​ ಆಗಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಆ ಪ್ರಕರಣದಿಂದ ಆರ್ಯನ್​ ಬದುಕಿನಲ್ಲಿ ಕಪ್ಪು ಚುಕ್ಕಿ ಬಿದ್ದಂತಾಗಿದೆ. ಈ ಕೇಸ್​ನಲ್ಲಿ ಅವರಿಗೆ ಇತ್ತೀಚೆಗೆ ಕ್ಲೀನ್​ ಚಿಟ್​ ಸಿಕ್ಕಿದೆ. ಹಾಗಾಗಿ ಅವರು ನಿಟ್ಟುಸಿರು ಬಿಟ್ಟಿದ್ದಾರೆ. ಆರ್ಯನ್ ಖಾನ್​ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಕೂಡ ಅವರನ್ನು ತಿಂಗಳುಗಟ್ಟಲೆ ವಶದಲ್ಲಿ ಇರಿಸಿಕೊಳ್ಳಲಾಗಿತ್ತು. ಇದರಿಂದ ಶಾರುಖ್​ ಪುತ್ರನ ಇಮೇಜ್​ಗೆ ಸಾಕಷ್ಟು ಧಕ್ಕೆ ಉಂಟಾಯಿತು. ಕಸ್ಟಡಿಯಲ್ಲಿ ಇದ್ದಾಗ ಎನ್​ಸಿಬಿ ಅಧಿಕಾರಿಗಳಿಗೆ ಆರ್ಯನ್​ ಖಾನ್​ ಅವರು ಕೆಲವು ತೀಕ್ಷ್ಣವಾದ ಪ್ರಶ್ನೆಗಳನ್ನು ಕೇಳಿದ್ದರು. ಆ ಬಗ್ಗೆ ಹಿರಿಯ ಎನ್​ಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಹಾಗಾದರೆ ಎನ್​ಸಿಬಿ ಅಧಿಕಾರಿಗಳು ಮತ್ತು ಆರ್ಯನ್ ಖಾನ್​ (Aryan Khan) ನಡುವೆ ನಡೆದ ಆ ಸಂಭಾಷಣೆಗಳು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ..

ಡ್ರಗ್ಸ್​ ಕೇಸ್​ ಬಗ್ಗೆ ಆರ್ಯನ್​ ಖಾನ್​ ಅವರು ಈವರೆಗೂ ಮೌನ ಮುರಿದಿಲ್ಲ. ಆದರೆ ಅವರು ಕಸ್ಟಡಿಯಲ್ಲಿ ಇದ್ದಾಗ ಮಾತನಾಡಿದ್ದರ ಬಗ್ಗೆ ಹಿರಿಯ ಅಧಿಕಾರಿ ಸಂಜಯ್​ ಸಿಂಗ್​ ಬಾಯಿ ಬಿಟ್ಟಿದ್ದಾರೆ. ಸಂಜಯ್​ ಸಿಂಗ್​ ಅವರು ಎನ್​ಸಿಬಿಯ ಉಪ ನಿರ್ದೇಶಕರಾಗಿದ್ದು, ಆರ್ಯನ್​ ಕೇಸ್​ನಲ್ಲಿ ವಿಶೇಷ ತನಿಖಾತಂಡದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. ಆ ಸಮಯದಲ್ಲಿ ಆಗಿದ್ದನ್ನು ಈಗ ಅವರು ವಿವರಿಸಿದ್ದಾರೆ.

ಸಂಜಯ್​ ಸಿಂಗ್​ ಪ್ರಕಾರ ಆರ್ಯನ್​ ಖಾನ್​ ಹೇಳಿದ್ದೇನು?

‘ಸರ್​.. ನೀವು ನನ್ನನ್ನು ಇಂಟರ್​ನ್ಯಾಷನಲ್​ ಡ್ರಗ್ಸ್​ ಟ್ರಾಫಿಕರ್​ ರೀತಿ ಬಿಂಬಿಸಿದ್ದೀರಿ. ಮಾದಕ ವಸ್ತು ಸಾಗಣೆಗೆ ನಾನು ಆರ್ಥಿಕ ಬೆಂಬಲ ನೀಡಿದ್ದೇನೆ ಅನ್ನೋ ರೀತಿಯಲ್ಲಿ ಟ್ರೀಟ್​ ಮಾಡಿದ್ದೀರಿ. ಇದೆಲ್ಲ ವಿಚಿತ್ರ ಆರೋಪಗಳಲ್ಲವೇ? ನನ್ನಲ್ಲಿ ಯಾವುದೇ ರೀತಿಯ ಡ್ರಗ್ಸ್​ ಸಿಗದಿದ್ದರೂ ಕೂಡ ಅರೆಸ್ಟ್​ ಮಾಡಿದ್ದೀರಿ. ನನ್ನ ವಿಚಾರದಲ್ಲಿ ನೀವು ತುಂಬಾ ತಪ್ಪು ಮಾಡಿದ್ದೀರಿ ಸರ್​. ನನ್ನ ಪ್ರತಿಷ್ಠೆಯನ್ನು ಹಾಳು ಮಾಡಿದ್ದೀರಿ. ನಾನು ಯಾಕೆ ಇಷ್ಟು ವಾರಗಳ ಕಾಲ ಜೈಲಿನಲ್ಲಿ ಇರಬೇಕು? ಈ ಶಿಕ್ಷೆಗೆ ನಾನು ಅರ್ಹನೇ?’ ಎಂದು ಆರ್ಯನ್​ ಖಾನ್​ ಪ್ರಶ್ನಿಸಿದ್ದರು ಎಂದು ಸಂಜಯ್​ ಸಿಂಗ್​ ಹೇಳಿರುವುದಾಗಿ ವರದಿ ಆಗಿದೆ.

ಇದನ್ನೂ ಓದಿ: ‘ಆರ್ಯನ್​ ಖಾನ್​ ಕಿಡ್ನಾಪ್​ ಮಾಡಿ, ಹಣಕ್ಕಾಗಿ ಬೇಡಿಕೆ ಇಡಲಾಯ್ತು’: ನವಾಬ್​ ಮಲಿಕ್​ ಗಂಭೀರ ಆರೋಪ

ಸದ್ಯ ಆರ್ಯನ್​ ಖಾನ್​ ಅವರು ಈಗ ನಾರ್ಮಲ್​ ಜೀವನಕ್ಕೆ ಮರಳಿದ್ದಾರೆ. ಸಾರ್ವಜನಿಕವಾಗಿಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಡ್ರಗ್ಸ್​ ಕೇಸ್​ನ ಕಹಿ ಘಟನೆ ಕುರಿತು ಅವರು ಎಲ್ಲಿಯೂ ಮಾತನಾಡುತ್ತಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada