Rakhi Sawant: ರಾಖಿ ಸಾವಂತ್​ ಜೀವನ ಹಾಳು ಮಾಡಲು ಮಾಜಿ ಗಂಡನ ಪ್ಲ್ಯಾನ್​; ಪೊಲೀಸ್​ ಠಾಣೆ ಎದುರು ಬಿಕ್ಕಿ ಬಿಕ್ಕಿ ಅತ್ತ ನಟಿ

Rakhi Sawant Social Media Hack: ಮಾಜಿ ಗಂಡನ ಕಾಟ ತಾಳಲಾರದೇ ಪೊಲೀಸ್​ ಠಾಣೆಯ ಎದುರು ರಾಖಿ ಸಾವಂತ್​ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.

Rakhi Sawant: ರಾಖಿ ಸಾವಂತ್​ ಜೀವನ ಹಾಳು ಮಾಡಲು ಮಾಜಿ ಗಂಡನ ಪ್ಲ್ಯಾನ್​; ಪೊಲೀಸ್​ ಠಾಣೆ ಎದುರು ಬಿಕ್ಕಿ ಬಿಕ್ಕಿ ಅತ್ತ ನಟಿ
ರಾಖಿ ಸಾವಂತ್​, ಆದಿಲ್​ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on:Jun 12, 2022 | 8:01 AM

ನಟಿ ರಾಖಿ ಸಾವಂತ್​ (Rakhi Sawant) ಅವರದ್ದು ವಿಚಿತ್ರ ವ್ಯಕ್ತಿತ್ವ. ಸೋಶಿಯಲ್​ ಮೀಡಿಯಾದಲ್ಲಿ ಅವರ ವಿಡಿಯೋಗಳು ಆಗಾಗ ವೈರಲ್​ ಆಗುತ್ತಲೇ ಇರುತ್ತವೆ. ಬಿಗ್​ ಬಾಸ್​ (Bigg Boss) ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಹೆಚ್ಚಿತು. ಸಲ್ಮಾನ್​ ಖಾನ್​ ಅವರ ಜೊತೆಯಲ್ಲಿ ಅವರಿಗೆ ಒಡನಾಟ ಬೆಳೆಯಿತು. ಪಾಪರಾಜಿಗಳು ಅವರ ಹಿಂದೆ ಬೀಳುವುದು ಕೂಡ ಹೆಚ್ಚಾಯಿತು. ರಾಖಿ ಸಾವಂತ್​ ಅವರ ಖಾಸಗಿ ಜೀವನ ಅಷ್ಟೇನೂ ಖುಷಿಯಾಗಿ ಉಳಿದುಕೊಂಡಿಲ್ಲ. ರಿತೇಶ್​ ಎಂಬ ವ್ಯಕ್ತಿಯ ಜೊತೆ ಅವರು ಮದುವೆ ಮಾಡಿಕೊಂಡಿದ್ದರು. ಆದರೆ ಆ ಮದುವೆ ಕೆಲವೇ ದಿನಗಳಲ್ಲೇ ಮುರಿದು ಬಿತ್ತು. ಈಗ ರಿತೇಶ್​ನಿಂದಾಗಿ ರಾಖಿ ಸಾವಂತ್​ ಸಿಕ್ಕಾಪಟ್ಟೆ ಕಷ್ಟ ಅನುಭವಿಸುತ್ತಿದ್ದಾರೆ. ಮಾಜಿ ಗಂಡನ ಕಿರುಕುಳ ತಾಳಲಾರದೇ ಅವರೀಗ ಪೊಲೀಸ್​ ಠಾಣೆಯ ಮೆಟ್ಟಿಲು ಏರಿದ್ದಾರೆ. ರಾಖಿ ಸಾವಂತ್​ ಅವರ ಸೋಶಿಯಲ್​ ಮೀಡಿಯಾ ಖಾತೆಗಳನ್ನು ಹ್ಯಾಕ್​ (Hacking) ಮಾಡಲಾಗಿದೆ. ಇದು ಮಾಜಿ ಗಂಡನ ಕೆಲಸ ಎಂದು ಅವರು ಆರೋಪಿಸಿದ್ದಾರೆ.

ಸೆಲೆಬ್ರಿಟಿಗಳಿಗೆ ಸೋಶಿಯಲ್​ ಮೀಡಿಯಾ ತುಂಬ ಮುಖ್ಯ. ಆ ಮೂಲಕ ಅವರು ಹಣ ಸಂಪಾದಿಸುತ್ತಾರೆ. ಪ್ರಚಾರಕ್ಕಾಗಿ, ಅಭಿಮಾನಿಗಳ ಜೊತೆ ಸಂಪರ್ಕಕ್ಕಾಗಿ ಇನ್​ಸ್ಟಾಗ್ರಾಮ್​, ಫೇಸ್​ಬುಕ್​, ಟ್ವಿಟರ್​ ಮುಂತಾದ ಖಾತೆಗಳಲ್ಲಿ ಸಕ್ರಿಯವಾಗಿ ಇರುತ್ತಾರೆ. ರಾಖಿ ಸಾವಂತ್​ ಅವರ ಎಲ್ಲ ಸೋಶಿಯಲ್​ ಮೀಡಿಯಾ ಖಾತೆಗಳು ಹಾಗೂ ಜಿ-ಮೇಲ್​ ಖಾತೆಯನ್ನು ಹ್ಯಾಕ್​ ಮಾಡಲಾಗಿದೆ.

ಇದನ್ನೂ ಓದಿ
Image
ಸಲ್ಮಾನ್​ ಖಾನ್​ರನ್ನು​ ಟೀಕಿಸಿದ ಕಂಗನಾ ರಣಾವತ್​; ಸರಿಯಾಗಿ ತಿರುಗೇಟು ನೀಡಿದ ರಾಖಿ
Image
‘ಗಂಡ ನನ್ನನ್ನು ಉಪಯೋಗಿಸಿಕೊಂಡ’; ಕಣ್ಣೀರು ಹಾಕಿ ಎಲ್ಲರ ಎದುರು ದುಃಖ ತೋಡಿಕೊಂಡ ರಾಖಿ ಸಾವಂತ್​
Image
ಪ್ರೇಮಿಗಳ ದಿನದ ಹೊಸ್ತಿಲಲ್ಲೇ ರಾಖಿ ಸಾವಂತ್ ದಾಂಪತ್ಯ ಅಂತ್ಯ; ಕಾಂಟ್ರವರ್ಸಿ ನಟಿಯ ಗಟ್ಟಿ ನಿರ್ಧಾರ
Image
Rakhi Sawant: ವಿಚಿತ್ರ ಭಂಗಿ, ವಿಚಿತ್ರ ಬಟ್ಟೆ; ಹೀಗೂ ಯೋಗ ಮಾಡ್ತಾರಾ? ಟ್ರೋಲ್​ ಆದ ರಾಖಿ ಸಾವಂತ್​

ರಿತೇಶ್​ ಮತ್ತು ರಾಖಿ ಸಾವಂತ್​ ಬೇರೆಬೇರೆ ಆಗಿದ್ದಾರೆ. ಹೊಸ ಬಾಯ್​ ಫ್ರೆಂಡ್​ ಆದಿಲ್​ ಖಾನ್​ ಜೊತೆ ರಾಖಿ ಸುತ್ತಾಡುತ್ತಿದ್ದಾರೆ. ಆದಿಲ್​ ಮತ್ತು ರಾಖಿ ಜೊತೆಯಾಗಿ ಬಂದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ‘ನನ್ನ ಜೀವನವನ್ನು ಹಾಳು ಮಾಡಲು ಮಾಜಿ ಗಂಡ ರಿತೇಶ್​ ಈ ರೀತಿ ಮಾಡಿದ್ದಾನೆ. ನಾನು ಆದಿ ಜೊತೆ ಇರುವುದನ್ನು ಅವನು ಸಹಿಸುತ್ತಿಲ್ಲ’ ಎಂದು ರಾಖಿ ಆರೋಪಿಸಿದ್ದಾರೆ.

View this post on Instagram

A post shared by TAHIR JASUS007 (@tahirjasus)

‘ಮೊದಲಿಗೆ ನನ್ನ ಸೋಶಿಯಲ್​ ಮೀಡಿಯಾ ಖಾತೆಗಳನ್ನು ರಿತೇಶ್​ ಹ್ಯಾಂಡಲ್​ ಮಾಡುತ್ತಿದ್ದ. ಈಗ ಅವುಗಳನ್ನು ಹ್ಯಾಕ್​ ಮಾಡಿದ್ದಾನೆ. ಖಾಸಗಿ ಚಾನೆಲ್​ ವಿರುದ್ಧ ಕೆಟ್ಟದಾಗಿ ಪೋಸ್ಟ್​ ಮಾಡುತ್ತಿದ್ದಾನೆ. ಇದರಿಂದ ನನ್ನ ಜೀವನಕ್ಕೆ ತುಂಬ ತೊಂದರೆ ಆಗುತ್ತಿದೆ. ಆತ ನನ್ನ ಕರೆಯನ್ನೂ ಸ್ವೀಕರಿಸುತ್ತಿಲ್ಲ’ ಎಂದು ಪೊಲೀಸ್​ ಠಾಣೆಯ ಎದುರು ರಾಖಿ ಸಾವಂತ್​ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:00 am, Sun, 12 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ