‘ಗಂಡ ನನ್ನನ್ನು ಉಪಯೋಗಿಸಿಕೊಂಡ’; ಕಣ್ಣೀರು ಹಾಕಿ ಎಲ್ಲರ ಎದುರು ದುಃಖ ತೋಡಿಕೊಂಡ ರಾಖಿ ಸಾವಂತ್​

ಬಿಗ್​ ಬಾಸ್​ ಶೋ ಮುಗಿದ ಬಳಿಕವೂ ರಿತೇಶ್ ಮತ್ತು ರಾಖಿ ಸಾವಂತ್​ ಒಂದೇ ಮನೆಯಲ್ಲಿ ವಾಸವಾಗಿದ್ದರು. ಈಗ ಏಕಾಏಕಿ ಗಂಟುಮೂಟೆ ಕಟ್ಟಿಕೊಂಡು ರಿತೇಶ್​ ಮನೆ ಬಿಟ್ಟು ಪರಾರಿ ಆಗಿದ್ದಾರೆ.

‘ಗಂಡ ನನ್ನನ್ನು ಉಪಯೋಗಿಸಿಕೊಂಡ’; ಕಣ್ಣೀರು ಹಾಕಿ ಎಲ್ಲರ ಎದುರು ದುಃಖ ತೋಡಿಕೊಂಡ ರಾಖಿ ಸಾವಂತ್​
ರಾಖಿ ಸಾವಂತ್. ರಿತೇಶ್
Follow us
TV9 Web
| Updated By: ಮದನ್​ ಕುಮಾರ್​

Updated on: Feb 16, 2022 | 3:52 PM

ನಟಿ ರಾಖಿ ಸಾವಂತ್​ (Rakhi Sawant) ಅವರ ವೈಯಕ್ತಿಕ ಜೀವನ ಕಷ್ಟಕ್ಕೆ ಸಿಲುಕಿದೆ. ಉದ್ಯಮಿ ಎಂದು ಹೇಳಿಕೊಂಡಿರುವ ರಿತೇಶ್​ ಜೊತೆ ತಾವು ಮದುವೆ (Rakhi Sawant Marriage) ಆಗಿರುವುದಾಗಿ ತಿಳಿಸಿದ್ದ ರಾಖಿ ಸಾವಂತ್​ ಈಗ ಮತ್ತೆ ಒಂಟಿ ಜೀವನ ನಡೆಸುವಂತಾಗಿದ್ದಾರೆ. ಇವರ ಮದುವೆ ವಿಚಾರ ಮೊದಲಿನಿಂದಲೂ ನಿಗೂಢವಾಗಿಯೇ ಉಳಿದಿತ್ತು. ಮೊದಲ ಹೆಂಡತಿಗೆ ವಿಚ್ಛೇದನ ನೀಡದೆಯೇ ರಿತೇಶ್ ಅವರು ರಾಖಿ ಸಾವಂತ್​ ಜೊತೆ ಸಂಸಾರ ಶುರು ಮಾಡಿದ್ದರು. ಈಗ ಈ ಸತ್ಯ ಬಯಲಾಗಿದೆ. ರಿತೇಶ್​ಗೆ ಕಾನೂನಿನ ಭಯ ಉಂಟಾಗಿದೆ. ಮೊದಲ ಪತ್ನಿ ಕಡೆಯಿಂದ ಸಂಕಷ್ಟ ಹೆಚ್ಚುವುದಕ್ಕೂ ಮುನ್ನವೇ ಅವರು ರಾಖಿ ಸಾವಂತ್​ಗೆ ಕೈ ಕೊಟ್ಟು ಪರಾರಿ ಆಗಿದ್ದಾರೆ. ಅವರನ್ನು ನಂಬಿ ಮೋಸ ಹೋಗಿರುವ ರಾಖಿ ಸಾವಂತ್​ ಅವರು ಈಗ ಮಾಧ್ಯಮಗಳ ಎದುರಿನಲ್ಲಿ ಕಣ್ಣೀರು ಹಾಕುವಂತಾಗಿದೆ. ಹಿಂದಿ ಬಿಗ್​ ಬಾಸ್​ 15ನೇ (Bigg Boss 15) ಸೀಸನ್​ನಲ್ಲಿ ಇವರಿಬ್ಬರ ಮದುವೆ ವಿಚಾರ ಬಯಲಾಗಿತ್ತು. ಆದರೆ ಈಗ ರಾಖಿ ಸಾವಂತ್​ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅವರ ಸ್ಥಿತಿ ಕಂಡು ಅಭಿಮಾನಿಗಳು ಅಯ್ಯೋ ಪಾಪ ಎನ್ನುತ್ತಿದ್ದಾರೆ. ಇದಕ್ಕೆ ರಿತೇಶ್​ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಮೂಡಿದೆ.

‘ರಿತೇಶ್​ ನನ್ನನ್ನು ಉಪಯೋಗಿಸಿಕೊಂಡಿದ್ದಾನೆ. ಯಾರು ಯಾರನ್ನು ಉಪಯೋಗಿಸಿಕೊಂಡರು ಎಂಬುದನ್ನು ದೇಶದ ಜನತೆಯೇ ನಿರ್ಧರಿಸಲಿ. ಒಂದು ವೇಳೆ ನಾನು ಅವನನ್ನು ಉಪಯೋಗಿಸಿಕೊಂಡಿದ್ದರೆ ಮುಂಬೈನಲ್ಲಿ ನನ್ನ ಸ್ವಂತ ಫ್ಲಾಟ್​ ಇರುತ್ತಿತ್ತು. ಅವನು ನನಗೆ ಏನನ್ನೂ ಕೊಟ್ಟಿಲ್ಲ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

ಹಿಂದಿ ಬಿಗ್​ ಬಾಸ್​ 15ನೇ ಸೀಸನ್​ನಲ್ಲಿ ರಿತೇಶ್​ ಅವರನ್ನು ರಾಖಿ ಸಾವಂತ್​ ಪರಿಚಯ ಮಾಡಿಕೊಟ್ಟಿದ್ದರು. ವೈಲ್ಡ್​ ಕಾರ್ಡ್​ ಮೂಲಕ ಅವರಿಬ್ಬರೂ ದೊಡ್ಮನೆ ಪ್ರವೇಶಿಸಿದ್ದರು. ಬಿಗ್​ ಬಾಸ್​ ಶೋ ಮುಗಿದ ಬಳಿಕವೂ ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು. ಆದರೆ ನಂತರದ ದಿನಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಈಗ ಏಕಾಏಕಿ ಗಂಟುಮೂಟೆ ಕಟ್ಟಿಕೊಂಡು ರಿತೇಶ್​ ಮನೆ ಬಿಟ್ಟು ಪರಾರಿ ಆಗಿದ್ದಾರೆ. ಇದು ರಾಖಿ ಸಾವಂತ್​ ದುಃಖಕ್ಕೆ ಕಾರಣ ಆಗಿದೆ.

ತಾವು ಗಂಡನಿಂದ ಬೇರೆ ಆಗುತ್ತಿರುವ ವಿಚಾರವನ್ನು ರಾಖಿ ಸಾವಂತ್​ ಅವರು ಫೆ.13ರಂದು ಬಹಿರಂಗಪಡಿಸಿದ್ದರು. ಸೋಶಿಯಲ್​ ಮೀಡಿಯಾ ಮೂಲಕ ಅವರು ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದರು.

‘ವ್ಯಾಲೆಂಟೈನ್ಸ್​ ಡೇ ದಿನಕ್ಕೂ ಮುನ್ನವೇ ಈ ರೀತಿ ಆಗಿದ್ದರ ಬಗ್ಗೆ ನನಗೆ ತೀವ್ರ ಬೇಸರವಿದೆ. ಆದರೆ ಇಂಥ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಆಗಿತ್ತು. ನಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿದೆವು. ಆದರೆ ನಾವು ದೂರವಾಗುವುದೇ ಉತ್ತಮ ಎನಿಸಿತು. ನನ್ನ ಆರೋಗ್ಯ ಮತ್ತು ವೃತ್ತಿಜೀವನದ ಬಗ್ಗೆ ನಾನು ಗಮನ ಹರಿಸಬೇಕು. ರಿತೇಶ್​ಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ’ ಎಂದು ರಾಖಿ ಸಾವಂತ್​ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ:

ಬಿಗ್ ಬಾಸ್ ಗಮನ ಸೆಳೆಯಲು ಸ್ಪೈಡರ್ ಮ್ಯಾನ್ ಕಾಸ್ಟ್ಯೂಮ್ ಧರಿಸಿ ಸೆಟ್ ಹೊರಗಡೆ ಧರಣಿಗೆ ಕುಳಿತಳು ರಾಖಿ ಸಾವಂತ್

ಸಾರ್ವಜನಿಕವಾಗಿ ಕಾಣಿಸಿಕೊಂಡ ರಾಖಿ ಸಾವಂತ್​ಗೆ ಮಂಗಳಾರತಿ; ಅವರು ಮಾಡಿದ ತಪ್ಪೇನು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ