Trending: ಯಾವ ಕೈ ಮೇಲೆ ಹಲ್ಲಿ ಬಿದ್ದರೆ ಲಕ್? ಹಲ್ಲಿಗಳ ಮಿಲನ ನೋಡಿದರೆ ಏನನ್ನು ಸೂಚಿಸುತ್ತದೆ ಗೊತ್ತಾ?
ಕೆಲವರ ಮೈ ಮೇಲೆ ಹಲ್ಲಿ ಬಿದ್ದಾಗ ಅದು ಅದೃಷ್ಟ ಎಂದು ಹೇಳಲಾಗತ್ತದೆ, ಇನ್ನು ಕೆಲವರಿಗೆ ಅಪಶಕುನ ಎನ್ನಲಾಗುತ್ತದೆ. ಈ ಶಕುನ, ಅಪಶಕುನ ಎಲ್ಲವೂ ಹಲ್ಲಿ ಯಾವ ಭಾಗಕ್ಕೆ ಬಿದ್ದಿದ್ದೆ ಎಂಬುದರ ಮೇಲೆ ಜನರು ತಮ್ಮ ನಂಬಿಕೆಗಳನ್ನು ಹೇಳುತ್ತಾರೆ.
ಸರಿಸೃಪ ಹಲ್ಲಿ (lizard)ಗಳು ಮನೆಯಲ್ಲಿರುವುದು ಸಾಮಾನ್ಯ. ಕೆಲವು ಹುಡುಗಿಯರು ಹಲ್ಲಿ ಕಂಡರೆ ಸಾಕು ಆ ಜಾಗಕ್ಕೆ ಹೋಗಲು ಭಯ ಪಡುತ್ತಾರೆ. ಇದರ ಹೊರತಾಗಿ ಹಲ್ಲಿಗಳ ಸಣ್ಣ ಬುದ್ಧಿಯೊಂದಿದೆ, ಮನುಷ್ಯ ಎಲ್ಲಿ ಕುಳಿತುಕೊಂಡಿದ್ದಾನೋ ಅಲ್ಲೇ ಬಂದು ಮೈಮೇಲೆ ಕಕ್ಕಾ ಮಾಡುವುದು. ಅದಾಗ್ಯೂ ಹಲ್ಲಿ ಮೈಮೇಲೆ ಬಿದ್ದರೆ ಶುಭಶಕುನ, ಅಪಶಕುನ, ಈ ಭಾಗಕ್ಕೆ ಬಿದ್ದರೆ ಅದೃಷ್ಟ, ಈ ಭಾಗಕ್ಕೆ ಬಿದ್ದರೆ ದುರಾದೃಷ್ಟ ಅಂತೆಲ್ಲಾ ಹೇಳುತ್ತಾರೆ. ಇವುಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಹಲ್ಲಿ ಮೈ ಮೇಲೆ ಬಿದ್ದಾಗ ಯಾವ ಫಲಿತಾಂಶ ನೀಡುತ್ತದೆ ಎಂಬ ನಂಬಿಕೆ (Faith)ಗಳ ಲಿಸ್ಟ್ ಇಲ್ಲಿದೆ ನೋಡಿ.
ಇದನ್ನೂ ಓದಿ: Trending: ಬೆರಳುಗಳಲ್ಲಿ 12 ಇಂಚಿನ ಉಗುರುಗಳು! ಈಕೆಯ ದೈನಂದಿನ ಚಟುವಟಿಕೆಗಳು ಹೇಗಿದೆ ಗೊತ್ತಾ?
ಹಲ್ಲಿ ಮೈಮೇಲೆ ಬಿದ್ದರೆ ಹೇಳುವ ಸಾಮಾನ್ಯ ನಂಬಿಕೆಗಳ ಪಟ್ಟಿ
- ಬಲಗೈಯ ಮೇಲೆ ಹಲ್ಲಿ ಬಿದ್ದರೆ ನೀವು ಸಮಾಜದಲ್ಲಿ ಮೇಲೇರುತ್ತೀರಿ ಅಥವಾ ನಿಮ್ಮ ಮುಂದೆ ಇಂದ್ರಿಯ ಸಾಹಸವನ್ನು ಹೊಂದುತ್ತೀರಿ ಎಂದು ಸೂಚಿಸುತ್ತದೆ. ಆದರೆ ನಿಮ್ಮ ಎಡಗೈಯ ಮೇಲೆ ಹಲ್ಲಿ ಬಿದ್ದರೆ ನೀವು ಹಣವನ್ನು ಕಳೆದುಕೊಳ್ಳುತ್ತೀರಿ ಎಂದು ಸೂಚಿಸುತ್ತದೆ.
- ಹಲ್ಲಿಯು ಪುರುಷನ ದೇಹದ ಬಲಭಾಗದಲ್ಲಿ ಮತ್ತು ಮಹಿಳೆಯ ದೇಹದ ಎಡಭಾಗಕ್ಕೆ ಬಿದ್ದರೆ ಅದನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಇವೆರಡಕ್ಕೂ ಬೇರೆ ಬೇರೆ ಅರ್ಥಗಳಿವೆ.
- ಉತ್ತರದಲ್ಲಿ ಹಲ್ಲಿ ತಲೆಯ ಮೇಲೆ ಬಿದ್ದರೆ ಅದು ನಿಮಗೆ ಅದೃಷ್ಟವನ್ನು ತರುತ್ತದೆ ಎಂದು ಹೇಳುವುದು ಸಾಮಾನ್ಯವಾಗಿದೆ. ಹಲ್ಲಿಯು ತಲೆಯ ಮೇಲೆ ಬಿದ್ದರೆ ಆ ವ್ಯಕ್ತಿಯು ಸಂಪತ್ತು ಮತ್ತು ಐಷಾರಾಮಿ ಜೀವನದಿಂದ ಪ್ರವರ್ಧಮಾನಕ್ಕೆ ಬರುತ್ತಾನೆ ಎಂದು ಸೂಚಿಸುತ್ತದೆ. ಇದು ಶ್ರೀಮಂತ ವ್ಯಕ್ತಿಯ ತಲೆಯ ಮೇಲೆ ಬಿದ್ದರೆ ಅವನ ಸಂಪತ್ತು ಕ್ರಮೇಣ ನಾಶವಾಗಲು ಪ್ರಾರಂಭಿಸುತ್ತದೆ ಎಂದು ನಂಬಲಾಗಿದೆ.
- ಎರಡು ಹಲ್ಲಿಗಳು ಮಿಲನವನ್ನು ನೋಡಿದರೆ ನೀವು ಹಳೆಯ ಲವ್ವರ್ ಹೊತೆ ಹೋಗುತ್ತೀರಿ ಎಂದರ್ಥ. ಹಲ್ಲಿಗಳು ಜಗಳವಾಡುವುದನ್ನು ನೋಡಿದರೆ ನೀವು ಯಾರೊಂದಿಗಾದರೂ ವಿವಾದಕ್ಕೆ ಒಳಗಾಗಬಹುದು ಎಂದು ಸೂಚಿಸುತ್ತದೆ.
- ಹೊಸ ಮನೆಗೆ ಹೋಗುವಾಗ ಸತ್ತ ಹಲ್ಲಿಯನ್ನು ನೋಡಿದರೆ ನಿಮ್ಮ ಕುಟುಂಬಕ್ಕೆ ದುರದೃಷ್ಟ ಮತ್ತು ಆರೋಗ್ಯ ಸಮಸ್ಯೆ ತರಬಹುದು. ತಮ್ಮ ಹೊಸ ಮನೆಯಲ್ಲಿ ಹಲ್ಲಿಯನ್ನು ನೋಡುವುದು ಲಕ್ಷ್ಮಿ ದೇವಿಯು ಮನೆಗೆ ಪ್ರವೇಶಿಸುವ ಸಂಕೇತವಿದೆ ಎಂದು ಕೆಲವರು ನಂಬುತ್ತಾರೆ.
- ಹಲ್ಲಿಯು ತಲೆಕೆಳಗಾಗಿ ದೇಹದ ಕೆಳಗೆ ತೆವಳಿದರೆ ಆರ್ಥಿಕ ನಷ್ಟವನ್ನು ಸೂಚಿಸುತ್ತದೆ. ಹಲ್ಲಿಗಳು ಮಹಿಳೆಯರ ಮುಂಭಾಗದ ತಲೆ ಕೂದಲಿನ ಮೇಲೆ ಬಿದ್ದರೆ ಇದು ಮದುವೆ ಜೀವನದಲ್ಲಿ ದುರದೃಷ್ಟಕರ ಸಂದರ್ಭಗಳು ಮತ್ತು ವಿವಾದಗಳನ್ನು ಸೂಚಿಸುತ್ತದೆ.
ಇವೆಲ್ಲವೂ ಜನಸಾಮಾನ್ಯರ ನಂಬಿಕೆಗಳಾಗಿವೆ. ಹಾಗಂತ ಇದು ಸುಳ್ಳೋ ಅಥವಾ ಸತ್ಯವೋ ತಿಳಿಯದು. ಕೆಲವರ ಜೀವನದಲ್ಲಿ ಸತ್ಯವಾಗಿರಬಹುದು, ಇನ್ನು ಕೆಲವರ ಜೀವನದಲ್ಲಿ ಇದು ನಡೆಯದೇ ಇರಬಹುದು. ಇದನ್ನೂ ಓದಿ: Viral Video: ದೈತ್ಯಾಕಾರದ ಹೆಬ್ಬಾವನ್ನು ಭುಜದ ಮೇಲೆ ಹೊತ್ತು ತಿರುಗಾಡಿದ ವ್ಯಕ್ತಿ!
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:08 pm, Sat, 11 June 22