ನೂತನ EV ಉತ್ಪಾದನಾ ಘಟಕ ಉದ್ಘಾಟಿಸಿದ ಬಜಾಜ್ ಆಟೋ, 11 ಸಾವಿರ ಉದ್ಯೋಗ ಸೃಷ್ಟಿ
ಬಜಾಜ್ ಆಟೋ ಪುಣೆಯ ಅಕುರ್ಡಿಯಲ್ಲಿ ಹೊಸದಾಗಿ ನಿರ್ಮಿಸಿದ ಎಲೆಕ್ಟ್ರಿಕ್ ವಾಹನ (EV) ಉತ್ಪಾದನಾ ಘಟಕವನ್ನು ಪ್ರಾರಂಭಿಸಿದೆ. ಈ ಘಟಕ ಪ್ರಾರಂಭದಿಂದಾಗಿ 11,000 ಜನರಿಗೆ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.
ಬಜಾಜ್ ಆಟೋ ಪುಣೆಯ ಅಕುರ್ಡಿಯಲ್ಲಿ ಹೊಸದಾಗಿ ನಿರ್ಮಿಸಿದ ಎಲೆಕ್ಟ್ರಿಕ್ ವಾಹನ (EV) ಉತ್ಪಾದನಾ ಘಟಕವನ್ನು ಪ್ರಾರಂಭಿಸಿದೆ. ಈ ಘಟಕವನ್ನು ದಿವಂಗತ ರಾಹುಲ್ ಬಜಾಜ್ ಅವರ ಜನ್ಮ ವಾರ್ಷಿಕೋತ್ಸವ (ಜೂನ್ 10)ದಂದು ಪ್ರಾರಂಭಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಈ ಹಿಂದೆ ಮೊದಲ ಚೇತಕ್ ಅನ್ನು 1970 ರ ದಶಕದಲ್ಲಿ ಅಕ್ರುಡಿಯಿಂದ ಮಾತ್ರ ಹೊರತಂದಿತ್ತು. ಅದೇ ಸ್ಕೂಟರ್ ನಂತರ ಭಾರತೀಯ ಮನೆಗಳಾದ್ಯಂತ ಐಕಾನ್ ಮತ್ತು ಸಾಕಷ್ಟು ಮನೆ ಮಾತಾಗಿತ್ತು.
ಇದನ್ನೂ ಓದಿ: Viral Video: ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋದ ವ್ಯಕ್ತಿ! ಮುಂದೇನಾಯ್ತು? ನೀವೇ ನೋಡಿ
ಕಂಪನಿಯು ಚೇತಕ್ ಅನ್ನು ಎಲೆಕ್ಟ್ರಿಕ್ ಸ್ಕೂಟರ್ ರೂಪದಲ್ಲಿ 2019ರಲ್ಲಿ ಮರುಪರಿಚಯಿಸಿತು. ಅಂದಿನಿಂದ ಕಂಪನಿಯು ಹಲವಾರು ಭಾರತೀಯ ನಗರಗಳಲ್ಲಿ ಹಂತ ಹಂತವಾಗಿ ದ್ವಿಚಕ್ರ ವಾಹನವನ್ನು ಪ್ರಾರಂಭಿಸಿತು. ಒಟ್ಟಾರೆ ಮಾರಾಟವು 14,000 ಯುನಿಟ್‌ಗಳನ್ನು ದಾಟಿದ್ದರೆ, ಸುಮಾರು 16,000 ಬುಕಿಂಗ್‌ಗಳನ್ನು ಹೊಂದಿದೆ. “ಮೇಕ್ ಇನ್ ಇಂಡಿಯಾದಡಿ ನಿರ್ಮಿಸಲಾದ ಈ ಚೇತಕ್ ವಿಶ್ವದಾದ್ಯಂತ ಹೃದಯಗಳನ್ನು ಗೆದ್ದಿದೆ. ಚೇತಕ್‌ನ ಎಲೆಕ್ಟ್ರಿಕ್ ಅವತಾರವು ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಗ್ರಾಹಕರ ಆಳವಾದ ತಿಳುವಳಿಕೆ ಮತ್ತು ದಶಕಗಳ ಉತ್ಪಾದನಾ ಪರಿಣತಿಯಿಂದ ಅಭಿವೃದ್ಧಿಪಡಿಸಲಾಗಿದೆ” ಎಂದು ಚೇತಕ್ ಟೆಕ್ನಾಲಜಿಯ ಅಧ್ಯಕ್ಷ ರಾಜೀವ್ ಬಜಾಜ್ ಹೇಳಿದ್ದಾರೆ.
ಇದನ್ನೂ ಓದಿ: Viral Video: ಹೆಚ್ಚು ಕಿರುಚಾಡಿದರೆ ಕೋಳಿಯಂತಾಗುವುದು ಕೇಳು ಮನುಜ, ಸಮಾಜಕ್ಕೊಂದು ಒಳ್ಳೆಯ ಪಾಠ
ಹೊಸದಾಗಿ ಪ್ರಾರಂಭಗೊಂಡ ಘಟಕವು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಹೊಂದಾಣಿಕೆ ಮಾಡಲು ಕಂಪನಿಗೆ ಸಹಾಯ ಮಾಡುತ್ತದೆ. ಬೇಡಿಕೆಯ ಆಧಾರದ ಮೇಲೆ ವಾರ್ಷಿಕ 500,000 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ತಯಾರಿಸಲು ಸ್ಥಾವರದ ಸಾಮರ್ಥ್ಯವನ್ನು ತ್ವರಿತವಾಗಿ ವಿಸ್ತರಿಸಬಹುದು ಎಂದು ಕಂಪನಿಯು ಇತ್ತೀಚಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು. “ಈ ಕೇಂದ್ರೀಕೃತ, ಸಂಯೋಜಿತ ಮತ್ತು ಚುರುಕುಬುದ್ಧಿಯ ಸೌಲಭ್ಯವು ಚೇತಕ್‌ನ ಸವಾರಿಯನ್ನು ಮರಳಿ ಪಡೆಯಲು ಉದ್ದೇಶಿಸಲಾಗಿದೆ ಎಂದು ಬಜಾಜ್ ಹೇಳಿದರು.
ಇದನ್ನೂ ಓದಿ: Viral Video: ಬೇಟೆಯಾಡಲು ಬಂದ ಹುಲಿರಾಯನಿಗೆ ಚಳ್ಳೆಹಣ್ಣು ತಿನ್ನಿಸಿದ ಬಾತುಕೋಳಿ!
ಚೇತಕ್ ಟೆಕ್ನಾಲಜಿ ಲಿಮಿಟೆಡ್ ಮತ್ತು ಅದರ ಮಾರಾಟಗಾರರ ಪಾಲುದಾರರು ಈ ಹೊಸ ಘಟಕದಲ್ಲಿ ಸುಮಾರು 750 ಕೋಟಿ ರೂ. ಹೂಡಿಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಸೌಲಭ್ಯವು ಅರ್ಧ ಮಿಲಿಯನ್ ಚದರ ಅಡಿಗಳಷ್ಟು ಹರಡಿದೆ ಮತ್ತು 11,000 ಜನರಿಗೆ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇದು ಕಂಪನಿಯ ಭವಿಷ್ಯದ ಎಲೆಕ್ಟ್ರಿಕ್ ವಾಹನ ಶ್ರೇಣಿಗೆ ನೆಲೆಯಾಗಿದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ