Viral Video: ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋದ ವ್ಯಕ್ತಿ! ಮುಂದೇನಾಯ್ತು? ನೀವೇ ನೋಡಿ
ಚೆನ್ನೈ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದಾಗ ಕಾಲು ಜಾರಿ ಬಿದ್ದ 22 ವರ್ಷದ ಯುವಕನ ಪ್ರಾಣವನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ನ ಅಲರ್ಟ್ ಕಾನ್‌ಸ್ಟೆಬಲ್ ರಕ್ಷಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.
ಚಲಿಸುತ್ತಿರುವ ಬಸ್ಗಳಿಗೆ ಹತ್ತಬೇಡಿ ಎಂಬ ಸೂಚನಾ ಫಲಕಗಳನ್ನು ಹಾಕಲಾಗುತ್ತದೆ. ಈ ಸೂಚನೆ ರೈಲು ಸೇರಿದಂತೆ ಎಲ್ಲಾ ವಾಹನಗಳಿಗೂ ಅನ್ವಯಿಸುತ್ತದೆ. ರೈಲ್ವೇ ನಿಲ್ದಾಣಗಳಲ್ಲಿ ಪೊಲೀಸರು ಪ್ರಯಾಣಿಕರನ್ನು ಗಮನಿಸುತ್ತಿರುತ್ತಾರೆ. ಚಲಿಸುತ್ತಿದ್ದ ರೈಲಿಗೆ ಹತ್ತಲು ಪೊಲೀಸರು ಬಿಡುವುದಿಲ್ಲ. ಹೀಗಿದ್ದಾಗಲೂ ಕೆಲವೊಮ್ಮೆ ಪ್ರಯಾಣಿಕರು ಹತ್ತಲು ಹೋಗಿ ಎಡವಿಬಿದ್ದ ಆಪತ್ತಿಗೆ ಸಿಲುಕುತ್ತಾರೆ. ಅಂಥ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶುಕ್ರವಾರ ಚೆನ್ನೈ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲ (Train)ನ್ನು ಹತ್ತಲು ಪ್ರಯತ್ನಿಸುತ್ತಿದ್ದಾಗ ಕಾಲು ಜಾರಿ ಬಿದ್ದ 22 ವರ್ಷದ ಯುವಕನ ಪ್ರಾಣವನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ನ ಅಲರ್ಟ್ ಕಾನ್‌ಸ್ಟೆಬಲ್ ರಕ್ಷಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಗಳನ್ನು ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಹೆಚ್ಚು ಕಿರುಚಾಡಿದರೆ ಕೋಳಿಯಂತಾಗುವುದು ಕೇಳು ಮನುಜ, ಸಮಾಜಕ್ಕೊಂದು ಒಳ್ಳೆಯ ಪಾಠ
“ಇದು ಚೆನ್ನೈ ವಿಭಾಗದ ಆರ್‌ಪಿಎಫ್ ಕಾನ್ಸ್‌ಟೇಬಲ್ ಶ್ರೀ ರಾಮ್ ಕಿಸಾನ್ ಮೀನಾ. ಚಾಲನೆಯಲ್ಲಿರುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದ ಮತ್ತು ಡಾ. ಎಂಜಿ ರಾಮಚಂದ್ರನ್ ಸೆಂಟ್ರಲ್ ಸ್ಟೇಷನ್‌ನಲ್ಲಿ ಪ್ಲಾಟ್‌ಫಾರ್ಮ್ ಮತ್ತು ಟ್ರ್ಯಾಕ್ ನಡುವಿನ ಅಂತರದಲ್ಲಿ ಬಿದ್ದ ಪ್ರಯಾಣಿಕರನ್ನು ರಕ್ಷಿಸುವ ಮೂಲಕ ಕೆಚ್ಚೆದೆಯ ಧೈರ್ಯವನ್ನು ಪ್ರದರ್ಶಿಸಿದರು ಎಂದು ಬರೆದುಕೊಂಡ ರೈಲ್ವೆ ವ್ಯವಸ್ಥಾಪಕರು, ಶೌರ್ಯವನ್ನು ಹ್ಯಾಷ್ಟ್ಯಾಗ್ (#bravery) ಮಾಡಿದ್ದಾರೆ.
This is the RPF Constable of Chennai division, Shri Ram Kisan Meena, who displayed this brave act by saving a passenger who was trying to board a running train and had fallen down in the gap between platform and track at Dr.M.G.Ramachandran Central station. #bravery @GMSRailway pic.twitter.com/b0wr2RO3RX
— DRM Chennai (@DrmChennai) June 10, 2022
ಇದನ್ನೂ ಓದಿ: Viral Photo: ಯೋಧರೊಬ್ಬರು ಮಗುವಿಗೆ ಹಾಲುಣಿಸುವ ಹೃದಯಸ್ಪರ್ಶಿ ಫೋಟೋ ವೈರಲ್
ಈ ಬಗ್ಗೆ ಮಾತನಾಡಿದ ರಾಮ್ ಕಿಸಾನ್ ಮೀನಾ, ಪ್ಲಾಟ್‌ಫಾರ್ಮ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ರೈಲಿನಿಂದ ಬೀಳುವ ಪ್ರಯಾಣಿಕರನ್ನು ಗಮನಿಸಿದೆ. ಒಂದು ಕ್ಷಣವೂ ವ್ಯರ್ಥ ಮಾಡದೆ ನಾನು ಧಾವಿಸಿ ಅವರನ್ನು ಎಳೆದಿದ್ದೇನೆ. ನಾನು ಸರಿಯಾದ ಸಮಯಕ್ಕೆ ಅಲ್ಲಿದ್ದೆ. ಪ್ರಯಾಣಿಕರಿಗೆ ಸಹಾಯ ಮಾಡಲು ಯಾರೂ ಇಲ್ಲದಿದ್ದರೆ ಅದು ಅನಾಹುತವಾಗುತ್ತಿತ್ತು. ಘಟನೆಯಲ್ಲಿ ಅವರು ಗಾಯಗೊಂಡಿಲ್ಲ. ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೆ. ಪ್ರಯಾಣಿಕನನ್ನು ಉಳಿಸಲು ನನಗೆ ಮೊದಲ ಬಾರಿಗೆ ಅವಕಾಶ ಸಿಕ್ಕಿತು” ಎಂದು ಹೇಳಿದ್ದಾಗಿ TOI ಉಲ್ಲೇಖಿಸಿದೆ.
ಇದನ್ನೂ ಓದಿ: Viral Video : ವ್ಯಕ್ತಿಗೆ ವಿದ್ಯುತ್ ಟ್ರ್ಯಾಕ್ ಶಾಕ್, ಪ್ರಾಣ ಉಳಿಸಿದವನಿಗೆ ಸನ್ಮಾನ
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:07 am, Sat, 11 June 22