ಬಂಗಾರದ ಲೇಪನ ಪಡೆಯುತ್ತಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯ

ವಾರಣಾಸಿಯಲ್ಲಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯ ಬಂಗಾರದ ಲೇಪನ ಪಡೆಯುತ್ತಿದೆ.

ಬಂಗಾರದ ಲೇಪನ ಪಡೆಯುತ್ತಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯ
ಕಾಶಿ ವಿಶ್ವನಾಥ
Follow us
TV9 Web
| Updated By: ವಿವೇಕ ಬಿರಾದಾರ

Updated on:Jun 10, 2022 | 11:07 PM

ಹಿಂದು ಧರ್ಮದ ಪವಿತ್ರ ಮತ್ತು ಪುಣ್ಯಸ್ಥಳಗಳಲ್ಲಿ ಒಂದಾದ, ಜೀವನದ ಎಲ್ಲ ಆಶ್ರಮಗಳನ್ನು ದಾಟಿ ಕೊನೆಗೆ ವಾನಪ್ರಸ್ತ ಅಥವಾ ಸನ್ಯಾಸ ಆಶ್ರಮದಲ್ಲಿ ದೇವರ ಸೇವೆ ಮಾಡುತ್ತಾ, ಉಳಿದ ಜೀವನವನ್ನು ಆದ್ಯಾತ್ಮದಲ್ಲಿ ಕಳೆಯೋಣ ಎಂದು ಅಂದುಕೊಳ್ಳುವರಿಗೆ ಕಾಶಿ ಬಹಳ ಪ್ರಾಶ್ಯಸ್ತ ಸ್ಥಳ. ಇಲ್ಲ ಗಂಗೆಯಲ್ಲಿ ಮಿಂದು ತನ್ನ ಪಾಪಗಳನ್ನು ಕಳೆದುಕೊಂಡು ಜಗತ್​ರಕ್ಷಕ, ಶಶಿಶೇಖರ, ಶಂಖಪ್ರಬಶ್ಯ ವಿಶ್ವನಾಥನ ಸೇವೆ ಮಾಡುತ್ತಾ ಕಾಲ ಕಳಿಬೇಕು ಅಂತ ಅಸಂಖ್ಯ ಜನರಿತಗೆ ಆಸೆ ಇರುತ್ತೆ ಹಾಗೇ ಇಲ್ಲಿಯೇ ಮೋಕ್ಷ ಸಂಪಾದಿಸಿಕೊಂಡು ಬಿಡಬೇಕು ಎಂದು ಅನಿಸಿಬಿಡುತ್ತದೆ.

ಇಂತಹ ಪುಣ್ಯಸ್ಥಳ ಉತ್ತರ ಪ್ರದೇಶದ (Uttar Pradesh) ವಾರಣಾಸಿಯಲ್ಲಿರುವ (Varnasi) ಶ್ರೀ ಕಾಶಿ ವಿಶ್ವನಾಥ (Kashi Vishwanath) ದೇವಾಲಯ ಬಂಗಾರದ ಲೇಪನ ಪಡೆಯುತ್ತಿದೆ. ಈ ಲೇಪನಕ್ಕೆ 60 ಕೆಜಿಯಷ್ಟು ಬಂಗಾರ ಬಳಸಲಾಗುತ್ತಿದೆ. 23 ಕೆಜಿ ಚಿನ್ನದಿಂದ ಶಿಖರದ ಗುಮ್ಮಟ ಮತ್ತು ಬಾಗಿಲಿನ ಚೌಕಟ್ಟಿನ ಕೆಳಗಿನ ಭಾಗಕ್ಕೆ  ಲೇಪನ ಮಾಡಲಾಗಿದೆ. ಕೆಳಗಿನ ಗುಮ್ಮಟ, ಒಳಗೋಡೆ ಮತ್ತು ಚಾವಣಿಗೆ ಚಿನ್ನದ ಲೇಪನ ಮಾಡುವ ಕಾಮಗಾರಿ ಮಾರ್ಚ್‌ನಲ್ಲಿ ಆರಂಭವಾಗಿ ಮಂಗಳವಾರ (ಜೂನ್​ 7) ರಂದು ಮುಕ್ತಾಯಗೊಂಡಿದೆ. ಶಿವನಿಗೆ ಸಮರ್ಪಿತವಾಗಿರುವ ದೇವಾಲಯದ ಹೊರ ಕಲಾತ್ಮಕ ಗೋಡೆಗಳ ಜೀರ್ಣೋದ್ಧಾರ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೂ ಸ್ವಲ್ಪ ಸಮಯದಲ್ಲಿ ಮುಕ್ತಾಯಗೊಳ್ಳಲಿದೆ

ಕಾಶಿ ವಿಶ್ವನಾಥನಿಗೆ ಅನಾಮಧೇಯ ದಾನಿ ನೀಡಿದ 60 ಕೆಜಿ ಚಿನ್ನ

ಡಿಸೆಂಬರ್ 13, 2021 ರಂದು ಪ್ರಧಾನಿ ನರೇಂದ್ರ ಮೋದಿಯವರು ಕಾಶಿ ವಿಶ್ವನಾಥ ಧಾಮ (ಕಾರಿಡಾರ್) ಉದ್ಘಾಟನೆ ಮಾಡುವ ತಿಂಗಳ ಮೊದಲು, ದಾನಿಯೊಬ್ಬರು ದೇವಾಲಯದ ಅಧಿಕಾರಿಗಳನ್ನು ಸಂಪರ್ಕಿಸಿ 60 ಕೆಜಿ ಚಿನ್ನವನ್ನು ಅರ್ಪಿಸಿದರು. ದೇಣಿಗೆಯಾಗಿ ನೀಡಿದ 60 ಕೆಜಿ ಚಿನ್ನದಲ್ಲಿ, ದೇವಾಲಯದ ಗರ್ಭಗುಡಿಯ ಒಳಗೋಡೆಗಳನ್ನು 37 ಕೆಜಿ  ಚಿನ್ನದಿಂದ ಲೇಪನ ಮಾಡಲಾಗಿದೆ. ಕಳೆದ ವರ್ಷ ಪ್ರಧಾನಿ ಮೋದಿಯವರು ಕಾಶಿ ವಿಶ್ವನಾಥ ಧಾಮ ಯೋಜನೆಗೆ ಔಪಚಾರಿಕವಾಗಿ ಚಾಲನೆ ನೀಡಿದ ತಕ್ಷಣ ಕಾಮಗಾರಿಯನ್ನು ಪ್ರಾರಂಭಿಸಲಾಯಿತು.

ಫೆಬ್ರವರಿ 27 ರಂದು ಪ್ರಧಾನಿ ಮೋದಿ ಅವರು ಪ್ರಾರ್ಥನೆ ಸಲ್ಲಿಸಲು ದೇವಾಲಯಕ್ಕೆ ಭೇಟಿ ನೀಡಿದಾಗ ಹಳದಿ ಲೋಹದ ಹೊಳಪಿನ ಚಿನ್ನದ ಲೇಪಿನ ಗೋಡೆಯ ನೋಟ ಜಗತ್ತಿಗೆ ಕಂಡಿತು. ಮತ್ತು ಕಾಶಿ ವಿಶ್ವನಾಥನ ಗರ್ಭಗುಡಿಯ ದೃಶ್ಯಗಳನ್ನು ದೇವಾಲಯದ ಆಡಳಿತವು ಬಿಡುಗಡೆ ಮಾಡಿದೆ.

ಗರ್ಭಗುಡಿಯೊಳಗೆ ಕೆಲಸ ಮುಗಿದ ನಂತರ, ಉಳಿದ 23 ಕೆಜಿ ಚಿನ್ನವನ್ನು ದೇವಾಲಯದ ಚಿನ್ನದ ಗುಮ್ಮಟಗಳ ಕೆಳಗಿನ ಭಾಗ ಮತ್ತು ಬಾಗಿಲಿನ ಚೌಕಟ್ಟುಗಳಿಗೆ ಲೇಪನ ಮಾಡಲಾಯಿತು. ದೇವಸ್ಥಾನದ ಒಳಭಾಗದಲ್ಲಿ ಚಿನ್ನದ ಲೇಪನಕ್ಕಾಗಿ ಗುಜರಾತ್ ಮತ್ತು ದೆಹಲಿಯಿಂದ ವಿಶೇಷ ತಂಡವನ್ನು ಕರೆಸಲಾಯಿತು.

1777 ರಲ್ಲಿ ಇಂದೋರ್ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ನಿರ್ಮಿಸಿದ ಕಾಶಿ ವಿಶ್ವನಾಥ ದೇವಾಲಯವು ಮಹಾರಾಜ ರಂಜಿತ್ ಸಿಂಗ್ ಅವರು ನೀಡಿದ ಸುಮಾರು ಒಂದು ಟನ್ ಚಿನ್ನದಿಂದ ಅದರ ಎರಡು ಗುಮ್ಮಟಗಳಿಗೆ ಚಿನ್ನದ ಲೇಪನವನ್ನು ಮಾಡಲಾಗಿದೆ.

Published On - 11:07 pm, Fri, 10 June 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್