Viral Video: ಬೇಟೆಯಾಡಲು ಬಂದ ಹುಲಿರಾಯನಿಗೆ ಚಳ್ಳೆಹಣ್ಣು ತಿನ್ನಿಸಿದ ಬಾತುಕೋಳಿ!

ನದಿಯಲ್ಲಿ ಸಿಂಗಲ್ ಆಗಿ ಬೇಟೆಯಾಡಲು ಹೋದ ಹುಲಿಗೆ ಬಾತುಕೋಳಿ ಚಳ್ಳೆಹಣ್ಣು ತಿನ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಮನರಂಜನೆಯನ್ನು ನೀಡುತ್ತಿದೆ. ವಿಡಿಯೋ 4.8 ಮಿಲಿಯನ್ ವೀಕ್ಷಣೆಗಳನ್ನು ಸ್ವೀಕರಿಸಿದೆ.

Viral Video: ಬೇಟೆಯಾಡಲು ಬಂದ ಹುಲಿರಾಯನಿಗೆ ಚಳ್ಳೆಹಣ್ಣು ತಿನ್ನಿಸಿದ ಬಾತುಕೋಳಿ!
ಹುಲಿ ಮತ್ತು ಬಾತುಕೋಳಿ
Follow us
TV9 Web
| Updated By: Rakesh Nayak Manchi

Updated on: Jun 10, 2022 | 5:35 PM

ಕೆಲವೊಂದು ಪ್ರಾಣಿಗಳಿಗೆ ನೀರಿನಲ್ಲಿ ಈಜಲು ಬರುತ್ತದೆ. ಈ ಪೈಕಿ ಹುಲಿ ಕೂಡ ಒಂದು. ಹುಲಿಗಳು ನೀರಿನಲ್ಲಿ ಬೇಟೆಯಾಡುವುದು ತೀರಾ ಕಡಿಮೆ. ಹುಲಿಗಳು ಒಂಟಿ ಬೇಟೆಗಾರ ಮತ್ತು ಏಕಾಂಗಿಯಾಗಿ ಬೇಟೆಯಾಡಲು ಬಯಸುತ್ತದೆ. ಅದರಂತೆ ನದಿಯಲ್ಲಿ ಸಿಂಗಲ್ ಆಗಿ ಬೇಟೆಯಾಡಲು ಹೋದ ಹುಲಿ(Tiger)ಗೆ ಬಾತುಕೋಳಿ(Duck) ಚಳ್ಳೆಹಣ್ಣು ತಿನ್ನಿಸಿದ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ಸಖತ್ ಮನರಂಜನೆಯನ್ನು ನೀಡುತ್ತಿದೆ.

ವಿಡಿಯೋದಲ್ಲಿ ಕಾಣುವಂತೆ, ನದಿ ನೀರಿನ ಬಣ್ಣ ತಿಳಿ ಕೇಸರಿಯಾಗಿದೆ. ಇದರಲ್ಲಿ ಬಾತುಕೋಳಿಯೊಂದು ಈಜಾಡುತ್ತಾ ಇರುತ್ತದೆ. ಈ ವೇಳೆ ಹುಲಿಯೊಂದು ಏಕಾಂಗಿಯಾಗಿ ಬಂದು ಬಾತುಕೋಳಿಯನ್ನು ಬೇಟೆಯಾಡಲು ಮುಂದಾಗುತ್ತದೆ. ನಿಧಾನಕ್ಕೆ ಬರುತ್ತಿದ್ದ ಹುಲಿ ಬಾತುಕೋಳಿ ಹತ್ತಿರವಾಗುತ್ತಿದ್ದಂತೆ ವೇಗವಾಗಿ ಮುನ್ನುಗ್ಗಲು ಯತ್ನಿಸಿತು. ಈ ವೇಳೆ ಬಾತುಕೋಳಿಗೆ ಇದ್ದಿದ್ದು ಒಂದೇ ದಾರಿ. ಅದು ನೀರಿನಲ್ಲಿ ಮುಳುಗುವುದು. ಬಾತುಕೋಳಿ ಹುಲಿಯ ಬಾಯಿಯಿಂದ ತಪ್ಪಿಸಿಕೊಳ್ಳಲು ನೀರಿನಲ್ಲಿ ಮುಳುಗಿದೆ. ಅದರಂತೆ ಹುಲಿಗೆ ಬಾತುಕೋಳಿ ಎಲ್ಲಿ ಹೋಯ್ತು ಎಂದು ತಿಳಿಯುವುದಿಲ್ಲ. ಆದರೆ ಬಾತುಕೋಳಿ ನೀರಿನಲ್ಲಿ ಮುಳುಗಿ ಹುಲಿಯ ಹಿಂದಿನಿಂದ ಮೇಲೆ ಬಂದು ಈಜಿಕೊಂಡು ಹೋಗಿದೆ.

ತನ್ನನ್ನು ಬೇಟೆಯಾಡಲು ಬಂದ ಹುಲಿಗೆ ಚಳ್ಳೆಹಣ್ಣು ತಿನ್ನಿಸಿದ ಬಾತುಕೋಳಿಯ ವಿಡಿಯೋವನ್ನು ‘Buitengebieden’ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಬಾತುಕೋಳಿ ಶಾಂತವಾಗಿ ಈಜುವುದನ್ನು ಮತ್ತು ನಂತರ ನಿಧಾನವಾಗಿ ಸಮೀಪಿಸುತ್ತಿರುವ ಹುಲಿಯಿಂದ ಮರೆಮಾಡಲು ನೀರಿನ ಅಡಿಗೆ ಹೋಗುವುದನ್ನು ತೋರಿಸುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral) ಆಗುತ್ತಿದೆ. ಟ್ವಿಟ್ಟರ್ ಬಳಕೆದಾರರು ವೀಡಿಯೊವನ್ನು ಉಲ್ಲಾಸದಾಯಕವೆಂದು ಹೇಳಿಕೊಂಡಿದ್ದು, ವೈರಲ್ ವಿಡಿಯೋ 4.8 ಮಿಲಿಯನ್ ವೀಕ್ಷಣೆಗಳನ್ನು ಸ್ವೀಕರಿಸಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ