Viral Video: ಸೈಕಲ್ ಸವಾರಿ ವೇಳೆ ಬಿದ್ದ ಗೋರಿಲ್ಲಾ, ನೆಟ್ಟಿಜನ್​ಗಳಿಗೆ ಸಖತ್ ಮನರಂಜನೆ

ಸೈಕಲ್ ಸವಾರಿ ಮಾಡುತ್ತಾ ಕೆಳಗೆ ಬೀಳುವ ಗೋರಿಲ್ಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ 56 ಸಾವಿರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

Viral Video: ಸೈಕಲ್ ಸವಾರಿ ವೇಳೆ ಬಿದ್ದ ಗೋರಿಲ್ಲಾ, ನೆಟ್ಟಿಜನ್​ಗಳಿಗೆ ಸಖತ್ ಮನರಂಜನೆ
ಸೈಕಲ್ ಸವಾರಿ ಮಾಡಿದ ಗೋರಿಲ್ಲಾ
Follow us
TV9 Web
| Updated By: Rakesh Nayak Manchi

Updated on:Jun 10, 2022 | 12:53 PM

ಕೆಲವೊಂದು ಪ್ರಾಣಿಗಳು ಮಾಡುವ ಚೇಷ್ಟೆಗಳು ಜನರಿಗೆ ಹೆಚ್ಚಿನ ಮನರಂಜನೆಯನ್ನು ನೀಡುತ್ತದೆ. ಅದರಂತೆ ಸಾಮಾಜಿಕ ಜಾಲತಾಣದಲ್ಲಿ ಗೋರಿಲ್ಲಾ (Gorilla)ದ ಸೈಕಲ್ ಸವಾರಿಯ ವಿಡಿಯೋ (Video) ನೆಟ್ಟಿಜನ್​ಗಳಿಗೆ ಸಖತ್ ಮನರಂಜನೆಯನ್ನು ನೀಡುತ್ತಿದೆ. ಇಂದು ನಿಮ್ಮ ಮೂಡ್ ಸರಿ ಇಲ್ಲ, ಮುಖದಲ್ಲಿ ನಗು  ಬರುತ್ತಿಲ್ಲ ಎಂದರೆ ಈ ವೈರಲ್ (Viral) ವಿಡಿಯೋವನ್ನು ವೀಕ್ಷಿಸಿ, ನಿಮ್ಮ ಮುಖದಲ್ಲಿ ನಗುವಿನ ಜೊತೆಗೆ ನಿಮ್ಮ ಮೂಡ್ ಕೂಡ ಸರಿಯಾಗಬಹುದು.

ಇದನ್ನೂ ಓದಿ: Viral Video: ಹೆಣ್ಣು ಮೇಕೆಯೊಂದಿಗೆ ಮದುವೆಯಾದ ಭೂಪ! ಇದರ ಅಸಲಿಯತ್ತೇನು ಗೊತ್ತಾ?

ವಿಡಿಯೋದಲ್ಲಿ ಕಾಣುವಂತೆ, ಗೋರಿಲ್ಲಾವೊಂದು ಸೈಕಲ್ ಮೇಲೆ ಕುಳಿತುಕೊಂಡು ಸವಾರಿ ಮಾಡುತ್ತಿರುತ್ತದೆ, ಮತ್ತೊಂದು ಗೋರಿಲ್ಲಾ ಬಿಸಿಲಿನಲ್ಲಿ ಸೋಮಾರಿಯಾಗಿ ಕುಳಿತಿರುವುದನ್ನು ಕಾಣಬಹುದು. ಸೈಕಲ್ ತುಳಿದುಕೊಂಡು ಹೋಗುತ್ತಿದ್ದ ಗೋರಿಲ್ಲಾ, ಸ್ವಲ್ಪ ದೂರದಲ್ಲೇ ಸೈಕಲ್ ಸಹಿತ ಕೆಳಗೆ ಬೀಳುತ್ತದೆ. ಇದರಿಂದ ಗೋರಿಲ್ಲಾ ಎಷ್ಟು ಕೋಪಗೊಳ್ಳುತ್ತದೆ ಎಂದರೆ ಸೈಕಲ್ ಅನ್ನು ಎತ್ತಿ ಪಕ್ಕಕ್ಕೆ ಎಸೆಯುತ್ತದೆ. ಈ ಚಿಕ್ಕ ವಿಡಿಯೋ ಕ್ಲಿಪ್ ಖಂಡಿತವಾಗಿಯೂ ನಿಮ್ಮ ಮನರಂಜನೆಯನ್ನು ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ.

ಈ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಡಾ.ಸಾಮ್ರಾಟ್ ಗೌಡ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ‘ಸ್ಟುಪಿಡ್ ಸೈಕಲ್’ ಎಂದು ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ಈ ವಿಡಿಯೋ 56 ಸಾವಿರ ವೀಕ್ಷಣೆಗಳನ್ನು ಗಳಿಸಿದೆ. ಕ್ಲಿಪ್ ವೀಕ್ಷಿಸಿದ ನೆಟಿಜನ್‌ಗಳು ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Viral Video: ಚಲಿಸುತ್ತಿರುವ ರೈಲಿನಿಂದ ಸ್ಪೈಡರ್​ಮ್ಯಾನ್ ಶೈಲಿಯಲ್ಲಿ ಮೊಬೈಲ್ ಕದ್ದ ಖದೀಮ

ಇದನ್ನೂ ಓದಿ: Trending: ಬೆರಳುಗಳಲ್ಲಿ 12 ಇಂಚಿನ ಉಗುರುಗಳು! ಈಕೆಯ ದೈನಂದಿನ ಚಟುವಟಿಕೆಗಳು ಹೇಗಿದೆ ಗೊತ್ತಾ?

“ಅದಕ್ಕೆ ಉತ್ತಮ ಸೈಕ್ಲಿಂಗ್ ಮೂಲಸೌಕರ್ಯವನ್ನು ಒದಗಿಸೋಣ, ಇದರಿಂದ ಅದು ಸಂತೋಷವನ್ನು ಅನುಭವಿಸಬಹುದು ಮತ್ತು ಸೈಕ್ಲಿಂಗ್ ಅನ್ನು ಆನಂದಿಸಬಹುದು” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ “ಎಚ್ಚರಿಕೆ: ನೀವು ಯಾರನ್ನಾದರೂ ಮೆಚ್ಚಿಸಲು ಪ್ರಯತ್ನಿಸುತ್ತಿರುವಾಗ” ಎಂದು ಹಾಸ್ಯವಾಗಿ ಹೇಳಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Fri, 10 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ