Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೆಣ್ಣು ಮೇಕೆಯೊಂದಿಗೆ ಮದುವೆಯಾದ ಭೂಪ! ಇದರ ಅಸಲಿಯತ್ತೇನು ಗೊತ್ತಾ?

ಹೆಣ್ಣು ಮೇಕೆಯೊಂದಿಗೆ ವ್ಯಕ್ತಿಯೊಬ್ಬರು ಮದುವೆಯಾದ ಘಟನೆಯೊಂದು ಇಂಡೋನೇಷ್ಯಾದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮನರಂಜನೆಯ ವಿಡಿಯೋಗೆ ಟೀಕೆಗಳು ಕೂಡ ವ್ಯಕ್ತವಾಗಿದೆ.

Viral Video: ಹೆಣ್ಣು ಮೇಕೆಯೊಂದಿಗೆ ಮದುವೆಯಾದ ಭೂಪ! ಇದರ ಅಸಲಿಯತ್ತೇನು ಗೊತ್ತಾ?
ಮೇಕೆಯೊಂದಿಗೆ ಮದುವೆ
Follow us
TV9 Web
| Updated By: Rakesh Nayak Manchi

Updated on:Jun 10, 2022 | 10:22 AM

ಹೆಣ್ಣು ಮೇಕೆಯೊಂದಿಗೆ ವ್ಯಕ್ತಿಯೊಬ್ಬರು ಮದುವೆಯಾದ ಘಟನೆಯೊಂದು ಇಂಡೋನೇಷ್ಯಾದಲ್ಲಿ ನಡೆದಿದ್ದು, ಇದರ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ಅಲ್ಲದೆ ವಿಡಿಯೋ ನೋಡಿದ ನೆಟ್ಟಿಜನ್ಸ್ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಒಂದಷ್ಟು ಮಂದಿ ಟೀಕೆಗಳನ್ನೂ ವ್ಯಕ್ತಪಡಿಸಿದ್ದಾರೆ. 44 ವರ್ಷದ ಸೈಫುಲ್ ಆರಿಫ್ ಎಂಬ ಇಂಡೋನೇಷ್ಯಾದ ವ್ಯಕ್ತಿ ಜೂನ್ 5 ರಂದು ಗ್ರೆಸಿಕ್‌ನ ಬೆಂಜೆಂಗ್ ಜಿಲ್ಲೆಯ ಕ್ಲಾಂಪೋಕ್ ಗ್ರಾಮದಲ್ಲಿ ರಹಾಯು ಬಿನ್ ಬೆಜೊ ಎಂಬ ಮೇಕೆಯನ್ನು ಮದುವೆಯಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಸೂರ್ಯ ಟಿವಿ ಕೂಡ ರಿಪೋಸ್ಟ್ ಮಾಡಿದೆ.

ಇದನ್ನೂ ಓದಿ: Viral Video: ಬೋರ್​ವೆಲ್​ಗೆ ಬಿದ್ದ 18 ತಿಂಗಳ ಮಗುವನ್ನು ಕಾಪಾಡಿದ ಸೈನಿಕರು; ವಿಡಿಯೋ ವೈರಲ್

ವೀಡಿಯೋದಲ್ಲಿ ನೋಡುವಂತೆ, ವಧು(ಮೇಕೆ) ಶಾಲು ಹೊದ್ದುಕೊಂಡಿರುವುದನ್ನು ಕಾಣಬಹುದು. ಸಾಂಪ್ರದಾಯಿಕ ಜಾವಾನೀಸ್ ವೇಷಭೂಷಣಗಳನ್ನು ಧರಿಸಿದ ಸ್ಥಳೀಯರ ಗುಂಪು ವಿವಾಹ ಸಮಾರಂಭದಲ್ಲಿ ಭಾಗವಹಿಸಿದೆ. ವರದಿಯ ಪ್ರಕಾರ, ಸೈಫುಲ್ ವರದಕ್ಷಿಣೆಯನ್ನು 22,000 ರೂಪಾಯಿ ಎಂದು ಉಲ್ಲೇಖಿಸಿದ ‘ಅಕಾದ್ ನಿಕಾಹ್’ ಅನ್ನು ಪಠಿಸಿದರು. ಅಲ್ಲದೆ ವಿಚಿತ್ರ ಮದುವೆಯ ವಿಡಿಯೋ ಸಾರ್ವಜನಿಕ ಟೀಕೆಗೆ ಕಾರಣವಾಗಿದೆ.

ವೈರಲ್ ಉದ್ದೇಶಕ್ಕಾಗಿ ನಿರ್ಮಿಸಲಾದ ವಿಡಿಯೋ ಎಂದು ಒಪ್ಪಿಕೊಳ್ಳುವಂತೆ ಸೈಫುಲ್ ಅವರಿಗೆ ಮುಂದೆ ಬರಲು ಒತ್ತಾಯಿಸಲಾಗಿದೆ. ಅದರಂತೆ ”ಇದು ಸಂಪೂರ್ಣವಾಗಿ ನಟನೆಯಾಗಿದೆ ಮತ್ತು ಅದನ್ನು ವೈರಲ್ ಮಾಡುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮದ ವಿಷಯಕ್ಕಾಗಿ ನಿರ್ಮಿಸಲಾಗಿದೆ. ವಿಡಿಯೋವನ್ನು ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ರಚಿಸಲಾಗಿದೆ” ಎಂದು ಸೈಫುಲ್ ಹೇಳಿದ್ದಾರೆ.

ಇದನ್ನೂ ಓದಿ: Viral Video: ಚಲಿಸುತ್ತಿರುವ ರೈಲಿನಿಂದ ಸ್ಪೈಡರ್​ಮ್ಯಾನ್ ಶೈಲಿಯಲ್ಲಿ ಮೊಬೈಲ್ ಕದ್ದ ಖದೀಮ

ಆದರೆ, ನೆಟ್ಟಿಜನ್ಸ್​ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, “ಅಸಹ್ಯಕರ ವಿಷಯ, ಹಣವನ್ನು ಗಳಿಸಬಹುದು, ಆದರೆ ಸಾರ್ವಜನಿಕರಿಗೆ ಸಮಸ್ಯೆಯನ್ನು ಸೃಷ್ಟಿಸುತ್ತದೆ” ಎಂದಿದ್ದಾರೆ. ಮತ್ತೊಬ್ಬರು, “ಮದುವೆಯಾಗುವವರನ್ನು ಮಾತ್ರ ದೂಷಿಸಬೇಡಿ. ಗ್ರಾಮದ ಮುಖ್ಯಸ್ಥರು ಮತ್ತು ಮದುವೆಯನ್ನು ಬೆಂಬಲಿಸುವ ಸುತ್ತಮುತ್ತಲಿನ ಜನರು ಹುಚ್ಚರಾಗಿದ್ದಾರೆಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ. ಇನ್ನಬ್ಬ ನೆಟ್ಟಿಗರು, “ಅವರು ಅದನ್ನು ನಿಷೇಧಿಸಲಿಲ್ಲ, ಆದರೆ ಅವರು ಅದನ್ನು ಪ್ರೋತ್ಸಾಹಿಸಿದರು” ಎಂದಿದ್ದಾರೆ.

ವಿಡಿಯೋ ವೀಕ್ಷಿಸಿ:

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:21 am, Fri, 10 June 22

ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
‘ಎಷ್ಟೇ ಎತ್ತರಕ್ಕೆ ಬೆಳೆದರೂ..’; ಯಶ್ ಸಹಾಯ ನೆನೆದ ಅಜಯ್ ರಾವ್
‘ಎಷ್ಟೇ ಎತ್ತರಕ್ಕೆ ಬೆಳೆದರೂ..’; ಯಶ್ ಸಹಾಯ ನೆನೆದ ಅಜಯ್ ರಾವ್
ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು