Viral Video: ಚಲಿಸುತ್ತಿರುವ ರೈಲಿನಿಂದ ಸ್ಪೈಡರ್ಮ್ಯಾನ್ ಶೈಲಿಯಲ್ಲಿ ಮೊಬೈಲ್ ಕದ್ದ ಖದೀಮ
ಚಲಿಸುತ್ತಿರುವ ರೈಲಿನಲ್ಲಿ ಕಳ್ಳನೊಬ್ಬ ಸೇತುವೆಯ ಮೇಲೆ ಸ್ಪೈಡರ್ಮ್ಯಾನ್ ರೀತಿ ನಿಂತುಕೊಂಡು ಪ್ರಯಾಣಿಕರ ಕೈಯಿಂದ ಮೊಬೈಲ್ ಕಸಿದುಕೊಂಡ ಘಟನೆಯೊಂದು ನಡೆದಿದೆ. ಇದರ ವಿಡಿಯೋ ವೈರಲ್ ಆಗಿದ್ದು, ಕಳ್ಳನನ್ನು ಸ್ಪೈಡರ್ಮ್ಯಾನ್ಗೆ ಹೋಲಿಸಲಾಗಿದೆ.
ಈ ಪ್ರಪಂಚದಲ್ಲಿ ಎಂತೆಂಥ ಕತರ್ನಾಕ್ ಕಳ್ಳರಿದ್ದಾರೆ ಎಂದರೆ ಪೊಲೀಸರೂ ಊಹಿಸಲಾಗದಂಥ ಶೈಲಿಯಲ್ಲಿ ಕಳ್ಳತನ ಮಾಡುತ್ತಾರೆ. ಅದರಂತೆ ಚಲಿಸುತ್ತಿರುವ ರೈಲಿನಲ್ಲಿ ಕಳ್ಳನೊಬ್ಬ ಸೇತುವೆಯ ಮೇಲೆ ಸ್ಪೈಡರ್ಮ್ಯಾನ್ ರೀತಿ ನಿಂತುಕೊಂಡು ಪ್ರಯಾಣಿಕರ ಕೈಯಿಂದ ಮೊಬೈಲ್ ಕಸಿದುಕೊಂಡ (Mobile snatch) ಘಟನೆಯೊಂದು ನಡೆದಿದೆ. ಇದರ ವಿಡಿಯೋ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ (Video Viral) ಆಗುತ್ತಿದೆ. ಅಷ್ಟೇ ಅಲ್ಲದೆ ಈ ಹಗಲು ದರೋಡೆಕೋರನನ್ನು ಸ್ಪೈಡರ್ ಮ್ಯಾನ್‌ಗೆ ಹೋಲಿಸಲಾಗಿದೆ.
ಇದನ್ನೂ ಓದಿ: Viral Video : ಕ್ಲಿನಿಕ್ ಹೊಕ್ಕ ತಾಯಿಕೋತಿ, ಚಿಕಿತ್ಸೆ ನೀಡಿದ ಡಾ. ಅಹಮ್ಮದ್
ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಬಿಹಾರದ ನದಿಯ ಮೇಲಿನ ಸೇತುವೆಯ ಮೇಲೆ ಇಬ್ಬರು ರೈಲಿನಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಪ್ರಯಾಣಿಕರು ನದಿಯ ವಿಡಿಯೋ ಚಿತ್ರೀಕರಿಸಲು ಮುಂದಾಗಿದ್ದಾರೆ. ಹೀಗೇ ಮುಂದಕ್ಕೆ ರೈಲು ಚಲಿಸುತ್ತಿದ್ದಂತೆ ಸೇತುವೆ ಕಂಬವನ್ನು ಹಿಡಿದು ನೇತಾಡಿಕೊಂಡಿದ್ದ ಖದೀಮ ವಿಡಿಯೋ ಚಿತ್ರೀಕರಿಸುತ್ತಿದ್ದ ಮೊಬೈಲ್ ಅನ್ನು ಕಸಿದುಕೊಂಡಿದ್ದಾನೆ. ಕಳ್ಳನ ಕೈಚಳಕಕ್ಕೆ ಪ್ರಯಾಣಿಕರು ಕಣ್ಣು ಮಿಟುಕಿಸುವಂತೆ ಮಾಡಿದೆ.
ವಿಡಿಯೋ ವೀಕ್ಷಿಸಿ:
ಮೊಬೈಲ್ ಕಳೆದುಕೊಂಡವನನ್ನು ಮೊಹಮ್ಮದ್ ಸಮೀರ್ ಎಂದು ಇಂಡಿಯಾ ಟಿವಿ ನ್ಯೂಸ್ ಗುರುತಿಸಿದೆ. ಜೂನ್ 4 ರಂದು ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಸಮೀರ್ ಪೊಲೀಸರಿಗೆ ದೂರು ನೀಡಿದ್ದಾರೆ. ಕತಿಹಾರ್-ಬರೌನಿ ರೈಲು ಮಾರ್ಗದಲ್ಲಿ ಇದೇ ರೀತಿಯ ದರೋಡೆಗಳ ಸರಣಿಯನ್ನು ‘ಝಪ್ತಾ ಗ್ಯಾಂಗ್’ ಎಂದು ಪೊಲೀಸರು ವರದಿ ಮಾಡಿದ್ದಾರೆ.
ಇದನ್ನೂ ಓದಿ: Viral Video: ಬೋರ್ವೆಲ್ಗೆ ಬಿದ್ದ 18 ತಿಂಗಳ ಮಗುವನ್ನು ಕಾಪಾಡಿದ ಸೈನಿಕರು; ವಿಡಿಯೋ ವೈರಲ್
Indian Spiderman ??? pic.twitter.com/2MA8NuSywp
— Ayan Hashmi (@UNFUCKXWlTABLE) June 9, 2022
ईस्पाइडर मैन ईस्पाइडर मैन ?️ pic.twitter.com/NPpuLq7YN4
— Shivaji ? (@svj_c) June 8, 2022
ಗ್ಯಾಂಗ್‌ನ ಕೈಚಳಕದ ಬಗ್ಗೆ ಇಂಡಿಯಾ ಟಿವಿ ನ್ಯೂಸ್ ಜೊತೆ ಮಾತನಾಡಿದ ಕತಿಹಾರ್ ರೈಲ್ವೆ ಎಸ್‌ಪಿ ಡಾ.ಸಂಜಯ್ ಭಾರ್ತಿ, “ಯಾರಾದರು ಮೊಬೈಲ್ನಲ್ಲಿ ಮಾತನಾಡುತ್ತಿದ್ದರೆ ಕಳ್ಳರು ದೊಣ್ಣೆಯಿಂದ ಹೊಡೆದು ಮೊಬೈಲ್ ಅನ್ನು ಬೀಳಿಸುತ್ತಾರೆ. ನಂತರ ಅದನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಅಲ್ಲದೆ ಆ ಪ್ರದೇಶದಲ್ಲಿ ಈಗಾಗಲೇ ಪೊಲೀಸರು ಬೀಡುಬಿಟ್ಟಿದ್ದಾರೆ. ಇಂತಹ ಪ್ರಕರಣಗಳಲ್ಲಿ ಅನೇಕರು ಜೈಲಿಗೆ ಹೋಗಿದ್ದಾರೆ. ಈ ವಿಚಾರದಲ್ಲಿ ಹೆಚ್ಚಿನ ಜನರನ್ನು ಗುರುತಿಸಲಾಗುತ್ತಿದ್ದು, ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:29 am, Fri, 10 June 22