Viral Video: ಆ್ಯಂಬುಲೆನ್ಸ್​ ಇಲ್ಲದೆ 4 ವರ್ಷದ ಮಗಳ ಹೆಣವನ್ನು ಹೊತ್ತು ಬಸ್​ನಲ್ಲಿ ಹೋದ ತಂದೆ!

ಆ್ಯಂಬುಲೆನ್ಸ್​ ನೀಡದ ಕಾರಣ ಖಾಸಗಿ ವಾಹನ ವ್ಯವಸ್ಥೆ ಮಾಡಲು ನಮ್ಮ ಬಳಿ ಹಣವಿಲ್ಲದ ಕಾರಣ ನಾವು ಮಗಳ ಶವವನ್ನು ಕಂಬಳಿಯಲ್ಲಿ ಸುತ್ತಿ, ಹೆಗಲ ಮೇಲೆ ಹಾಕಿಕೊಂಡು ಬಕ್ಸ್ವಾಹಾಗೆ ಬಸ್​ನಲ್ಲೇ ತೆಗೆದುಕೊಂಡು ಹೋದೆವು ಎಂದು ಪೋಷಕರು ಆರೋಪಿಸಿದ್ದಾರೆ.

Viral Video: ಆ್ಯಂಬುಲೆನ್ಸ್​ ಇಲ್ಲದೆ 4 ವರ್ಷದ ಮಗಳ ಹೆಣವನ್ನು ಹೊತ್ತು ಬಸ್​ನಲ್ಲಿ ಹೋದ ತಂದೆ!
ಮಗಳ ಹೆಣವನ್ನು ಹೆಗಲ ಮೇಲೆ ಹೊತ್ತು ಸಾಗಿದ ತಂದೆImage Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jun 10, 2022 | 12:41 PM

ಬಕ್ಸ್‌ವಾಹಾ: ವ್ಯವಸ್ಥೆಯ ಕರಾಳತೆಗೆ ಬಲಿಯಾಗುವುದು ಮಧ್ಯಮ ವರ್ಗದವರು ಮತ್ತು ಕೆಳ ವರ್ಗದವರು. ಮೇಲ್ವರ್ಗದವರಿಗೆ ಇದೆಲ್ಲದರ ಅನುಭವಾಗುವುದೇ ಇಲ್ಲ. ಮಧ್ಯಪ್ರದೇಶದ (Madhya Pradesh) ಛತ್ತರ್‌ಪುರ ಜಿಲ್ಲೆಯ ಕುಟುಂಬವೊಂದರ ನಾಲ್ಕು ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಆಕೆಯ ಮೃತದೇಹವನ್ನು ತನ್ನ ಗ್ರಾಮಕ್ಕೆ ತೆಗೆದುಕೊಂಡು ಹೋಗಲು ಆ್ಯಂಬುಲೆನ್ಸ್​ ಸಿಗದ ಹಿನ್ನೆಲೆಯಲ್ಲಿ ಮೃತ ಬಾಲಕಿಯ ತಂದೆ ಆಕೆಯ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ. ಈ ಹಿಂದೆ ಕೂಡ ಈ ರೀತಿಯ ಕೆಲವು ಘಟನೆಗಳು ವರದಿಯಾಗಿದ್ದವು.

ಮಗಳ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಚಿಕಿತ್ಸೆಗಾಗಿ ಸೋಮವಾರ ಆಕೆಯನ್ನು ಬಕ್ಸ್‌ವಾಹಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಮಂಗಳವಾರ ಆಕೆಯ ಮನೆಯವರು ಆಕೆಯನ್ನು ಪಕ್ಕದ ದಮೋಹ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅದೇ ದಿನ ಚಿಕಿತ್ಸೆ ಫಲಕಾರಿಯಾಗದೆ ಅವಳು ಸಾವನ್ನಪ್ಪಿದ್ದಳು. (Source)

ಇದನ್ನೂ ಓದಿ
Image
Viral Video: ಹೆಣ್ಣು ಮೇಕೆಯೊಂದಿಗೆ ಮದುವೆಯಾದ ಭೂಪ! ಇದರ ಅಸಲಿಯತ್ತೇನು ಗೊತ್ತಾ?
Image
Viral Video: ಬೋರ್​ವೆಲ್​ಗೆ ಬಿದ್ದ 18 ತಿಂಗಳ ಮಗುವನ್ನು ಕಾಪಾಡಿದ ಸೈನಿಕರು; ವಿಡಿಯೋ ವೈರಲ್
Image
Shocking News: ಆಸ್ಪತ್ರೆಯಿಂದ ಮಗನ ಶವ ಪಡೆಯಲು ಭಿಕ್ಷೆ ಬೇಡುತ್ತಿರುವ ಅಪ್ಪ-ಅಮ್ಮ!
Image
ಶವದ ವಾಹನ ಬರದಿದ್ದಕ್ಕೆ 7 ವರ್ಷದ ಮಗಳ ಶವವನ್ನು ತನ್ನ ಹೆಗಲ ಮೇಲೆ ಹೊತ್ತು 10 ಕಿಮೀ ನಡೆದ ತಂದೆ

ಆಕೆಯ ಮೃತದೇಹವನ್ನು ಮನೆಗೆ ಕೊಂಡೊಯ್ಯಲು ಆಸ್ಪತ್ರೆಯ ಸಿಬ್ಬಂದಿ ಬಳಿ ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡುವಂತೆ ಕೇಳಿದರೂ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ ಎಂದು ಬಾಲಕಿಯ ಅಜ್ಜ ಮನ್ಸುಖ್ ಅಹಿರ್ವಾರ್ ಆರೋಪಿಸಿದ್ದಾರೆ. ಖಾಸಗಿ ವಾಹನ ವ್ಯವಸ್ಥೆ ಮಾಡಲು ನಮ್ಮ ಬಳಿ ಹಣವಿಲ್ಲದ ಕಾರಣ ನಾವು ಆಕೆಯ ದೇಹವನ್ನು ಕಂಬಳಿಯಲ್ಲಿ ಸುತ್ತಿ ಹೆಗಲ ಮೇಲೆ ಹಾಕಿಕೊಂಡು ಬಕ್ಸ್ವಾಹಾಗೆ ಬಸ್​ನಲ್ಲೇ ತೆಗೆದುಕೊಂಡು ಹೋದೆವು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಶವದ ವಾಹನ ಬರದಿದ್ದಕ್ಕೆ 7 ವರ್ಷದ ಮಗಳ ಶವವನ್ನು ತನ್ನ ಹೆಗಲ ಮೇಲೆ ಹೊತ್ತು 10 ಕಿಮೀ ನಡೆದ ತಂದೆ

ಬಸ್​ನಲ್ಲಿ ಬಕ್ಸ್ವಾಹಾ ತಲುಪಿದ ನಂತರ ಆ ಬಾಲಕಿಯ ತಂದೆ ಲಕ್ಷ್ಮಣ್ ಅಹಿರ್ವಾರ್ ಆಕೆಯ ಶವವನ್ನು ಪೌಡಿ ಗ್ರಾಮಕ್ಕೆ ಕೊಂಡೊಯ್ಯಲು ವಾಹನವನ್ನು ಒದಗಿಸುವಂತೆ ನಗರ ಪಂಚಾಯತ್‌ಗೆ ಕೇಳಿದರು. ಆದರೆ, ಅವರು ಕೂಡ ವಾಹನದ ವ್ಯವಸ್ಥೆ ಮಾಡಲು ನಿರಾಕರಿಸಿದರು.

ಆದರೆ, ದಾಮೋಹ್ ಸಿವಿಲ್ ಸರ್ಜನ್ ಡಾ. ಮಮತಾ ತಿಮೋರಿ ಈ ಆರೋಪವನ್ನು ನಿರಾಕರಿಸಿದ್ದಾರೆ. “ಯಾರೂ ನನ್ನ ಬಳಿಗೆ ಬಂದಿಲ್ಲ, ನಮ್ಮ ಬಳಿ ಶವದ ವಾಹನವಿದೆ. ನಾವು ಅದನ್ನು ರೆಡ್‌ಕ್ರಾಸ್ ಅಥವಾ ಯಾವುದೇ ಇತರ ಎನ್‌ಜಿಒನಿಂದ ವ್ಯವಸ್ಥೆಗೊಳಿಸುತ್ತಿದ್ದೆವು. ಆದರೆ, ನಮಗೆ ಈ ಘಟನೆಯ ಬಗ್ಗೆ ಮಾಹಿತಿಯೇ ಸಿಕ್ಕಿಲ್ಲ” ಎಂದು ತಿಮೋರಿ ಹೇಳಿದ್ದಾರೆ.

“ನಾನು ಶವದ ವಾಹನವನ್ನು ಕೇಳಿದೆ. ಆದರೆ ಅವರು ಅದಕ್ಕೆ ವ್ಯವಸ್ಥೆ ಮಾಡಲಿಲ್ಲ. ಆದ್ದರಿಂದ, ಖಾಸಗಿ ವಾಹನದ ವ್ಯವಸ್ಥೆ ಮಾಡಲು ನಮ್ಮ ಬಳಿ ಹಣವಿಲ್ಲದ ಕಾರಣ ನಾವು ಮಗಳ ಮೃತದೇಹವನ್ನು ಹೊತ್ತು ಸಾಗಿಸಿದ್ದೇವೆ” ಎಂದು ಬಾಲಕಿಯ ತಂದೆ ಭಗವಾನ್ ದಾಸ್ ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Fri, 10 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ