AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಆಸ್ಪತ್ರೆಯಿಂದ ಮಗನ ಶವ ಪಡೆಯಲು ಭಿಕ್ಷೆ ಬೇಡುತ್ತಿರುವ ಅಪ್ಪ-ಅಮ್ಮ!

Viral News: ನನ್ನ ಮಗನ ಶವವನ್ನು ನಮಗೆ ನೀಡಲು ಸರ್ಕಾರಿ ಆಸ್ಪತ್ರೆಯ ಉದ್ಯೋಗಿ 50,000 ರೂ. ಕೇಳಿದ್ದಾರೆ, ನಾವು ಬಡವರು, ಹೇಗೆ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಲು ಸಾಧ್ಯ? ಎಂದು ಮೃತನ ತಂದೆ ಮಹೇಶ್ ಠಾಕೂರ್ ತಿಳಿಸಿದ್ದಾರೆ.

Shocking News: ಆಸ್ಪತ್ರೆಯಿಂದ ಮಗನ ಶವ ಪಡೆಯಲು ಭಿಕ್ಷೆ ಬೇಡುತ್ತಿರುವ ಅಪ್ಪ-ಅಮ್ಮ!
ಮಗನ ಶವ ಪಡೆಯಲು ಭಿಕ್ಷೆ ಬೇಡುತ್ತಿರುವ ಅಪ್ಪImage Credit source: ANI
TV9 Web
| Edited By: |

Updated on:Jun 09, 2022 | 9:25 AM

Share

ಬಿಹಾರ: ಬಿಹಾರದ ಸರ್ಕಾರಿ ಆಸ್ಪತ್ರೆಯೊಂದರ ಲಂಚಾವತಾರದ (Bribe) ಕರಾಳ ಮುಖ ಬಯಲಾಗಿದ್ದು, ಸಾವನ್ನಪ್ಪಿದ ವ್ಯಕ್ತಿಯ ಹೆಣವನ್ನು ನೀಡಲು 50,000 ರೂ. ಲಂಚ ಕೇಳಿದ್ದಾರೆ. ವೃದ್ಧ ದಂಪತಿ ಬಿಹಾರದ (Bihar) ಸಮಸ್ತಿಪುರದಲ್ಲಿ ತಮ್ಮ ಮಗನ ಶವವನ್ನು (Dead Body) ಸರ್ಕಾರಿ ಆಸ್ಪತ್ರೆಯಿಂದ ನೀಡಲು ಕೇಳಿದ ಲಂಚಕ್ಕಾಗಿ ಬೀದಿಗಿಳಿದಿದ್ದಾರೆ. ಆಸ್ಪತ್ರೆಯ ಉದ್ಯೋಗಿಯೊಬ್ಬರು ತಮ್ಮ ಮಗನ ಶವವನ್ನು ಬಿಡುಗಡೆ ಮಾಡಲು ದಂಪತಿಗೆ 50,000 ರೂ. ಕೇಳಿದ್ದಾರೆ ಎನ್ನಲಾಗಿದೆ.

ಈ ದಂಪತಿಯ ಬಳಿ ಹಣ ಇಲ್ಲದ ಕಾರಣ ಹಣಕ್ಕಾಗಿ ಭಿಕ್ಷೆ ಬೇಡುತ್ತಾ ಊರೂರು ಅಲೆಯುತ್ತಿದ್ದಾರೆ. ಈ ಜೋಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಮಗ ನಾಪತ್ತೆಯಾಗಿದ್ದ, ಆತನೀಗ ಶವವಾಗಿ ಸಿಕ್ಕಿದ್ದಾನೆ ಎಂದು ಮೃತನ ತಂದೆ ತಿಳಿಸಿದ್ದಾರೆ.

ಇದನ್ನೂ ಓದಿ
Image
ದೆಹಲಿ: ಹೋಮ್‌ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ ಉರಿ ಬಿಸಿಲಿನಲ್ಲಿ ಮಗಳ ಕೈಕಾಲು ಕಟ್ಟಿಹಾಕಿದ ತಾಯಿ
Image
Inspirational Story: 73ರ ಇಳಿ ವಯಸ್ಸಿನಲ್ಲೂ ಸೈಕಲ್​ನಲ್ಲೇ 2,500 ಕಿ.ಮೀ. ಪ್ರಯಾಣಿಸಿದ ವೃದ್ಧ
Image
Viral Video: ಕ್ಲಾಸ್​ರೂಂನಲ್ಲೇ ಮಲಗಿ ಗೊರಕೆ ಹೊಡೆಯುತ್ತಿದ್ದ ಟೀಚರ್​​ಗೆ ಗಾಳಿ ಬೀಸಿದ ವಿದ್ಯಾರ್ಥಿ; ವಿಡಿಯೋ ವೈರಲ್

ಕೆಲವು ಸಮಯದ ಹಿಂದೆ ನನ್ನ ಮಗ ನಾಪತ್ತೆಯಾಗಿದ್ದನು. ಈಗ, ನನ್ನ ಮಗನ ಶವ ಸಮಸ್ತಿಪುರದ ಸದರ್ ಆಸ್ಪತ್ರೆಯಲ್ಲಿದೆ ಎಂದು ನಮಗೆ ಕರೆ ಬಂದಿದೆ. ನನ್ನ ಮಗನ ಶವವನ್ನು ನಮಗೆ ನೀಡಲು ಸರ್ಕಾರಿ ಆಸ್ಪತ್ರೆಯ ಉದ್ಯೋಗಿ 50,000 ರೂ. ಕೇಳಿದ್ದಾರೆ, ನಾವು ಬಡವರು, ಹೇಗೆ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಲು ಸಾಧ್ಯ? ಎಂದು ಮೃತನ ತಂದೆ ಮಹೇಶ್ ಠಾಕೂರ್ ಎಎನ್‌ಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: Shocking News: ಪಬ್​ಜಿ ಆಡಬೇಡ ಎಂದ ಅಮ್ಮನನ್ನು ಕೊಂದ ಬಾಲಕ; ರೂಂ ಫ್ರೆಷನರ್​​ ಹಾಕಿ 2 ದಿನ ಶವ ಮುಚ್ಚಿಟ್ಟ!

ಆಸ್ಪತ್ರೆಯಲ್ಲಿನ ಬಹುತೇಕ ಆರೋಗ್ಯ ಕಾರ್ಯಕರ್ತರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಸಮಯಕ್ಕೆ ಸರಿಯಾಗಿ ಸಂಬಳ ಸಿಗುತ್ತಿಲ್ಲ. ರೋಗಿಗಳ ಸಂಬಂಧಿಕರಿಂದ ಸಿಬ್ಬಂದಿ ಹಣ ಪಡೆದಿರುವ ಹಲವಾರು ನಿದರ್ಶನಗಳಿವೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:23 am, Thu, 9 June 22

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್