ತಂದೆ-ಮಗನ ಈ ಹೃದಯಸ್ಪರ್ಶಿ ಪೋಸ್ಟ್ ನೊಡಿದವರೆಲ್ಲರನ್ನು ಭಾವುಕರನ್ನಾಗಿಸುತ್ತಿದೆ!

ತಮ್ಮ ಮಕ್ಕಳು ಮತ್ತು ಪತಿಯ ಬಗ್ಗೆ ಅವರು ಬಹಳ ಅಭಿಮಾನದಿಂದ ಮತ್ತಷ್ಟು ಬರೆದ್ದಿದ್ದಾರೆ. ‘ಅವನಿಗೆ ತನ್ನ ತಂದೆಯಂತೆ ಮರ ಹತ್ತುವುದೆಂದರೆ ಎಲ್ಲಿಲ್ಲದ ಖುಷಿ. ಹಾಗಾಗೇ ಅವನನ್ನು ನಾನು ಟಾರ್ಜಾನ್ ಅಂತ ಕರೆಯುತ್ತೇನೆ. ಪ್ರತಿವರ್ಷ ಶಾಲೆ ಪುನರಾರಂಭಗೊಂಡಾಗ ಟಾರ್ಜಾನ್ ಮತ್ತು ಈ ಹಾಡನ್ನು ನಾನು ತಪ್ಪದೆ ಪ್ಲೇ ಮಾಡುತ್ತೇನೆ. ನಮ್ಮ ಚಿಕ್ಕ ಕುಟುಂಬಕ್ಕೆ ಇದು ಬಹಳ ಅರ್ಥಗರ್ಭಿತವಾಗಿದೆ,’ ಎಂದು ಆಕೆ ಬರೆದಿದ್ದಾರೆ.

ತಂದೆ-ಮಗನ ಈ ಹೃದಯಸ್ಪರ್ಶಿ ಪೋಸ್ಟ್ ನೊಡಿದವರೆಲ್ಲರನ್ನು ಭಾವುಕರನ್ನಾಗಿಸುತ್ತಿದೆ!
ಡಕೋಟಾ ಮತ್ತವನ ತಂದೆ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 10, 2022 | 8:00 AM

ಇದೊಂದು ಹೃದಯಸ್ಪರ್ಶಿ ಮತ್ತು ನಿಮ್ಮ ಕಣ್ಣುಗಳನ್ನು ತೇವಗೊಳಿವ ಇನ್ಸ್ ಟಾಗ್ರಾಮ್ ಪೋಸ್ಟ್ (Instagram post) ಮಾರಾಯ್ರೇ. ಈ ವಿಡಿಯೋ ಸಾವಿರಾರು ಜನರನ್ನು ಮನಸೂರೆಗೊಂಡಿದೆ ಮತ್ತು ಭಾವುಕರನ್ನಾಗಿಸಿದೆ. ನಿಮ್ಮ ಮೇಲೂ ಅದು ಅಂಥದ್ದೇ ಪರಿಣಾಮ ಬೀರುವ ಖಾತ್ರಿ ಅಂತೂ ನಮಗಿದೆ. ಕಾಲಿನ್ ಬಾರ್ನ್ ಟ್ರೀ (Collin born Tree) ಹೆಸರಿನ ಮಹಿಳೆಯೊಬ್ಬರು ಇದನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಜೊತೆಗೆ ಅವರು ಹೇಗೆ ಒಬ್ಬ ತಂದೆ ತನ್ನ ಮಗನ ಐದನೇ ಗ್ರೇಡ್ ಗ್ರಾಚ್ಯುಯೇಶನ್ ಡೇಗೆ (Graduation Day) ನೂರಾರು ಮೈಲಿ ದೂರದಿಂದ ಬಂದರು ಮತ್ತು ಅವರನ್ನು ನೋಡಿದಾಗ ಬಾಲಕನ ರಿಯಾಕ್ಷನ್ ಹೇಗಿತ್ತು ಅನ್ನೋದನ್ನು ವಿವರಿಸಿದ್ದಾರೆ.

‘ಪ್ರತಿಯೊಬ್ಬ ಬಾಲಕನಿಗೆ ಅವನ ಡ್ಯಾಡ್​ನ ಅವಶ್ಯಕತೆಯಿರುತ್ತದೆ. ನಮ್ಮ ಚೊಚ್ಚಲು ಮಗ ಡಕೋಟಾ 5ನೇ ಗ್ರೇಡ್ ನಲ್ಲಿ ತೇರ್ಗಡೆ ಹೊಂದಿದ್ದಾನೆ. ಅವನ ಪ್ರತಿ ಗೆಲುವನ್ನು ನಾವು ಸೆಲಿಬ್ರೇಟ್ ಮಾಡುತ್ತೇವೆ. ಪ್ರೊಗ್ರೆಸ್ ಕಾರ್ಡ್ ನೀಡುವಾಗ ಅವನು ಅದೆಷ್ಟು ಅಭಿಮಾನ ಮತ್ತು ಹೆಮ್ಮೆಯಿಂದ ಸ್ಟೇಜ್ ಹತ್ತುತ್ತಾನೆ ಅಂತ ನೋಡಿ. ಅದೂ ಕೂಡ ಡ್ಯಾಡ್ ಅವನ ಕಣ್ಣಿಗೆ ಬೀಳುವ ಮುಂಚೆ! ಕೋವಿಡ್ ನಮ್ಮಲ್ಲೆರ ಬದುಕುಗಳನ್ನೇ ಹಾಳು ಮಾಡಿಬಿಟ್ಟಿದೆ, ಅದರೆ ನಮ್ಮ ಮಗ ವಿಜಯಶಾಲಿಯಾಗಿದ್ದಾನೆ. ಕಾರ್ಗತ್ತಲೆಯಲ್ಲಿ ಅವನು ನಮ್ಮ ಆಶಾಕಿರಣವಾಗಿದ್ದಾನೆ,’ ಅಂತ ಆಕೆ ಬರೆದಿದ್ದಾರೆ.

View this post on Instagram

A post shared by Calibornbree (@calibornbree)

ಮುಂದಿನ ಕೆಲ ಸಾಲುಗಳಲ್ಲಿ ಆಕೆ, ‘ಇವತ್ತು ಡಕೋಟಾನ ತಂದೆ ತನ್ನ ಮಗನ ಗ್ರ್ಯಾಚುಯೇಷನ್ ಸಂದರ್ಭದಲ್ಲಿ ಹಾಜರಿರಲು ವೇಕ್ರಾಸ್ ಗಾ ನಿಂದ ಸ್ಟ್ರೀಮ್ ಬೋಟ್ ಸ್ಪ್ರಿಂಗ್ಸ್ ಗೆ ಕಾರು ಓಡಿಸಿಕೊಂಡು ಬಂದರು! ಡಕೋಟಾ ಮುಖದಲ್ಲಿ ಸಂಭ್ರಮಾಶ್ವರ್ಯ ನೋಡುವಂತಿತ್ತು. ಡ್ಯಾಡ್ ಬರುವ ವಿಷಯ ಅವನಿಂದ ಮುಚ್ಚಿಟ್ಟಿದ್ದೆ. ಸರಿಯಾದ ಸಮಯಕ್ಕೆ ಬಂದೇ ಬರ್ತೀನಿ ಅಂತ ಅವನ ಡ್ಯಾಡ್ ನನಗೆ ಹೇಳಿದ್ದರು ಮತ್ತು ಅವರು ತಮ್ಮ ಮಾತು ಉಳಿಸಿಕೊಂಡರು. ಸಹ-ಪೋಷಕತ್ವ ಯಾವತ್ತಿಗೂ ಯಶ ಕಾಣುತ್ತದೆ,’ ಅಂತ ಬರೆದಿದ್ದಾರೆ.

ತಮ್ಮ ಮಕ್ಕಳು ಮತ್ತು ಪತಿಯ ಬಗ್ಗೆ ಅವರು ಬಹಳ ಅಭಿಮಾನದಿಂದ ಮತ್ತಷ್ಟು ಬರೆದ್ದಿದ್ದಾರೆ. ‘ಅವನಿಗೆ ತನ್ನ ತಂದೆಯಂತೆ ಮರ ಹತ್ತುವುದೆಂದರೆ ಎಲ್ಲಿಲ್ಲದ ಖುಷಿ. ಹಾಗಾಗೇ ಅವನನ್ನು ನಾನು ಟಾರ್ಜಾನ್ ಅಂತ ಕರೆಯುತ್ತೇನೆ. ಪ್ರತಿವರ್ಷ ಶಾಲೆ ಪುನರಾರಂಭಗೊಂಡಾಗ ಟಾರ್ಜಾನ್ ಮತ್ತು ಈ ಹಾಡನ್ನು ನಾನು ತಪ್ಪದೆ ಪ್ಲೇ ಮಾಡುತ್ತೇನೆ. ನಮ್ಮ ಚಿಕ್ಕ ಕುಟುಂಬಕ್ಕೆ ಇದು ಬಹಳ ಅರ್ಥಗರ್ಭಿತವಾಗಿದೆ,’ ಎಂದು ಆಕೆ ಬರೆದಿದ್ದಾರೆ.

ಈ ಇನ್ಸ್ಸ್ಟಾಗ್ರಾಮ ಪೋಸ್ಟ್ ವೈರಲ್ ಅಗಿದೆ ಮಾರಾಯ್ರೇ. ನೋಡಿವರೆಲ್ಲ ತಂದೆ-ಮಗನ ಪ್ರೀತಿ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ.

‘ಅವನು ತನ್ನ ಡ್ಯಾಡಿ ಅಪ್ಪುವುದು ನೋಡಿ ಆನಂದಭಾಷ್ಪ ಉಕ್ಕಿ ಬಂತು, ಅದ್ಭುತವಾದ ಪೇರೆಂಟ್ಸ್, ಪುಟಾಣಿ ಕಂದನಿಗೆ ಅಭಿನಂದನೆಗಳು,’ ಅಂತ ಒಬ್ಬರು ಕಾಮೆಂಟ್ ಮಾಡಿದರೆ; ‘ಅಭಿನಂದನೆಗಳು, ಇದು ಕಣ್ಣಲ್ಲಿ ನೀರು ತರಿಸುವ ವಿಡಿಯೋ, ಸೋ ಸ್ವೀಟ್,’ ಅಂತ ಮತ್ತೊಬ್ಬರು ಹೇಳಿದ್ದಾರೆ.

ಮೂರನೇಯವರು, ‘ನಿಮ್ಮ ಮಗ ಬಹಳ ಮುದ್ದಾಗಿದ್ದಾನೆ, ಈ ಸುಂದರ ಕ್ಷಣಗಳನ್ನು ಶೇರ್ ಮಾಡಿದ್ದಕ್ಕೆ ಧನ್ಯವಾದಗಳು,’ ಎಂದಿದ್ದಾರೆ.

ಮತ್ತೊಬ್ಬರು, ‘ಈ ವಿಡಿಯೋ ಅದೆಷ್ಟು ಸುಮಧರವಾಗಿದೆ ಅಂತ ನನಗೆ ಹೇಳಲಾಗುತ್ತಿಲ್ಲ,’ ಎಂದು ಹೇಳಿದ್ದಾರೆ.

ಅಂದಹಾಗೆ ನಿಮಗೇನು ಅನಿಸುತ್ತೆ ಮಾರಾಯ್ರೇ?

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ