Bullet Train: ಸೂರತ್- ಬಿಲಿಮೋರಾ ಮಧ್ಯೆ ಭಾರತದ ಮೊದಲ ಬುಲೆಟ್ ರೈಲು ಓಡಿಸುವ ಗುರಿ ಎಂದ ರೈಲ್ವೆ ಸಚಿವ
ಭಾರತದ ಮೊದಲ ಬುಲೆಟ್ ರೈಲು ಸೂರತ್- ಬಿಲಿಮೋರಾ ಮಧ್ಯೆ ಸಂಚರಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
15,000 ಕೋಟಿ ವೆಚ್ಚದ ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ (ಜೂನ್ 6) ಘೋಷಿಸಿದ್ದಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ ವೇಳೆ ಸಿಎಂ ಈ ಘೋಷಣೆ ಮಾಡಿದ್ದಾರೆ. ಗುಜರಾತಿನ ಸೂರತ್ ಮತ್ತು ಬಿಲಿಮೋರಾ ಮಧ್ಯೆ ಭಾರತದ ಮೊದಲ ಬುಲೆಟ್ ರೈಲು (Bullet Train) ಓಡಿಸುವ ಗುರಿಯನ್ನು ಹೊಂದಿದ್ದು, ಈ ದಿಕ್ಕಿನಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ (ಜೂನ್ 6) ಹೇಳಿದ್ದಾರೆ. “ಅಹಮದಾಬಾದ್ ಮತ್ತು ಮುಂಬೈ ಮಧ್ಯದ ಬುಲೆಟ್ ರೈಲಿನ ಮೂಲಸೌಕರ್ಯ ನಿರ್ಮಾಣದಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ ಮತ್ತು ಹೆಚ್ಚಿನ ವೇಗದಲ್ಲಿ ಕೆಲಸ ಮಾಡಲಾಗುತ್ತಿದೆ” ಎಂದು ವೈಷ್ಣವ್ ಫ್ರೀ ಪ್ರೆಸ್ ಜರ್ನಲ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸೂರತ್‌ನಲ್ಲಿ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದ ನಂತರ ರೈಲ್ವೆ ಸಚಿವರು ಈ ವಿಷಯ ತಿಳಿಸಿದ್ದಾರೆ.
“ನಾವು 2026ರಲ್ಲಿ ಸೂರತ್ ಮತ್ತು ಬಿಲಿಮೊರಾ ಮಧ್ಯೆ ಮೊದಲ ಬುಲೆಟ್ ರೈಲು ಓಡಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಪ್ರಗತಿಯು ತುಂಬಾ ಉತ್ತಮವಾಗಿದೆ ಮತ್ತು ಆ ಹೊತ್ತಿಗೆ ರೈಲನ್ನು ಓಡಿಸುವ ವಿಶ್ವಾಸವಿದೆ,” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ, ಈ ಬಗ್ಗೆ ದಿ ಟ್ರಿಬ್ಯೂನ್ ವರದಿ ಮಾಡಿದೆ. ಬಿಲಿಮೋರಾ ದಕ್ಷಿಣ ಗುಜರಾತ್‌ನ ನವಸಾರಿ ಜಿಲ್ಲೆಯ ಒಂದು ಪಟ್ಟಣವಾಗಿದೆ ಮತ್ತು ಇದು ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಮಾರ್ಗದಲ್ಲಿರುವ 12 ನಿಲ್ದಾಣಗಳಲ್ಲಿ ಒಂದಾಗಿದೆ. ಬುಲೆಟ್ ರೈಲು ಹಳಿಗಾಗಿ 61 ಕಿ.ಮೀ ಉದ್ದದ ಸ್ತಂಭಗಳನ್ನು ಹಾಕಲಾಗಿದ್ದು, ಮಾರ್ಗದ ಸುಮಾರು 150 ಕಿ.ಮೀ. ಉದ್ದದಲ್ಲಿ ಏಕಕಾಲದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಸೂರತ್ ಬುಲೆಟ್ ರೈಲು ನಿಲ್ದಾಣದ ಕಾಮಗಾರಿ 2024ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ. ಸೂರತ್ ಹೊರತುಪಡಿಸಿ, ಇನ್ನೂ ಮೂರು ನಿಲ್ದಾಣಗಳ ಕೆಲಸ – ವಾಪಿ, ಬಿಲಿಮೋರಾ ಮತ್ತು ಭರೂಚ್ – ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ ಮತ್ತು 2024ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಪ್ರತಿ ತಿಂಗಳು ಸುಮಾರು 300 ಸ್ತಂಭಗಳನ್ನು, ಸುಮಾರು 12 ಕಿ.ಮೀ.ಗೆ ನಿರ್ಮಿಸಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇಶದಲ್ಲಿ 2ನೇ ಬುಲೆಟ್ ಟ್ರೇನ್ ನಿರ್ಮಾಣ, ಬೆಂಗಳೂರು-ಮೈಸೂರು ನಡುವೆಯೂ ಬುಲೆಟ್!
Published On - 3:47 pm, Tue, 7 June 22