ಈ ಸ್ಕೂಟರ್ ಅನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದ್ರೆ 65 ಕಿ.ಮೀ (ಬೇಸಿಕ್ ಮಾಡೆಲ್) ಚಲಿಸಬಹುದು. ಹಾಗೆಯೇ ಸೆಕೆಂಡರಿ ಬ್ಯಾಟರಿ ಪ್ಯಾಕ್ ಬಳಸಿ 130 ಕಿಮೀ ವರೆಗೆ ಕ್ರಮಿಸಬಹುದಾಗಿದೆ. ಚೀನಾದಲ್ಲಿ ಇದರ ಆರಂಭಿಕ ಬೆಲೆ CNY 7,499. ಅಂದರೆ ಭಾರತದ ರೂಪಾಯಿ ಮೌಲ್ಯ ಸುಮಾರು 85,342 ರೂ. ಇನ್ನು ಸ್ಟ್ಯಾಂಡರ್ಡ್ ಮಾಡೆಲ್ 1.2kW ಬೆಲೆ CNY 7,999. ಭಾರತದ ಮೌಲ್ಯ ಸುಮಾರು ರೂ. 91,501 ರೂ ಆಗಿರಲಿದೆ. ಹೀಗಾಗಿ ಇದೇ ಬೆಲೆಯ ಅಸುಪಾಸಿನಲ್ಲಿ ಭಾರತದಲ್ಲೂ ಹೋಂಡಾ ಯು-ಗೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುವ ಸಾಧ್ಯತೆಯಿದೆ.