Ranji Trophy: ಮೊದಲ ದಿನವೇ ಸುಸ್ತಾದ ಗಿಲ್, ಮಯಾಂಕ್, ಪೃಥ್ವಿ, ಜೈಸ್ವಾಲ್; ಸಂಕಷ್ಟಕ್ಕೆ ಸಿಲುಕಿದ ತಂಡಗಳು

Ranji Trophy: ಭಾನುವಾರದಿಂದ ರಣಜಿ ಟ್ರೋಫಿಯ ನಾಕ್ ಔಟ್ ಸುತ್ತು ಆರಂಭವಾಗಿದೆ. ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಎಂಟು ತಂಡಗಳು ಮುಖಾಮುಖಿಯಾಗುತ್ತಿವೆ.

ಪೃಥ್ವಿಶಂಕರ
|

Updated on:Jun 06, 2022 | 4:54 PM

ಭಾನುವಾರದಿಂದ ರಣಜಿ ಟ್ರೋಫಿಯ ನಾಕ್ ಔಟ್ ಸುತ್ತು ಆರಂಭವಾಗಿದೆ. ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಎಂಟು ತಂಡಗಳು ಮುಖಾಮುಖಿಯಾಗುತ್ತಿವೆ. ಟೀಂ ಇಂಡಿಯಾದಲ್ಲಿ ಆಡಿದ ಅಥವಾ ಟೀಂ ಇಂಡಿಯಾದಲ್ಲಿ ತೊಡಗಿಸಿಕೊಂಡಿರುವ ಆಟಗಾರರು ಈ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಐಪಿಎಲ್-2022ರಲ್ಲಿ ಕೆಲವು ಆಟಗಾರರು ಭಾಗವಹಿಸುತ್ತಿದ್ದಾರೆ. ಆದರೆ ರಣಜಿ ಟ್ರೋಫಿಯಲ್ಲಿ ಈ ದಿಗ್ಗಜರು ಮೊದಲ ದಿನವೇ ವಿಫಲರಾಗಿದ್ದಾರೆ.

1 / 5
ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಶುಭ್‌ಮಾನ್ ಗಿಲ್ ಆಯ್ಕೆಯಾಗಿದ್ದಾರೆ. ಗಿಲ್ ಐಪಿಎಲ್-2022ರಲ್ಲಿ ವಿಜೇತರಾದ ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದರು. ರಣಜಿ ಟ್ರೋಫಿಯಲ್ಲಿ ಅವರು ಮಧ್ಯಪ್ರದೇಶವನ್ನು ಎದುರಿಸುತ್ತಿರುವ ಪಂಜಾಬ್ ಪರ ಆಡುತ್ತಿದ್ದಾರೆ. ಗಿಲ್ ಇಲ್ಲಿ ಅದ್ಭುತ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಕೇವಲ ಒಂಬತ್ತು ರನ್ ಗಳಿಸಿ ಬೌಲ್ಡ್ ಆದರು.

2 / 5
Ranji Trophy: ಮೊದಲ ದಿನವೇ ಸುಸ್ತಾದ ಗಿಲ್, ಮಯಾಂಕ್, ಪೃಥ್ವಿ, ಜೈಸ್ವಾಲ್; ಸಂಕಷ್ಟಕ್ಕೆ ಸಿಲುಕಿದ ತಂಡಗಳು

ಪೃಥ್ವಿ ಶಾ ಒಂದು ಕಾಲದಲ್ಲಿ ಭಾರತದ ಟೆಸ್ಟ್ ತಂಡದ ಭಾಗವಾಗಿದ್ದರು ಆದರೆ ಈಗ ಅವರು ತಂಡದಿಂದ ಔಟ್ ಆಗಿದ್ದಾರೆ. ಈಗ ರಣಜಿ ಟ್ರೋಫಿಯಲ್ಲಿ ಪೃಥ್ವಿ ಮುಂಬೈ ತಂಡದ ನಾಯಕತ್ವವಹಿಸಿದ್ದಾರೆ. ಮುಂಬೈ ಈ ಪಂದ್ಯದಲ್ಲಿ ಉತ್ತರಾಖಂಡವನ್ನು ಎದುರಿಸುತ್ತಿದ್ದು, ಶಾ ಕೂಡ ಅದ್ಭುತ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಕೇವಲ 21 ರನ್‌ಗಳಿಗೆ ಬೌಲ್ಡ್ ಆದರು. ಒಟ್ಟು ಸ್ಕೋರ್ 36 ರಲ್ಲಿ ಅವರ ವಿಕೆಟ್ ಪತನವಾಯಿತು. ಅವರನ್ನು ದೀಪಕ್ ಧಾಪೋಲ್ ಔಟ್ ಮಾಡಿದರು.

3 / 5
Ranji Trophy: ಮೊದಲ ದಿನವೇ ಸುಸ್ತಾದ ಗಿಲ್, ಮಯಾಂಕ್, ಪೃಥ್ವಿ, ಜೈಸ್ವಾಲ್; ಸಂಕಷ್ಟಕ್ಕೆ ಸಿಲುಕಿದ ತಂಡಗಳು

ಶಾ ಅವರಂತೆ ಮಯಾಂಕ್ ಅಗರ್ವಾಲ್ ಕೂಡ ಟೀಮ್ ಇಂಡಿಯಾದ ಪ್ರಮುಖ ಭಾಗವಾಗಿದ್ದರು. ಮಯಾಂಕ್ ಇತ್ತೀಚೆಗೆ ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ನಾಯಕತ್ವ ವಹಿಸಿದ್ದರು ಆದರೆ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಎರಡೂ ವಿಫಲವಾದವು. ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶವನ್ನು ಎದುರಿಸುತ್ತಿರುವ ಕರ್ನಾಟಕದ ಪರ ಆಡುತ್ತಿದ್ದಾರೆ. 41 ಎಸೆತಗಳನ್ನು ಎದುರಿಸಿದ ಮಯಾಂಕ್ 10 ರನ್ ಗಳಿಸಿ ಔಟಾದರು. ಮಯಾಂಕ್ ಅವರನ್ನು ಶಿವಂ ಮಾವಿ ಪೆವಿಲಿಯನ್​ಗೆ ಕಳುಹಿಸಿದರು.

4 / 5
Ranji Trophy: ಮೊದಲ ದಿನವೇ ಸುಸ್ತಾದ ಗಿಲ್, ಮಯಾಂಕ್, ಪೃಥ್ವಿ, ಜೈಸ್ವಾಲ್; ಸಂಕಷ್ಟಕ್ಕೆ ಸಿಲುಕಿದ ತಂಡಗಳು

ಶಾ ಅವರ ಸಹ ಆಟಗಾರ ಮತ್ತು ಐಪಿಎಲ್-2022 ರ ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ನ ಭಾಗವಾಗಿದ್ದ ಯಶಸ್ವಿ ಜೈಸ್ವಾಲ್ ಕೂಡ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಯಶಸ್ವಿ ಉತ್ತಮವಾಗಿ ಪ್ರಾರಂಭಿಸಿದರು ಆದರೆ ಅವರ ಇನ್ನಿಂಗ್ಸ್ 35 ರನ್‌ಗಳಲ್ಲಿ ಕೊನೆಗೊಂಡಿತು. ದೀಪಕ್ ಅವರ ವಿಕೆಟ್ ಕೂಡ ಪಡೆದರು. ಅವರ ಇನ್ನಿಂಗ್ಸ್‌ನಲ್ಲಿ ಅವರು 45 ಎಸೆತಗಳನ್ನು ಎದುರಿಸಿ, ಆರು ಬೌಂಡರಿಗಳನ್ನು ಬಾರಿಸಿದರು.

5 / 5

Published On - 4:47 pm, Mon, 6 June 22

Follow us
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್