Kiccha Sudeep: ಜೋಸ್ ಬಟ್ಲರ್​ನಿಂದ ಸುದೀಪ್​ಗೆ ಬಂತು ಸರ್​​ಪ್ರೈಸ್ ಗಿಫ್ಟ್: ಥ್ರಿಲ್ ಆದ ಕಿಚ್ಚ

Jos Buttler Gift To Kiccha Sudeep: ಐಪಿಎಲ್ 2022 ರಲ್ಲಿ ತಾವು ಆಡಿದ್ದ ಬ್ಯಾಟ್ ಅನ್ನು ಸುದೀಪ್​​ಗೆ ಬಟ್ಲರ್ ಉಡುಗೊರೆಯಾಗಿ ನೀಡಿದ್ದು, ಅವರ ಸಹಿ ಕೂಡ ಅದರಲ್ಲಿದೆ. ಕಿಚ್ಚ ಸುದೀಪ್ ಈ ಕುರಿತಾಗಿ ಟ್ವಿಟರ್​​ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ.

Kiccha Sudeep: ಜೋಸ್ ಬಟ್ಲರ್​ನಿಂದ ಸುದೀಪ್​ಗೆ ಬಂತು ಸರ್​​ಪ್ರೈಸ್ ಗಿಫ್ಟ್: ಥ್ರಿಲ್ ಆದ ಕಿಚ್ಚ
Kiccha Sudeep and Jos Buttler
Follow us
TV9 Web
| Updated By: Vinay Bhat

Updated on:Jun 11, 2022 | 1:01 PM

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ (IPL 2022) ಅತಿ ಹೆಚ್ಚು ರನ್ ಕಲೆಹಾಕಿ ಆರೆಂಜ್ ಕ್ಯಾಪ್ ತೊಟ್ಟ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟರ್ ಜೋಸ್ ಬಟ್ಲರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ಗೆ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬಾರಿಯ ಐಪಿಎಲ್​​ನಲ್ಲಿ ಆರ್ ಆರ್ ತಂಡ ಫೈನಲ್​ಗೇರಲು ಪ್ರಮುಖ ಕಾರಣವಾಗಿದ್ದು ಬಟ್ಲರ್ (Jos Buttler). ಪ್ರತಿ ಪಂದ್ಯದಲ್ಲಿ ತಂಡಕ್ಕೆ ಆಧಾರವಾಗಿ ನಿಂತು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಇದೀಗ ಐಪಿಎಲ್ 2022 ರಲ್ಲಿ ತಾವು ಆಡಿದ್ದ ಬ್ಯಾಟ್ ಅನ್ನು ಸುದೀಪ್​​ಗೆ ಬಟ್ಲರ್ ಉಡುಗೊರೆಯಾಗಿ ನೀಡಿದ್ದು, ಅವರ ಸಹಿ ಕೂಡ ಅದರಲ್ಲಿದೆ. ಕಿಚ್ಚ ಸುದೀಪ್ (Kiccha Sudeep) ಈ ಕುರಿತಾಗಿ ಟ್ವಿಟರ್​​ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ.

ಬಟ್ಲರ್‌ ನೀಡಿದ ಬ್ಯಾಟ್‌ ಅನ್ನು ಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಪೋಸ್ಟ್‌ ಮಾಡಿರುವ ಸುದೀಪ್, “ಇದು ನನಗೆ ಬಹುದೊಡ್ಡ ಅಚ್ಚರಿಯ ಉಡುಗೊರೆ. ಇದನ್ನು ನಾನು ಖಂಡಿತಾ ನಿರೀಕ್ಷೆ ಮಾಡಿರಲಿಲ್ಲ. ಮೊದಲಿಗೆ ರಾಜಸ್ಥಾನ್‌ ರಾಯಲ್ಸ್‌ ಮತ್ತು ನನ್ನ ಪ್ರೀತಿಯ ಮಿತ್ರ ಕಾರಿಯಪ್ಪ ಅವರಿಗೆ ಧನ್ಯವಾದ ಹೇಳುತ್ತೇನೆ. ಅವರಿಂದಲೇ ಇದು ಸಾಧ್ಯವಾಗಿರುವುದು,” ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
LPL 2022: ಆರ್ಥಿಕ ಬಿಕ್ಕಟ್ಟಿನ ನಡುವೆ ಲಂಕಾ ಪ್ರೀಮಿಯರ್ ಲೀಗ್ ಘೋಷಣೆ: ಜುಲೈ 31 ರಿಂದ ಆರಂಭ
Image
IND vs SA: ಒಂದೇ ವಿಮಾನದಲ್ಲಿ ಕಟಕ್​ಗೆ ಬಂದ ಭಾರತ-ದಕ್ಷಿಣ ಆಫ್ರಿಕಾ ಆಟಗಾರರು: ವೈರಲ್ ವಿಡಿಯೋ ನೋಡಿ
Image
ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸಾಂಡರ್ ಎಲ್ಲಿಸ್ ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಅನಿಲ್ ಕುಂಬ್ಳೆ ನೀಡಿದ ಉತ್ತರಗಳಿವು
Image
IND vs SA: ಪಂತ್​ಗೆ ಬೌಲರ್​ಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಗೊತ್ತಿಲ್ಲ; ಐಪಿಎಲ್ ಚಾಂಪಿಯನ್ ಕೋಚ್

ಮಾತು ಮುಂದುವರೆಸಿದ ಅವರು, “ಈ ವಿಡಿಯೋ ಮೂಲಕ ಜೋಸ್‌ ಬಟ್ಲರ್‌ ಅವರಿಗೂ ಧನ್ಯವಾದ ಹೇಳುತ್ತೇನೆ. ಖುದ್ದಾಗಿ ನಿಮ್ಮ ಹಸ್ತಾಕ್ಷರ ನೀಡಿ ಈ ಬ್ಯಾಟ್‌ ನನಗೆ ಕಲುಹಿಸಿರುವುದಕ್ಕೆ ಧನ್ಯವಾದ. ತುಂಬಾ ಸಂತಸವಾಗಿದೆ. ಈ ವರ್ಷ ನಿಮಗೆ ಸಿಕ್ಕ ಅದ್ಭುತ ಯಶಸ್ಸಿಗೆ ಶುಭಾಶಯಗಳು. ಈ ಬ್ಯಾಟನ್ನು ಅತ್ಯಂತ ಬೆಲೆ ಬಾಳುವ ವಸ್ತುವಿನಂತೆ ಕಾಪಾಡಿಕೊಳ್ಳುತ್ತೇನೆ. ಥ್ಯಾಂಕ್ಯೂ..,” ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

PAK vs WI: ಕೀಪರ್ ಗ್ಲೌಸ್ ತೊಟ್ಟು ಫೀಲ್ಡಿಂಗ್: ಪಾಕ್ ಆಟಗಾರರಿಗೆ ಕ್ರಿಕೆಟ್ ನಿಯಮವೇ ಗೊತ್ತಿಲ್ವಾ?: ಬಿತ್ತು ಭಾರೀ ದಂಡ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ್ ರಾಯಲ್ಸ್ ತಂಡವು, ಸುದೀಪ್ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಿದ ಪೋಟೋವೊಂದನ್ನು ಟ್ವಿಟರ್​ ನಲ್ಲಿ ಹಂಚಿಕೊಂಡಿದ್ದಾರೆ. ಸುದೀಪ್ ಪಾಲಿಗೆ ಕ್ರಿಕೆಟ್ ಅಚ್ಚುಮೆಚ್ಚು, ಕ್ರಿಕೆಟ್​ನ ಜೊತೆ ಉತ್ತಮ ನಂಟು ಕೂಡ ಕೂಡ ಹೊಂದಿರುವ ಸುದೀಪ್ ಸಮಯ ಸಿಕ್ಕಾಗಲೆಲ್ಲಾ ಸ್ನೇಹಿತರ ಜೊತೆ ಆಡುತ್ತಿರುತ್ತಾರೆ. ಅಲ್ಲದೇ ಸಿಸಿಎಲ್, ಕೆಪಿಎಲ್ ಟೂರ್ನಿಗಳಲ್ಲಿ ಕರ್ನಾಟಕ ಬುಲ್ಡೋಜರ್ ತಂಡವನ್ನು ಮುನ್ನಡೆಸಿದ್ದಾರೆ.

ವಿಕ್ರಾಂತ್ ರೋಣ ರಿಲೀಸ್​ಗೆ ರೆಡಿ:

ಸುದೀಪ್ ಅವರ ಮುಂದಿನ ಚಿತ್ರ ವಿಕ್ರಾಂತ್ ರೋಣ ಬಿಡುಗಡೆಯ ಹಂತದಲ್ಲಿದೆ.ಇತ್ತೀಚಿಗೆ ಬಿಡುಗಡೆಯಾಗಿದ್ದ ಈ ಸಿನಿಮಾದ ಲಿರಿಕಲ್ ಹಾಡು ಗಡಂಗ್ ರಕ್ಕಮ್ಮಾ ದೇಶಾದ್ಯಂತ ಟ್ರೆಂಡ್ ಮಾಡುವ ಮೂಲಕ ಸದ್ದು ಮಾಡಿತ್ತು. ಇದಕ್ಕಾಗಿ ಚಿತ್ರರಂಗದ ಹಲವಾರು ನಟ ನಟಿಯರು ಹುಕ್ ಸ್ಟೆಪ್ ಮಾಡುವ ಮೂಲಕ ಚಿತ್ರದ ಮೇಲಿನ ಕ್ರೇಜ್ ಅನ್ನು ಹೆಚ್ಚುವಂತೆ ಮಾಡಿದ್ದರು. ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ, ತೆಲುಗಿನಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ಜೊತೆಗೆ ಅರೇಬಿಕ್, ಜರ್ಮನ್, ರಷ್ಯನ್, ಮ್ಯಾಂಡರಿನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:01 pm, Sat, 11 June 22

ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ