IND vs SA: ಒಂದೇ ವಿಮಾನದಲ್ಲಿ ಕಟಕ್​ಗೆ ಬಂದ ಭಾರತ-ದಕ್ಷಿಣ ಆಫ್ರಿಕಾ ಆಟಗಾರರು: ವೈರಲ್ ವಿಡಿಯೋ ನೋಡಿ

India vs South Africa: ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟಿ20 ಕದನಕ್ಕೆ ಸಜ್ಜಾಗುತ್ತಿದೆ. ಇದಕ್ಕಾಗಿ ರಿಷಭ್ ಪಂತ್ ಪಡೆ ಈಗಾಗಲೇ ಒಡಿಶಾದ ಸುಂದರ ನಗರಿ ಕಟಕ್‌ಗೆ ಆಗಮಿಸಿದೆ.

IND vs SA: ಒಂದೇ ವಿಮಾನದಲ್ಲಿ ಕಟಕ್​ಗೆ ಬಂದ ಭಾರತ-ದಕ್ಷಿಣ ಆಫ್ರಿಕಾ ಆಟಗಾರರು: ವೈರಲ್ ವಿಡಿಯೋ ನೋಡಿ
IND vs SA 2nd T20I
Follow us
TV9 Web
| Updated By: Vinay Bhat

Updated on:Jun 11, 2022 | 7:41 AM

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಿದರೂ ಗೆಲುವು ಕಾಣುವಲ್ಲಿ ವಿಫಲವಾದ ಟೀಮ್ ಇಂಡಿಯಾ (Team India) ಇದೀಗ ದ್ವಿತೀಯ ಟಿ20 ಕದನಕ್ಕೆ ಸಜ್ಜಾಗುತ್ತಿದೆ. ಇದಕ್ಕಾಗಿ ರಿಷಭ್ ಪಂತ್ (Rishabh Pant) ಪಡೆ ಈಗಾಗಲೇ ಒಡಿಶಾದ ಸುಂದರ ನಗರಿ ಕಟಕ್‌ಗೆ ಆಗಮಿಸಿದೆ. ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಒಡಿಶಾದ ಕಟಕ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತ ತಂಡದ ಆಟಗಾರರು ನೇರವಾಗಿ ಹೋಟೆಲ್‌ಗೆ ತೆರಳಿದ್ದು, ಹೋಟೆಲ್‌ ಸಿಬ್ಬಂದಿ ಭರ್ಜರಿ ಸ್ವಾಗತ ಕೋರಿದ್ದಾರೆ. ವಿಶೇಷ ಎಂದರೆ ಟೀಮ್ ಇಂಡಿಯಾ ಜೊತೆಗೆಯೇ ದಕ್ಷಿಣ ಆಫ್ರಿಕಾ ಆಟಗಾರರು ಕೂಡ ಆಗಮನಿಸಿದರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ.

ಹೌದು, ಜೂನ್ 12 ರಂದು ನಡೆಯಲಿರುವ ಎರಡನೇ ಟಿ20 ಪಂದ್ಯಕ್ಕೆ ಒಂದೇ ವಿಮಾನದಲ್ಲಿ ಭಾರತ ಹಾಗೂ ಆಫ್ರಿಕಾ ಆಟಗಾರರು ಕಟಕ್‌ಗೆ ಬಂದಿಳಿದರು. ನಂತರ ಅಲ್ಲಿಂದ ಬೇರೆ ಬೇರೆ ಬಸ್ ಮೂಲಕ ಹೋಟೆಲ್​ಗೆ ಬಂದಿದ್ದಾರೆ. ಐಪಿಎಲ್ 2022ರ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಒಟ್ಟಾಗಿ ಆಡಿದ ಹಾರ್ದಿಕ್ ಪಾಂಡ್ಯ ಮತ್ತು ಡೇವಿಡ್ ಮಿಲ್ಲರ್ ಒಟ್ಟಾಗಿ ಆಗಮಿಸುತ್ತಿರುವ, ಮತ್ತು ಮಾತನಾಡುತ್ತಿರುವ ದೃಶ್ಯಗಳು ಇದರಲ್ಲಿದೆ. ಅಲ್ಲದೆ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್, ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಜೊತೆಗಿನ ಸಂಭಾಷಣೆ ಸೇರಿದಂತೆ ಉಭಯ ತಂಡಗಳ ಸ್ನೇಹ ಮತ್ತು ಕ್ರೀಡಾಸ್ಫೂರ್ತಿ ವಿಡಿಯೋದಲ್ಲಿ ಎದ್ದು ಕಾಣುವಂತಿತ್ತು.

ಇದನ್ನೂ ಓದಿ
Image
IND vs SA: ಪಂತ್​ಗೆ ಬೌಲರ್​ಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಗೊತ್ತಿಲ್ಲ; ಐಪಿಎಲ್ ಚಾಂಪಿಯನ್ ಕೋಚ್
Image
CWG 2022: ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಪದಕ ಗೆಲ್ಲುವ ಮೇರಿ ಕೋಮ್ ಕನಸು ಭಗ್ನ..!
Image
IND vs SA: ಆಗ ಕೊಹ್ಲಿ.. ಈಗ ಪಂತ್; ಸೋಲಿನಲ್ಲಿ ಕಾಕತಾಳೀಯ ಇರಬೇಕು.. ಆದರೆ ಇಷ್ಟೊಂದಾ?
Image
IPL Media Rights: ಮುಖೇಶ್ ಅಂಬಾನಿ ಬಾಯಿಗೆ ಬಿತ್ತು ಲಡ್ಡು! ಮಾಧ್ಯಮ ಹಕ್ಕು ಹರಾಜಿನಿಂದ ಅಮೆಜಾನ್ ಔಟ್?

ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸಾಂಡರ್ ಎಲ್ಲಿಸ್ ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಅನಿಲ್ ಕುಂಬ್ಳೆ ನೀಡಿದ ಉತ್ತರಗಳಿವು

ಕಟಕ್​​ನ ಭಾರಾಮತಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯುವ ಮುನ್ನ ಟೀಮ್​ ​ಇಂಡಿಯಾ ತನ್ನ ಬೌಲಿಂಗ್​​ ವಿಭಾಗದಲ್ಲಿ ಲಯ ಕಂಡುಕೊಳ್ಳಬೇಕಿದೆ. ಭುವನೇಶ್ವರ್​​ ಕುಮಾರ್​, ಹರ್ಷಲ್​​ ಪಟೇಲ್​​ ತಂಡದಲ್ಲಿ ಉಳಿಸಿಕೊಳ್ಳುವ ಪ್ಲಾನ್​​ ಮಾಡಿದರೆ ಔಟ್​​ ಅಂಡ್​​ ಔಟ್​​ ವೇಗಕ್ಕಾಗಿ ಆವೇಶ್​​ ಖಾನ್​​ ಬದಲಿಗೆ ಉಮ್ರನ್​​ ಮಲಿಕ್​​ರನ್ನು ಆಡಿಸಿಕೊಳ್ಳಬೇಕಿದೆ. ಹಾರ್ದಿಕ್​​ ಪಾಂಡ್ಯಾ ಬೌಲಿಂಗ್​​ ಶಕ್ತಿಯನ್ನು ಬಳಸಿಕೊಂಡರೆ ಉತ್ತಮ. ಅಂತೆಯೆ ಗೂಗ್ಲಿ ಸ್ಪೆಷಲಿಸ್ಟ್​​​ ರವಿ ಬಿಷ್ಣೋಯಿಗೆ ಸ್ಥಾನ ಕೊಡಬಹುದು. ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಅನುಮಾನ.

ಮೊದಲ ಟಿ20 ಪಂದ್ಯ ಏನಾಗಿತ್ತು?:

ಅರುಣ್ ಜೇಟ್ಲೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆರಂಭಿಕ ಇಶಾನ್ ಕಿಶನ್ (76 ರನ್, 48 ಎಸೆತ, 11 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 4 ವಿಕೆಟ್‌ಗೆ 211 ರನ್ ಪೇರಿಸಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ರಾಸಿ ವನ್ ಡರ್ ಡುಸೆನ್ (75*ರನ್, 46 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ಡೇವಿಡ್ ಮಿಲ್ಲರ್ (64*ರನ್, 31ಎಸೆತ, 4 ಬೌಂಡರಿ, 5 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ಎದುರು ಸಂಪೂರ್ಣ ಮಂಕಾದ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಶರಣಾಯಿತು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ ಸತತ 13ನೇ ಜಯದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ದೊಡ್ಡ ಆಘಾತ ಉಂಟಾಯಿತು.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:40 am, Sat, 11 June 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್