PAK vs WI: ಕೀಪರ್ ಗ್ಲೌಸ್ ತೊಟ್ಟು ಫೀಲ್ಡಿಂಗ್: ಪಾಕ್ ಆಟಗಾರರಿಗೆ ಕ್ರಿಕೆಟ್ ನಿಯಮವೇ ಗೊತ್ತಿಲ್ವಾ?: ಬಿತ್ತು ಭಾರೀ ದಂಡ

Babar Azam: ವೆಸ್ಟ್​ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲೂ ಪಾಕಿಸ್ತಾನ ತಂಡ 120 ರನ್​ಗಳ ಅಮೋಘ ಗೆಲುವು ಕಂಡಿದೆ. ಇದರ ನಡುವೆ ಈ ಪಂದ್ಯದಲ್ಲಿ ಅಚ್ಚರಿ ಘಟನೆಯೊಂದು ನಡೆಯಿತು. ಇದಕ್ಕೆ ಕಾರಣವಾಗಿದ್ದು ಪಾಕ್ ನಾಯಕ ಬಾಬರ್ ಅಜಾಮ್.

PAK vs WI: ಕೀಪರ್ ಗ್ಲೌಸ್ ತೊಟ್ಟು ಫೀಲ್ಡಿಂಗ್: ಪಾಕ್ ಆಟಗಾರರಿಗೆ ಕ್ರಿಕೆಟ್ ನಿಯಮವೇ ಗೊತ್ತಿಲ್ವಾ?: ಬಿತ್ತು ಭಾರೀ ದಂಡ
Babar Azam PAK vs WI ODI
Follow us
TV9 Web
| Updated By: Vinay Bhat

Updated on:Jun 11, 2022 | 9:51 AM

ಪಾಕಿಸ್ತಾನ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ (Pakistan vs West Indies) ವಿರುದ್ಧ ಏಕದಿನ ಸರಣಿಯನ್ನು ಆಡುತ್ತಿದೆ. ಮುಲ್ತಾನ್ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ್ದ ಪಾಕ್, ಇದೀಗ ದ್ವಿತೀಯ ಏಕದಿನ ಪಂದ್ಯದಲ್ಲೂ 120 ರನ್​ಗಳ ಅಮೋಘ ಗೆಲುವು ಕಂಡಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳಲ್ಲಿ 2-0 ಮುನ್ನಡೆ ಪಡೆದುಕೊಂಡು ಸರಣಿ ವಶಪಡಿಸಿಕೊಂಡಿದೆ. ನಾಯಕ ಬಾಬರ್ ಅಜಾಮ್ (Babar Azam) ಹಾಗೂ ಇಮಾಮ್ ಉಲ್ ಹಖ್ (Imam-ul-Haq) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ಸವಾಲಿನ ಮೊತ್ತ ಕಲೆಹಾಕಿತು. ಆದರೆ, ವೆಸ್ಟ್ ಇಂಡೀಸ್ ಮೊಹಮ್ಮದ್ ನವಾಜ್ ಹಾಗೂ ಮೊಹಮ್ಮದ್ ವಾಸೀಂ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 155 ರನ್​ಗೆ ಸರ್ವ ಪತನ ಕಂಡಿತು. ಇದರ ನಡುವೆ ಈ ಪಂದ್ಯದಲ್ಲಿ ಅಚ್ಚರಿ ಘಟನೆಯೊಂದು ನಡೆಯಿತು.

ಪಾಕಿಸ್ತಾನ ನೀಡಿದ 276 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಇದರ ನಡುವೆ 29ನೇ ಓವರ್​ನ ಮೊದಲ ಎಸೆತ ಹಾಕಿದಾಗ ಪಾಕ್ ನಾಯಕ ಬಾಬರ್ ಅಜಾಮ್ ಅವರು ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಅವರ ಕೀಪಿಂಗ್ ಗ್ಲೌಸ್​​ ತೊಟ್ಟು ಸ್ಟಂಪ್ ಹಿಂಬದಿ ನಿಂತಿದ್ದರು. ಇದು ಕ್ರಿಕೆಟ್ ನಿಯಮದ ವಿರುದ್ಧವಾಗಿದೆ.

ಇದನ್ನೂ ಓದಿ
Image
IND vs SA: ಒಂದೇ ವಿಮಾನದಲ್ಲಿ ಕಟಕ್​ಗೆ ಬಂದ ಭಾರತ-ದಕ್ಷಿಣ ಆಫ್ರಿಕಾ ಆಟಗಾರರು: ವೈರಲ್ ವಿಡಿಯೋ ನೋಡಿ
Image
ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸಾಂಡರ್ ಎಲ್ಲಿಸ್ ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಅನಿಲ್ ಕುಂಬ್ಳೆ ನೀಡಿದ ಉತ್ತರಗಳಿವು
Image
IND vs SA: ಪಂತ್​ಗೆ ಬೌಲರ್​ಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಗೊತ್ತಿಲ್ಲ; ಐಪಿಎಲ್ ಚಾಂಪಿಯನ್ ಕೋಚ್
Image
CWG 2022: ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಪದಕ ಗೆಲ್ಲುವ ಮೇರಿ ಕೋಮ್ ಕನಸು ಭಗ್ನ..!

ಕ್ರಿಕೆಟ್ ನಿಯಮ 28.1ರ ಪ್ರಕಾರ ಪಂದ್ಯದ ಮಧ್ಯೆ ವಿಕೆಟ್ ಕೀಪರ್ ಬಿಟ್ಟು ಇತರೆ ಯಾವುದೇ ಫೀಲ್ಡರ್​ಗಳು ಗ್ಲೌಸ್​ಗಳನ್ನು ತೊಡುವಂತಿಲ್ಲ. ನಿಯಮ ಉಲ್ಲಂಘಿಸಿದ್ದಕ್ಕಾಗಿ ವೆಸ್ಟ್​ ಇಂಡೀಸ್ ತಂಡಕ್ಕೆ 5 ಪೆನಾಲ್ಟಿ ರನ್ ನೀಡಲಾಯಿತು. ಸಾಕಷ್ಟು ಅನುಭವ ಇರುವ ನಾಯಕನೇ ಈರೀತಿ ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

LPL 2022: ಆರ್ಥಿಕ ಬಿಕ್ಕಟ್ಟಿನ ನಡುವೆ ಲಂಕಾ ಪ್ರೀಮಿಯರ್ ಲೀಗ್ ಘೋಷಣೆ: ಜುಲೈ 31 ರಿಂದ ಆರಂಭ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭದಲ್ಲಿ ಫಖರ್ ಜಮಾನ್ 17 ರನ್ ಗಳಿಸಿ ಔಟಾದ ನಂತರ ಬಾಬರ್ ಅಜಮ್ ಅವರು ಇಮಾಮ್-ಉಲ್-ಹಕ್ ಜೊತೆ ಸೇರಿಕೊಂಡು ಭರ್ಜರಿ ಬ್ಯಾಟಿಂಗ್ ನಡೆಸಿದರು. ಇಬ್ಬರೂ ವೆಸ್ಟ್ ಇಂಡೀಸ್ ಬೌಲರ್‌ಗಳ ಮೇಲೆ ಬ್ಯಾಟಿಂಗ್ ಸವಾರಿ ಮಾಡಿದರು. ಇಮಾಮ್ ಮತ್ತು ಬಾಬರ್ ಇಬ್ಬರೂ ಸತತವಾಗಿ ಉತ್ತಮ ಫಾರ್ಮ್‌ ಮುಂದುವರೆಸಿ ಎರಡನೇ ವಿಕೆಟ್‌ಗೆ ಅಸಾಧಾರಣ 120 ರನ್ ಜೊತೆಯಾಟದ ನೀಡಿದರು. ನಾಲ್ಕನೇ ಶತಕ ಬಾರಿಸುವ ತವಕದಲ್ಲಿದ್ದ ಪಾಕ್ ನಾಯಕ ಬಾಬರ್ 93 ಎಸೆತಗಳಲ್ಲಿ 5 ಫೋರ್, 1 ಸಿಕ್ಸರ್​​ನೊಂದಿಗೆ 77 ರನ್ ಗಳಿಸಿ ಔಟಾದರು.

ಇಮಾಮ್-ಉಲ್-ಹಕ್ 72 ಎಸೆತಗಳಲ್ಲಿ 72 ರನ್ ಗಳಿಸಿ ನಿರ್ಗಮಿಸಿದರು. ಶಹ್ಬಾದ್ ಖಾನ್ ಮತ್ತು ಖಷ್​ದಿಲ್ ತಲಾ 22 ರನ್ ಚಚ್ಚಿದರು. ಪಾಕಿಸ್ತಾನ 50 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿತು. ಸವಾಲನ ಮೊತ್ತ ಬೆನ್ನಟ್ಟಿದ ವೆಸ್ಟ್ ಇಂಡೀಸ್ ವಿಕೆಟ್ ಕಳೆದುಕೊಂಡೇ ಸಾಗಿತು. ತಂಡದ ಶಮರ್ ಬ್ರೂಕ್ಸ್ 42 ರನ್ ಗಳಿಸಿದ್ದೇ ಹೆಚ್ಚು. ಖೈಲ್ ಮೇರ್ಸ್ 33 ಮತ್ತು ನಾಯಕ ನಿಕೋಲಸ್ ಪೂರನ್ 25 ರನ್​ ಗಳಿಸಿದರಷ್ಟೆ. ವೆಸ್ಟ್ ಇಂಡೀಸ್ 32.2 ಓವರ್​ನಲ್ಲಿ ಕೇವಲ 155 ರನ್​ಗೆ ಆಲೌಟ್ ಆಯಿತು. ಪಾಕ್ ಪರ ಮೊಹಮ್ಮದ್ ನವಾಜ್ 4 ವಿಕೆಟ್ ಹಾಗೂ ಮೊಹಮ್ಮದ್ ವಾಸೀಂ 3 ವಿಕೆಟ್ ಕಿತ್ತು ಮಿಂಚಿದರು.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:51 am, Sat, 11 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ