IND vs SA: ಪಂತ್​ಗೆ ಬೌಲರ್​ಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಗೊತ್ತಿಲ್ಲ; ಐಪಿಎಲ್ ಚಾಂಪಿಯನ್ ಕೋಚ್

IND vs SA: ಪಂತ್ ಅವರ ನಾಯಕತ್ವವನ್ನು ಪ್ರಶ್ನಿಸಿರುವ ಭಾರತದ ಮಾಜಿ ಬೌಲರ್ ಆಶಿಶ್ ನೆಹ್ರಾ ಅವರು ಯುಜ್ವೇಂದ್ರ ಚಹಾಲ್ ಅವರಿಂದ ಕೇವಲ 2.1 ಓವರ್ ಪಡೆಯುವ ಪಂತ್ ಅವರ ತಂತ್ರದಿಂದ ನನಗೆ ಆಶ್ಚರ್ಯವಾಗಿದೆ ಎಂದು ಹೇಳಿದ್ದಾರೆ

IND vs SA: ಪಂತ್​ಗೆ ಬೌಲರ್​ಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಗೊತ್ತಿಲ್ಲ; ಐಪಿಎಲ್ ಚಾಂಪಿಯನ್ ಕೋಚ್
ಪಂತ್
Follow us
TV9 Web
| Updated By: ಪೃಥ್ವಿಶಂಕರ

Updated on: Jun 10, 2022 | 8:25 PM

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಸೋಲನುಭವಿಸಬೇಕಾಯಿತು. ರಿಷಭ್ ಪಂತ್ (Rishabh Pant) ನೇತೃತ್ವದ ಭಾರತ ತಂಡ ಸರಣಿಯ ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಈ ಸೋಲಿನ ನಂತರ ಪಂತ್ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಪಂತ್ ಅವರ ನಾಯಕತ್ವವನ್ನು ಪ್ರಶ್ನಿಸಿರುವ ಭಾರತದ ಮಾಜಿ ಬೌಲರ್ ಆಶಿಶ್ ನೆಹ್ರಾ (Ashish Nehra) ಅವರು ಯುಜ್ವೇಂದ್ರ ಚಹಾಲ್ (Yuzvendra Chahal) ಅವರಿಂದ ಕೇವಲ 2.1 ಓವರ್ ಪಡೆಯುವ ಪಂತ್ ಅವರ ತಂತ್ರದಿಂದ ನನಗೆ ಆಶ್ಚರ್ಯವಾಗಿದೆ ಎಂದು ಹೇಳಿದ್ದಾರೆ. IPL 2022 ಪರ್ಪಲ್ ಕ್ಯಾಪ್ ವಿಜೇತ ಚಹಾಲ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ T20 ಪಂದ್ಯದಲ್ಲಿ ಕೇವಲ 13 ಎಸೆತಗಳನ್ನು ಬೌಲ್ ಮಾಡಿದರು, 26 ರನ್ಗಳನ್ನು ನೀಡಿದರು. ಐಪಿಎಲ್ 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವದಲ್ಲಿ, ಪಂತ್ ಕುಲದೀಪ್ ಯಾದವ್ ಅವರಿಂದ ಪೂರ್ಣ ಓವರ್‌ಗಳನ್ನು ಹಲವು ಬಾರಿ ಹಾಕಿಸಲಿಲ್ಲ. ಕುಲದೀಪ್ ಐಪಿಎಲ್ 2022 ರಲ್ಲಿ ದೆಹಲಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ರಾಸಿ ವ್ಯಾನ್ ಡೆರ್ ದುಸೇನ್ ಮತ್ತು ಡೇವಿಡ್ ಮಿಲ್ಲರ್ ಜೋಡಿಯನ್ನು ಮುರಿಯಲು ಚಹಾಲ್ ಬೌಲಿಂಗ್ ಮಾಡಬೇಕಿತ್ತು ಎಂದು ನೆಹ್ರಾ ಹೇಳಿದ್ದಾರೆ.

ರಕ್ಷಣಾತ್ಮಕ ಬೌಲಿಂಗ್ ಕೆಲಸ ಮಾಡುವುದಿಲ್ಲ

ಮೊದಲ ಪಂದ್ಯದಲ್ಲಿ ಕಳಪೆ ಬೌಲಿಂಗ್ ಜತೆಗೆ ಭಾರತದ ಫೀಲ್ಡಿಂಗ್ ಕೂಡ ತೀರಾ ಕಳಪೆಯಾಗಿತ್ತು. ಭಾರತ ಹಲವು ಪ್ರಮುಖ ಕ್ಯಾಚ್‌ಗಳನ್ನು ಕೈಬಿಟ್ಟಿತು. ಕ್ರಿಕ್‌ಬಜ್‌ನೊಂದಿಗೆ ಮಾತನಾಡಿದ ನೆಹ್ರಾ, ಪಂತ್ ಯುವ ನಾಯಕ, ಅವರು ಈಗ ಕಲಿಯುತ್ತಿದ್ದಾನೆ ಮತ್ತು ಅದನ್ನು ಆಶಾದಾಯಕವಾಗಿ ಉತ್ತಮವಾಗಿ ಮಾಡುತ್ತಾನೆ. ಆದರೆ ಚಹಾಲ್ ಕೇವಲ 2.1 ಓವರ್ ಬೌಲ್ ಮಾಡಿದರು. ಕೆಲವೊಮ್ಮೆ ತಂಡಗಳು ಎಡಗೈ ಬ್ಯಾಟರ್​ಗಳು ಬ್ಯಾಟಿಂಗ್‌ ಮಾಡುವಾಗ ಲೆಗ್ ಸ್ಪಿನ್ನರ್‌ಗಳ ಕೈಲಿ ಬೌಲಿಂಗ್ ಹಾಕಿಸುವುದಿಲ್ಲ. ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಪಡೆಯುವ ಆಯ್ಕೆಯನ್ನು ಹೊಂದಿರುವುದು ಮುಖ್ಯ. ಆದರೆ ನೀವು ಒಬ್ಬ ಶ್ರೇಷ್ಠ ಬ್ಯಾಟ್ಸ್‌ಮನ್ ಆರ್ಭಟ ನಿಲ್ಲಿಸಬೇಕಾದರೆ, ನೀವು ಅವರ ವಿಕೆಟನ್ನು ಬೇಗ ತೆಗೆದುಕೊಳ್ಳಬೇಕು. ರಕ್ಷಣಾತ್ಮಕ ಬೌಲಿಂಗ್ ಕೆಲಸ ಮಾಡುವುದಿಲ್ಲ ಎಂದು ನೆಹ್ರಾ ಹೇಳಿದರು.

ಇದನ್ನೂ ಓದಿ
Image
IND vs SA: ಆಗ ಕೊಹ್ಲಿ.. ಈಗ ಪಂತ್; ಸೋಲಿನಲ್ಲಿ ಕಾಕತಾಳೀಯ ಇರಬೇಕು.. ಆದರೆ ಇಷ್ಟೊಂದಾ?
Image
IPL Media Rights: ಮುಖೇಶ್ ಅಂಬಾನಿ ಬಾಯಿಗೆ ಬಿತ್ತು ಲಡ್ಡು! ಮಾಧ್ಯಮ ಹಕ್ಕು ಹರಾಜಿನಿಂದ ಅಮೆಜಾನ್ ಔಟ್?
Image
IND vs SA: ತವರಿನಲ್ಲೇ ಟೀಂ ಇಂಡಿಯಾವನ್ನು ಮಣಿಸಿ ವಿಭಿನ್ನ ದಾಖಲೆ ಬರೆದ ಆಫ್ರಿಕನ್ನರು..!

ಸುಲಭವಾಗಿ ಗುರಿ ಮುಟ್ಟಿದ ದಕ್ಷಿಣ ಆಫ್ರಿಕಾ

ಪಂದ್ಯದ ಕುರಿತು ಮಾತನಾಡುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಭಾರತವು ದಕ್ಷಿಣ ಆಫ್ರಿಕಾಕ್ಕೆ 212 ರನ್‌ಗಳ ಗುರಿಯನ್ನು ನೀಡಿತು. ಉತ್ತರವಾಗಿ ದಕ್ಷಿಣ ಆಫ್ರಿಕಾ 5 ಎಸೆತಗಳ ಮೊದಲು ಗುರಿಯನ್ನು ಸಾಧಿಸಿ 7 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಮಿಲ್ಲರ್ ಮತ್ತು ದುಸೇನ್ ಶತಕದ ಜೊತೆಯಾಟ ನೀಡುವ ಮೂಲಕ ದಕ್ಷಿಣ ಆಫ್ರಿಕಾದ ಅದ್ಭುತ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು. ಇಶಾನ್ ಕಿಶನ್ ಭಾರತದ ಪರ ಗರಿಷ್ಠ 76 ರನ್ ಗಳಿಸಿದರು. ಅದೇ ಸಮಯದಲ್ಲಿ ನಾಯಕ ಪಂತ್ 29 ರನ್‌ಗಳ ಇನಿಂಗ್ಸ್ ಆಡಿದರು. ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 31 ರನ್ ಗಳಿಸಿದರು. ಆದಾಗ್ಯೂ, ದುಸೇನ್ ಮತ್ತು ಮಿಲ್ಲರ್ ಅವರ ಇನ್ನಿಂಗ್ಸ್ ಅವರ ಇನ್ನಿಂಗ್ಸ್ ಅನ್ನು ಮರೆಮಾಡಿತು. ಆದರೆ ಈ ಮ್ಯಾಚ್​ನಲ್ಲಿ ಕೇವಲ 2 ಓವರ್ ಬೌಲ್ ಮಾಡಿದ ಚಹಲ್ ಐಪಿಎಲ್ 2022 ರಲ್ಲಿ 17 ಪಂದ್ಯಗಳಲ್ಲಿ 27 ವಿಕೆಟ್ ಪಡೆದಿದ್ದಾರೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ