AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy 2022: ರಣಜಿ ಟ್ರೋಫಿಯ ಸೆಮಿ ಫೈನಲ್​ಗೆ ಬಲಿಷ್ಠ 4 ತಂಡಗಳ ಎಂಟ್ರಿ

Ranji trophy 2022 semi final schedule: ಸೆಮಿ ಫೈನಲ್ ಪಂದ್ಯವಾಳಿಯು ಜೂನ್ 14 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಬಲಿಷ್ಠ ಬೆಂಗಾಲ್ ಹಾಗೂ ಮಧ್ಯಪ್ರದೇಶ ತಂಡಗಳು ಮುಖಾಮುಖಿಯಾಗಲಿದೆ.

Ranji Trophy 2022: ರಣಜಿ ಟ್ರೋಫಿಯ ಸೆಮಿ ಫೈನಲ್​ಗೆ ಬಲಿಷ್ಠ 4 ತಂಡಗಳ ಎಂಟ್ರಿ
ranji trophy 2022
TV9 Web
| Edited By: |

Updated on: Jun 11, 2022 | 1:22 PM

Share

ದೇಶೀಯ ಅಂಗಳದ ಕ್ರಿಕೆಟ್​ ಟೂರ್ನಿ ರಣಜಿ ಟ್ರೋಫಿ 2022ರ ಸೀಸನ್​ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಕ್ವಾರ್ಟರ್​ ಫೈನಲ್​ ಹಂತವು ಮುಗಿದಿದ್ದು, ಅದರಂತೆ ನಾಲ್ಕು ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸಿದೆ. ಬೆಂಗಳೂರಿನ ಆಲೂರಿನ ಕೆಎಸ್​ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಕ್ವಾರ್ಟರ್​ ಫೈನಲ್​ನಲ್ಲಿ ಬೆಂಗಾಲ್ ತಂಡವು ಜಾರ್ಖಂಡ್ ವಿರುದ್ದ ಡ್ರಾ ಸಾಧಿಸಿ ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದೆ. ಇನ್ನು 2ನೇ ಕ್ವಾರ್ಟರ್​ ಫೈನಲ್​ನಲ್ಲಿ ಉತ್ತರಾಖಂಡ್ ವಿರುದ್ದ ಮುಂಬೈ ತಂಡವು 725 ರನ್​ಗಳ ದಾಖಲೆಯ ಜಯ ಸಾಧಿಸಿ ಸೆಮೀಸ್​ಗೆ ಅರ್ಹತೆ ಪಡೆದುಕೊಂಡಿದೆ. ಹಾಗೆಯೇ ಮೂರನೇ ಸೆಮಿಫೈನಲ್​ನಲ್ಲಿ ಕರ್ನಾಟಕ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿ ಉತ್ತರ ಪ್ರದೇಶ ತಂಡವು ನಿರ್ಣಾಯಕ ಹಂತಕ್ಕೇರಿದೆ. ನಾಲ್ಕನೇ ಸೆಮೀಸ್​ನಲ್ಲಿ ಪಂಜಾಬ್ ವಿರುದ್ದ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿರುವ ಮಧ್ಯಪ್ರದೇಶ ತಂಡವು ಈ ಬಾರಿ ಸೆಮಿಫೈನಲ್​ ಆಡಲಿದೆ.

ಸೆಮಿ ಫೈನಲ್ ಪಂದ್ಯವಾಳಿಯು ಜೂನ್ 14 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಬಲಿಷ್ಠ ಬೆಂಗಾಲ್ ಹಾಗೂ ಮಧ್ಯಪ್ರದೇಶ ತಂಡಗಳು ಮುಖಾಮುಖಿಯಾಗಲಿದೆ. ಇನ್ನು 2ನೇ ಸೆಮಿ ಫೈನಲ್​ನಲ್ಲಿ ಮುಂಬೈ ತಂಡವು ಉತ್ತರ ಪ್ರದೇಶ ತಂಡವನ್ನು ಎದುರಿಸಲಿದೆ. ಈ ಎಲ್ಲಾ ಪಂದ್ಯಗಳು ಆಲೂರಿನ ಕ್ರಿಕೆಟ್​ ಮೈದಾನದಲ್ಲೇ ನಡೆಯಲಿರುವುದು ವಿಶೇಷ.

ಆದರೆ ಈ ಬಾರಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡವು ಕ್ವಾರ್ಟರ್​ ಫೈನಲ್​ನಲ್ಲಿ ಉತ್ತರ ಪ್ರದೇಶದ ವಿರುದ್ದ ಮುಗ್ಗರಿಸುವ ಮೂಲಕ ತವರಿನಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈತಪ್ಪಿಸಿಕೊಂಡಿದೆ. ಏಕೆಂದರೆ ಈ ಬಾರಿಯ ಫೈನಲ್ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಹೀಗಾಗಿ ತವರಿನ ಪಿಚ್​ನ ಸಂಪೂರ್ಣ ಲಾಭ ಪಡೆದುಕೊಳ್ಳುವ ಅವಕಾಶ ಕರ್ನಾಟಕ ತಂಡದ ಆಟಗಾರರಿಗಿತ್ತು. ಆದರೆ ಕ್ವಾರ್ಟರ್​ ಫೈನಲ್​ನಲ್ಲಿ ಬ್ಯಾಟ್ಸ್​ಮನ್​ಗಳ ಕಳಪೆ ಪ್ರದರ್ಶನದಿಂದಾಗಿ ಉತ್ತರ ಪ್ರದೇಶ ವಿರುದ್ದ 5 ವಿಕೆಟ್​ಗಳ ಹೀನಾಯ ಸೋಲನುಭವಿಸಿತು.

ಇದನ್ನೂ ಓದಿ
Image
India vs South Africa T20: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ
Image
Ashish Nehra: ಎಳನೀರು, ಪೆನ್ನು ಪೇಪರ್​ನಲ್ಲೇ 9 ತಂಡಗಳನ್ನ ಮುಗಿಸಿಬಿಟ್ರು..!
Image
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಸದ್ಯ ಸೆಮಿ ಫೈನಲ್​ಗೇರಿರುವ ನಾಲ್ಕು ತಂಡಗಳು ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದ್ದು, ಹೀಗಾಗಿ ನಿರ್ಣಾಯಕ ಹಂತದ ಹೋರಾಟದಲ್ಲಿ ರೋಚಕತೆಯನ್ನು ನಿರೀಕ್ಷಿಸಬಹುದು.

ರಣಜಿ ಟ್ರೋಫಿ ಸೆಮಿ ಫೈನಲ್ ವೇಳಾಪಟ್ಟಿ:

  1. ಜೂನ್ 14 ರಿಂದ 18 (ಮೊದಲ ಸೆಮಿಫೈನಲ್​)- ಬೆಂಗಾಲ್ vs ಮಧ್ಯಪ್ರದೇಶ- (ಕೆಎಸ್​ಸಿಎ ಕ್ರಿಕೆಟ್ ಮೈದಾನ- ಆಲೂರು)
  2. ಜೂನ್ 14 ರಿಂದ 18 (ಎರಡನೇ ಸೆಮಿಫೈನಲ್​)- ಮುಂಬೈ vs ಉತ್ತರಪ್ರದೇಶ- ( ಜಸ್ಟ್​ ಕ್ರಿಕೆಟ್ ಅಕಾಡೆಮಿ ಮೈದಾನ- ಬೆಂಗಳೂರು)
  3. ಜೂನ್ 22 ರಿಂದ 26- ಫೈನಲ್​: ಚಿನ್ನಸ್ವಾಮಿ ಸ್ಟೇಡಿಯಂ – ಬೆಂಗಳೂರು

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು