AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA T20 Match Live Streaming: ಸೇಡು ತೀರಿಸಿಕೊಳ್ಳುತ್ತಾ ಭಾರತ? ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ

IND Vs SA T20 Series Time Table and Fixtures: ಗುರುವಾರ ದೆಹಲಿಯ ಅರುಣೆ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹೀನಾಯ ಸೋಲನ್ನು ಎದುರಿಸಬೇಕಾಯಿತು ಮತ್ತು ಇದರೊಂದಿಗೆ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಬೇಕಾಯ್ತು.

IND vs SA T20 Match Live Streaming: ಸೇಡು ತೀರಿಸಿಕೊಳ್ಳುತ್ತಾ ಭಾರತ? ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ
IND vs SA
TV9 Web
| Edited By: |

Updated on:Jun 11, 2022 | 2:43 PM

Share

ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ ಐದು ಪಂದ್ಯಗಳ T20 ಸರಣಿಯ ಆರಂಭವು ಆತಿಥೇಯ ತಂಡಕ್ಕೆ ಉತ್ತಮವಾಗಿಲ್ಲ. ಗುರುವಾರ ದೆಹಲಿಯ ಅರುಣೆ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹೀನಾಯ ಸೋಲನ್ನು ಎದುರಿಸಬೇಕಾಯಿತು ಮತ್ತು ಇದರೊಂದಿಗೆ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಬೇಕಾಯ್ತು. ಈಗ ಸರಣಿಯ ಮುಂದಿನ ಹಂತ ಕಟಕ್ ಆಗಿದ್ದು, ಸರಣಿಯ ಎರಡನೇ ಪಂದ್ಯ ಇಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ (Indian Cricket Team) ಗೆಲುವು ಸಾಧಿಸಿ ಸರಣಿ ಸಮಬಲಗೊಳಿಸಬೇಕು. ಆದರೆ ಕಳೆದ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ರೀತಿಯನ್ನು ಯಾರೂ ನಿರೀಕ್ಷಿಸದ ಕಾರಣ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಆತ್ಮವಿಶ್ವಾಸದಲ್ಲಿ ಬೀಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರವಾಸಿ ತಂಡ ಕೂಡ ತನ್ನ ಮೊದಲ ಪಂದ್ಯದ ಫಾರ್ಮ್ ಕಾಯ್ದುಕೊಂಡು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಲು ಪ್ರಯತ್ನಿಸಲಿದೆ.

ಮೊದಲ ಪಂದ್ಯದಲ್ಲಿ ಉಭಯ ತಂಡಗಳ ಬೌಲಿಂಗ್ ತುಂಬಾ ದುಬಾರಿಯಾಗಿತ್ತು. ದಕ್ಷಿಣ ಆಫ್ರಿಕಾದ ಬೌಲರ್‌ಗಳು ಕೂಡ ರನ್ ಬಿಟ್ಟುಕೊಟ್ಟಿದ್ದರಿಂದ  ಭಾರತ 211 ರನ್ ಗಳಿಸಿತು. ಆದರೆ ಭಾರತದ ಬೌಲರ್‌ಗಳು ಈ ಸ್ಕೋರ್ ಅನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಈ ಗುರಿಯನ್ನು ಸಾಧಿಸಿತು. ಈ ಪಂದ್ಯದಲ್ಲಿ ಭಾರತಕ್ಕೆ ಮತ್ತೊಂದು ಚಿಂತೆ ಡೇವಿಡ್ ಮಿಲ್ಲರ್ ಅವರ ಫಾರ್ಮ್ ಆಗಿದೆ. ಕಳೆದ ಪಂದ್ಯದಲ್ಲಿ ಅವರು ಬ್ಯಾಟಿಂಗ್ ಮಾಡಿದ ರೀತಿ, ಅವರು ಯಾವುದೇ ಪರಿಸ್ಥಿತಿಯಿಂದ ಪಂದ್ಯವನ್ನು ತಿರುಗಿಸುವ ಸಾಮಥ್ರ್ಯ ಹೊಂದಿದ್ದಾರೆ. ರಾಸಿ ವಾನ್ ಡೆರ್ ದುಸೇನ್ ಕೂಡ ಅತ್ಯುತ್ತಮ ಫಾರ್ಮ್​ನಲ್ಲಿರುವುದು ಮತ್ತೊಂದು ಆತಂಕಕಾರಿ ಸುದ್ದಿ.

ಇದನ್ನೂ ಓದಿ:IND vs SA: ಶ್ರೇಯಸ್ ಅಯ್ಯರ್ ಮಾಡಿದ ತಪ್ಪಿಗೆ ಸೋಲಿನ ಬೆಲೆ ತೆತ್ತ ಟೀಂ ಇಂಡಿಯಾ..!

ಇದನ್ನೂ ಓದಿ
Image
T20 Blast: 28 ರನ್​ಗೆ 8 ವಿಕೆಟ್​ ಪತನ: ರಣರೋಚಕ ಪಂದ್ಯದಲ್ಲಿ ಗೆದ್ದಿದ್ದು ಯಾರು?
Image
ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸಾಂಡರ್ ಎಲ್ಲಿಸ್ ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಅನಿಲ್ ಕುಂಬ್ಳೆ ನೀಡಿದ ಉತ್ತರಗಳಿವು
Image
IND vs SA: ಪಂತ್​ಗೆ ಬೌಲರ್​ಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಗೊತ್ತಿಲ್ಲ; ಐಪಿಎಲ್ ಚಾಂಪಿಯನ್ ಕೋಚ್

ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಹೀಗಿದೆ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯ ಕಟಕ್‌ನ ಬಾರ್ಬತಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯ ಯಾವಾಗ ಆರಂಭವಾಗಲಿದೆ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯ ಜೂನ್ 12 ರಂದು ಸಂಜೆ 7 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯದ ಟಾಸ್ ಸಂಜೆ 6:30ಕ್ಕೆ ನಡೆಯಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ T20 ಎಲ್ಲಿ ನೇರ ಪ್ರಸಾರವಾಗಲಿದೆ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2 ನೇ T20I ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಹೇಗೆ ವೀಕ್ಷಿಸುವುದು?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ T20 ನ ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಇದಲ್ಲದೇ tv9kannada.com ನ ಲೈವ್ ಬ್ಲಾಗ್‌ನಿಂದಲೂ ಪಂದ್ಯದ ಮಾಹಿತಿಯನ್ನು ಪಡೆಯಬಹುದು.

Published On - 2:41 pm, Sat, 11 June 22