AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishabh Pant: ರಿಷಭ್ ಪಂತ್ ಸೋಲಿಗೆ ದೂರಿದ್ದು ಬೌಲರ್​ಗಳನ್ನಲ್ಲ: ಪಂದ್ಯದ ಬಳಿಕ ಏನಂದ್ರು ನೋಡಿ

IND vs SA 1st T20I: ಆಫ್ರಿಕಾ ತಂಡ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ರಾಸಿ ವನ್ ಡರ್ ಡುಸೆನ್ ಹಾಗೂ ಡೇವಿಡ್ ಮಿಲ್ಲರ್ ಜೋಡಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 212 ರನ್‌ಗಳಿಸಿ ಜಯದ ನಗೆ ಬೀರಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ರಿಷಭ್ ಪಂತ್ ಏನು ಹೇಳಿದರು ಕೇಳಿ.

Rishabh Pant: ರಿಷಭ್ ಪಂತ್ ಸೋಲಿಗೆ ದೂರಿದ್ದು ಬೌಲರ್​ಗಳನ್ನಲ್ಲ: ಪಂದ್ಯದ ಬಳಿಕ ಏನಂದ್ರು ನೋಡಿ
rishabh pant post match presentation IND vs SA
TV9 Web
| Updated By: Vinay Bhat|

Updated on:Jun 10, 2022 | 11:58 AM

Share

212 ರನ್​ಗಳ ಬೆಟ್ಟದಂತಹ ಟಾರ್ಗೆಟ್ ನೀಡಿದ್ದರೂ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ (India vs South Africa) ಜಯ ಸಾಧಿಸಲು ಸಾಧ್ಯವಾಗಲಿಲ್ಲ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆರಂಭಿಕ ಇಶಾನ್ ಕಿಶನ್ ಅವರ 76 ರನ್ ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಶ್ರೇಯಸ್ ಅಯ್ಯರ್ ಅವರ ಉಪಯುಕ್ತ ಕಾಣಿಕೆಯ ಫಲವಾಗಿ 20 ಓವರ್​ನಲ್ಲಿ 4 ವಿಕೆಟ್‌ಗೆ 211 ರನ್ ಪೇರಿಸಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ ದ. ಆಫ್ರಿಕಾ ತಂಡ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ರಾಸಿ ವನ್ ಡರ್ ಡುಸೆನ್ (75*ರನ್, 46 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ಡೇವಿಡ್ ಮಿಲ್ಲರ್ (64*ರನ್, 31ಎಸೆತ, 4 ಬೌಂಡರಿ, 5 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 212 ರನ್‌ಗಳಿಸಿ ಜಯದ ನಗೆ ಬೀರಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ರಿಷಭ್ ಪಂತ್ (Rishabh Pant) ಏನು ಹೇಳಿದರು ಕೇಳಿ.

ದಕ್ಷಿಣ ಆಫ್ರಿಕಾ ಬ್ಯಾಟರ್​ಗಳನ್ನು ಕಟ್ಟಿ ಹಾಕಲು ಭಾರತೀಯ ಬೌಲರ್​ಗಳು ಸಂಪೂರ್ಣ ವಿಫಲರಾದರು. ಎಲ್ಲ ಬೌಲರ್​ಗಳು ದುಬಾರಿಯಾದರು. ಆದರೆ, ಪಂದ್ಯ ಮುಗಿದ ಬಳಿಕ ಪಂತ್ ಈ ಬಗ್ಗೆ ಒಂದು ಮಾತು ಆಡಲಿಲ್ಲ. “ನಾವು ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದೆವು. ಕಲೆ ಹಾಕಿದ್ದ ರನ್‌ಗಳು ಸಾಕೆಂದು ಭಾವಿಸುತ್ತೇನೆ. ಆದರೆ, ಬೌಲಿಂಗ್‌ನಲ್ಲಿ ನಾವು ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ವಿಫಲರಾಗಿದ್ದೇವೆ. ಈ ಜಯದ ಶ್ರೇಯ ಎದುರಾಳಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳಿಗೆ ಸಲ್ಲಬೇಕು,” ಎಂದು ಪಂತ್ ಹೇಳಿದ್ದಾರೆ.

Dinesh Karthik: ಮೊದಲ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್​ಗೆ ಅವಮಾನ: ಅದು ಭಾರತೀಯ ಪ್ಲೇಯರ್​ನಿಂದಲೆ

ಇದನ್ನೂ ಓದಿ
Image
Exclusive: ಇದು ಭಾರತೀಯ ಕ್ರಿಕೆಟ್ ತಲೆತಗ್ಗಿಸುವಂತಹ ಸುದ್ದಿ: ಇಲ್ಲಿದೆ ಉತ್ತರಖಂಡ ಕ್ರಿಕೆಟ್​ನ ಕರ್ಮಕಾಂಡ
Image
IND vs SA: ವಿಶ್ವದ ದಾಖಲೆ ನಿರ್ಮಿಸುವ ಟೀಮ್ ಇಂಡಿಯಾ ಕನಸು ನುಚ್ಚುನೂರು ಮಾಡಿದ ಆಫ್ರಿಕಾನ್ನರು
Image
India vs South Africa, 1st T20: ಮಿಂಚಿದ ಕಿಲ್ಲರ್ ಮಿಲ್ಲರ್, ಡೇಂಜರಸ್ ಡುಸ್ಸೆನ್: ಸೌತ್​ ಆಫ್ರಿಕಾಗೆ ಭರ್ಜರಿ ಜಯ
Image
IPL 2023: 74, 84, 94: ಐಪಿಎಲ್​ ಟೂರ್ನಿಯಲ್ಲಿ ಮಹತ್ವದ ಬದಲಾವಣೆ..!

“ಡೇವಿಡ್ ಮಿಲ್ಲರ್, ರಾಸಿ ವನ್ ಡರ್ ಡುಸೆನ್ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನಾವು ಬ್ಯಾಟಿಂಗ್ ಮಾಡುವಾಗ ವಿಕೆಟ್ ಸ್ವಲ್ಪ ಸ್ಲೋ ಇತ್ತು. ಆ ನಂತರ ಸೆಕೆಂಡ್ ಇನ್ನಿಂಗ್ಸ್​​ನಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿತ್ತು. ಮಿಲ್ಲರ್ ಅವರನ್ನ ಕಟ್ಟಿಹಾಕಲು ನಾವು ಪ್ರಯತ್ನಿಸಿದ್ದೇವು. ಆದರೆ ಪಿಚ್ ಬ್ಯಾಟಿಂಗ್​ಗೆ ಸಂಪೂರ್ಣವಾಗಿ ಬೆಂಬಲ ನೀಡುತ್ತಿತ್ತು. ಆದರೂ ನಮ್ಮ ಪ್ರದರ್ಶನದ ಬಗ್ಗೆ ಖುಷಿ ಇದೆ. ಮುಂದಿನ ಪಂದ್ಯದಲ್ಲಿ ನಾವು ಖಂಡಿತವಾಗಿ ಕಮ್ ಬ್ಯಾಕ್ ಮಾಡುತ್ತೇವೆ,” ಎಂದು ಹೇಳಿ ಪಂತ್ ಮಾತು ಮುಗಿಸಿದರು.

ಇನ್ನು ಗೆದ್ದ ತಂಡದ ದ. ಆಫ್ರಿಕಾ ನಾಯಕ ತೆಂಬ ಬವೂಮ ಮಾತನಾಡಿ, “ಭಾರತದ ಬ್ಯಾಟಿಂಗ್‌ ವೇಳೆ ನಿಧಾನಗತಿಯ ಎಸೆತಗಳು ಕೆಲಸ ಮಾಡಬಹುದೆಂದು ಅನಿಸಿತ್ತು. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ನಿಧಾನಗತಿಯ ಎಸೆತಗಳು ಬ್ಯಾಟ್ಸ್‌ಮನ್‌ಗಳಿಗೆ ತುಂಬಾ ಸುಲಭವಾಯಿತು. ನಾವು ಕಲೆ ಹಾಕಿದ ಮೊತ್ತದ ಬಗ್ಗೆ ಖುಷಿ ಇದೆ. ಆದರೆ, ನಮ್ಮ ಬೌಲಿಂಗ್ ಚೆನ್ನಾಗಿರಲಿಲ್ಲ. ತುಂಬಾ ರನ್ ಹರಿಬಿಟ್ಟೆವು. ಡೇವಿಡ್‌ ಮಿಲ್ಲರ್‌ ಐಪಿಎಲ್‌ ಟೂರ್ನಿಯ ಲಯವನ್ನು ಮುಂದುವರಿಸಿದ್ದಾರೆ ಹಾಗೂ ಇವರಿಗೆ ರಾಸಿ ವ್ಯಾನ್ ಡೆರ್‌ ಡುಸೆನ್‌ ಅತ್ಯುತ್ತಮವಾಗಿ ಸಾಥ್‌ ನೀಡಿದ್ದಾರೆ. ಬ್ಯಾಟಿಂಗ್‌ಗೆ ಹೇಳಿ ಮಾಡಿಸಿದ ಪಿಚ್‌  ಇದಾಗಿತ್ತು ಎಂದು ಹೇಳಿದ್ದಾರೆ.

“ಈ ಪಿಚ್​ನಲ್ಲಿ ಪ್ರಥಮ ಇನಿಂಗ್ಸ್‌ಗಿಂತ ದ್ವಿತೀಯ ಇನಿಂಗ್ಸ್‌ನಲ್ಲಿ ಅತ್ಯುತ್ತಮವಾಗಿ ಬ್ಯಾಟ್‌ ಮಾಡಬಹುದು ಎಂದು ನಾನು ಮೊದಲೇ ಅಂದುಕೊಂಡಿದ್ದೆ. ಈ ಕಾರಣದಿಂದಲೇ ಚೇಸಿಂಗ್‌ ಆಯ್ದುಕೊಂಡೆ. ಇದರ ಹೊರತಾಗಿಯೂ ಇಶಾನ್‌ ಕಿಶನ್‌ ಬ್ಯಾಟಿಂಗ್‌ ಹಾದಿ ತುಂಬಾ ಸುಲಭವಾಗಿತ್ತು. ಅವರು ನಮ್ಮ ಸ್ಪಿನ್ನರ್‌ಗಳನ್ನು ಒತ್ತಡಕ್ಕೆ ತಳ್ಳಿದ್ದರು. ಇದಕ್ಕೆ ತಕ್ಕಂತೆ ನಮ್ಮ ಬ್ಯಾಟರ್​ಗಳು ಕೂಡ ಉತ್ತಮ ತಿರುಗೇಟು ನೀಡಿದರು ಎಂಬುದು ತೆಂಬ ಬವೂಮ ಮಾತು.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:58 am, Fri, 10 June 22

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ