IND vs SA: ದ್ರಾವಿಡ್ಗೆ ತಲೆನೋವಾದ ರಾಹುಲ್ ಅಲಭ್ಯತೆ: ಪ್ಲೇಯಿಂಗ್ XI ನಲ್ಲಿ ದೊಡ್ಡ ಬದಲಾವಣೆ
India Playing XI vs SA: ಭಾರತ ಹಾಗೂ ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ ಆರಂಭಕ್ಕೆ ಒಂದು ದಿನ ಇರುವಾಗ ಕೆಎಲ್ ರಾಹುಲ್ ಇಂಜುರಿಯಿಂದಾಗಿ ಸರಣಿಯಿಂದ ಹೊರಬಿದ್ದಿರುವುದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇದರಿಂದ ಪ್ಲೇಯಿಂಗ್ ಇಲೆವೆನ್ನಲ್ಲಿ ದೊಡ್ಡ ಬದಲಾವಣೆ ಆಗುವ ನಿರೀಕ್ಷೆಯಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ಪೈಕಿ ಮೊದಲ ಪಂದ್ಯ ಆರಂಭಕ್ಕೆ ಇನ್ನೇನು ಒಂದು ದಿನ ಇರುವಾಗ ನಾಯಕ ಕೆಎಲ್ ರಾಹುಲ್ (KL Rahul) ಸರಣಿಯಿಂದಲೇ ಹೊರ ನಡೆದಿದ್ದಾರೆ. ಗಾಯಕ್ಕೆ ತುತ್ತಾಗಿರುವ ಕೆಎಲ್ ಇಡೀ ಸರಣಿಯಲ್ಲಿ ಆಡುತ್ತಿಲ್ಲ ಎಂದು ಬಿಸಿಸಿಐ ಹೇಳಿದೆ. ಇದರಿಂದ ಈವರೆಗೆ ಕೋಚ್ ಹಾಗೂ ನಾಯಕ ಮಾಡಿಕೊಂಡು ಬಂದಿದ್ದ ಎಲ್ಲ ತಂತ್ರಗಳು ತಲೆಕೆಳಗಾಗಿದೆ. ನೂತನ ಕ್ಯಾಪ್ಟನ್ ರಿಷಭ್ ಪಂತ್ (Rishabh Pant) ಜೊತೆ ಸೇರಿ ಮತ್ತೊಂದು ಗೇಮ್ ಪ್ಲಾನ್ ರೂಪಿಸಬೇಕಿದೆ. ರಾಹುಲ್ ಅಲಭ್ಯರಾಗಿರುವ ಕಾರಣ ಇನ್ನಿಂಗ್ಸ್ ಆರಂಭಿಸುವವರು ಯಾರು ಎಂಬ ಪ್ರಶ್ನೆ ಕೂಡ ಎದ್ದಿದೆ. ಇದರ ಜೊತೆಗೆ ಕೋಚ್ಗೆ ಇನ್ನೂ ಮೂರು ಸವಾಲಿದೆ. ಮೂರನೇ ವೇಗಿಯಾಗಿ ಯಾರನ್ನು ಆಯ್ಕೆ ಮಾಡುವುದು?, ಹಾರ್ದಿಕ್ ಪಾಂಡ್ಯ (Hardik Pandya) ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕು?, ದಿನೇಶ್ ಕಾರ್ತಿಕ್ಗೆ ಅವಕಾಶ ನೀಡಬೇಕೇ? ಎಂಬ ದೊಡ್ಡ ಸವಾಲು ದ್ರಾವಿಡ್ ಮುಂದಿದೆ.
ಕೆಎಲ್ ಇಲ್ಲದ ಕಾರಣ ಟೀಮ್ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸಲು ರುತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಮೊದಲ ಆಯ್ಕೆಯಾಗಿದ್ದಾರೆ. ಆದರೆ, ಐಪಿಎಲ್ 2022 ರಲ್ಲಿ ಇವರಿಬ್ಬರೂ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸಲಿಲ್ಲ. ಹೀಗಾಗಿ ವೇಂಕಟೇಶ್ ಅಯ್ಯರ್ ಕೂಡ ರೇಸ್ನಲ್ಲಿದ್ದಾರೆ. ಮೂರನೇ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಮತ್ತು ನಾಯಕ ರಿಷಭ್ ಪಂತ್ ಕಣಕ್ಕಿಳಿಯುವುದು ಖಚಿತ. ಆದರೆ, ನಂತರದ ಬ್ಯಾಟಿಂಗ್ ಕ್ರಮಾಂಕವೇ ಮ್ಯಾನೇಜ್ಮೆಂಟ್ಗೆ ತಲೆನೋವಾಗಿದೆ.
IND vs SA: ಇಂದು ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ: ಯಂಗ್ ಇಂಡಿಯಾ ಮೇಲೆ ಎಲ್ಲರ ಕಣ್ಣು
ಹೌದು, ಹಾರ್ದಿಕ್ ಪಟೇಲ್ ಮರಳಿರುವುದರಿಂದ ಅವರನ್ನು ಆಲ್ ರೌಂಡರ್ ಮತ್ತು ಫಿನಿಷರ್ ಪಾತ್ರದಲ್ಲಿ ಬಳಸಿಕೊಳ್ಳಲು ಚಿಂತನೆ ನಡೆದಿದೆ. ಆದರೆ, ಆರ್‌ಸಿಬಿಯಲ್ಲಿ ಮಿಂಚಿದ್ದ ದಿನೇಶ್ ಕಾರ್ತಿಕ್ ಕೂಡ ತಂಡದಲ್ಲಿದ್ದಾರೆ. ಮೂರು ವರ್ಷಗಳ ಬಳಿಕ ಮತ್ತೆ ಟೀಮ್ ಇಂಡಿಯಾಕ್ಕೆ ಮರಳಿರುವ ಕಾರ್ತಿಕ್ ಮೇಲೆ ಇದೀಗ ಬೆಟ್ಟದಷ್ಟು ನಿರೀಕ್ಷೆಯಿದೆ. ಈ ಬಳಗವನ್ನು ಸಮರ್ಥವಾಗಿ ದುಡಿಸಿಕೊಳ್ಳುವತ್ತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಚಿತ್ತ ನೆಟ್ಟಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಕೂಡ ಸಾಕಷ್ಟು ಆಯ್ಕೆಗಳಿವೆ. ವೇಗಿ ಉಮ್ರಾನ್ ಮಲಿಕ್ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ಸ್ಪಿನ್ ತಾರೆಯರಾದ ಯುಜ್ವೇಂದ್ರ ಚಹಲ್ ಒಂದುಕಡೆಯಿದ್ದರೆ ಕುಲ್ದೀಪ್ ಯಾದವ್ ಇಂಜುರಿಯಿಂದ ಹೊರಬಿದ್ದ ಕಾರಣ ರವಿ ಬಿಷ್ಣೋಯಿ ಅಥವಾ ಅಕ್ಷರ್ ಪಟೇಲ್ಗೆ ಸ್ಥಾನ ಸಿಗಬಹುದು. ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಕೂಡ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ.
ಭಾರತ ಸಂಭಾವ್ಯ ಪ್ಲೇಯಿಂಗ್ XI:
ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ/ ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಹಲ್, ಉಮ್ರಾನ್ ಮಲಿಕ್.
ದಕ್ಷಿಣ ಆಫ್ರಿಕಾ ತಂಡ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ರೀಜಾ ಹೆನ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಏಡನ್ ಮರ್ಕರಂ, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಏನ್ರಿಚ್ ನಾಕಿಯಾ, ವೇಯ್ನ್ ಪಾರ್ನೆಲ್, ಡ್ವೇನ್ ಪ್ರಿಟೊರಿಯಸ್, ಕಗಿಸೊ ರಬಾಡ, ತಬ್ರೇಜ್ ಶಂಸಿ, ಟ್ರಿಸ್ಟನ್ ಸ್ಟಬ್ಸ್, ರಸಿ ವ್ಯಾನ್ ಡರ್ ಡಸೆ, ಮಾರ್ಕೊ ಜ್ಯಾನ್ಸೆನ್.
ಪಂದ್ಯ ಆರಂಭ: ಸಂಜೆ 7 ಗಂಟೆಗೆ.
ಸ್ಥಳ: ಅರುಣ್ ಜೇಟ್ಲಿ ಕ್ರೀಡಾಂಗಣ, ನವ ದೆಹಲಿ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.