ENG vs NZ: ಸೋಲಿನ ಸುಳಿಯಲ್ಲಿರುವ ನ್ಯೂಜಿಲೆಂಡ್‌ಗೆ ಆಘಾತ; ನಾಯಕ ವಿಲಿಯಮ್ಸನ್ಗೆ ಕೊರೊನಾ ಸೋಂಕು
ENG vs NZ: ಪಂದ್ಯದ ಮೊದಲು, ಇಡೀ ತಂಡದ ಕೋವಿಡ್ ಪರೀಕ್ಷೆಯನ್ನು ಮಾಡಲಾಯಿತು, ಇದರಲ್ಲಿ ವಿಲಿಯಮ್ಸನ್ ಅವರ ಟೆಸ್ಟ್ ಪಾಸಿಟಿವ್ ಬಂದಿದೆ, ಇಡೀ ತಂಡದ ಉಳಿದ ಪರೀಕ್ಷೆಯು ನೆಗೆಟಿವ್ ಬಂದಿದೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಭಾರೀ ಹಿನ್ನಡೆ ಅನುಭವಿಸಿದೆ (NZ vs ENG). ತಂಡದ ನಾಯಕ ಕೇನ್ ವಿಲಿಯಮ್ಸನ್ (Kane Williamson)ಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಟಾಮ್ ಲ್ಯಾಥಮ್ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಶುಕ್ರವಾರ ನಾಟಿಂಗ್ ಹ್ಯಾಮ್ ನಲ್ಲಿ ಆರಂಭವಾಗಲಿದೆ. ತಂಡದ ಕೋಚ್ ಗ್ಯಾರಿ ಸ್ಟೆಡ್ ವಿಲಿಯಮ್ಸನ್ ಬಗ್ಗೆ ಮಾಹಿತಿ ನೀಡುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಪಂದ್ಯದ ಮೊದಲು, ಇಡೀ ತಂಡದ ಕೋವಿಡ್ ಪರೀಕ್ಷೆಯನ್ನು ಮಾಡಲಾಯಿತು, ಇದರಲ್ಲಿ ವಿಲಿಯಮ್ಸನ್ ಅವರ ಟೆಸ್ಟ್ ಪಾಸಿಟಿವ್ (Kovid-19 positive) ಬಂದಿದೆ, ಇಡೀ ತಂಡದ ಉಳಿದ ಪರೀಕ್ಷೆಯು ನೆಗೆಟಿವ್ ಬಂದಿದೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ನ್ಯೂಜಿಲೆಂಡ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಕೋಚ್, “ದುರದೃಷ್ಟವಶಾತ್ ಕೇನ್ ವಿಲಿಯಮ್ಸನ್ ಇಂದು ಸಂಜೆ ಕೋವಿಡ್ -19 ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ಆದ್ದರಿಂದ ಅವರು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವುದಿಲ್ಲ.ವಿಲಿಯಮ್ಸನ್ ಬದಲಿಗೆ ಹ್ಯಾಮಿಶ್ ರುದರ್‌ಫೋರ್ಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ.ಟಾಮ್ ಲ್ಯಾಥಮ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ENG vs NZ: ಶತಕ, 10000 ರನ್, ಕಿವೀಸ್ ವಿರುದ್ಧ 1000 ರನ್! ಮೊದಲ ಟೆಸ್ಟ್ನಲ್ಲಿ ರೂಟ್ ಮಾಡಿದ ದಾಖಲೆಗಳಿವು
UPDATE: Coach Gary Stead confirms captain Kane Williamson will miss the second Test against England in Nottingham on Friday, after testing positive for Covid-19 the night before the match. Hamish Rutherford will replace him in the squad #ENGvNZ pic.twitter.com/9B0a9zt9JU
— BLACKCAPS (@BLACKCAPS) June 9, 2022
ಏಳು ವರ್ಷಗಳ ನಂತರ ರುದರ್ಫೋರ್ಡ್ ಅವಕಾಶ
ವಿಲಿಯಮ್ಸನ್ ಬದಲಿಗೆ ರುದರ್‌ಫೋರ್ಡ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ, ಆದರೆ ಆಶ್ಚರ್ಯಕರ ವಿಷಯವೆಂದರೆ ಏಳು ವರ್ಷಗಳ ಹಿಂದೆ ರುದರ್‌ಫೋರ್ಡ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅವರು ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಜನವರಿ 2015 ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ಆಡಿದರು. ನಾವು ಅವರ ಟೆಸ್ಟ್ ವೃತ್ತಿಜೀವನವನ್ನು ನೋಡಿದರೆ, ಈ ಬ್ಯಾಟ್ಸ್‌ಮನ್ ಇದುವರೆಗೆ 16 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 26.96 ಸರಾಸರಿಯಲ್ಲಿ 755 ರನ್ ಗಳಿಸಿದ್ದಾರೆ. ಈ ವೇಳೆ ಅವರು ಶತಕ ಹಾಗೂ ಅರ್ಧ ಶತಕ ಸಿಡಿಸಿದ್ದಾರೆ.
ಸಮಬಲ ಸಾಧಿಸಲು ನ್ಯೂಜಿಲೆಂಡ್ ಹೋರಾಟ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನ್ಯೂಜಿಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಬೇಕಾಯಿತು. ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಐದು ವಿಕೆಟ್‌ಗಳಿಂದ ಗೆದ್ದುಕೊಂಡಿತು. ನ್ಯೂಜಿಲೆಂಡ್ ತಂಡ ಈಗ ಎರಡನೇ ಟೆಸ್ಟ್ ಪಂದ್ಯದಲ್ಲಿ ಪುನರಾಗಮನ ಮಾಡಲು ಬಯಸುತ್ತಿದೆ. ಆದಾಗ್ಯೂ, ವಿಲಿಯಮ್ಸನ್ ಇಲ್ಲದೆ, ಅವರ ಹಾದಿಯು ಸುಲಭವಲ್ಲ. ಅಲ್ಲದೆ, ಪ್ರಮುಖ ಬ್ಯಾಟ್ಸ್‌ಮನ್ ಇಲ್ಲದೆ ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ಅನ್ನು ಸೋಲಿಸುವುದು ನ್ಯೂಜಿಲೆಂಡ್‌ಗೆ ತುಂಬಾ ಕಷ್ಟಕರವಾಗಿರುತ್ತದೆ.