Ranji Trophy: 21 ಬೌಂಡರಿ, 136 ರನ್.. ರಣಜಿಯಲ್ಲಿ ಶತಕ ಸಿಡಿಸಿದ ಕ್ರೀಡಾ ಸಚಿವ! ಸೆಮೀಸ್ಗೆ ಬಂಗಾಳ ಎಂಟ್ರಿ
Ranji Trophy: ಮನೋಜ್ ತಿವಾರಿ ಕೂಡ ಮೊದಲ ಇನಿಂಗ್ಸ್‌ನಲ್ಲಿ 73 ರನ್ ಗಳಿಸಿದ್ದರು. ಬಂಗಾಳದ ಮೊದಲ ಇನ್ನಿಂಗ್ಸ್‌ನಲ್ಲಿ 9 ಬ್ಯಾಟ್ಸ್‌ಮನ್‌ಗಳು 50 ಕ್ಕೂ ಹೆಚ್ಚು ರನ್ ಗಳಿಸಿ ವಿಶ್ವದಾಖಲೆ ಮಾಡಿದರು.
ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಮನೋಜ್ ತಿವಾರಿ (Manoj Tiwari) ಮತ್ತೊಮ್ಮೆ ರಣಜಿ ಟ್ರೋಫಿ (Ranji Trophy)ಯಲ್ಲಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಮನೋಜ್ ತಿವಾರಿ ಅವರು ಜಾರ್ಖಂಡ್ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದರು, ಅವರ ಬ್ಯಾಟ್‌ನಿಂದ 136 ರನ್ ಹೊರಬಂದವು. ಮನೋಜ್ ತಿವಾರಿ ಅವರ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ಬೆಂಗಾಲ್ ಮತ್ತು ಜಾರ್ಖಂಡ್ ನಡುವಿನ ಈ ಪಂದ್ಯ ಡ್ರಾ ಆಗಿದ್ದು, ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಬೆಂಗಾಲ್ ಸೆಮಿಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟ್ ಮಾಡಿದ ಪಶ್ಚಿಮ ಬಂಗಾಳ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 773 ರನ್ ಗಳಿಸಿತು. ಸುದೀಪ್ ಕುಮಾರ್ ಘರಾಮಿ 186 ಮತ್ತು ಅನುಸ್ತಪ್ ಮಜುಂದಾರ್ 117 ರನ್ ಗಳಿಸಿದರು. ಮನೋಜ್ ತಿವಾರಿ ಕೂಡ ಮೊದಲ ಇನಿಂಗ್ಸ್‌ನಲ್ಲಿ 73 ರನ್ ಗಳಿಸಿದ್ದರು. ಬಂಗಾಳದ ಮೊದಲ ಇನ್ನಿಂಗ್ಸ್‌ನಲ್ಲಿ 9 ಬ್ಯಾಟ್ಸ್‌ಮನ್‌ಗಳು 50 ಕ್ಕೂ ಹೆಚ್ಚು ರನ್ ಗಳಿಸಿ ವಿಶ್ವದಾಖಲೆ ಮಾಡಿದರು.
ಮೊದಲ ಇನಿಂಗ್ಸ್‌ನಲ್ಲಿ 186 ರನ್ ಗಳಿಸಿದ ಸುದೀಪ್ ಕುಮಾರ್ ಘರಾಮಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಜಾರ್ಖಂಡ್ ಬಗ್ಗೆ ಮಾತನಾಡುವುದಾದರೆ, ವಿರಾಟ್ ಸಿಂಗ್ ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ 113 ರನ್ ಗಳಿಸಿದರು, ಆದರೆ ತಂಡವು ಕೇವಲ 298 ರನ್‌ಗಳಿಗೆ ಆಲೌಟ್ ಆಯಿತು.
ಬಂಗಾಳ, ಮಧ್ಯಪ್ರದೇಶ, ಮುಂಬೈ ಮತ್ತು ಉತ್ತರ ಪ್ರದೇಶ ತಂಡಗಳು ರಣಜಿ ಟ್ರೋಫಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ. ಸೆಮಿಫೈನಲ್ ಪಂದ್ಯಗಳು ಜೂನ್ 14 ರಿಂದ ನಡೆಯಲಿದ್ದು, ಜೂನ್ 14 ರಂದು ಮೊದಲ ಸೆಮಿಫೈನಲ್ ಬಂಗಾಳ ಮತ್ತು ಮಧ್ಯಪ್ರದೇಶ ನಡುವೆ ನಡೆಯಲಿದೆ. ಮತ್ತೊಂದೆಡೆ ಎರಡನೇ ಸೆಮಿಫೈನಲ್‌ನಲ್ಲಿ ಮುಂಬೈ ಮತ್ತು ಉತ್ತರ ಪ್ರದೇಶ ಪೈಪೋಟಿ ನಡೆಸಲಿವೆ.
ಪ್ರಸಕ್ತ ಸಾಲಿನ ರಣಜಿ ಟ್ರೋಫಿಯಲ್ಲಿ ಮುಂಬೈ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಮೇಲುಗೈ ಸಾಧಿಸಿದ್ದಾರೆ. ಶಮ್ಸ್ ಮುಲಾನಿ 37 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ, ಸರ್ಫರಾಜ್ ಖಾನ್ 140 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 704 ರನ್ ಗಳಿಸಿದ್ದಾರೆ.
Published On - 2:48 pm, Fri, 10 June 22