Exclusive: ಇದು ಭಾರತೀಯ ಕ್ರಿಕೆಟ್ ತಲೆತಗ್ಗಿಸುವಂತಹ ಸುದ್ದಿ: ಇಲ್ಲಿದೆ ಉತ್ತರಖಂಡ ಕ್ರಿಕೆಟ್​ನ ಕರ್ಮಕಾಂಡ

ಇದೀಗ ಉತ್ತರಖಂಡ ಕ್ರಿಕೆಟ್​ ಅಸೋಸಿಯೇಷನ್​ನ (Uttarakhand Cricket Association) ಕರಾಳ ಮುಖ ಬಯಲಾಗಿದೆ. ಇಲ್ಲಿ ಆಟಗಾರರನ್ನು ಯಾವರೀತಿ ನಡೆಸಿಕೊಳ್ಳಲಾಗುತ್ತದೆ?, ಏನೆಲ್ಲ ಮೋಸ ನಡೆಯುತ್ತಿದೆ? ಎಂಬ ವಿಚಾರ ಬಯಲಾಗಿದೆ.

Exclusive: ಇದು ಭಾರತೀಯ ಕ್ರಿಕೆಟ್ ತಲೆತಗ್ಗಿಸುವಂತಹ ಸುದ್ದಿ: ಇಲ್ಲಿದೆ ಉತ್ತರಖಂಡ ಕ್ರಿಕೆಟ್​ನ ಕರ್ಮಕಾಂಡ
Uttarakhand Cricket Team
Follow us
TV9 Web
| Updated By: Vinay Bhat

Updated on:Jun 10, 2022 | 10:14 AM

2021ನೇ ಸಾಲಿನ ರಣಜಿ ಟ್ರೋಫಿ (Ranji Trophy) ಕ್ವಾರ್ಟರ್ ಫೈನಲ್ ಪಂದ್ಯಗಳು ಶುಕ್ರವಾರಕ್ಕೆ ಅಂತ್ಯ ಕಾಣಲಿದೆ. ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳ ಫಲಿತಾಂಶ ಈಗಾಗಲೇ ಹೊರಬಿದ್ದಾಗಿದೆ. ಇದರಲ್ಲಿ ಪೃಥ್ವಿ ಶಾ ನಾಯಕತ್ವದ ಮುಂಬೈ ತಂಡ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ವಿಶ್ವ ದಾಖಲೆಯನ್ನೇ ನಿರ್ಮಿಸಿತು. ಅದು ಉತ್ತರಖಂಡ (Uttarakhand) ತಂಡದ ವಿರುದ್ಧ. ಬರೋಬ್ಬರಿ 725 ರನ್​ಗಳ ಗೆಲುವು ಸಾಧಿಸಿದ ಮುಂಬೈ ತಂಡ ಮೇಲುಗೈ ಸಾಧಿಸಿತು. ಉತ್ತರಖಂಡ ಈ ಪಂದ್ಯದಲ್ಲಿ ಕೇವಲ 114 ರನ್ ಹಾಗೂ 69 ರನ್​ಗೆ ಆಲೌಟ್ ಆಗಿ ತೀರಾ ಕಳಪೆ ಪ್ರದರ್ಶನ ತೋರಿತು. ಹೀಗಿರುವಾಗ ಇದೀಗ ಉತ್ತರಖಂಡ ಕ್ರಿಕೆಟ್​ ಅಸೋಸಿಯೇಷನ್​ನ (Uttarakhand Cricket Association) ಕರಾಳ ಮುಖ ಬಯಲಾಗಿದೆ. ಇಲ್ಲಿ ಆಟಗಾರರನ್ನು ಯಾವರೀತಿ ನಡೆಸಿಕೊಳ್ಳಲಾಗುತ್ತದೆ?, ಏನೆಲ್ಲ ಮೋಸ ನಡೆಯುತ್ತಿದೆ? ಎಂಬ ವಿಚಾರ ಬಯಲಾಗಿದೆ.

ಉತ್ತರಾಖಂಡದ ಪ್ರತಿ ಹಿರಿಯ ಆಟಗಾರರಿಗೆ ದೈನಂದಿನ ಭತ್ಯೆ ಆರಂಭದಲ್ಲಿ 1,500 ರೂ. ಇರುತ್ತದೆ. ನಂತರ ಅದನ್ನು 1,000 ರೂ. ಇಳಿಸಿಲಾಗುತ್ತದೆ ಮತ್ತು 2,000 ರೂ. ಗೆ ಏರಿಕೆ ಮಾಡಲಾಗುತ್ತದೆ. ಆದರೆ, ಇಲ್ಲಿ ನಿಜಾಂಶವೆಂದರೆ ಕಳೆದ 12 ತಿಂಗಳುಗಳಿಂದ ಉತ್ತರಖಂಡ ಕ್ರಿಕೆಟಿಗರಿಗೆ ದಿನಕ್ಕೆ ಸಿಗುತ್ತಿರುವುದು ಕೇವಲ 100 ರೂ. ಮಾತ್ರ. ಉತ್ತರಾಖಂಡ ಸರ್ಕಾರದ ಪ್ರಕಾರ, ಏಪ್ರಿಲ್ 2022 ರಂತೆ, ಒಂದು ಲಕ್ಷಕ್ಕೂ ಹೆಚ್ಚು ಜನರಿರುವ ಪಟ್ಟಣದಲ್ಲಿ ಕೌಶಲ್ಯ ರಹಿತ ಕಾರ್ಮಿಕರ ಕನಿಷ್ಠ ವೇತನ 800 ರೂ. ಇದೆ. ಆದರೆ, ಭಾರತೀಯ ಕ್ರಿಕೆಟ್‌ನ ಕ್ವಾರ್ಟರ್-ಫೈನಲ್‌ನಲ್ಲಿ ತಮ್ಮ ರಾಜ್ಯವನ್ನು ಪ್ರತಿನಿಧಿಸುವ ವೃತ್ತಿಪರ ಕ್ರಿಕೆಟಿಗರಿಗೆ ಸಿಗುತ್ತಿರುವುದು 100 ರೂ., ಇಲ್ಲಿ ಮತ್ತೊಂದು ಬೇಸರದ ಸಂಗತಿ ಎಂದರೆ ಈ 100 ರೂಪಾಯಿ ಕೂಡ ಸಿಗಬೇಕಾದರೆ ಪದೇ ಪದೇ ಕೇಳಬೇಕಾದ ಅನಿವಾರ್ಯತೆ ಇದೆ.

ಮಾರ್ಚ್ 31, 2021ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ, ಉತ್ತರಾಖಂಡ ಕ್ರಿಕೆಟ್ ಅಸೋಸಿಯೇಷನ್ ​​(CAU) ತನ್ನ ಆಡಿಟ್ ವರದಿಯಲ್ಲಿ ನೀಡಿದ ವಿವರಣೆ ನೋಡಿದರೆ ಆಘಾತವಾಗುತ್ತಿದೆ, (ಇದರ ನಕಲು ನ್ಯೂಸ್ 9 ಸ್ಪೋರ್ಟ್ಸ್‌ನಲ್ಲಿದೆ). ‘ಟೂರ್ನಮೆಂಟ್ ಮತ್ತು ಟ್ರಯಲ್ ಕ್ಯಾಂಪ್ ವೆಚ್ಚಗಳು’ ಎಂಬ ಉಪ-ಶೀರ್ಷಿಕೆಯ ಅಡಿಯಲ್ಲಿ, CAU ಆಹಾರ ಮತ್ತು ಅಡುಗೆಗಾಗಿ 1,74,07,346 ರೂ. ಮತ್ತು ದೈನಂದಿನ ಭತ್ಯೆಗಳಿಗಾಗಿ 49,58,750 ರೂಪಾಯಿಗಳನ್ನು ಕ್ಲೈಮ್ ಮಾಡಿದೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಬಾಳೆಹಣ್ಣಿಗಾಗಿ 35 ಲಕ್ಷ ರೂಪಾಯಿ ಮತ್ತು 22 ಲಕ್ಷ ರೂಪಾಯಿ ಮೌಲ್ಯದ ನೀರಿನ ಬಾಟಲಿಗಳಿಗೆ ವೆಚ್ಚವಾಗಿದೆ ಎಂದು ಹೇಳಿದೆ. ಆದರೆ, ಆಟಗಾರರಿಗೆ ಭತ್ಯೆ ಮಾತ್ರ ದಿನಕ್ಕೆ 100 ರೂಪಾಯಿ ಮಾತ್ರ.

ಇದನ್ನೂ ಓದಿ
Image
IND vs SA: ವಿಶ್ವದ ದಾಖಲೆ ನಿರ್ಮಿಸುವ ಟೀಮ್ ಇಂಡಿಯಾ ಕನಸು ನುಚ್ಚುನೂರು ಮಾಡಿದ ಆಫ್ರಿಕಾನ್ನರು
Image
IPL 2023: 74, 84, 94: ಐಪಿಎಲ್​ ಟೂರ್ನಿಯಲ್ಲಿ ಮಹತ್ವದ ಬದಲಾವಣೆ..!
Image
Virat Kohli: ಲಯ ತಪ್ಪಿದ ಕೊಹ್ಲಿಯ ಮುಂದೆ ಬಾಬರ್​ನ ಆರ್ಭಟ..!
Image
Ranji Trophy: 9 ಬ್ಯಾಟ್ಸ್​ಮನ್​ಗಳು ಅರ್ಧಶತಕ: ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ

ಹಾಗಂತ ಆಟಗಾರರು ಈ ಅನ್ಯಾಯವನ್ನು ಕಂಡು ಸುಮ್ಮನೆ ಕೂತಿಲ್ಲ. ಮ್ಯಾನೇಜರ್ ಬಳಿ ಪ್ರಶ್ನೆ ಮಾಡಿದ್ದಾರೆ. ಆದರೆ, ಇದಕ್ಕೆ ಮ್ಯಾನೇಜರ್ ನೀಡಿದ ಉತ್ತರ ಹೀಗಿತ್ತು – “ಏಕೆ ನೀವು ಅದೇ ಪ್ರಶ್ನೆಯನ್ನು ಕೇಳುತ್ತಿದ್ದೀರಾ? ನಿಮಗೆ ಹಣವನ್ನು ನೀಡಲಾಗುತ್ತದೆ. ಅಲ್ಲಿಯವರೆಗೆ ಸ್ವಿಗ್ಗಿ-ಜೊಮ್ಯಾಟೋ ಮೂಲಕ ಆರ್ಡರ್ ಮಾಡಿ ತಿನ್ನಿ” ಎಂಬುದು ಅವರ ಉತ್ತರ.

ಹೀಗಿರುವ ಉತ್ತರಖಂಡ ತಂಡ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಠ ಮುಂಬೈ ವಿರುದ್ಧ ಸ್ಪರ್ಧಿಸಿದ್ದೇ ಅಚ್ಚರಿ. ಆದರೆ, ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಯಿತು. ನಿಗದಿತ ನಾಲ್ಕನೇ ದಿನದಂದು ಊಟದ ಮೊದಲು 69 ರನ್‌ಗಳಿಗೆ ಆಲೌಟ್ ಆಯಿತು. ಮೈದಾನದಲ್ಲಿ ನಾಲ್ಕು ದಿನಗಳಿಂದ ಆಡಿ ಈಗ ಅವರ ಉತ್ಸಾಹ ಕೂಡ ಕುಗ್ಗಿ ಹೋಗಿದೆ. ತಂಡವನ್ನು ನೋಡಿಕೊಳ್ಳಬೇಕಾದ ಸಂಘದಿಂದ ಅವರಿಗೆ ಯಾವಾಗ ಸಂಬಳ ಅಥವಾ ಸರಿಯಾಗಿ ಆಹಾರವನ್ನು ನೀಡಲಾಗುತ್ತದೆ ಎಂದು ತಿಳಿಯದೆ ಮಾನಸಿಕ ವೇದನೆ ಅನುಭವಿಸುತ್ತಿದ್ದಾರೆ. ಉತ್ತರಖಂಡ ಕ್ರಿಕೆಟ್​​ ಅಸೋಸಿಯೇಷನ್​ನಲ್ಲಿ ಹಣಕಾಸಿನ ದುರುಪಯೋಗ ಎಗ್ಗಿಲ್ಲದೆ ಸಾಗುತ್ತಿದೆ. ಈ ಬಗ್ಗೆ CAU ಸದಸ್ಯರು ಮತ್ತು ಸ್ಥಳೀಯ ಆಟಗಾರರ ಪೋಷಕರೊಂದಿಗೆ ಪತ್ರಕರ್ತರು ಮಾತನಾಡಿದಾಗ ಮತ್ತಷ್ಟು ಅಚ್ಚರಿಯ ವಿಷಯಗಳು ಬೇಳಕಿಗೆ ಬಂದಿವೆ.

2019 ರಿಂದ 2022 ರವರೆಗಿನ ಅಧಿಕೃತ CAU ದಾಖಲೆಗಳ ಪ್ರತಿಗಳು ನ್ಯೂಸ್ 9 ಸ್ಪೋರ್ಟ್ಸ್​ಗೆ ಲಭ್ಯವಾಗಿದೆ. ಇದರ ಪ್ರಕಾರ, ಸೆಪ್ಟೆಂಬರ್ 28, 2019 ರಂತೆ ಐದು ಪದಾಧಿಕಾರಿಗಳನ್ನು CAU ಗೆ ಆಯ್ಕೆ ಮಾಡಲಾಗಿದೆ. ಜೋತ್ ಸಿಂಗ್ ಗುನ್ಸೋಲಾ (ಅಧ್ಯಕ್ಷರು), ಸಂಜಯ್ ರಾವತ್ (ಉಪಾಧ್ಯಕ್ಷರು), ಮಹಿಮ್ ವರ್ಮಾ (ಕಾರ್ಯದರ್ಶಿ), ಅನ್ವಿಶ್ ವರ್ಮಾ (ಜಂಟಿ ಕಾರ್ಯದರ್ಶಿ), ಪೃಥ್ವಿ ಸಿಂಗ್ ನೇಗಿ (ಖಜಾಂಚಿ) ಮತ್ತು ದೀಪಕ್ ಮೆಹ್ರಾ ಅವರು ಅಪೆಕ್ಸ್ ಕೌನ್ಸಿಲ್‌ನ ಸದಸ್ಯರಾಗಿದ್ದಾರೆ. ಮಹಿಮ್ ವರ್ಮಾ ಅವರು ಸೆಪ್ಟೆಂಬರ್ 4 ಮತ್ತು 5, 2019 ರಂದು ಸಹಿ ಹಾಕಿದ್ದಾರೆ. ಇದರಲ್ಲಿ U-19 ತಂಡದ ತರಬೇತುದಾರ ಮತ್ತು ಫಿಸಿಯೋಥೆರಪಿಸ್ಟ್, ಹಿರಿಯ ಪುರುಷರ ಮತ್ತು ಮಹಿಳಾ ತಂಡಗಳ ಮ್ಯಾನೇಜರ್, U-19 ಮತ್ತು U-16 ತಂಡಗಳ ಮ್ಯಾನೇಜರ್ ಮತ್ತು U-23 ಮಹಿಳಾ ತಂಡದ ವ್ಯವಸ್ಥಾಪಕರ ನೇಮಕಾತಿಗಳು ಸೇರಿವೆ.

ಸೆಪ್ಟೆಂಬರ್ 1, 2019 ರಂದು ಮಹಿಮ್ ವರ್ಮಾ ಅವರು BCCI ಮೀಡಿಯಾ ಮ್ಯಾನೇಜರ್ ಮತ್ತು ಮಾಜಿ ಅಧಿಕಾರಿ ಅಮೃತ್ ಮಾಥುರ್ ಅವರನ್ನು ಮಂಡಳಿಯ ಸಲಹೆಗಾರರಾಗಿ ನೇಮಕ ಮಾಡಿದ್ದಾರೆ. ಅದೇ ದಿನಾಂಕದಂದು ಜಂಟಿ ಕಾರ್ಯದರ್ಶಿಯಾಗಿ ಮಾಜಿ 1983ರ ವಿಶ್ವಕಪ್ ಸದಸ್ಯ ಸುನಿಲ್ ವಲ್ಸನ್ ಅವರ ಪುತ್ರ ರಾಹಿಲ್ ವಲ್ಸನ್ ಅವರನ್ನು 2019-20 ವಿಜಯ್ ಹಜಾರೆ ಟ್ರೋಫಿಯ ಕ್ರಿಕೆಟ್ ಕಾರ್ಯಾಚರಣೆಗಳ ಸಂಯೋಜಕರಾಗಿ ಆಯ್ಕೆ ಮಾಡಿದ್ದಾರೆ. ಆಪರೇಟರ್ ಎಂಬ ಹೆಸರಿನಡಿಯಲ್ಲಿ ಸುಮಿತ್ ಬಿಶ್ತ್ ಅವರ ನೇಮಕವೂ ಆಗಿದೆ. ಅಂತೆಯೇ, ಆಶಿಶ್ ಘರ್ಟಿ ಎಂಬವರನ್ನು ‘ಸಹಾಯಕ (ಸ್ಟೋರ್ಸ್ ಮತ್ತು ಲಾಜಿಸ್ಟಿಕ್ಸ್)’ ಮತ್ತು ರಾಜ್‌ದೀಪ್ ಚೌಹಾಣ್ ಅವರನ್ನು ‘ಹಿರಿಯ ಕಾರ್ಯನಿರ್ವಾಹಕ (ಕಾರ್ಯಾಚರಣೆಗಳು) ಆಗಿ ಯಾವುದೇ ದಾಖಲಾತಿಗಳಿಲ್ಲದೆ ನೇಮಿಸಿದ್ದಾರೆ.

ಇನ್​ಫ್ಯುಲೆನ್ಸ್​ಗೆ ಬೆಲೆ:

ಈ ಬಗ್ಗೆ CAU ಸದಸ್ಯರೊಬ್ಬರು ಮಾತನಾಡಿದ್ದು, “ವೃತ್ತಿಪರ ಸೆಟಪ್‌ನಲ್ಲಿ, ಯಾರಾದರೂ ಕೆಲಸಕ್ಕೆ ಅರ್ಜಿ ಸಲ್ಲಿಸಿದರೆ ಅವರು ತಮ್ಮ ರುಜುವಾತುಗಳನ್ನು ಸಾಬೀತುಪಡಿಸಬೇಕು, ಇದು ನಿಯಮ. ಅರ್ಹ ಅನುಭವ ಮತ್ತು ರುಜುವಾತುಗಳನ್ನು ಹೊಂದಿರುವ ಅರ್ಜಿಯನ್ನು ನೋಡಿದ ನಂತರವೇ ಅಭ್ಯರ್ಥಿಯನ್ನು ಕರೆಯುತ್ತಾರೆ. ಆದರೆ ಇಲ್ಲಿ ಹಾಗಲ್ಲ, ಇಲ್ಲಿ ಯಾವುದೇ ರುಜುವಾತುಗಳನ್ನು ಕೇಳುವುದಿಲ್ಲ. ನೇರವಾಗಿ ನೇಮಕಾತಿಗಳನ್ನು ಮಾಡಲಾಗುತ್ತದೆ. ಅದು ಸ್ನೇಹ ಮತ್ತು ಇನ್​ಫ್ಯುಲೆನ್ಸ್ ಮೇಲೆ ನಿಂತಿದೆ,” ಎಂದು ಹೇಳಿದ್ದಾರೆ.

ಇನ್ನೊಬ್ಬ ಅಧಿಕಾರಿ ಮಾತನಾಡುತ್ತಾ, “ಕಾರ್ಯಕಾರಿ ಮಂಡಳಿಯ ಸದಸ್ಯರಲ್ಲಿ ಒಬ್ಬರು ಮಾತ್ರ ಈ ಅಕ್ರಮ ನೇಮಕಾತಿಗಳು ಮತ್ತು ಸಂಶಯಾಸ್ಪದ ನಿರ್ಧಾರಗಳ ಬಗ್ಗೆ ಪ್ರಶ್ನೆಯನ್ನು ಎತ್ತುವ ಧೈರ್ಯವನ್ನು ಹೊಂದಿದ್ದಾರೆ. ಈ ವಿಚಾರ CAUಗೆ ತಿಳಿದರೆ ಅವರನ್ನ ಮುಖ್ಯ ಕಚೇರಿಗೆ ಕರೆಸಿ ಎರಡು ಲಕ್ಷ ರೂ. ನೀಡಿ ಸುಮ್ಮನಿರಲು ಹೇಳುತ್ತಾರೆ,” ಎಂದು ಹೇಳಿದ್ದಾರೆ.

ಜೇ ಬಿಸ್ತಾ ಹೇಳಿದ್ದೇನು?:

ಇನ್ನು ಉತ್ತರಖಂಡ್ ತಂಡದ ನಾಯಕ ಜೇ ಬಿಸ್ತಾ ಸೇರಿದಂತೆ ಹಲವಾರು ಉತ್ತರಾಖಂಡ ಆಟಗಾರರು ತಮಗಾಗುತ್ತಿರುವ ಅನ್ಯಾದ ಬಗ್ಗೆ ಅನೇಕ ಬಾರಿ ಮಾತನಾಡಿದ್ದಾರೆ. ಬಿಸಿಸಿಐಗೆ ಮೇಲ್ ಕೂಡ ಮಾಡಿದ್ದರಂತೆ. ಈ ಪತ್ರವು ನ್ಯೂಸ್ 9 ಸ್ಪೋರ್ಟ್ಸ್​ಗೆ ಸಿಕ್ಕಿದ್ದು, ಇದರಲ್ಲಿ ಬಿಸಿಸಿಐ ಮಂಡಳಿಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ, CAU ನಿಂದ ನಿರಾಕರಿಸಲಾಗಿದೆ ಎಂದು ಬಿಸ್ತಾ ಹೇಳಿಕೊಂಡಿದ್ದಾರೆ. ಭತ್ಯೆಗಳನ್ನು ಮಂಡಳಿಗೆ ಮರುಪಾವತಿ ಮಾಡಲಾಗುತ್ತಿದೆಯೇ ಎಂಬುದನ್ನು ದೃಢೀಕರಿಸುವ ಒಂದು ಸಾಲು ಮತ್ತು ಅರ್ಹವಾದ ಮೊತ್ತವನ್ನು ತೆರವುಗೊಳಿಸಲು ಮಂಡಳಿಗೆ ಸೂಚನೆ ನೀಡುವ ವಿಷಯದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದಾಗಿ ಒಂದು ವಾರದ ನಂತರ ರೂ 2,800 ಮತ್ತು ರೂ 2,700 ರ ಎರಡು ಬ್ಯಾಂಕ್ ವಹಿವಾಟುಗಳನ್ನು ಬಿಸ್ತಾ ಗಮನಿಸಿದರಂತೆ. ಈ ಪಾವತಿಗಳ ಬಗ್ಗೆ ಅವರು ಉತ್ತರಾಖಂಡ ತಂಡದ ವ್ಯವಸ್ಥಾಪಕರನ್ನು ಸಂಪರ್ಕಿಸಿದಾಗ, ಇದು ಬಿಸಿಸಿಐನಿಂದ CAU ಸ್ವೀಕರಿಸಿದ ದೈನಂದಿನ ಭತ್ಯೆ ಬಾಕಿ ಎಂದು ಬಿಸ್ತಾಗೆ ತಿಳಿಸಿದ್ದಾರೆ.

“ಅವರು ಏನು ಹೇಳುತ್ತಿದ್ದಾರೆಂದು ನನಗೆ ಅರ್ಥವಾಗಲಿಲ್ಲ, ಏಕೆಂದರೆ ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸಮಯದಲ್ಲಿ ನಾವು ಸುಮಾರು 35 ಅಥವಾ 36 ದಿನಗಳ ಕ್ರಿಕೆಟ್ ಮತ್ತು ಪ್ರಯಾಣವನ್ನು ಮಾಡುತ್ತೇವೆ. ಇಲ್ಲಿ ಐದು ಸಾವಿರ ರೂಪಾಯಿಗಳು ಹೇಗೆ ಸಾಕಾಗುತ್ತದೆ?. ಯಾವುದೇ ರಾಜ್ಯ ಕ್ರಿಕೆಟ್ ಇಷ್ಟು ದಿನಗಳವರೆಗೆ ಅಂತಹ ದೈನಂದಿನ ಭತ್ಯೆಯನ್ನು ನೀಡುವುದಿಲ್ಲ, ಇದು ಆತಂಕಕಾರಿಯಾಗಿದೆ, ಏಕೆಂದರೆ ಬಿಸಿಸಿಐ ಸಂಘಕ್ಕೆ ಹಣ ನೀಡುತ್ತದೆ. ಆದರೆ, ಸಂಘವು ನಮಗೆ ಹಣ ನೀಡುವುದಿಲ್ಲ,” ಎಂದು ಬಿಸ್ತಾ ಮಾತು.

ಮಾತು ಮುಂದುವರೆಸಿದ ಬಿಸ್ತಾ, “ನಾನು ಮ್ಯಾನೇಜರ್‌ನೊಂದಿಗೆ ಮಾತನಾಡಿದಾಗ, ಅವರು ಸಾಂಕ್ರಾಮಿಕ ರೋಗದಿಂದಾಗಿ ಹಣವನ್ನು ಕಡಿತಗೊಳಿಸಿರಬೇಕು ಎಂದು ಹೇಳಿದರು. ನಂತರ ನಾನು ಇತರ ರಾಜ್ಯ ಸಂಘಗಳ ನನ್ನ ಕೆಲವು ಕ್ರಿಕೆಟಿಗ ಸ್ನೇಹಿತರಿಗೆ ಕರೆ ಮಾಡಿದ್ದೇನೆ, ಅವರು ತಮ್ಮ ದೈನಂದಿನ ಭತ್ಯೆಗಳನ್ನು ಪೂರ್ಣವಾಗಿ ಪಡೆದಿದ್ದಾರೆ ಎಂದು ಹೇಳಿದರು. ಇಲ್ಲಿ ನಾವು 2020-21 ಸೀಸನ್‌ಗೆ ಹಣ ಪಡೆದಿರಲಿಲ್ಲ. ನಾವು ಹಣ ಪಡೆಯುತ್ತಿಲ್ಲ ಅಥವಾ ನಮಗೆ ಸ್ಪಷ್ಟ ಚಿತ್ರಣವನ್ನು ನೀಡಲಾಗುತ್ತಿಲ್ಲ,” ಎಂದು ಹೇಳಿದ್ದಾರೆ.

ಉತ್ತರಾಖಂಡದ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿನ ಅಸ್ವಸ್ಥತೆಯ ಬಗ್ಗೆ ಉತ್ತರಾಖಂಡ ಮಾಧ್ಯಮಗಳು ನಿಯಮಿತವಾಗಿ ವರದಿ ಮಾಡುತ್ತಿವೆ.

ಉತ್ತರಾಖಂಡದ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿನ ಅಕ್ರಮದ ಬಗ್ಗೆ ಉತ್ತರಾಖಂಡ ಮಾಧ್ಯಮಗಳು ಮಾಡಿರುವ ವರದಿ.

ನನ್ನ ಮಗನನ್ನು ಲಾಕ್ ಮಾಡಿದ್ದರು:

ಉತ್ತರಾಖಂಡ ಕ್ರಿಕೆಟಿಗರ ಪೋಷಕರು ಕೂಡ ಇಲ್ಲಿನ ಕ್ರಿಕೆಟ್ ಮಂಡಳಿ ಬಗ್ಗೆ ಬೇಸರ ಹೊರಹಾಕಿದ್ದಾರೆ. ಒಬ್ಬ ಆಟಗಾರನ ತಂದೆ ಮಾತನಾಡುತ್ತಾ, “ಸಿಎಯು ಆಯ್ಕೆಗೆ ಯಾವುದೇ ಮಾನದಂಡವನ್ನು ನಿಗದಿಪಡಿಸಿಲ್ಲ ಮತ್ತು ಶಿಫಾರಸು ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಿ ಡ್ರಾಪ್ ಮಾಡಲಾಗುತ್ತದೆ. ಈ ಬಗ್ಗೆ ಕೆಲವು ಸಿಎಯು ಅಧಿಕಾರಿಗಳು ಮತ್ತು ಆಯ್ಕೆದಾರರಿಗೆ ದೂರು ನೀಡಿದ ನಂತರ ಅವರು ಮಗನನ್ನು ಎರಡು ದಿನಗಳ ಕಾಲ ಸ್ಟೋರ್ ರೂಂನಲ್ಲಿ ಲಾಕ್ ಮಾಡಿದ್ದರು,” ಎಂದು ಆರೋಪಿಸಿದ್ದಾರೆ.

ಕೊಲೆ ಬೆದರಿಕೆ:

ಡೆಹ್ರಾಡೂನ್ ಮೂಲದ ಬ್ಯಾಟ್ಸ್‌ಮನ್ ಆರ್ಯ ಸೇಥಿ ಅವರ ತಂದೆ ರವಿ ಸೇಥಿ ಅವರು ರೆಕಾರ್ಡ್‌ನಲ್ಲಿ ಮಾತನಾಡಲು ಸಿದ್ಧರಿರುವ ಪೋಷಕ ನ್ಯೂಸ್ 9 ಸ್ಪೋರ್ಟ್ಸ್ ಭೇಟಿಯಾಗಿದ್ದು, ಅವರು ತನಗೆ ಕೊಲೆ ಬೆದರಿಕೆ ಕೂಡ ಬಂದಿದೆ ಎಂದು ಆರೋಪಿಸಿದ್ದಾರೆ. 2018 ರಲ್ಲಿ, ಸೇಥಿ ಅವರ ಮಗ ಆರ್ಯ ಅವರು 17 ನೇ ವಯಸ್ಸಿನಲ್ಲಿ ಉತ್ತರಾಖಂಡ್‌ಗಾಗಿ ಆಡಲು ಆಯ್ಕೆಯಾದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಚೊಚ್ಚಲ ಅರ್ಧಶತಕವನ್ನು ಗಳಿಸಿದರು. ಅವರು ಆ ಋತುವಿನ ಪಂದ್ಯಾವಳಿಯಲ್ಲಿ ಇನ್ನೂ ಎರಡು ಪಂದ್ಯಗಳನ್ನು ಆಡಿದರು. 25 ಮತ್ತು 10 ರನ್ ಗಳಿಸಿದರು. ಆದರೆ, 2021 ರವರೆಗೆ ಲಿಸ್ಟ್ A ಕ್ರಿಕೆಟ್‌ನಲ್ಲಿ ಅವಕಾಶವನ್ನೇ ಪಡೆಯಲಿಲ್ಲ. ಈ ಪ್ರದರ್ಶನಗಳ ನಡುವೆ, 2019-20 ಋತುವಿನಲ್ಲಿ ಆರ್ಯ ಉತ್ತರಾಖಂಡ್‌ಗಾಗಿ ಮೂರು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದರು. ಆರ್ಯ ಸ್ಥಳೀಯ ಲೀಗ್‌ಗಳು ಮತ್ತು ಅರ್ಹತಾ ಪಂದ್ಯಗಳಲ್ಲಿ ಉತ್ತಮ ಸ್ಕೋರ್ ಮಾಡಿದರೂ ಸತತ 29 ಪಂದ್ಯಗಳಲ್ಲಿ ಬೆಂಚ್ ಕಾಯಿಸಿದರು. ಇದು ಮಾನಸಿಕ ಕಿರುಕುಳಕ್ಕೆ ಕಾರಣವಾಗಿದೆ ಎಂದು ಅವರ ತಂದೆ ಆರೋಪಿಸಿದ್ದಾರೆ. ಡಿಸೆಂಬರ್ 2021 ರಲ್ಲಿ, ಸೇಥಿ ತನ್ನ ಮಗನಿಗೆ ಜೀವ ಬೆದರಿಕೆಯ ಕುರಿತು ಡೆಹ್ರಾಡೂನ್ ಪೊಲೀಸರಿಗೆ ದೂರು ನೀಡಿದ್ದಾರೆ.

ಆರ್ಯ ಸೇಥಿ ಅವರಿಗೆ ಬಂದಿರುವ ಬೆದರಿಕೆಗಳನ್ನು ವರದಿ ಮಾಡುವ ಸುದ್ದಿ ಲೇಖನ.

ಆರ್ಯ ಸೇಥಿ ಅವರಿಗೆ ಬಂದಿರುವ ಬೆದರಿಕೆಗಳನ್ನು ವರದಿ ಮಾಡುವ ಸುದ್ದಿ ಲೇಖನ.

ಒಟ್ಟಾರೆ ಉತ್ತರಖಂಡ್​ನಲ್ಲಿ ಪ್ರತಿಭಾವಂತ ಕ್ರಿಕೆಟಿಗರಿದ್ದರೂ ಅವರಿಗೆ ಈ ಭ್ರಷ್ಟಾಚಾರದ ನಡುವೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ ಎಂಬುದು ನಿಜಾಂಶ. ಆಟಗಾರರು ಅಸುರಕ್ಷಿತರಾಗಿದ್ದಾರೆ, ಪೋಷಕರು ಭಯಭೀತರಾಗಿದ್ದಾರೆ. ಆಟಗಾರರು ಆಟವಾಡಿದರೂ ಹಣವಿಲ್ಲದೆ ಓಡಾಡುತ್ತಿದ್ದಾರೆ. ನ್ಯೂಸ್ 9 ಸ್ಪೋರ್ಟ್ಸ್ ಗಮನಿಸಿದಂತೆ ಈ ಅಕ್ರಮಗಳಿಗೆ ಅಧಿಕೃತ ದಾಖಲೆಗಳು ನೂರಾರು ಸಂಖ್ಯೆಯಲ್ಲಿವೆ. ಇನ್ನಾದರು ಸಂಬಂಧಪಟ್ಟವರು ಈ ಬಗ್ಗೆ ಎಚ್ಚೆತ್ತು ಸೂಕ್ತ ಕ್ರಮಕೈಗೊಳ್ಳುತ್ತಾರಾ ಎಂಬುದು ಕಾದುನೋಡಬೇಕಿದೆ. ಈ ಸುದ್ದಿಯನ್ನು ಇಂಗ್ಲಿಷ್​​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:13 am, Fri, 10 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ