‘ರಾಷ್ಟ್ರಭಾಷೆ ಕುರಿತ ಚರ್ಚೆ ಪ್ರಧಾನಿ ಮಾತಿನೊಂದಿಗೆ ಮುಕ್ತಾಯವಾಗಿರುವುದು ಸಂತಸ ತಂದಿದೆ’: ಸುದೀಪ್​

PM Narendra Modi | Kichcha Sudeep | National Language: ಸುದೀಪ್ ಸಂದರ್ಶನವೊಂದರಲ್ಲಿ ಅಜಯ್ ದೇವಗನ್​ ಜತೆಗಿನ ಚರ್ಚೆಯ ಪ್ರಕರಣದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಜತೆಗೆ ಆ ಮಾತುಕತೆ ಯಾವುದೇ ಅಹಂಕಾರದಿಂದ ಆಗಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ರಾಷ್ಟ್ರಭಾಷೆ ಕುರಿತ ಚರ್ಚೆ ಪ್ರಧಾನಿ ಮಾತಿನೊಂದಿಗೆ ಮುಕ್ತಾಯವಾಗಿರುವುದು ಸಂತಸ ತಂದಿದೆ’: ಸುದೀಪ್​
ಅಜಯ್ ದೇವಗನ್​, ಪ್ರಧಾನಿ ನರೇಂದ್ರ ಮೋದಿ, ಕಿಚ್ಚ ಸುದೀಪ್
Follow us
TV9 Web
| Updated By: shivaprasad.hs

Updated on:Jun 01, 2022 | 5:11 PM

ಏಪ್ರಿಲ್​ನಲ್ಲಿ ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ (Ajay Devgan) ನಡುವೆ ನಡೆದಿದ್ದ ರಾಷ್ಟ್ರಭಾಷೆಯ ಕುರಿತಾದ ಚರ್ಚೆ ದೇಶಾದ್ಯಂತ ಸಖತ್ ಸುದ್ದಿಯಾಗಿತ್ತು. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಸುದೀಪ್ ಹಿಂದಿ ಈಗ ರಾಷ್ಟ್ರಭಾಷೆಯಾಗಿ ಉಳಿದಿಲ್ಲ ಎಂದು ಹೇಳಿದ್ದರು. ಪ್ಯಾನ್ ಇಂಡಿಯಾ ಚಿತ್ರಗಳ ಹಿನ್ನೆಲೆಯಲ್ಲಿ ಸುದೀಪ್ ಮಾತನಾಡಿದ್ದರು. ಈ ಮಾತಿಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಅಜಯ್ ದೇವಗನ್​ ಹಿಂದಿ ರಾಷ್ಟ್ರಭಾಷೆ (National Language) ಅಲ್ಲವೆಂದರೆ ಮತ್ತೇಕೆ ಡಬ್ ಮಾಡಿ ಚಿತ್ರಗಳನ್ನು ಹಿಂದಿಯಲ್ಲಿ ರಿಲೀಸ್ ಮಾಡುತ್ತೀರಿ ಎಂದು ಪ್ರಶ್ನಿಸಿದ್ದರು. ಜತೆಗೆ ಹಿಂದಿಯು ರಾಷ್ಟ್ರಭಾಷೆಯಾಗಿದೆ ಎಂದು ಅವರು ಹೇಳಿದ್ದರು. ಅಜಯ್ ಮಾತಿಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಸುದೀಪ್ ಸಂದರ್ಶನವೊಂದರಲ್ಲಿ ಆ ಇಡೀ ಪ್ರಕರಣದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಜತೆಗೆ ತಮ್ಮ ಉತ್ತರ ಯಾವುದೇ ಅಹಂಕಾರದಿಂದ ನೀಡಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಾಲಿವುಡ್ ಹಂಗಾಮಾದೊಂದಿಗಿನ ಸಂದರ್ಶನದಲ್ಲಿ ಸುದೀಪ್ ಮಾತನಾಡಿದ್ದಾರೆ. ಅದರಲ್ಲಿ ಅವರು ‘‘ಅಜಯ್ ದೇವಗನ್ ಹಾಗೂ ನಾನು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೇವೆ. ನನಗಿಂತ ಅವರಿಗೆ ಹೆಚ್ಚು ಅನುಭವ ಇದೆ. ಇಡೀ ಪ್ರಕರಣದ ಬಗ್ಗೆ ಈರ್ವರಿಗೂ ಸ್ಪಷ್ಟತೆ ಇದೆ. ನಾವು ಕಪ್ಪು- ಬಿಳುಪಿನ ಬಗ್ಗೆ ಮಾತನಾಡುತ್ತಿದ್ದೆವು, ಆದರೆ ಬೂದು ಬಣ್ಣದೊಂದಿಗೆ ಚರ್ಚೆ ನಿಲುಗಡೆಯಾಗಲು ಬಯಸುವುದಿಲ್ಲ. ಹಲವು ಜನರು ಈ ವಿಷಯದ ಬಗ್ಗೆ ಚರ್ಚಿಸಿದರು. ಎಲ್ಲರೂ ಅವರವರ ರಾಜಕೀಯ ಹಿನ್ನೆಲೆಯಲ್ಲಿ ಮಾತನಾಡಿದರು. ಆದರೆ ನಾನು ಮತ್ತು ಅಜಯ್ ಈರ್ವರೂ ಆ ಕ್ಷೇತ್ರಕ್ಕೆ ಸಂಬಂಧಿಸಿದವರಲ್ಲ’’ ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಕಿಚ್ಚ, ‘‘ಅಜಯ್​ ಅವರಿಗೆ ನನ್ನಲ್ಲಿ ಪ್ರಶ್ನೆ ಕೇಳಬೇಕಿತ್ತು. ಅದನ್ನು ಗೌರವಿಸುತ್ತೇನೆ. ಹಾಗೆಯೇ ನಾನು ಅದಕ್ಕೆ ಉತ್ತರ ನೀಡಬೇಕಿತ್ತು. ಆಗ ಹಿಂದಿಯ ಉಲ್ಲೇಖ ಬಂತು. ಹಿಂದಿ ನನಗರ್ಥವಾಗುತ್ತದೆ. ಆದರೆ ಅದರಲ್ಲಿ ಬರೆದರೆ ಎಲ್ಲರಿಗೂ ಅರ್ಥವಾಗುವುದಿಲ್ಲ. ಹೀಗಾಗಿ ಇಂಗ್ಲೀಷ್​ನಲ್ಲಿ ಉತ್ತರಿಸಿದೆ. ಅಜಯ್​ ಅವರಿಗೆ ಅವರದ್ದೇ ಪ್ರತ್ಯೇಕ ದೃಷ್ಟಿಕೋನ ಇರಬಹುದು ಎಂದಿದ್ದಾರೆ ಸುದೀಪ್.

ಇದನ್ನೂ ಓದಿ
Image
ಕಣ್ಣೀರು ತರಿಸಿತ್ತು ಸುಂದರ್​ ರಾಜ್ ಬದುಕಿನ ನೈಜ ಲವ್​ ಸ್ಟೋರಿ​; ಹಲವು ವರ್ಷಗಳ ಬಳಿಕ ಆ ಹುಡುಗಿ ಸಿಕ್ಕಾಗ..
Image
‘ವೀಲ್​ ಚೇರ್​ ರೋಮಿಯೋ’ ಚಿತ್ರ ನೋಡಿದ ಜಮೀರ್​ ಅಹ್ಮದ್​; ಹೊಸ ಹೀರೋಗೆ ಸನ್ಮಾನ
Image
Suriya in Vikram: ಹೊಸ ಟ್ವಿಸ್ಟ್​​ ನೀಡಿದ ‘ವಿಕ್ರಮ್’ ಚಿತ್ರತಂಡ; ಕಮಲ್, ವಿಜಯ್ ಸೇತುಪತಿ​, ಫಹಾದ್​ ಜತೆ ಕಾಣಿಸಿಕೊಳ್ಳಲಿದ್ದಾರೆ ಈ ಸ್ಟಾರ್ ನಟ 
Image
ವರಮಹಾಲಕ್ಷ್ಮಿ ಹಬ್ಬಕ್ಕೆ ನವರಸಗಳ ರಸದೌತಣ ಬಡಿಸ್ತಾರೆ ಜಗ್ಗೇಶ್​; ಆ.5ಕ್ಕೆ ‘ರಾಘವೇಂದ್ರ ಸ್ಟೋರ್ಸ್​’ ಶುರು

ತಮ್ಮ ಮಾತು ಅಹಂಕಾರದಿಂದಲ್ಲ ಎಂದಿರುವ ಅವರು, ‘‘ನಾನು ಹೇಳಬೇಕಾದ್ದನ್ನು ಹೇಳಿದ್ದೇನೆ. ಅದು ಅಹಂಕರಾದಿಂದಲ್ಲ. ಮೊದಲೇ ನಾನು ಕೆಣಕಿ ಉತ್ತರಿಸಬೇಕೆಂದಿದ್ದರೆ ಮೊದಲ ಟ್ವೀಟ್​ನಿಂದಲೇ ಬೇರೆ ರೀತಿಯಲ್ಲಿ ಉತ್ತರಿಸುತ್ತಿದ್ದೆ. ಮೂರನೇ ಟ್ವೀಟ್​ಗೆ ಕಾಯಬೇಕಾಗಿರಲಿಲ್ಲ. ನಾನೊಂದು ವೇಳೆ ಕನ್ನಡದಲ್ಲಿ ಉತ್ತರಿಸಿದ್ದರೆ ಏನಾಗುತ್ತಿತ್ತು ಎನ್ನುವುದು ಬಹಳ ಪ್ರಾಮಾಣಿಕವಾದ ಪ್ರಶ್ನೆ. ಇದನ್ನು ಅಜಯ್ ಕೂಡ ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ’’ ಎಂದಿದ್ದಾರೆ.

ಅಲ್ಲದೇ ಸುದೀಪ್ ಹಾಗೂ ಅಜಯ್​ ನಡುವಿನ ಚರ್ಚೆಯ ವಿಚಾರ ರಾಜಕೀಯಕರಣಗೊಂಡಿದ್ದರ ಬಗ್ಗೆ ನಟ ಉತ್ತರಿಸಿದ್ದಾರೆ. ಅದರ ಬಗ್ಗೆ ತಾವು ಚಿಂತಿಸಿಲ್ಲ ಎಂದ ಸುದೀಪ್, ಅಜಯ್ ಹಾಗೂ ತಮ್ಮ ನಡುವಿನ ಚರ್ಚೆ ಮುಗಿದಿದ್ದು, ಉಳಿದ ಚರ್ಚೆಗಳಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ.

ಪ್ರಧಾನಿ ಮೋದಿ ಮಾತಿಗೆ ಪ್ರತಿಕ್ರಿಯಿಸಿದ್ದರ ಬಗ್ಗೆ ಸುದೀಪ್ ಮಾತು:

ರಾಷ್ಟ್ರಭಾಷೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಧಾನ ಮಂತ್ರಿ ಮಾತನಾಡಿದ್ದರ ಬಗ್ಗೆಯೂ ಸುದೀಪ್ ಮಾತನಾಡಿದ್ದಾರೆ. ‘‘ನಾನು ಕನ್ನಡಿಗರ ಬಗ್ಗೆ ಮಾತ್ರ ಮಾತನಾಡಿದ್ದಲ್ಲ. ಎಲ್ಲರನ್ನೂ ಒಳಗೊಂಡು ಮಾತನಾಡಿದ್ದೆ. ನಾನು ಆರಂಭಿಸಿದ ವಿಷಯ, ದೇಶದ ಅತ್ಯುನ್ನತ ನಾಯಕರ ಮಾತಿನೊಂದಿಗೆ ಮುಕ್ತಾಯವಾಗಿರುವುದು’’ ಸಂತಸ ತಂದಿದೆ ಎಂದಿದ್ಧಾರೆ ಸುದೀಪ್.

ಇದನ್ನೂ ಓದಿ: ‘ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್’; ಹಿಂದಿ ರಾಷ್ಟ್ರಭಾಷೆ ಎಂದ ಅಜಯ್ ದೇವಗನ್​ಗೆ ಕಿಚ್ಚ ಸುದೀಪ್ ಪ್ರತ್ಯುತ್ತರ

ಈ ಮೊದಲು ಪ್ರಧಾನಿ ತಮ್ಮ ಮಾತಿನಲ್ಲಿ ಭಾರತೀಯ ಸಂಸ್ಕೃತಿಯು ದೇಶದ ಪ್ರತಿಯೊಂದು ಭಾಷೆಯನ್ನು ಪೂಜನೀಯ ದೃಷ್ಟಿಯಿಂದ ನೋಡುತ್ತದೆ ಎಂದು ಹೇಳಿದ್ದರು. ಚಿತ್ರಗಳ ವಿಚಾರಕ್ಕೆ ಬಂದರೆ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಜುಲೈ 28ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:10 pm, Wed, 1 June 22

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ