Vikram Movie on Burj Khalifa: ಕಿಚ್ಚ ಸುದೀಪ್ ಹಾದಿಯಲ್ಲಿ ಸಾಗ್ತಿದ್ದಾರೆ ಕಮಲ್ ಹಾಸನ್; ಕನ್ನಡದ ಟ್ರೆಂಡ್ ಫಾಲೋ ಮಾಡ್ತಿದೆ ‘ವಿಕ್ರಮ್’ ಚಿತ್ರ
Kamal Haasan | Vikram Movie: ಹಲವು ವಿಚಾರಗಳಲ್ಲಿ ಕನ್ನಡ ಚಿತ್ರರಂಗ ಮಾದರಿ ಆಗಿದೆ. ‘ವಿಕ್ರಾಂತ್ ರೋಣ’ ರೀತಿಯೇ ‘ವಿಕ್ರಮ್’ ಸಿನಿಮಾ ತಂಡ ಕೂಡ ಪ್ರಚಾರ ಮಾಡುತ್ತಿದೆ.
ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿವೆ. ಕಿಚ್ಚ ಸುದೀಪ್ ಅವರಂತಹ ಸ್ಟಾರ್ ಕಲಾವಿದರನ್ನು ಅಕ್ಕ-ಪಕ್ಕದ ರಾಜ್ಯಗಳ ಹೀರೋಗಳು ಕೂಡ ಫಾಲೋ ಮಾಡುತ್ತಿದ್ದಾರೆ. ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾದ ಪ್ರಚಾರಕ್ಕೆ ಸುದೀಪ್ ಅವರು ಹೊಸ ಯೋಜನೆಯೊಂದನ್ನು ರೂಪಿಸಿದ್ದರು. ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ‘ವಿಕ್ರಾಂತ್ ರೋಣ’ ಚಿತ್ರದ ಟೈಟಲ್ ಲಾಂಚ್ ಮಾಡಲಾಗಿತ್ತು. ಈಗ ಕಾಲಿವುಡ್ ನಟ ಕಮಲ್ ಹಾಸನ್ ಕೂಡ ಅದೇ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ (Vikram Movie) ಬಿಡುಗಡೆಗೆ ಸಜ್ಜಾಗಿದೆ. ಆ ಚಿತ್ರದ ಪ್ರಚಾರ ಕಾರ್ಯದಲ್ಲಿ ಇಡೀ ತಂಡ ತೊಡಗಿಕೊಂಡಿದೆ. ಜೂನ್ 1ರ ರಾತ್ರಿ 8.10ಕ್ಕೆ ಬುರ್ಜ್ ಖಲೀಫಾ (Burj Khalifa) ಕಟ್ಟಡದ ಮೇಲೆ ಈ ಸಿನಿಮಾದ ಕೆಲವು ತುಣುಕುಗಳನ್ನು ಬಿತ್ತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದನ್ನು ನೋಡಲು ಕಮಲ್ ಹಾಸನ್ ಫ್ಯಾನ್ಸ್ ಕಾದಿದ್ದಾರೆ. ಪ್ರಚಾರದ ವಿಚಾರದಲ್ಲಿ ‘ವಿಕ್ರಾಂತ್ ರೋಣ’ ಚಿತ್ರದ ಶೈಲಿಯನ್ನೇ ‘ವಿಕ್ರಮ್’ ಸಿನಿಮಾ ಕೂಡ ಅನುಸರಿಸುತ್ತಿರುವುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಚರ್ಚೆ ಮಾಡುತ್ತಿದ್ದಾರೆ.
‘ವಿಕ್ರಮ್’ ಸಿನಿಮಾವನ್ನು ಕಮಲ್ ಹಾಸನ್ ಒಡೆತನದ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಸಂಸ್ಥೆ ನಿರ್ಮಿಸಿದೆ. ಬುರ್ಜ್ ಖಲೀಫಾ ಕಟ್ಟದ ಮೇಲೆ ಈ ಚಿತ್ರದ ತುಣುಕುಗಳನ್ನು ಬಿತ್ತರಿಸುವ ಕುರಿತ ಮಾಹಿತಿಯನ್ನು ಈ ನಿರ್ಮಾಣ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅದನ್ನು ಕಂಡು ಕಮಲ್ ಹಾಸನ್ ಫ್ಯಾನ್ಸ್ ಖುಷಿ ಆಗಿದ್ದಾರೆ. ಜೂನ್ 3ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ.
Brace yourselves for one of the most extravagant events in the cinematic universe – with none other than UlagaNayagan @ikamalhaasan ! #Vikram trailer to be presented on the world’s tallest screen, Burj Khalifa, on 1st June at 8.10pm. Special thanks to @ReelCinemas & Emaar pic.twitter.com/WW4jTk7eJa
— Raaj Kamal Films International (@RKFI) May 31, 2022
ಇತ್ತೀಚೆಗೆ ‘ವಿಕ್ರಮ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, 13 ಕಡೆಗಳಲ್ಲಿ ಕತ್ತರಿ ಹಾಕಲಾಗಿದೆ. ಸೆನ್ಸಾರ್ ಮಂಡಳಿ ಸದಸ್ಯರು ಸೂಚಿಸಿದ ಕಡೆಗಳಲ್ಲಿ ಕತ್ತರಿ ಪ್ರಯೋಗ ಮಾಡಲಾಗಿದೆ. ನಂತರ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಟ್ರೇಲರ್ನಲ್ಲಿ ಗೊತ್ತಾಗಿರುವಂತೆ ‘ವಿಕ್ರಮ್’ ಸಿನಿಮಾ ಸಖತ್ ಮಾಸ್ ಆಗಿ ಮೂಡಿಬಂದಿದೆ. ಸಿಕ್ಕಾಪಟ್ಟೆ ಸಾಹಸ ದೃಶ್ಯಗಳು ಕೂಡ ಇವೆ. ಸಿನಿಮಾದ ಕೆಲವು ಸಂಭಾಷಣೆಗಳಲ್ಲಿ ಬೈಗುಳಗಳು ಕೂಡ ಇದ್ದವು. ಅತಿಯಾದ ಹಿಂಸೆಯನ್ನು ತೋರಿಸುವ ಸೀನ್ಗಳು ಸಹ ಚಿತ್ರದಲ್ಲಿವೆ. ಅವುಗಳಿಗೆ ಕತ್ತರಿ ಹಾಕುವಂತೆ ಸೂಚಿಸಲಾಗಿದೆ.
‘ವಿಕ್ರಮ್’ ಚಿತ್ರಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ. ಪಾತ್ರವರ್ಗದ ಕಾರಣದಿಂದ ‘ವಿಕ್ರಮ್’ ಸಿನಿಮಾ ಹೆಚ್ಚು ನಿರೀಕ್ಷೆ ಮೂಡಿಸಿದೆ. ಕಮಲ್ ಹಾಸನ್ ಜೊತೆಗೆ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ನಟಿಸಿದ್ದಾರೆ. ಈ ಮೂವರ ಕಾಂಬಿನೇಷನ್ ಇರುವ ಕಾರಣದಿಂದ ಈ ಚಿತ್ರಕ್ಕೆ ಮೊದಲ ದಿನ ಭರ್ಜರಿ ಓಪನಿಂಗ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಮುಂಗಡ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು, ಅನೇಕ ಕಡೆಗಳಲ್ಲಿ ಟಿಕೆಟ್ಗಳು ಸೋಲ್ಡ್ ಔಟ್ ಆಗುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:35 pm, Wed, 1 June 22