‘ವೀಲ್‌ಚೇರ್ ರೋಮಿಯೋ’ ಚಿತ್ರಕ್ಕೆ ಕಿಚ್ಚನ ಸಾಥ್; ಇಡೀ ತಂಡಕ್ಕೆ ಸಿಕ್ತು ಸುದೀಪ್ ಕಡೆಯಿಂದ ಬೆಸ್ಟ್ ವಿಶ್
‘ವೀಲ್‌ಚೇರ್ ರೋಮಿಯೋ' ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮಯೂರಿ ಮತ್ತು ರಾಮ್ ಚೇತನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಗಾಂಧಿನಗರದ ಅಂಗಳದಲ್ಲೀಗ ಕಾಲಿಲ್ಲದ ರೋಮಿಯೋ ಹಾಗೂ ದೃಷ್ಟಿ ಇಲ್ಲದ ಜೂಲಿಯಟ್ ನಡುವಿನ ಮಧುರ ಪ್ರೇಮಕಥನದ ‘ವೀಲ್‌ಚೇರ್ ರೋಮಿಯೋ’ (Wheelchair Romeo) ಸಿನಿಮಾದ್ದೇ ಟಾಕ್. ಟೀಸರ್, ಟ್ರೇಲರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಇಮ್ಮಡಿಗೊಳಿಸಿದ್ದ ಈ ಕನ್ನಡ ಚಿತ್ರವು (Kannada Cinema) ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕಳೆದ ಶುಕ್ರವಾರ (ಮೇ 27) ಥಿಯೇಟರ್ ನಲ್ಲಿ ಜರ್ನಿ ಶುರು ಮಾಡಿದ್ದ ‘ವೀಲ್‌ಚೇರ್ ರೋಮಿಯೋ’ ಸಿನಿಮಾಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಸೂಕ್ಷ್ಮ ಹಾಗೂ ಗಂಭೀರ ವಿಷ್ಯವನ್ನು ಹ್ಯೂಮರಾಸ್ಸಾಗಿ ಹೇಳಿರುವ ಅಪರೂಪದ ಕಥೆಗೆ ನಟ ಕಿಚ್ಚ ಸುದೀಪ್ (Kichcha Sudeep) ಬೆಂಬಲ ನೀಡಿದ್ದಾರೆ. ಸಿನಿಮಾಗೆ ಒಳ್ಳೆ ಮಿಮರ್ಶೆ ಸಿಗುತ್ತಿದೆ. ಇಡೀ ‘ವೀಲ್‌ಚೇರ್ ರೋಮಿಯೋ’ ತಂಡಕ್ಕೆ ಒಳ್ಳೆದಾಗಲಿ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಸಿದ್ಧ ಸೂತ್ರಗಳಿಂದ ಹೊರ ಬಂದು ನಟರಾಜ್ ಒಳ್ಳೆಯ ಕಥೆಗೆ ಜೀವ ತುಂಬಿದ್ದಾರೆ. ಹೀರೋ ಅಂದ್ರೆ ಸಿಕ್ಸ್ ಪ್ಯಾಕ್ ಇರಬೇಕು. ಆತ ಹೊಡಿಬಡಿ ದೃಶ್ಯಗಳಲ್ಲಿ ಮಿಂಚ್ಬೇಕು. ಹೀರೋಯಿನ್ ಅಂದ್ರೆ ಗ್ಲಾಮರ್ ಎಂಬ ಕಾನ್ಸೆಪ್ಟ್ಗಳನ್ನು ಪಕ್ಕಕ್ಕಿಟ್ಟು ನಟರಾಜ್, ಕಾಲಿಲ್ಲದ ಹೀರೋ, ಕಣ್ಣು ಕಾಣದ ವೇಶ್ಯೆ ಪಾತ್ರಗಳ ಕಥೆಯನ್ನು ತೆರೆಮೇಲೆ ಸುಂದರವಾಗಿ ಹೆಣೆದಿದ್ದು, ಮೊದಲ ಪ್ರಯತ್ನದಲ್ಲಿ ಚಿತ್ರರಂಗದ ಭರವಸೆಯ ನಿರ್ದೇಶಕ ಅನ್ನೋದನ್ನು ಸಾಬೀತುಪಡಿಸಿದ್ದಾರೆ.
My best wshs to the team of #WheelChairRomeo.. Hearing good reviews ??@Ramchethann @mayuri_kyatari4
— Kichcha Sudeepa (@KicchaSudeep) May 29, 2022
ಗುರು ಕಶ್ಯಪ್ ಪಂಚಿಂಗ್ ಡೈಲಾಗ್ ಬಲದ ಜೊತೆಗೆ ರಾಮ್ ಚೇತನ್, ಮಯೂರಿ, ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲನಾಣಿ ಎಲ್ಲರೂ ತಮ್ಮ ಪ್ರಬುದ್ಧ ಅಭಿನಯದ ಮೂಲಕ ಗಮನಸೆಳೆಯುತ್ತಾರೆ. ಭರತ್ ಬಿಜೆ ಸಂಗೀತ ನಿರ್ದೇಶನದ ಹಾಡುಗಳು ಕೇಳುಗರನ್ನು ಮಂತ್ರಮುಗ್ಧರನ್ನಾಗಿ ಮಾಡಿದ್ರೆ, ಸಂತೋಷ್ ಪಾಂಡಿ ಕ್ಯಾಮೆರಾ ಕೆಲಸ ಸೊಗಸಾಗಿ ಮೂಡಿ ಬಂದಿದೆ. ಒಂದೊಳ್ಳೆ ಮನರಂಜನೆ ನೀಡುವ ಸಿನಿಮಾವನ್ನು ತಿಮ್ಮಪ್ಪ ವೆಂಕಟಾಚಲಯ್ಯ ನಿರ್ಮಾಣ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:16 pm, Mon, 30 May 22