Vikrant Rona: ಬಿಡುಗಡೆಗೂ ಮುನ್ನ ವಿದೇಶದಲ್ಲಿ 10 ಕೋಟಿ ರೂ. ಬಿಸ್ನೆಸ್​ ಮಾಡಿದ ‘ವಿಕ್ರಾಂತ್​ ರೋಣ’: ಸುದೀಪ್​ ಫ್ಯಾನ್ಸ್​ ಖುಷ್​

Kichcha Sudeep: ‘ಒನ್​ ಟ್ವೆಂಟಿ 8 ಮೀಡಿಯಾ’ ಸಂಸ್ಥೆಯು ‘ವಿಕ್ರಾಂತ್​ ರೋಣ’ ಸಿನಿಮಾದ ವಿತರಣೆ ಹಕ್ಕುಗಳನ್ನು ಖರೀದಿಸಿದೆ. ಮೂಲಗಳ ಪ್ರಕಾರ 1.3 ಮಿಲಿಯನ್​ ಡಾಲರ್​, ಅಂದರೆ 10 ಕೋಟಿ ರೂಪಾಯಿಗೆ ಮಾರಾಟ ಆಗಿದೆ.

Vikrant Rona: ಬಿಡುಗಡೆಗೂ ಮುನ್ನ ವಿದೇಶದಲ್ಲಿ 10 ಕೋಟಿ ರೂ. ಬಿಸ್ನೆಸ್​ ಮಾಡಿದ ‘ವಿಕ್ರಾಂತ್​ ರೋಣ’: ಸುದೀಪ್​ ಫ್ಯಾನ್ಸ್​ ಖುಷ್​
ವಿಕ್ರಾಂತ್ ರೋಣ
Follow us
TV9 Web
| Updated By: ಮದನ್​ ಕುಮಾರ್​

Updated on:May 08, 2022 | 11:50 AM

ಕನ್ನಡ ಸಿನಿಮಾಗಳು ಹೊರ ರಾಜ್ಯ, ಹೊರ ರಾಷ್ಟ್ರಗಳಲ್ಲಿ ಸಖತ್​ ಸದ್ದು ಮಾಡುತ್ತಿವೆ. ಈಗಾಗಲೇ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಯಶಸ್ಸಿನಿಂದಾಗಿ ಸ್ಯಾಂಡಲ್​​ವುಡ್​ ಮೇಲೆ ಪರಭಾಷೆ ಮಂದಿಗೆ ಭರವಸೆ ಮೂಡಿದೆ. ಮುಂಬರುವ ಕನ್ನಡದ ಎಲ್ಲ ಬಿಗ್​ ಬಜೆಟ್​ ಸಿನಿಮಾಗಳಿಗೆ ಒಳ್ಳೆಯ ಮಾರ್ಕೆಟ್​ ಓಪನ್​ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಮಾತಿಗೆ ಪೂರಕವಾಗಿ ‘ವಿಕ್ರಾಂತ್​ ರೋಣ’ ಸಿನಿಮಾ (Vikrant Rona Movie) ರಿಲೀಸ್​ಗೂ ಮುನ್ನವೇ ದೊಡ್ಡ ಮೊತ್ತದ ಬಿಸ್ನೆಸ್​ ಮಾಡಿದೆ. ಅದು ಕೂಡ ವಿದೇಶದಲ್ಲಿ ಎಂಬುದು ವಿಶೇಷ. ಹೌದು, ಕಿಚ್ಚ ಸುದೀಪ್​ (Kichcha Sudeep) ಅಭಿನಯದ ಈ ಬಹುನಿರೀಕ್ಷಿತ ಸಿನಿಮಾಗೆ ಸಖತ್​ ಡಿಮ್ಯಾಂಡ್​ ಸೃಷ್ಟಿ ಆಗಿದೆ. ವಿದೇಶದಲ್ಲಿ ವಿತರಕರು ‘ವಿಕ್ರಾಂತ್​ ರೋಣ’ ಚಿತ್ರದ ಹಕ್ಕುಗಳನ್ನು ಖರೀದಿಸುವಲ್ಲಿ ಉತ್ಸುಕತೆ ತೋರಿಸಿದ್ದಾರೆ. ಅದರ ಪರಿಣಾಮವಾಗಿ ರಿಲೀಸ್​ಗೂ ಮೊದಲೇ ಈ ಸಿನಿಮಾ ಬರೋಬ್ಬರಿ 10 ಕೋಟಿ ರೂ. ಡೀಲ್​ ನಡೆಸಿದೆ ಎಂಬ ಮಾಹಿತಿ ಕೇಳಿಬಂದಿದೆ. ಈ ವಿಷಯ ಕೇಳಿ ಕಿಚ್ಚ ಸುದೀಪ್​ ಅಭಿಮಾನಿಗಳು (Kichcha Sudeep Fans) ಸಖತ್​ ಥ್ರಿಲ್​ ಆಗಿದ್ದಾರೆ.

‘ಒನ್​ ಟ್ವೆಂಟಿ 8 ಮೀಡಿಯಾ’ ಸಂಸ್ಥೆಯು ‘ವಿಕ್ರಾಂತ್​ ರೋಣ’ ಸಿನಿಮಾದ ವಿತರಣೆ ಹಕ್ಕುಗಳನ್ನು ಖರೀದಿಸಿದೆ. ಮೂಲಗಳ ಪ್ರಕಾರ 1.3 ಮಿಲಿಯನ್​ ಡಾಲರ್​, ಅಂದರೆ 10 ಕೋಟಿ ರೂಪಾಯಿಗೆ ಮಾರಾಟ ಆಗಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ದೊಡ್ಡ ಮೊತ್ತಕ್ಕೆ ವಿದೇಶದಲ್ಲಿ ಸಿನಿಮಾ ವಿತರಣೆಯ ಹಕ್ಕು ಮಾರಾಟ ಆಗಿರುವುದು ಇದೇ ಮೊದಲು ಎನ್ನಲಾಗಿದೆ. ಈ ಸಂಖ್ಯೆಗಳ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಇದನ್ನೂ ಓದಿ
Image
ನಟ ಕಿಚ್ಚ ಸುದೀಪ್ ಹೇಳಿರುವ ವಿಚಾರ ಸರಿಯಿದೆ; ಹಿಂದಿ ಬಗ್ಗೆ ಸುದೀಪ್ ಹೇಳಿಕೆಗೆ ಬೆಂಬಲ ಸೂಚಿಸಿ ಸಿಎಂ ಬೊಮ್ಮಾಯಿ
Image
ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಚಿತ್ರದ 3ಡಿ ದೃಶ್ಯ ನೋಡಿ ವಿಮರ್ಶೆ ನೀಡಿದ ಆರ್​ಜಿವಿ
Image
Vikrant Rona Release Date: ಜು.28ಕ್ಕೆ ‘ವಿಕ್ರಾಂತ್​ ರೋಣ’ ರಿಲೀಸ್​; ಟೀಸರ್​ ನೋಡಿ ಸುದೀಪ್​ ಫ್ಯಾನ್ಸ್​ ಖುಷ್​
Image
Kichcha Sudeep: ‘ವಿಕ್ರಾಂತ್​ ರೋಣ’ ನೃತ್ಯ ನಿರ್ದೇಶಕನಿ​ಗೆ ಥಾರ್​ ಗಿಫ್ಟ್ ನೀಡಿದ ‘ಕಿಚ್ಚ’ ಸುದೀಪ್​

ರಿಲೀಸ್​ಗೂ ಮುನ್ನ ‘ವಿಕ್ರಾಂತ್​ ರೋಣ’ ಸಿನಿಮಾ ಈ ಪರಿ ಹವಾ ಸೃಷ್ಟಿ ಮಾಡಿರುವುದಕ್ಕೆ ನಿರ್ಮಾಪಕ ಜಾಕ್​ ಮಂಜು ಅವರು ಖುಷಿ ಆಗಿದ್ದಾರೆ. ‘ಈ ಸಿನಿಮಾದ ಕಥೆ ಯೂನಿವರ್ಸಲ್​ ಆಗಿದೆ. ಪ್ರಪಂಚದ ಎಲ್ಲ ಭಾಗಗಳ ಪ್ರೇಕ್ಷಕರಿಗೆ ಕಥೆಯಲ್ಲಿನ ಎಮೋಷನ್ಸ್​ ಕನೆಕ್ಟ್​ ಆಗಲಿದೆ. ಪ್ರೀ-ರಿಲೀಸ್​ ಬಿಸ್ನೆಸ್​ ಬಗ್ಗೆ ಖುಷಿ ಇದೆ. ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡುತ್ತೇವೆ’ ಎಂದು ಜಾಕ್​ ಮಂಜು ಹೇಳಿದ್ದಾರೆ. ‘ಶಾಲಿನಿ ಆರ್ಟ್ಸ್​’ ಬ್ಯಾನರ್​ ಮೂಲಕ ಜಾಕ್​ ಮಂಜು ನಿರ್ಮಾಣ ಮಾಡಿರುವ ಈ ಸಿನಿಮಾಗೆ ಅಲಂಕಾರ್​ ಪಾಂಡಿಯನ್​ ಸಹ-ನಿರ್ಮಾಪಕರಾಗಿದ್ದಾರೆ.

ಮೇ 3ನೇ ವಾರದಿಂದ ‘ವಿಕ್ರಾಂತ್​ ರೋಣ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ಸಿಗಲಿದೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ‘ರಂಗಿತರಂಗ’ ಖ್ಯಾತಿಯ ಅನೂಪ್​​ ಭಂಡಾರಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಕಾಡಿನ ಬೃಹತ್​ ಸೆಟ್​ಗಳಲ್ಲಿ ಈ ಸಿನಿಮಾದ ಶೂಟಿಂಗ್​ ಮಾಡಲಾಗಿದೆ. ಅದ್ದೂರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಜು.28ರಂದು 3ಡಿ ಅವತರಣಿಕೆಯಲ್ಲಿ ‘ವಿಕ್ರಾಂತ್​ ರೋಣ’ ಚಿತ್ರ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಿಚ್ಚ ಸುದೀಪ್ ಅವರ ಫ್ಯಾನ್ಸ್​ ತುದಿಗಾಲಿನಲ್ಲಿ ನಿಂತಿದ್ದಾರೆ.

ಈ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಜೊತೆ ನಿರೂಪ್​ ಭಂಡಾರಿ, ನೀತಾ ಅಶೋಕ್​, ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಕೂಡ ನಟಿಸಿದ್ದಾರೆ. ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ಈ ಸಿನಿಮಾ ರಿಲೀಸ್​ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:50 am, Sun, 8 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ