AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಟ್ಟುಹಬ್ಬದಂದು ರಕ್ತಸಿಕ್ತ ಲುಕ್​​ನಲ್ಲಿ ಬಂದ ವಿನಯ್ ರಾಜ್​​ಕುಮಾರ್

Vinay Rajkumar Birthday: ಮಲೆನಾಡಿನಲ್ಲಿ ನಡೆಯುವ ಗ್ಯಾಂಗ್​​ಸ್ಟರ್ ಕಥೆಯನ್ನು ‘ಪೆಪೆ’ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಸಂಪೂರ್ಣವಾಗಿ ಹಳ್ಳಿ ಸೊಗಡಿನ ಆಕ್ಷನ್ ಸಿನಿಮಾ ಇದಾಗಿದೆ.  

ಹುಟ್ಟುಹಬ್ಬದಂದು ರಕ್ತಸಿಕ್ತ ಲುಕ್​​ನಲ್ಲಿ ಬಂದ ವಿನಯ್ ರಾಜ್​​ಕುಮಾರ್
ವಿನಯ್ ರಾಜ್​ಕುಮಾರ್
TV9 Web
| Edited By: |

Updated on: May 07, 2022 | 6:36 PM

Share

ಸೆಲೆಬ್ರಿಟಿಗಳ ಬರ್ತ್​ಡೇ (Celebrity Birthday) ದಿನ ಸಿನಿಮಾ ತಂಡದಿಂದ ಗಿಫ್ಟ್​ ಸಿಗೋದು ವಾಡಿಕೆ. ಸಿನಿಮಾ ಫಸ್ಟ್​ಲುಕ್​, ಟೀಸರ್​ ಅಥವಾ ಟ್ರೇಲರ್ ಬಿಡುಗಡೆ ಆಗುತ್ತದೆ. ಇಂದು (ಮೇ 7) ವಿನಯ್​ ರಾಜ್​​ಕುಮಾರ್ (Vinay Rajkumar) ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ‘ಪೆಪೆ’ ಚಿತ್ರದಲ್ಲಿನ (Pepe Movie) ವಿನಯ್​ ರಾಜ್​ಕುಮಾರ್ ಅವರ ಹೊಸ ಲುಕ್ ಅನಾವರಣಗೊಂಡಿದೆ. ಭಿನ್ನ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ವಿನಯ್​ ರಾಜ್​ಕುಮಾರ್ ಅವರು ಈ ಬಾರಿ ರಕ್ತಸಿಕ್ತ ಲುಕ್​ನಲ್ಲಿ ಮಿಂಚಿದ್ದಾರೆ. ‘ಪೆಪೆ’ ಸಿನಿಮಾದ ಟೀಸರ್​​ ಸಖತ್ ವೈರಲ್ ಆಗುತ್ತಿದೆ.

‘ಸೋಲ್ ಆಫ್ ಪೆಪೆ’ ಹೆಸರಿನಲ್ಲಿ ಎರಡು ನಿಮಿಷದ ವಿಡಿಯೋವನ್ನು ಪಿಆರ್​ಕೆ ಆಡಿಯೋ ಮೂಲಕ ಹಂಚಿಕೊಳ್ಳಲಾಗಿದೆ. ವಿನಯ್ ಅವರು ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮುಖ ರಕ್ತಸಿಕ್ತವಾಗಿದೆ. ಅವರನ್ನು ಪರಿಚಯಿಸುವುದಕ್ಕೂ ಮೊದಲು ಟೀಸರ್​ನಲ್ಲಿ ಒಂದಷ್ಟು ವಿವರಣೆಗಳನ್ನು ನೀಡಲಾಗಿದೆ. ಈ ಟೀಸರ್​ ನೋಡಿದ ವಿನಯ್​ ರಾಜ್​ಕುಮಾರ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಇದನ್ನೂ ಓದಿ
Image
ಸೋಶಿಯಲ್ ಮೀಡಿಯಾದಲ್ಲಿ ಹೀಟ್ ಹೆಚ್ಚಿಸಿದ ಸಮಂತಾ; ಹೊಸ ಫೋಟೋ ಇಲ್ಲಿದೆ
Image
ಮೋಹನ್​ ಜುನೇಜ ನಿಧನ: ‘ಕೆಜಿಎಫ್​ 2’ ನಟನ ಕುಟುಂಬಕ್ಕೆ 50 ಸಾವಿರ ರೂ. ನೀಡಿದ ‘ಹೊಂಬಾಳೆ ಫಿಲ್ಮ್ಸ್​’
Image
ಭಾರತದಲ್ಲಿ ಭರ್ಜರಿ ಓಪನಿಂಗ್ ಪಡೆದ ಹಾಲಿವುಡ್ ಸಿನಿಮಾ ‘ಡಾಕ್ಟರ್ ಸ್ಟ್ರೇಂಜ್​’ ಸೀಕ್ವೆಲ್; ಮೊದಲ ದಿನ ಗಳಿಸಿದ್ದೆಷ್ಟು?
Image
Mohan Juneja: ಖ್ಯಾತ ನಟ ಮೋಹನ್​ ಜುನೇಜ ನಿಧನ; ‘ಕೆಜಿಎಫ್​’ ಚಿತ್ರದಲ್ಲಿ ಅಭಿನಯಿಸಿದ್ದ ಜನಪ್ರಿಯ ಕಲಾವಿದ ಇನ್ನಿಲ್ಲ

ಮಲೆನಾಡಿನಲ್ಲಿ ನಡೆಯುವ ಗ್ಯಾಂಗ್​​ಸ್ಟರ್ ಕಥೆಯನ್ನು ‘ಪೆಪೆ’ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಸಂಪೂರ್ಣವಾಗಿ ಹಳ್ಳಿ ಸೊಗಡಿನ ಆಕ್ಷನ್ ಸಿನಿಮಾ ಇದಾಗಿದೆ.  ಶ್ರೀಲೇಶ್‌ ಎಸ್‌. ನಾಯರ್‌ ನಿರ್ದೇಶನದ ಈ ಸಿನಿಮಾವನ್ನು ಉದಯ್‌ ಶಂಕರ್‌ ಎಸ್‌. ನಿರ್ಮಾಣ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ ಸಿನಿಮಾಕ್ಕಿದೆ. ಈ ಹಿಂದೆ ಕೆಲ ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿರುವ ವಿನಯ್ ರಾಜ್​​ಕುಮಾರ್ ಗ್ಯಾಂಗ್​​ಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ.

ವಿನಯ್ ರಾಜ್​ಕುಮಾರ್ ಜನ್ಮದಿನಕ್ಕೆ ಅವರ ಅಭಿಮಾನಿಗಳ ಕಡೆಯಿಂದ ಶುಭಾಶಯ ಬರುತ್ತಿದೆ. ಬರ್ತ್​ಡೇ ದಿನ ರಾಘವೇಂದ್ರ ರಾಜ್​ಕುಮಾರ್ ಅವರು ಪುತ್ರನಿಗೆ ವಿಶ್ ಮಾಡಿದ್ದಾರೆ. ಬಾಲ್ಯದ ಫೋಟೋಗಳನ್ನು ಸೇರಿಸಿ ಒಂದು ವಿಡಿಯೋ​ ಮಾಡಿ ಅವರು ಪೋಸ್ಟ್ ಮಾಡಿದ್ದಾರೆ.

ಇನ್ನು, ಬರ್ತ್​ಡೇ ದಿನ ‘ಅಂದೊಂದಿತ್ತು ಕಾಲ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ವಿನಯ್​ಗೆ ಜತೆಯಾಗಿ ಅದಿತಿ ಪ್ರಭುದೇವ ಅವರು ಕಾಣಿಸಿಕೊಂಡಿದ್ದಾರೆ. ಈ ಟೀಸರ್ ಲಕ್ಷಾಂತರಬಾರಿ ವೀಕ್ಷಣೆ ಕಂಡಿದೆ. ರಾಘವೇಂದ್ರ ರಾಜ್​ಕುಮಾರ್ ಅವರು ಎರಡೂ ಟೀಸರ್​ಗಳನ್ನು ಹಂಚಿಕೊಂಡು ಮಗನಿಗೆ ವಿಶ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು