ಹಿಂದಿನ ರಾತ್ರಿ ರಕ್ತ ವಾಂತಿ ಮಾಡಿಕೊಂಡಿದ್ದ ಮೋಹನ್ ಜುನೇಜ; ಸ್ನೇಹಿತನ ಬಗ್ಗೆ ಡಿಂಗ್ರಿ ನಾಗರಾಜ್ ಭಾವುಕ ನುಡಿ
ಚಿತ್ರರಂಗದ ಅನೇಕರು ಬಂದು ಮೋಹನ್ ಜುನೇಜ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಅವರ ಜೊತೆಗಿನ ಒಡನಾಟವನ್ನು ಡಿಂಗ್ರಿ ನಾಗರಾಜ್ ಮೆಲುಕು ಹಾಕಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಫೋಷಕ ಕಲಾವಿದನಾಗಿ, ಹಾಸ್ಯನಾಟನಾಗಿ ಮೋಹನ್ ಜುನೇಜ (Mohan Juneja) ಅವರು ಖ್ಯಾತಿ ಪಡೆದುಕೊಂಡಿದ್ದರು. ಹಲವರ ಜೊತೆ ಅವರಿಗೆ ಸ್ನೇಹ ಇತ್ತು. ಮೇ 6ರ ರಾತ್ರಿ ನಿಧನರಾದ ಮೋಹನ್ ಜುನೇಜ ಅವರ ಅಂತಿಮ ದರ್ಶನ ಪಡೆಯಲು ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಆಗಮಿಸಿದ್ದಾರೆ. ಹೊನ್ನಾವಳಿ ಕೃಷ್ಣ, ಡಿಂಗ್ರಿ ನಾಗರಾಜ್, ಗಣೇಶ್ ರಾವ್ ಸೇರಿದಂತೆ ಹಲವರು ಬಂದು ಅಂತಿಮ ನಮನ ಸಲ್ಲಿಸಿದ್ದಾರೆ. ಡಿಂಗ್ರಿ ನಾಗರಾಜ್ (Dingri Nagaraj) ಮತ್ತು ಮೋಹನ್ ಜುನೇಜ ಅವರದ್ದು ಹಲವು ವರ್ಷಗಳ ಸ್ನೇಹ. ರಂಗಭೂಮಿಯ ದಿನಗಳಿಂದಲೂ ಅವರು ಜೊತೆಯಲ್ಲೇ ಇದ್ದರು. ‘ನಾಟಕದಿಂದ ಚಿತ್ರರಂಗಕ್ಕೆ ಬಂದಮೇಲೆ ಅವನ ಪ್ರಸಿದ್ಧಿ ಹೆಚ್ಚಿತ್ತು. ಆಪರೇಷನ್ ಆದ ಬಳಿಕ ಸ್ವಲ್ಪ ಡಿಪ್ರೆಷನ್ಗೆ ಹೋಗಿದ್ದ. ನಿನ್ನ ರಾತ್ರಿ ಇದ್ದಕ್ಕಿದ್ದಂತೆ ಬ್ಲಡ್ ವಾಮಿಟ್ ಮಾಡಿಕೊಂಡನಂತೆ. ಅವನನ್ನು ಕಳೆದುಕೊಂಡ ಅವರ ಕುಟುಂಬದವರಿಗೆ ನೋವು ಭರಿಸುವ ಶಕ್ತಿ ಸಿಗಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ’ ಎಂದಿದ್ದಾರೆ ಡಿಂಗ್ರಿ ನಾಗರಾಜ್. ಇಂದು (ಮೇ 7) ಮಧ್ಯಾಹ್ನ ತಮ್ಮೇನಹಳ್ಳಿ ಗ್ರಾಮದ ಸ್ಮಶಾನದಲ್ಲಿ ಮೋಹನ್ ಜುನೇಜ ಅಂತ್ಯಕ್ರಿಯೆ (Mohan Juneja Funeral) ನಡೆಯಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.