IPL 2022: ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ‘ಕೆಜಿಎಫ್’ ಹಾಡು; ಜನರ ಪ್ರತಿಕ್ರಿಯೆ ಹೇಗಿತ್ತು? ಇಲ್ಲಿದೆ ಮನಮೋಹಕ ವಿಡಿಯೋ

TV9 Digital Desk

| Edited By: shivaprasad.hs

Updated on:May 31, 2022 | 3:58 PM

Narendra Modi Stadium | IPL 2022: 1.32 ಲಕ್ಷ ಪ್ರೇಕ್ಷಕರನ್ನು ಹೊಂದುವ ಸಾಮರ್ಥ್ಯವಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ಐಪಿಎಲ್ 2022ರ ಫೈನಲ್ ಪಂದ್ಯ ನಡೆದಿತ್ತು. ಪಂದ್ಯದ ಆರಂಭಕ್ಕೂ ಮುನ್ನ ‘ಕೆಜಿಎಫ್’ ಚಿತ್ರದ ಹಾಡನ್ನು ಹಾಕಲಾಗಿದೆ. ಈ ಸಂದರ್ಭದಲ್ಲಿ ನೆರೆದಿದ್ದ ಜನರು ಹುಚ್ಚೆದ್ದು ಸಂಭ್ರಮಿಸಿದ್ದು, ವಿಡಿಯೋಗಳು ವೈರಲ್ ಆಗಿವೆ.

IPL 2022: ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ‘ಕೆಜಿಎಫ್’ ಹಾಡು; ಜನರ ಪ್ರತಿಕ್ರಿಯೆ ಹೇಗಿತ್ತು? ಇಲ್ಲಿದೆ ಮನಮೋಹಕ ವಿಡಿಯೋ
‘ಕೆಜಿಎಫ್ ಚಾಪ್ಟರ್ 2’ ಹಾಡು ಹಾಕಿದ ಸಂದರ್ಭದಲ್ಲಿ ಜನರ ಸಂಭ್ರಮ (ಎಡ), ಯಶ್ ’ಬಲ)

ಐಪಿಎಲ್​ 2022ರ (IPL 2022) ಫೈನಲ್​ ಪಂದ್ಯ ಭಾನುವಾರದಂದು ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದಿತ್ತು. ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಬಹುದಾದ ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಈ ವೇಳೆ ಪಂದ್ಯ ಆರಂಭವಾಗುವುದಕ್ಕೂ ಮುನ್ನ ‘ಕೆಜಿಎಫ್’ (KGF Movie) ಚಿತ್ರದ ಹಿನ್ನೆಲೆ ಸಂಗೀತವನ್ನು ಹಾಕಲಾಗಿದೆ. ಬಣ್ಣ ಬಣ್ಣದ ಬೆಳಕಿನ ಚಿತ್ತಾರದ ಹಿನ್ನೆಲೆಯಲ್ಲಿ ಮೊಳಗಿದ ಹಾಡಿಗೆ ಜನರು ಹುಚ್ಚೆದ್ದು ಕುಣಿದಿದ್ದಾರೆ. ತಮ್ಮ ಮೊಬೈಲ್ ಫ್ಲಾಶ್ ಲೈಟ್​ ಆನ್​ ಮಾಡಿ ಸಂಭ್ರಮಿಸಿದ್ದಾರೆ. ಹಲವರು ಈ ಸಂದರ್ಭದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಸದ್ಯ ಅವುಗಳು ವೈರಲ್ ಆಗುತ್ತಿವೆ.

‘ಕೆಜಿಎಫ್’ ಚಿತ್ರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ:

ಇದನ್ನೂ ಓದಿ

ಇದನ್ನೂ ಓದಿ: KGF Chapter 2: ಅಮೆಜಾನ್ ಪ್ರೈಮ್​ನಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ಈ ದಿನಾಂಕದಿಂದ ‘ಕೆಜಿಎಫ್ ಚಾಪ್ಟರ್ 2’ ವೀಕ್ಷಿಸಬಹುದು

ಯುಟ್ಯೂಬ್​ನಲ್ಲೂ ಹಲವಾರು ಖಾತೆಗಳಿಂದ ‘ಕೆಜಿಎಫ್’ ಚಿತ್ರದ ಹಿನ್ನೆಲೆ ಸಂಗೀತವನ್ನು ಮೈದಾನದಲ್ಲಿ ಹಾಕಿದ ಸಂದರ್ಭದ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಅವುಗಳೂ ಕೂಡ ವೈರಲ್ ಆಗಿವೆ.

‘ಕೆಜಿಎಫ್’ ಹಾಡು ಹಾಕಿದ ಸಂದರ್ಭದ ಮತ್ತಷ್ಟು ವಿಡಿಯೋಗಳು ಇಲ್ಲಿವೆ:

ಸಮಾರೋಪ ಸಮಾರಂಭದಲ್ಲಿ ‘ಕೆಜಿಎಫ್’ ಹಾಡಿಗೆ ಹೆಜ್ಜೆ ಹಾಕಿದ್ದ ರಣವೀರ್:

ಐಪಿಎಲ್ 2022ರ ಸಮಾರೋಪ ಸಮಾರಂಭದಲ್ಲಿ ‘ಕೆಜಿಎಫ್ ಚಾಪ್ಟರ್ 2’ ಕ್ರೇಜ್ ಜೋರಾಗಿತ್ತು. ಪಂದ್ಯಕ್ಕೂ ಮುನ್ನ ರಣವೀರ್ ಸಿಂಗ್ ಪ್ರದರ್ಶನ ನೀಡಿದ್ದರು. ಈ ವೇಳೆ ಅವರು ಹಲವು ಹಿಟ್ ಗೀತೆಗಳಿಗೆ ಹೆಜ್ಜೆ ಹಾಕಿದ್ದರು. ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ‘ವೈಲೆನ್ಸ್ ವೈಲೆನ್ಸ್​’ ಸಂಭಾಷಣೆ ಹೇಳಿದ್ದ ಅವರು, ನಂತರ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದರು. ಇದೂ ಕೂಡ ಎಲ್ಲರ ಮನಗೆದ್ದಿತ್ತು.

ಇದನ್ನೂ ಓದಿ: ಐಪಿಎಲ್​ ಫೈನಲ್​ ವೇದಿಕೆಯಲ್ಲೂ ‘ಕೆಜಿಎಫ್’ ಹವಾ; ರಾಕಿ ಭಾಯ್ ಅವತಾರ ತಾಳಿದ ರಣವೀರ್ ಸಿಂಗ್- ವಿಡಿಯೋ ಇಲ್ಲಿದೆ

ಅಮೆಜಾನ್​ನಲ್ಲಿ ಬಿತ್ತರವಾಗಲಿದೆ ‘ಕೆಜಿಎಫ್ ಚಾಪ್ಟರ್ 2’:

ಸದ್ಯ ಎಲ್ಲೆಡೆ ‘ಕೆಜಿಎಫ್ ಚಾಪ್ಟರ್ 2’ ಹವಾ ಜೋರಾಗಿದೆ. ಜನರು ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ತೆರಳಿ ಚಿತ್ರ ವೀಕ್ಷಿಸಿದ್ದಾರೆ. ಪರಿಣಾಮವಾಗಿ ಗಳಿಕೆಯಲ್ಲಿ ಚಿತ್ರವು ಹಲವು ದಾಖಲೆ ಬರೆದಿದೆ. ಇದುವರೆಗೆ ಸುಮಾರು 1,238 ಕೋಟಿ ರೂಗಳನ್ನು ಚಿತ್ರ ಬಾಚಿಕೊಂಡಿದೆ. ಇದೀಗ ಓಟಿಟಿ ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗಿದೆ. ಪ್ರಸ್ತುತ ಅಮೆಜಾನ್ ಪ್ರೈಮ್​ನಲ್ಲಿ ರೆಂಟ್ ಪಡೆದು ‘ಕೆಜಿಎಫ್ 2’ ವೀಕ್ಷಿಸಬಹುದು. ಜೂನ್ 3ರಿಂದ ಪ್ರೈಮ್ ಸದಸ್ಯತ್ವ ಹೊಂದಿರುವವರು ಹೆಚ್ಚುವರಿ ವೆಚ್ಚವಿಲ್ಲದೇ ಚಿತ್ರ ವೀಕ್ಷಿಸಬಹುದಾಗಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada