IPL 2022: ಐಪಿಎಲ್​ ಫೈನಲ್​ ವೇದಿಕೆಯಲ್ಲೂ ‘ಕೆಜಿಎಫ್’ ಹವಾ; ರಾಕಿ ಭಾಯ್ ಅವತಾರ ತಾಳಿದ ರಣವೀರ್ ಸಿಂಗ್- ವಿಡಿಯೋ ಇಲ್ಲಿದೆ

Ranveer Singh | KGF Chapter 2: ಐಪಿಎಲ್ 2022ರ ಸಮಾರೋಪ ಸಮಾರಂಭದಲ್ಲೂ ‘ಕೆಜಿಎಫ್ ಚಾಪ್ಟರ್ 2’ ಹವಾ ಜೋರಾಗಿದೆ. ಬಾಲಿವುಡ್ ನಟ ರಣವೀರ್ ಸಿಂಗ್ ‘ಕೆಜಿಎಫ್ ಚಾಪ್ಟರ್ 2’ ಡೈಲಾಗ್ ಹೊಡೆದು, ‘ಧೀರ ಧೀರ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

IPL 2022: ಐಪಿಎಲ್​ ಫೈನಲ್​ ವೇದಿಕೆಯಲ್ಲೂ ‘ಕೆಜಿಎಫ್’ ಹವಾ; ರಾಕಿ ಭಾಯ್ ಅವತಾರ ತಾಳಿದ ರಣವೀರ್ ಸಿಂಗ್- ವಿಡಿಯೋ ಇಲ್ಲಿದೆ
ರಣವೀರ್ ಸಿಂಗ್ (ಎಡ), ನರೇಂದ್ರ ಮೋದಿ ಸ್ಟೇಡಿಯಂ (ಬಲ)
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:May 31, 2022 | 2:06 PM

ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ 2022ರ (IPL 2022) ಫೈನಲ್ ಪಂದ್ಯ ನಡೆಯುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಕಾರ್ಯಕ್ರಮ ನೀಡಿದರು. ಅದರಲ್ಲಿ ರಣವೀರ್ ಸಿಂಗ್ ದೇಶದ ಹಲವು ಪ್ರಸಿದ್ಧ ಗೀತೆಗಳಿಗೆ ಹೆಜ್ಜೆ ಹಾಕಿದ್ದು ಎಲ್ಲರ ಮನಗೆದ್ದಿದೆ. ವಿಶೇಷವೆಂದರೆ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಚಿತ್ರದ ‘ವೈಲೆನ್ಸ್ ವೈಲೆನ್ಸ್’ ಡೈಲಾಗ್​ಗೆ ಅಭಿನಯಿಸುತ್ತಾ ಅಬ್ಬರಿಸಿದ ರಣವೀರ್ ಸಿಂಗ್ ನಂತರ ‘ಧೀರ ಧೀರ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಜನ ನೆರೆದಿದ್ದ ಮೈದಾನದಿಂದ ರಣವೀರ್ ಸಿಂಗ್​ ನೃತ್ಯಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ‘ಕೆಜಿಎಫ್ ಚಾಪ್ಟರ್ 2’ ಟ್ವಿಟರ್ ಖಾತೆಯಿಂದ ಹಂಚಿಕೊಳ್ಳಲಾಗಿದೆ.

ವಿಡಿಯೋ ಇಲ್ಲಿದೆ:

ಇದನ್ನೂ ಓದಿ
Image
Sidhu Moose Wala: ಭದ್ರತೆ ವಾಪಸ್ ಪಡೆದ ಬೆನ್ನಲ್ಲೇ ಗುಂಡೇಟಿನಿಂದ ಹತ್ಯೆಗೀಡಾದ ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ
Image
Box Office Collections: ಈ ವರ್ಷ ಅತ್ಯಂತ ಹೆಚ್ಚು ಕಲೆಕ್ಷನ್​ ಮಾಡಿದ ಹಾಲಿವುಡ್ ಚಿತ್ರ ಯಾವುದು ಗೊತ್ತಾ?
Image
Ambareesh Birth Anniversary: ಅಂಬರೀಷ್- ಸುಮಲತಾ ‘ಪ್ರೇಮ ಪಲ್ಲವಿ’ ಹೇಗಿತ್ತು? ಟಿವಿ9 ವಿಶೇಷ ಸಂದರ್ಶನ ಇಲ್ಲಿದೆ
Image
‘ಬಾಡಿಗಾರ್ಡ್ಸ್​ ಇಲ್ಲದೇ ಬನ್ನಿ’​ ಎಂದು ರಶ್ಮಿಕಾಗೆ ಕರಣ್​ ಜೋಹರ್​ ಆಹ್ವಾನ: ನಂತರ ಏನಾಯ್ತು?

ಹಲವು ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿದ ರಣವೀರ್:

ರಣವೀರ್ ಸಿಂಗ್ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಹಾಡಿಗೆ ಮಾತ್ರವಲ್ಲದೇ ಹಲವು ಸೂಪರ್ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿ ಎಲ್ಲರ ಮನಗೆದ್ದಿದ್ದಾರೆ. ಐಪಿಎಲ್ ಧ್ವಜವನ್ನು ಹಿಡಿದು ಪ್ರವೇಶಿಸಿದ ರಣವೀರ್ ‘ಐನ್ವಯ್ ಐನ್ವಯ್’, ‘ರಾಮ್ ಭಾಯ್’ ಮೊದಲಾದ ತಮ್ಮ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿದರು. ಬಂಗಾಳಿ ಹಾಗೂ ರಾಜಸ್ತಾನಿ ಹಾಡುಗಳಿಗೂ ನಟ ಹೆಜ್ಜೆ ಹಾಕಿದರು. ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದ ‘ಘೂಮರ್ ಘೂಮರ್’, ಆರ್​ಆರ್​ಆರ್​ ಚಿತ್ರದ ‘ನಾಟು ನಾಟು’, ‘ಮಾಸ್ಟರ್​’ನ ‘ವಾಥಿ ಕಮಿಂಗ್’ ಹಾಡುಗಳಿಗೂ ನಟ ಭರ್ಜರಿ ಸ್ಟೆಪ್ ಹಾಕಿದರು.

ಎಲ್ಲರ ಮನಗೆದ್ದ ಎಆರ್ ರೆಹಮಾನ್:

ತಮ್ಮ ಸೂಪರ್ ಹಿಟ್ ಹಾಡುಗಳ ಮೂಲಕ ಎ.ಆರ್.ರೆಹಮಾನ್ ಕೂಡ ರಂಜಿಸಿದರು. ಅವರ ಪ್ರಸಿದ್ಧ ‘ವಂದೆ ಮಾತರಂ’ ಗೀತೆ ಹಾಗೂ ‘ಜೈ ಹೊ’ ಗೀತೆಗಳಿಗೆ ಎಲ್ಲರೂ ತಲೆದೂಗಿದರು.

ಮೈದಾನದಲ್ಲಿ ಉಪಸ್ಥಿತರಿದ್ದ ಅಕ್ಷಯ್ ಕುಮಾರ್:

ಅಕ್ಷಯ್ ಕುಮಾರ್ ಸೇರಿದಂತೆ ಹಲವು ಗಣ್ಯರು ಫೈನಲ್​ ಪಂದ್ಯ ವೀಕ್ಷಿಸಲು ಆಗಮಿಸಿದ್ದಾರೆ. ನೆರೆದಿರುವ ಅಭಿಮಾನಿಗಳಿಗೆ ಅಕ್ಷಯ್​ ಕೈಬೀಸುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.

ಐಪಿಎಲ್​ 2022ರ ಫೈನಲ್​ನಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ಮುಖಾಮುಖಿಯಾಗಿವೆ. ಫೈನಲ್​ ಪಂದ್ಯದ ವೇಳೆ ಅತ್ಯಂತ ದೊಡ್ಡ ಟಿ-ಶರ್ಟ್ ಪ್ರದರ್ಶಿಸಲಾಗಿದೆ. ಇದು ಗಿನ್ನೆಸ್ ದಾಖಲೆಯನ್ನೂ ಬರೆದಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:45 pm, Sun, 29 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ