ಇಂದು (ಮೇ.29) ರೆಬೆಲ್ ಸ್ಟಾರ್ ಅಂಬರೀಷ್ (Ambareesh Birthday) ಜನ್ಮದಿನ. ಅವರಿದ್ದಿದ್ದರೆ 70ನೇ ಜನ್ಮದಿನವನ್ನು ನಟ ಆಚರಿಸಿಕೊಳ್ಳುತ್ತಿದ್ದರು. ಅಂಬರೀಷ್ ಅವರದ್ದು ಪ್ರೇಮ ವಿವಾಹ. ಕಲಾವಿದೆ ಪ್ರಸ್ತುತ ಸಂಸದೆಯಾಗಿರುವ ಸುಮಲತಾ (Sumalatha Ambareesh)) ಅವರನ್ನು ಅಂಬರೀಷ್ 1991ರ ಡಿಸೆಂಬರ್ 8ರಂದು ವಿವಾಹವಾಗಿದ್ದರು. ಟಿವಿ9 ಈ ಹಿಂದೆ ಈ ತಾರಾ ಜೋಡಿಯ ವಿಶೇಷ ಸಂದರ್ಶನ ನಡೆಸಿತ್ತು. ಪ್ರೀತಿಸಿ ಮದುವೆಯಾದ ಜೋಡಿಗಳನ್ನು ಸಂದರ್ಶಿಸಿ, ಪ್ರೇಮ ಹುಟ್ಟಿದ ಸಂದರ್ಭ ಸೇರಿದಂತೆ ವಿಶೇಷ ಘಟನೆಗಳನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮ ‘ಪ್ರೇಮ ಪಲ್ಲವಿ’ಯಲ್ಲಿ ಅಂಬರೀಷ್ ಹಾಗೂ ಸುಮಲತಾ ಭಾಗಿಯಾಗಿದ್ದರು. ಸಂದರ್ಶನದಲ್ಲಿ ತಮ್ಮ ಜೀವನದ ವಿಶೇಷ ಘಟನೆಗಳನ್ನು ಸ್ಮರಿಸಿಕೊಂಡಿದ್ದಾರೆ ಈ ತಾರಾ ಜೋಡಿ. ಆ ಅಪರೂಪದ ಸಂದರ್ಶನವನ್ನು ನೋಡುಗರಿಗಾಗಿ ಮತ್ತೆ ಹಂಚಿಕೊಳ್ಳಲಾಗಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ