Abhishek Ambareesh Movies: ಹೆಸರಿಗೆ ತಕ್ಕಂತೆ ‘ರೆಬಲ್’ ಅವತಾರ ತೊಟ್ಟ ಯಂಗ್ ರೆಬಲ್ ಸ್ಟಾರ್; ಅಭಿಷೇಕ್​ ಅಂಬರೀಷ್ 2 ಹೊಸ ಚಿತ್ರಗಳು ಅನೌನ್ಸ್

Kaali Movie | AA04 Movie | Ambareesh Birth Anniversary: ಅಭಿಷೇಕ್ ಅಂಬರೀಷ್ ಅವರ ಮುಂದಿನ ಎರಡು ಚಿತ್ರಗಳು ಅನೌನ್ಸ್ ಆಗಿವೆ. ಚಂದನವನದ ಇಬ್ಬರು ಸ್ಟಾರ್ ನಿರ್ದೇಶಕರೊಂದಿಗೆ ಯಂಗ್ ರೆಬೆಲ್ ಸ್ಟಾರ್ ಕೆಲಸ ಮಾಡಲಿರುವುದು ವಿಶೇಷ.

Abhishek Ambareesh Movies: ಹೆಸರಿಗೆ ತಕ್ಕಂತೆ ‘ರೆಬಲ್’ ಅವತಾರ ತೊಟ್ಟ ಯಂಗ್ ರೆಬಲ್ ಸ್ಟಾರ್; ಅಭಿಷೇಕ್​ ಅಂಬರೀಷ್ 2 ಹೊಸ ಚಿತ್ರಗಳು ಅನೌನ್ಸ್
‘ಕಾಳಿ’ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್ (ಎಡ ಚಿತ್ರ), ಮಹೇಶ್ ಕುಮಾರ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ಅಭಿಷೇಕ್​ (ಬಲ)
Follow us
TV9 Web
| Updated By: shivaprasad.hs

Updated on:May 29, 2022 | 2:58 PM

ಇಂದು (ಮೇ 29) ರೆಬೆಲ್ ಸ್ಟಾರ್ ಅಂಬರೀಷ್ (Ambareesh Birth Anniversary) ಜನ್ಮದಿನ. ಈ ಪ್ರಯುಕ್ತ ಅವರ ಪುತ್ರ ಅಭಿಷೇಕ್ ಅಂಬರೀಷ್ (Abhishek Ambareesh) ನೂತನ ಎರಡು ಚಿತ್ರಗಳನ್ನು ಅನೌನ್ಸ್ ಮಾಡಲಾಗಿದೆ. ‘ಅಮರ್’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ ಅಭಿಷೇಕ್, ಇದೀಗ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್​’ನಲ್ಲಿ ಅಭಿನಯಿಸುತ್ತಿದ್ದಾರೆ. ಆ ಚಿತ್ರದ ಕೆಲಸಗಳು ನಡೆಯುತ್ತಿದ್ದು, ಇನ್ನಷ್ಟೇ ತೆರೆಗೆ ಬರಬೇಕಿದೆ. ಇದೀಗ ಅಭಿಷೇಕ್ ಮುಂದಿನ ಎರಡು ಚಿತ್ರಗಳು ಅನೌನ್ಸ್ ಆಗಿವೆ. ಚಂದನವನದ ಇಬ್ಬರು ಸ್ಟಾರ್ ನಿರ್ದೇಶಕರೊಂದಿಗೆ ಅಭಿಷೇಕ್ ಕೆಲಸ ಮಾಡಲಿರುವುದು ವಿಶೇಷ. ‘ಗಜಕೇಸರಿ’, ‘ಹೆಬ್ಬುಲಿ’ ಮೊದಲಾದ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ಕೃಷ್ಣ ಅಭಿಷೇಕ್​ ಮೂರನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅದಕ್ಕೆ ‘ಕಾಳಿ’ (Kaali Movie) ಎಂದು ಹೆಸರಿಡಲಾಗಿದೆ. ‘ಅಯೋಗ್ಯ’, ‘ಮದಗಜ’ ಚಿತ್ರಗಳ ಮೂಲಕ ಹೆಸರು ಮಾಡಿರುವ ನಿರ್ದೇಶಕ ಎಸ್.ಮಹೇಶ್ ಕುಮಾರ್ ಅಭಿಷೇಕ್ ನಟನೆಯ ನಾಲ್ಕನೇ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಆ ಚಿತ್ರಕ್ಕೆ ಸದ್ಯ ‘ಎಎ04’ (AA04) ಎಂದು ಹೆಸರಿಡಲಾಗಿದೆ. ಎರಡೂ ಚಿತ್ರಗಳ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಪಕ್ಕಾ ಮಾಸ್ ಸಿನಿಮಾದ ಮುನ್ಸೂಚನೆ ನೀಡಿವೆ.

ಪುತ್ರನ ‘ಕಾಳಿ’ ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ಸುಮಲತಾ ಅಂಬರೀಷ್, ‘‘ನಮ್ಮ ಜೂನಿಯರ್ ರೆಬಲ್ ಅಭಿಷೇಕ್ ಅಂಬರೀಷ್ ನಟನೆಯ “ಕಾಳಿ” ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಎಲ್ಲರೂ ನೋಡಿ ಹರಸಿ ಆಶೀರ್ವಾದಿಸಿ’’ ಎಂದು ಕೋರಿಕೊಂಡಿದ್ದಾರೆ. ಕೃಷ್ಣ ನಿರ್ದೇಶನದ ಈ ಚಿತ್ರವನ್ನು ‘ಆರ್​ಆರ್​ಆರ್​ ಮೋಷನ್​ ಪಿಕ್ಚರ್ಸ್’ ಬ್ಯಾನರ್​ನಲ್ಲಿ ಸ್ವಪ್ನ ಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಿಚ್ಚ ಸುದೀಪ್ ಶುಭಕೋರಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ
Image
ಆಮಿರ್​ ಖಾನ್​ರನ್ನು ‘ಟೈಟಾನಿಕ್’​ ನಿರ್ದೇಶಕನಿಗೆ ಹೋಲಿಸಿದ ಹಾಲಿವುಡ್​ ದಿಗ್ಗಜ; ಇಲ್ಲಿದೆ ಅಚ್ಚರಿ ವಿಚಾರ
Image
100 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಭೂಲ್​ ಭುಲಯ್ಯ 2’; ಇಲ್ಲಿದೆ ಸಂಪೂರ್ಣ ಮಾಹಿತಿ
Image
ಅಂಬಿ ಸಮಾಧಿಗೆ ಎಡೆ ಇಟ್ಟು ನಮಿಸಿದ ಸುಮಲತಾ ಅಂಬರೀಷ್​; ಸಾಥ್​ ನೀಡಿದ ರಾಕ್​ಲೈನ್​ ವೆಂಕಟೇಶ್​
Image
ನಾಯಕಿ ಪ್ರಧಾನ ಸಿನಿಮಾ ಮಾಡ್ತಾರಾ ಪ್ರಶಾಂತ್​ ನೀಲ್​? ಇಂಥ ಗಾಸಿಪ್​ ಹರಡಲು ಕಾರಣ ಇಲ್ಲಿದೆ..

ಈ ಕುರಿತ ಟ್ವೀಟ್ ಇಲ್ಲಿದೆ:

ಎಸ್.ಮಹೇಶ್ ಕುಮಾರ್ ನಿರ್ದೇಶನದ ‘ಎಎ04’ ಚಿತ್ರ ಕೂಡ ಗಮನ ಸೆಳೆಯುವಂತಿದೆ. ಬಹಳ ಮಾಸ್ ಆಗಿ ಯಂಗ್ ರೆಬೆಲ್ ಸ್ಟಾರ್ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ತಿಳಿಸುವುದಾಗಿ ಚಿತ್ರತಂಡ ಘೋಷಿಸಿದೆ.

‘ಎಎ04’ ಟ್ವೀಟ್ ಇಲ್ಲಿದೆ:

ಚಿತ್ರರಂಗಕ್ಕೆ ತುಸು ತಡವಾಗಿ ಎಂಟ್ರಿ ಕೊಟ್ಟಿದ್ದರೂ ಅಭಿಷೇಕ್ ಅಂಬರೀಷ್ ಅಭಿಮಾನಿ ಬಳಗ ಬಹಳ ದೊಡ್ಡದಿದೆ. ಅಂಬರೀಷ್ ಪುತ್ರನೆಂಬ ಪ್ರೀತಿಯೂ ಅಭಿಮಾನಿಗಳಲ್ಲಿದೆ. ಹೀಗಾಗಿ ಅವರ ಚಿತ್ರಗಳ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಅಭಿಷೇಕ್​ ಮೊದಲ ಚಿತ್ರ ‘ಅಮರ್’ ನಿರ್ದೇಶಿಸಿದ್ದು ನಾಗಶೇಖರ್. ಅದು ಎಲ್ಲರ ಗಮನಸೆಳೆದಿತ್ತು.

ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಅಭಿಷೇಕ್​ಗೆ ಮತ್ತಷ್ಟು ಹೆಸರು ತಂದುಕೊಡುವ ನಿರೀಕ್ಷೆ ಇದೆ. ಹೀಗಾಗಿಯೇ ಅವರ ಮುಂದಿನ ಚಿತ್ರಗಳಾದ ‘ಕಾಳಿ’ ಹಾಗೂ ‘ಎಎ04’ ಮೇಲೆ ಹೆಚ್ಚು ಭರವಸೆ ಮೂಡಿದೆ. ಅದಕ್ಕೆ ತಕ್ಕಂತೆ ಖ್ಯಾತ ನಿರ್ದೇಶಕರು ಆಕ್ಷನ್ ಕಟ್ ಹೇಳುತ್ತಿರುವುದರಿಂದ ಮಾಸ್ ಅವತಾರದಲ್ಲಿ ನಟನನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Sun, 29 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ